Vastu : ಈ 5 ನೆರಳು ಮನೆಯ ಮೇಲೆ ಬೀಳಲೇ ಬಾರದು..?

Vastu tips: ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುವಿಜ್ಞಾನಕ್ಕೆ ಸಾಕಷ್ಟು ಮಹತ್ವ ಇದೆ. ಭಾರತೀಯರು ಸಾಮಾನ್ಯವಾಗಿ ವಾಸ್ತು ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ವಾಸ್ತುಶಾಸ್ತ್ರದಲ್ಲಿ ನೆರಳಿಗೂ ಅತ್ಯಂತ ಮಹತ್ವ ಇದೆ.   

Written by - Ranjitha R K | Last Updated : Jun 17, 2021, 02:05 PM IST
  • ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುವಿಜ್ಞಾನಕ್ಕೆ ಸಾಕಷ್ಟು ಮಹತ್ವ ಇದೆ.
  • ವಾಸ್ತು ಪ್ರಕಾರ ಮನೆಯ ಮೇಲೆ ಈ ಐದು ನೆರಳು ಬೀಳದಂತೆ ನೋಡಿಕೊಳ್ಳಬೇಕು.
  • ಮನೆಯ ಮೇಲೆ ಮರ, ದೊಡ್ಡ ಕಟ್ಟಡ ಇತ್ಯಾದಿಗಳ ನೆರಳು ಬೀಳುತ್ತಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು.
Vastu : ಈ 5 ನೆರಳು ಮನೆಯ ಮೇಲೆ ಬೀಳಲೇ ಬಾರದು..?  title=
ವಾಸ್ತು ಪ್ರಕಾರ ಮನೆಯ ಮೇಲೆ ಈ ಐದು ನೆರಳು ಬೀಳದಂತೆ ನೋಡಿಕೊಳ್ಳಬೇಕು. (file photo)

ನವದೆಹಲಿ :  ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುವಿಜ್ಞಾನಕ್ಕೆ ಸಾಕಷ್ಟು ಮಹತ್ವ ಇದೆ. ಭಾರತೀಯರು ಸಾಮಾನ್ಯವಾಗಿ ವಾಸ್ತು ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ವಾಸ್ತುಶಾಸ್ತ್ರದಲ್ಲಿ (Vastu shastra) ನೆರಳಿಗೂ ಅತ್ಯಂತ ಮಹತ್ವ ಇದೆ. ವಾಸ್ತು ಪ್ರಕಾರ ಮನೆಯ ಮೇಲೆ ಯಾವುದಾದರೂ ದೊಡ್ಡ ಮರ, ದೊಡ್ಡ  ಕಟ್ಟಡ ಇತ್ಯಾದಿಗಳ ನೆರಳು ಬೀಳುತ್ತಿದ್ದರೆ ಅದು ವಾಸ್ತು ದೋಷಕ್ಕೆ (Vastu dosha) ಕಾರಣವಾಗಬಹುದು. ಇವು ಮನುಷ್ಯನಿಗೆ ಹಲವು ರೋಗಗಳನ್ನು ತಂದೊಡ್ಡಬಲ್ಲದು.  ಮನೆಕಟ್ಟುವಾಗಲೇ ನಾವು ತಿಳಿದುಕೊಳ್ಳಬೇಕು. ಮನೆಯ ಮೇಲೆ ಯಾವುದರ ನೆರಳು ಬೀಳುತ್ತದೆ. ಎಷ್ಟು ಹೊತ್ತಿಗೆ ಬೀಳುತ್ತದೆ ಇತ್ಯಾದಿ ಅಂಶಗಳನ್ನು ತಿಳಿದುಕೊಳ್ಳಲೇಬೇಕು.   ದೊಡ್ಡ  ಕಟ್ಟಡ, ದೇವಸ್ಥಾನ, ದೇವಸ್ಥಾನದ ಧ್ವಜ ಇತ್ಯಾದಿ ಯಾವುದೇ ನೆರಳು ಮನೆಯ ಮೇಲೆ ಬೀಳಬಹುದು. ಅದನ್ನು ತಿಳಿದುಕೊಳ್ಳಬೇಕು. ವಾಸ್ತು ಪ್ರಕಾರ ಮನೆಯ ಮೇಲೆ ಈ ಐದು ನೆರಳು ಬೀಳದಂತೆ ನೋಡಿಕೊಳ್ಳಬೇಕು. 

1. ದೇವಸ್ಥಾನದ ಧ್ವಜ
ದೇವಸ್ಥಾನದ ನೂರು ಅಡಿ ವ್ಯಾಪ್ತಿಯೊಳಗೆ ಮನೆಯ ಮೇಲೆ ದೇವಸ್ಥಾನದ ಧ್ವಜದ (Temple flag) ನೆರಳು ಬೀಳುತಿದ್ದರೆ ಅದರಿಂದ ವಾಸ್ತು ದೋಷ ಉಂಟಾಗುತ್ತದೆ.  ದೇವಸ್ಥಾನದ ಎತ್ತರ ಕಡಿಮೆ ಇದ್ದು, ಅದರ ನೆರಳು ಮನೆಯ ಮೇಲೆ ಬೀಳದೆ ಹೋದರೆ ಯಾವುದೆ ಸಮಸ್ಯೆ ಉಂಟಾಗುವುದಿಲ್ಲ. ಧ್ವಜ ಎತ್ತರಕ್ಕಿಂತ ಎರಡು ಪಟ್ಟು ದೂರದಲ್ಲಿ ಮನೆ ಕಟ್ಟಿದರೆ, ವಾಸ್ತು ದೋಷ (Vastu Dosha) ಉಂಟಾಗುವುದಿಲ್ಲ. 

ಇದನ್ನೂ ಓದಿ : Zodiac Sign Combination : ಈ ರಾಶಿಗಳ ಜನರು ಒಬ್ಬರಿಗೊಬ್ಬರು ಹೊಂದುವುದೇ ಇಲ್ಲ..!

2. ದೇವಸ್ಥಾನದ ನೆರಳು
ದೇವಸ್ಥಾನದ ನೆರಳು ಕೂಡಾ ವಾಸ್ತುದೋಷಕ್ಕೆ ಕಾರಣವಾಗಬಹುದು.  ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಯಾವುದೇ ದೇಗುಲದ ನೆರಳು ಮನೆಯ ಮೇಲೆ ಬೀಳುತಿದ್ದರೆ, ಅದರಿಂದ ವಾಸ್ತುದೋಷ ಉಂಟಾಗುತ್ತದೆ. ಇದರಿಂದ ಗ್ರಹ ಕಲಹ,  ವ್ಯಾಪಾರದಲ್ಲಿ ನಷ್ಟ ಇತ್ಯಾದಿ ಉಂಟಾಗುತ್ತದೆ.

3. ಪರ್ವತದ ನೆರಳು
ಪೂರ್ವ ದಿಕ್ಕಿನಲ್ಲಿರುವ ಯಾವುದೇ ಪರ್ವತ ಅಥವಾ ಕಟ್ಟಡದ ನೆರಳು ನಿಮ್ಮ ಮನೆಯ ಮೇಲೆ ಬೀಳುತ್ತಿದ್ದರೆ, ಅದು ವಾಸ್ತುದೋಷಕ್ಕೆ ಕಾರಣವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ (Vastu shastra).  ಇದರಿಂದ ಮಾನ ಸಮ್ಮಾನ ಕುಸಿಯುತ್ತದೆ. ಸೋಲು ಉಂಟಾಗುತ್ತದೆ.

ಇದನ್ನೂ ಓದಿ : Swapna Shastra: ಬೆಳಗಿನ ಜಾವ ಈ 10 ಕನಸುಗಳು ಬಿದ್ದರೆ, ಅಪಾರ ಸಂಪತ್ತು ನಿಮ್ಮದಾಗುತ್ತೆ

4. ಮತ್ತೊಂದು ಮನೆಯ ನೆರಳು
ನಿಮ್ಮ ಮನೆಯ ಮೇಲೆ ಇನ್ನೊಂದು ಮನೆ ಅಥವಾ ಕಟ್ಟಡದ ನೆರಳು ಬಿದ್ದರೂ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಪರಿವಾರ ವಿನಾಶದ ಅಂಚಿಗೆ ಹೋಗಬಹುದು. 

5. ಬೃಹತ್ ಮರದ ನೆರಳು. 
 ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಯಾವುದೇ ಮರದ ನೆರಳು (Big tree) ಮನೆಯ ಮೇಲೆ ಬೀಳುತಿದ್ದರೆ, ಅದರಿಂದ ವಾಸ್ತುದೋಷ ಉಂಟಾಗುತ್ತದೆ. ಮನೆಯ ಆಗ್ನೇಯ ದಿಕ್ಕಿನಲ್ಲಿ ವಟ ವೃಕ್ಷ, ಅಶ್ವತ್ಥ ಮರ (Peeple tree) ಇದ್ದರೂ ವಾಸ್ತು ದೋಷ ಉಂಟಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News