Ganesh Chaturthi 2021 - ಗಣೇಶನನ್ನು (Lord Ganesh) ಪ್ರಥಮ ಪೂಜನೀಯ ಎಂದು ಪರಿಗಣಿಸಲಾಗಿದೆ. ಅದು ವಿವಾಹವಾಗಲಿ, ಗೃಹ ಪ್ರವೇಶವಾಗಲಿ ಅಥವಾ ಯಾವುದೇ ಶುಭ ಕಾರ್ಯವಾಗಲಿ, ಮೊದಲಿಗೆ, ಗಣಪತಿಗೆ ಮಾತ್ರ ಪೂಜಿಸಲಾಗುತ್ತದೆ. ಮನೆಯ ವಾಸ್ತುವಿನಲ್ಲಿ ಗಣಪತಿಯನ್ನು (Ganapati Statue) ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅನೇಕ ವಾಸ್ತು ದೋಷಗಳನ್ನು ತೆಗೆದುಹಾಕಲು ಆತನ ಒಂದು ಚಿತ್ರ (Ganapati Photo) ಅಥವಾ ಫೋಟೋ ಸಾಕು. 10 ದಿನಗಳ ಗಣೇಶೋತ್ಸವದಲ್ಲಿ (Ganesh Chaturthi 2021), ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಯಾವ ದೋಷ ಪರಿಹಾರಕ್ಕೆ ಗಣೇಶನ ವಿಗ್ರಹ ಅಥವಾ ಫೋಟೋ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಆದರೆ ಈ ರೀತಿ ವಾಸ್ತು ದೋಷ (Vastu Dosh) ನಿವಾರಣೆಗೆ ನೀವು ಮನೆಗೆ ಯಾವುದೇ ರೀತಿಯ ರಿಪೇರಿ ನಡೆಸುವ ಅವಶ್ಯಕತೆ ಇಲ್ಲ.
ಗಣೇಶನ ವಿಗ್ರಹ ಅಥವಾ ಫೋಟೋ ದೂರಗೊಳಿಸುತ್ತೆ ವಾಸ್ತು ದೋಷ
>> ಮನೆಯಲ್ಲಿ ಯಾವಾಗಲು ಜಗಳ ನಡೆಯುತ್ತಿದ್ದರೆ, ಬಿಳಿ ಬಣ್ಣದ ಗಣಪತಿಯ ಮೂರ್ತಿ ಅಥವಾ ಚಿತ್ರವನ್ನು ಪ್ರತಿಷ್ಠಾಪಿಸಿದರೆ ಸುಖ-ಶಾಂತಿಯ ಜೊತೆಗೆ ಸಮೃದ್ಧಿಯೂ ನೆಲೆಸುತ್ತದೆ .
>> ಒಂದು ವೇಳೆ ಮನೆಯ ಮುಖ್ಯದ್ವಾರದ ಮುಂಭಾಗದಲ್ಲಿ ಗಣೇಶನ ಚಿತ್ರವಿದ್ದರೆ ಮುಖ್ಯದ್ವಾರದ ಹಿಂಬಾಗದಲ್ಲಿ ಮುಂಭಾಗದ ಗಣಪತಿಯ ಬೆನ್ನಿಗೆ ಹೊಂದಿಕೊಳ್ಳುವ ಹಾಗೆ ಗಣೇಶನ ಚಿತ್ರ ಅಂಟಿಸಿ. ಇದರಿಂದ ಎಲ್ಲಾ ರೀತಿಯ ವಾಸ್ತುದೋಷ ನಿವಾರಣೆಯಾಗುತ್ತದೆ.
>> ಗಣಪತಿಯ ಮೂರ್ತಿ ಪ್ರತಿಷ್ಟಾಪನೆಗೆ ಮನೆಯ ಬ್ರಹ್ಮ ಸ್ಥಳ ಅಂದರೆ ಮಧ್ಯದಲ್ಲಿ, ಈಶಾನ್ಯದಲ್ಲಿ ಅಥವಾ ಪೂರ್ವ ದಿಕ್ಕಿನಲ್ಲಿ ಅತ್ಯಂತ ಮಂಗಳಕರವಾಗಿದೆ. ಇದು ಸಾಧ್ಯವಾಗದಿದ್ದರೆ, ಮನೆ ಅಥವಾ ಕೆಲಸದ ಯಾವುದೇ ಭಾಗದಲ್ಲಿ ವಿಗ್ರಹ ಅಥವಾ ಫೋಟೋ ಹಾಕಿ, ಆದರೆ ಗಣಪತಿಯ ಮುಖ ದಕ್ಷಿಣ ದಿಕ್ಕಿನಲ್ಲಿರಬಾರದು ಎಂಬುದನ್ನು ನೆನಪಿನಲ್ಲಿಡಿ.
>> ಯಾವಾಗಲೂ ಮೋದಕ ಮತ್ತು ಇಲಿ ಇರುವ ಗಣಪತಿಯ ವಿಗ್ರಹ ಅಥವಾ ಫೋಟೋವನ್ನು ಹಾಕಲು ಮರೆಯದಿರಿ.
>> ಮನೆಯಲ್ಲಿ (Home) ಕುಳಿತುಕೊಂಡಿರುವ ಹಾಗೂ ಕಚೇರಿಯಲ್ಲಿ (Work Place) ನಿಂತಿರುವ ಗಣೇಶನ ವಿಗ್ರಹ ಪ್ರತಿಷ್ಟಾಪಿಸಿದರೆ ಒಳ್ಳೆಯದು. ಇದರಿಂದ ಮನೆಯಲ್ಲಿಯೇ ಆಗಲಿ ಅಥವಾ ಕಚೇರಿಯಲ್ಲಿಯೇ ಆಗಲಿ ಸುಖ, ಸಮೃದ್ಧಿ ಹಾಗೂ ಸಂತೋಷ ನೆಲೆಸುತ್ತದೆ ಮತ್ತು ದಿನದಿಂದ ದಿನಕ್ಕೆ ವೃತ್ತಿ ಜೀವನದಲ್ಲಿ ಪ್ರಗತಿ ಇರುತ್ತದೆ.
>> ಎಲ್ಲ ಶುಭ ಹಾರೈಸುವವರು, ಮನೆಯಲ್ಲಿ ವರ್ಮಿಲಿಯನ್ ಬಣ್ಣದ ಗಣಪತಿಯನ್ನು ಪೂಜಿಸಬೇಕು.
>> ಯಾವುದೇ ಕಾರಣಕ್ಕೂ ಮನೆಯ ಯಾವುದಾದರೊಂದು ಜಾಗವನ್ನು ಕೊಳೆಯಿಂದ ಕಾಪಾಡಲು ಗಣಪತಿ ಚಿತ್ರ ಬಳಸಬೇಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಹಾನಿ ಎದುರಾಗುತ್ತದೆ.
>> ಗಣಪತಿಯ ಸೊಂಡಿ ಎಡಭಾಗಕ್ಕೆ ಇರುವ ಗಣೇಶನ ವಿಗ್ರಹ ಅಥವಾ ಫೋಟೋ ಮನೆಗೆ ತನ್ನಿ.
ಇದನ್ನೂ ಓದಿ-Ganesh Chaturthi 2021: ಗಣೇಶ ಚತುರ್ಥಿಯಂದು, ನಿಮ್ಮ ರಾಶಿಗೆ ಅನುಗುಣವಾಗಿ ಗಣಪನನ್ನು ಪೂಜಿಸಿ ಶುಭ ಫಲ ಪಡೆಯಿರಿ
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-Ganesh Chaturthi 2021: ಗಣೇಶ ಚತುರ್ಥಿಯ ದಿನ ಈ ಕೆಲಸ ಮಾಡಿದರೆ ಹಳೆಯ ಸಾಲದಿಂದ ಮುಕ್ತಿ ಸಿಗುತ್ತದೆಯಂತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.