ತ್ರಿಕೋನ ರಾಜ ಯೋಗ ರೂಪಿಸುತ್ತಿರುವ ಶುಕ್ರ ಬದಲಿಸಲಿದ್ದಾನೆ ಈ ರಾಶಿಯವರ ಅದೃಷ್ಟ

Venus Planet Transit In libra :ಅಕ್ಟೋಬರ್ 18, 2022 ರಂದು ಶುಕ್ರ ತುಲಾ ರಾಶಿಯನ್ನು ಪ್ರವೇಶಿಸಲಿದೆ. ಶುಕ್ರನ ಸಂಕ್ರಮಣವು 3 ರಾಶಿಯವರ ಜಾತಕದಲ್ಲಿ ತ್ರಿಕೋನರಾಜಯೋಗವನ್ನು ರೂಪಿಸುತ್ತದೆ.

Written by - Ranjitha R K | Last Updated : Oct 13, 2022, 10:39 AM IST
  • ತುಲಾ ರಾಶಿ ಪ್ರವೇಶಿಸಲಿರುವ ಶುಕ್ರ
  • ಮೂರು ರಾಶಿಯವರ ಜಾತಕದಲ್ಲಿ ತ್ರಿಕೋನ ರಾಜ ಯೋಗ
  • ಆಗಲಿದೆ ಆರ್ಥಿಕ ಲಾಭ
ತ್ರಿಕೋನ ರಾಜ ಯೋಗ ರೂಪಿಸುತ್ತಿರುವ ಶುಕ್ರ ಬದಲಿಸಲಿದ್ದಾನೆ ಈ ರಾಶಿಯವರ ಅದೃಷ್ಟ  title=
Venus transit effect (file photo)

Venus Planet Transit In libra : ಅಕ್ಟೋಬರ್ 18, 2022 ರಂದು ಶುಕ್ರ ತುಲಾ ರಾಶಿಯನ್ನು ಪ್ರವೇಶಿಸಲಿದೆ. ಶುಕ್ರನ ಸಂಕ್ರಮಣವು 3 ರಾಶಿಯವರ ಜಾತಕದಲ್ಲಿ ತ್ರಿಕೋನರಾಜಯೋಗವನ್ನು ರೂಪಿಸುತ್ತದೆ. ಈ ಯೋಗ ಮೂರು ರಾಶಿಯವರಿಗೆ ಮಂಗಳಕರ ಫಲಿತಾಂಶವನ್ನು ನೀಡುತ್ತದೆ. ಈ ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ. ಇವರು ಹೊಸ ಉದ್ಯೋಗವನ್ನು ಪಡೆಯಬಹುದು. ಪ್ರೇಮ ಜೀವನದಲ್ಲಿ ಮತ್ತು ವೈವಾಹಿಕ ಜೀವನ ಸುಂದರವಾಗಿರಲಿದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. 

ಈ ರಾಶಿಯವರ ಮೇಲೆ ಶುಕ್ರ ಸಂಕ್ರಮಣದ ಶುಭ ಪರಿಣಾಮ  :
ಕನ್ಯಾ ರಾಶಿ : ಶುಕ್ರನ ಸಂಚಾರದಿಂದ ರೂಪುಗೊಂಡ ತ್ರಿಕೋನ ರಾಜಯೋಗವು ಕನ್ಯಾ ರಾಶಿಯವರಿಗೆ ಲಾಭವನ್ನು ತರುತ್ತದೆ. ಉದ್ಯೋಗಿಗಳ ವೇತನ ಹೆಚ್ಚಾಗಬಹುದು. ವ್ಯಾಪಾರಸ್ಥರು  ದೊಡ್ಡ ಮಟ್ಟದ ಆರ್ಡರ್ ಪಡೆಯಬಹುದು. ಹೊಸ ಮನೆ-ಕಾರು ಖರೀದಿಸಬಹುದು. ಮನೆಯಲ್ಲಿ ಸಂತೋಷ ನೆಲೆಸುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. 

ಇದನ್ನೂ ಓದಿ : ಈ ರಾಶಿಯವರಿಗೆ ಭಾರೀ ಧನ ಸಂಪತ್ತು ಕರುಣಿಸಲಿದ್ದಾನೆ ಸೂರ್ಯ.! ಎಲ್ಲಾ ಕಾರ್ಯಗಳಲ್ಲಿ ಸಿಗುವುದು ಯಶಸ್ಸು

ಮಕರ ರಾಶಿ : ಶುಕ್ರನ ರಾಶಿಯ ಬದಲಾವಣೆಯು ಮಕರ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವವರ ಹುಡುಕಾಟ ಪೂರ್ಣಗೊಳ್ಳಲಿದೆ. ಈ ಸಮಯವು ವೃತ್ತಿಜೀವನದಲ್ಲಿ ಉತ್ತಮ ಫಲ ನೀಡಲಿದೆ. ಆರ್ಥಿಕ  ಪ್ರಯೋಜನವಾಗಲಿದೆ. ಕಠಿಣ ಪರಿಶ್ರಮಕ್ಕೆ ಪೂರ್ಣ ಫಲ ಸಿಗಲಿದೆ. ಸಂಬಂಧಗಳು ಉತ್ತಮವಾಗಿರುತ್ತವೆ. ಒಂಟಿಯಾಗಿರುವವರ ಜೀವನದಲ್ಲಿ ಸಂಗಾತಿಯ ಪ್ರವೇಶವಾಗಬಹುದು.  

ಕುಂಭ ರಾಶಿ : ಕುಂಭ ರಾಶಿಯವರಿಗೆ ಕೂಡಾ ಶುಕ್ರ ಸಂಕ್ರಮವು ಶುಭವಾಗಲಿದೆ. ಎಲ್ಲಾ ರೀತಿಯ ಕೆಲಸಗಳಲ್ಲಿಯೂ ಅದೃಷ್ಟ ಕೈ ಹಿಡಿಯಲಿದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ಉನ್ನತ ಸ್ಥಾನ, ಹಣ, ಗೌರವವನ್ನು ಪಡೆಯಬಹುದು. ಈ ಸಮಯದಲ್ಲಿ ಹಾಕುವ ಶ್ರಮವು ಭವಿಷ್ಯದಲ್ಲಿ  ಫಲ ನೀಡಲಿದೆ. ಉದ್ಯೋಗ-ವ್ಯವಹಾರಗಳಿಗೆ ಉತ್ತಮ ಸಮಯ. 

ಇದನ್ನೂ ಓದಿ Diwali 2022: ದೀಪಾವಳಿಗೂ ಮುನ್ನ ಮನೆಯಲ್ಲಿ ಈ ಬದಲಾವಣೆ ಮಾಡದಿದ್ದರೆ ಭಾರೀ ನಷ್ಟ ಅನುಭವಿಸುತ್ತೀರಿ!

 

( ಸೂಚನೆ :ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News