Bedroom Vastu Tips : ಮಲಗುವಾಗ ಅಪ್ಪತಪ್ಪಿ ತಲೆಯ ಬಳಿ ಇಟ್ಟುಕೊಳ್ಳಬೇಡಿ ಈ ವಸ್ತುಗಳನ್ನ, ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ತಪ್ಪಿದಲ್ಲ!

ಮಲಗುವಾಗ ತಲೆಯ ಬಳಿ ಇರಿಸಿಕೊಳ್ಳುವ ಕೆಲವು ವಸ್ತುಗಳ ವಾಸ್ತು ದೋಷ ಉಂಟುಮಾಡುತ್ತವೆ. ಅಲ್ಲದೆ, ಈ ವಸ್ತುಗಳನ್ನು ತಲೆಯ ಬಳಿ ಇಟ್ಟುಕೊಂಡರೆ, ನಿಮ್ಮ ಜೀವನದಲ್ಲಿ ನಕಾರಾತ್ಮಕತೆ ಶಕ್ತಿ ತರುತ್ತದೆ. ಮಲಗುವಾಗ ಯಾವ ವಸ್ತುಗಳನ್ನು ತಲೆಯ ಬಳಿ ಇಡಬಾರದು ಎಂಬುವುದನ್ನ ಇಲ್ಲಿ ನೋಡಿ...

Written by - Zee Kannada News Desk | Last Updated : Mar 2, 2022, 06:12 PM IST
  • ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
  • ಜೀವನದಲ್ಲಿ ಸಂತೋಷ ಮತ್ತು ಶಾಂತಿಯ ಕೊರತೆ
  • ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗುತ್ತದೆ
Bedroom Vastu Tips : ಮಲಗುವಾಗ ಅಪ್ಪತಪ್ಪಿ ತಲೆಯ ಬಳಿ ಇಟ್ಟುಕೊಳ್ಳಬೇಡಿ ಈ ವಸ್ತುಗಳನ್ನ, ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ತಪ್ಪಿದಲ್ಲ! title=

ನವದೆಹಲಿ : ಜೀವನದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ವಾಸ್ತು ವ್ಯಕ್ತಿಯ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದಿಕ್ಕು ಮತ್ತು ಮನೆಯಲ್ಲಿ ಇಡುವ ವಸ್ತುಗಳಿಗೆ ಖಂಡಿತವಾಗಿಯೂ ಕೆಲವು ಅರ್ಥವಿದೆ. ಮಲಗುವಾಗ ತಲೆಯ ಬಳಿ ಇರಿಸಿಕೊಳ್ಳುವ ಕೆಲವು ವಸ್ತುಗಳ ವಾಸ್ತು ದೋಷ ಉಂಟುಮಾಡುತ್ತವೆ. ಅಲ್ಲದೆ, ಈ ವಸ್ತುಗಳನ್ನು ತಲೆಯ ಬಳಿ ಇಟ್ಟುಕೊಂಡರೆ, ನಿಮ್ಮ ಜೀವನದಲ್ಲಿ ನಕಾರಾತ್ಮಕತೆ ಶಕ್ತಿ ತರುತ್ತದೆ. ಮಲಗುವಾಗ ಯಾವ ವಸ್ತುಗಳನ್ನು ತಲೆಯ ಬಳಿ ಇಡಬಾರದು ಎಂಬುವುದನ್ನ ಇಲ್ಲಿ ನೋಡಿ...

ಪುಸ್ತಕ ಅಥವಾ ಪತ್ರಿಕೆ : ವಾಸ್ತು ಶಾಸ್ತ್ರದ ಪ್ರಕಾರ, ಪತ್ರಿಕೆಗಳು, ಪುಸ್ತಕ, ನಿಯತಕಾಲಿಕೆಗಳು(Book, Paper etc) ಇತ್ಯಾದಿಗಳನ್ನು ಎಂದಿಗೂ ತಲೆಯಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಜೀವನದಲ್ಲಿ ನಕಾರಾತ್ಮಕತೆ ಬರುತ್ತದೆ. ಇದಲ್ಲದೆ, ಜೀವನದಲ್ಲಿ ಅನಗತ್ಯ ಒತ್ತಡವೂ ಉಳಿಯುತ್ತದೆ.

ಇದನ್ನೂ ಓದಿ : ಜಾತಕದಲ್ಲಿ ಈ ಯೋಗವಿದ್ದರೆ ಆಯುಷ್ಯಕ್ಕೆ ಕಂಟಕ..!

ಒಳ ಕಲ್ಲು : ವಾಸ್ತು ಶಾಸ್ತ್ರದ ಪ್ರಕಾರ ರಾತ್ರಿ ಮಲಗುವಾಗ ತಲೆ ದಿಂಬಿನ ಬಳಿ ಒಳ ಕಲ್ಲು ಇಡಬಾರದು. ವಾಸ್ತವವಾಗಿ, ಅದನ್ನು ಇಟ್ಟುಕೊಳ್ಳುವುದು ವೈವಾಹಿಕ ಸಂಬಂಧದಲ್ಲಿ ಬಿರುಕು ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಇದಲ್ಲದೇ ಜೀವನದಲ್ಲಿ ಸುಖ ಶಾಂತಿಯ ಕೊರತೆ ಇದೆ.

ನೀರಿನ ಬಾಟಲಿ : ವಾಸ್ತು ಶಾಸ್ತ್ರದ ಪ್ರಕಾರ ನೀರು ತುಂಬಿದ ಪಾತ್ರೆ ಅಥವಾ ನೀರಿನ ಬಾಟಲಿ(Water Bottle)ಯನ್ನು ತಲೆಯ ಬಳಿ ಇಟ್ಟುಕೊಳ್ಳಬಾರದು. ವಾಸ್ತವವಾಗಿ, ಚಂದ್ರ ಗ್ರಹವು ಇದರಿಂದ ಪ್ರಭಾವಿತವಾಗಿರುತ್ತದೆ, ಇದರಿಂದಾಗಿ ಮಾನಸಿಕ ಅಸ್ವಸ್ಥತೆಯ ಅಪಾಯವಿದೆ.

ವಾಲೆಟ್ : ವಾಸ್ತು ಶಾಸ್ತ್ರದ ಪ್ರಕಾರ ಪರ್ಸ್, ವಾಲೆಟ್(Wallet) ಅನ್ನು ತಲೆಯ ಬಳಿ ಅಥವಾ ದಿಂಬಿನ ಕೆಳಗೆ ಇಡಬಾರದು. ಇದನ್ನು ಮಾಡುವುದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗಬಹುದು.

ಇದನ್ನೂ ಓದಿ : ಜೀವನದ ಎಲ್ಲಾ ಕಷ್ಟಗಳಿಂದಲೂ ಮೇಲೆದ್ದು ಬರಲು ಸಹಾಯ ಮಾಡುತ್ತದೆ ಈ ಮೂರು ವಿಷಯಗಳು..!

ಪಾದರಕ್ಷೆಗಳು : ಹೆಚ್ಚಿನ ಜನರು ಮಲಗುವ ಸಮಯದಲ್ಲಿ ಹಾಸಿಗೆಯ ಸುತ್ತಲೂ ತಮ್ಮ ಬೂಟು ಮತ್ತು ಚಪ್ಪಲಿ ಇಟ್ಟುಕೊಳ್ಳುವುದು. ವಾಸ್ತು ಪ್ರಕಾರ ಈ ಸ್ಥಿತಿ ಸರಿಯಲ್ಲ. ಹೀಗೆ ಮಾಡುವುದರಿಂದ ಜೀವನದಲ್ಲಿ ನಕಾರಾತ್ಮಕ ಶಕ್ತಿ ಬರುತ್ತದೆ.

ಎಣ್ಣೆ ಬಾಟಲಿ : ವಾಸ್ತು ಶಾಸ್ತ್ರದ ಪ್ರಕಾರ ಎಣ್ಣೆಯ ಬಾಟಲಿ(Oil Bottel)ಯನ್ನು ತಲೆಯ ಬಳಿ ಇಡಬಾರದು. ವಾಸ್ತವವಾಗಿ, ಇದರಿಂದಾಗಿ ನಾವು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News