AFG vs AUS, T20 World Cup 2024: ಬಲಿಷ್ಠ ತಂಡ, ಮಾಜಿ ಚಾಂಪಿಯನ್ ಆಸ್ಟ್ರೇಲಿಯಾಗೆ ಅಫ್ಘಾನಿಸ್ತಾನ ಬಿಗ್ ಶಾಕ್ ನೀಡಿದೆ. ಸೇಂಟ್ ವಿನ್ಸೆಂಟ್‌ನ ಕಿಂಗ್‌ಸ್ಟೌನ್‌ನಲ್ಲಿರುವ ಅರ್ನೋಸ್ ವೇಲ್ ಮೈದಾನದಲ್ಲಿ ಭಾನುವಾರ ನಡೆದ ಸೂಪರ್ 8ರ ಮಹತ್ವದ ಪಂದ್ಯದಲ್ಲಿ ಆಸೀಸ್ ವಿರುದ್ಧ ಅಫ್ಘಾನಿಸ್ತಾನ 21 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 148ರನ್‌ಗಳ ಅಲ್ಪಮೊತ್ತವನ್ನು ಗಳಿಸಿತ್ತು. ಆದರೆ ಸುಲಭ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾಗೆ ಅಫ್ಘಾನಿಸ್ತಾನದ ಬೌಲರ್‌ಗಳು ಆಘಾತ ನೀಡಿದರು. ಪರಿಣಾಮ ಆಸೀಸ್ 19.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 127 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ: ಬಾಲಿವುಡ್ ನಟಿಯರಿಗಿಂತಲೂ ಬ್ಯೂಟಿಫುಲ್ ಸೂರ್ಯಕುಮಾರ್ ಯಾದವ್ ಪತ್ನಿ! ಈಕೆಯ ಡ್ಯಾನ್ಸ್ ನೋಡಿಯೇ ಲವ್ವಲ್ಲಿ ಬಿದ್ದ ಭಾರತದ ಮಿ.360
Afghanistan bury the demons of 2023 💥
A historic #T20WorldCup victory for Afghanistan 🤩
📝 #AFGvAUS: https://t.co/wXEyJ9HIRY pic.twitter.com/iIuoGTdyf6
— ICC (@ICC) June 23, 2024
ಅಫ್ಘಾನಿಸ್ತಾನದ ಪರ ಆರಂಭಿಕರಾಗಿ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಜ್ (60) ಮತ್ತು ಇಬ್ರಾಹಿಂ ಜದ್ರಾನ್ (51) ಮೊದಲ ವಿಕೆಟ್‌ಗೆ 118 ರನ್‌ಗಳ ಉತ್ತಮ ಜೊತೆಯಾಟವಾಡಿದರು. ಇನ್ನುಳಿದಂತೆ ಕರೀಂ ಜನತ್ (13) ಮತ್ತು ಮೊಹಮ್ಮದ್ ನಬಿ (ಅಜೇಯ 10) ರನ್ ಗಳಿಸಿದರು. ಆಸೀಸ್ ಪರ ಬೌಲಿಂಗ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ (28ಕ್ಕೆ 3) ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಆಡಮ್ ಝಂಪಾ 2 ಮತ್ತು ಮಾರ್ಕಸ್ ಸ್ಟೊಯಿನಿಸ್ 1 ವಿಕೆಟ್ ಪಡೆದು ಮಿಂಚಿದರು.
ಅಫ್ಘಾನಿಸ್ತಾನದ ಮಾರಕ ಬೌಲಿಂಗ್ ದಾಳಿ!
149 ರನ್‌ಗಳ ಸುಲಭ ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಅಫ್ಘಾನಿಸ್ತಾನದ ಬೌಲರ್‌ಗಳು ಮಾರಕ ಬೌಲಿಂಗ್ ಮೂಲಕ ಆಘಾತ ನೀಡಿದರು. ಪರಿಣಾಮ ಇನ್ನು 4 ಎಸೆತಗಳು ಬಾಕಿ ಇರುವಂತೆಯೇ 127 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯ ಸೋಲು ಕಂಡಿತು. ಆಸೀಸ್ ಪರ ಗ್ಲೆನ್ ಮ್ಯಾಕ್ಸ್‌ವೆಲ್ (59) ಆಕರ್ಷಕ ಅರ್ಧಶತಕ ಸಿಡಿಸಿದರು. ಇನ್ನುಳಿದಂತೆ ಮಿಚೆಲ್ ಮಾರ್ಷ್ (12) ಮತ್ತು ಮಾರ್ಕಸ್ ಸ್ಟೊಯಿನಿಸ್ (11) ರನ್ ಗಳಿಸಿದರು. ಅಫ್ಘಾನಿಸ್ತಾನ ಪರ ಬೌಲಿಂಗ್‌ನಲ್ಲಿ ಗುಲ್ಬದಿನ್ ನಾಯಬ್ 4 ಮತ್ತು ನವೀನ್-ಉಲ್-ಹಕ್ 3 ವಿಕೆಟ್ ಪಡೆದು ಮಿಂಚಿದರು. ಇನ್ನುಳಿದಂತೆ ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
WHAT A PERFORMANCE 👏
Gulbadin Naib is awarded the @aramco POTM after his stunning effort played a pivotal role in sealing a famous victory for Afghanistan 🏅 #T20WorldCup #AFGvAUS pic.twitter.com/1udQV7Wuvx
— ICC (@ICC) June 23, 2024
ಆಸ್ಟ್ರೇಲಿಯಾಗೆ ʼಸೆಮಿಸ್ʼ ಸಂಕಷ್ಟ!
ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾಗೆ ದೊಡ್ಡ ಸಂಕಷ್ಟ ಎದುರಾಗಿದೆ. ಗ್ರೂಪ್ 1ರಲ್ಲಿ ಈಗಾಗಲೇ 2 ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಬಹುತೇಕ ಸೆಮಿಫೈನಲ್ ಪ್ರವೇಶಿಸಿದೆ. ಆದರೆ ಅಫ್ಘಾನಿಸ್ತಾನದ ಕೈಯಲ್ಲಿ ಸೋತಿರುವ ಆಸೀಸ್‌ಗೆ ಮುಂದಿನ ಪಂದ್ಯದಲ್ಲಿ ಭಾರತ ತಂಡ ಎದುರಾಳಿಯಾಗಲಿದೆ. ಈ ಪಂದ್ಯದಲ್ಲಿ ಆಸೀಸ್ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದು ವೇಳೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಅದೇ ರೀತಿ ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ತಾನ ಗೆಲುವು ಸಾಧಿಸಿದರೆ ಸೆಮಿಫೈನಲ್ ಪ್ರವೇಶಿಸಲಿದೆ.
ಇದನ್ನೂ ಓದಿ: ಅಫ್ಘನ್ ವಿರುದ್ಧ ಭಾರತ ಗೆಲ್ಲಲು ಇವರೇ ಕಾರಣ: ಗೆಲುವಿನ ಸಂಪೂರ್ಣ ಕ್ರೆಡಿಟ್ ಈ ಇಬ್ಬರಿಸಿಗೆ ಸಲ್ಲಿಸಿದ ರೋಹಿತ್ ಶರ್ಮಾ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.