Vasant Panchami 2022: ವಸಂತ ಪಂಚಮಿ ಯಾವ ದಿನ? ಇಲ್ಲಿದೆ ಪೂಜಾ ವಿಧಾನ ಮತ್ತು ಮಹತ್ವ..!

ಧಾರ್ಮಿಕ ನಂಬಿಕೆಗಳ ಪ್ರಕಾರ ಶುಕ್ಲ ಪಕ್ಷದ 5ನೇ ದಿನದಂದು ತಾಯಿ ಸರಸ್ವತಿ ದೇವಿಯು ಬ್ರಹ್ಮನ ಬಾಯಿಯಿಂದ ಕಾಣಿಸಿಕೊಂಡಳು. ಈ ದಿನದಂದು ಶಾರದಾ ದೇವಿಯನ್ನು ಕ್ರಮಬದ್ಧವಾಗಿ ಪೂಜಿಸುವುದರಿಂದ ಜ್ಞಾನ ಮತ್ತು ಕಲಿಕೆಗೆ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.

Written by - Puttaraj K Alur | Last Updated : Jan 19, 2022, 08:15 PM IST
  • ವಸಂತ ಪಂಚಮಿ ಹಬ್ಬವನ್ನು ಮಾಘ ಶುಕ್ಲ ಪಂಚಮಿಯ ದಿನದಂದು ಆಚರಿಸಲಾಗುತ್ತದೆ
  • ಈ ಬಾರಿ ವಸಂತ ಪಂಚಮಿ ಹಬ್ಬವನ್ನು ಫೆಬ್ರವರಿ 5ರ ಶನಿವಾರದಂದು ಆಚರಿಸಲಾಗುತ್ತದೆ
  • ಈ ದಿನ ಸರಸ್ವತಿ ದೇವಿ ಪೂಜಿಸಲು ಶುಭ ಸಮಯವು ಬೆಳಗ್ಗೆ 03.47ರಿಂದ ಪ್ರಾರಂಭವಾಗಲಿದೆ
Vasant Panchami 2022: ವಸಂತ ಪಂಚಮಿ ಯಾವ ದಿನ? ಇಲ್ಲಿದೆ ಪೂಜಾ ವಿಧಾನ ಮತ್ತು ಮಹತ್ವ..! title=
ಫೆ.5ರಂದು ವಸಂತ ಪಂಚಮಿ ಹಬ್ಬ ಆಚರಿಸಲಾಗುತ್ತದೆ

ನವದೆಹಲಿ: ವಸಂತ ಪಂಚಮಿ ಹಬ್ಬ(Vasant Panchami 2022)ವನ್ನು ಮಾಘ ಶುಕ್ಲ ಪಂಚಮಿಯ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ವಸಂತ ಪಂಚಮಿ ಹಬ್ಬವನ್ನು ಫೆಬ್ರವರಿ 5ರ ಶನಿವಾರದಂದು ಆಚರಿಸಲಾಗುತ್ತದೆ. ಈ ದಿನದಂದು ವಿದ್ಯೆ ಮತ್ತು ಜ್ಞಾನದ ದೇವತೆಯಾದ ಸರಸ್ವತಿಯನ್ನು ಪೂಜಿಸಲಾಗುತ್ತದೆ. ವಸಂತ ಪಂಚಮಿಯ ದಿನದಿಂದ ವಸಂತ ಋತು ಪ್ರಾರಂಭವಾಗುತ್ತದೆ. 2022ರ ವಸಂತ ಪಂಚಮಿಯ ಮಂಗಳಕರ ಸಮಯ, ಪೂಜಾ ವಿಧಾನ(Vasant Panchami Puja Vidhi) ಮತ್ತು ಮಹತ್ವದ ಬಗ್ಗೆ ತಿಳಿಯಿರಿ.

ವಸಂತ ಪಂಚಮಿಯ ಶುಭ ಮುಹೂರ್ತ

ವಸಂತ ಪಂಚಮಿ ಫೆಬ್ರವರಿ 5, ಶನಿವಾರ ನಡೆಯಲಿದೆ. ಈ ದಿನ ಸರಸ್ವತಿ ದೇವಿ(Saraswati Devi)ಯನ್ನು ಪೂಜಿಸಲು ಶುಭ ಸಮಯವು ಬೆಳಗ್ಗೆ 03.47 ರಿಂದ ಪ್ರಾರಂಭವಾಗುತ್ತದೆ. ಇದು ಮರುದಿನ ಅಂದರೆ 6ನೇ ಫೆಬ್ರವರಿ ಭಾನುವಾರ ಬೆಳಗ್ಗೆ 03:46 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಶಾಸ್ತ್ರಗಳ ಪ್ರಕಾರ ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ಮೊದಲು ವಸಂತ ಪಂಚಮಿಯಲ್ಲಿ ಪೂಜಿಸುವುದು ಮಂಗಳಕರವಾಗಿದೆ.

ಇದನ್ನೂ ಓದಿ: ಕನಸಿನ ಮನೆ ಹೊಂದುವ ಬಯಕೆಯನ್ನು ಈಡೇರಿಸುತ್ತದೆ ಈ ಚಮತ್ಕಾರಿ ಉಪಾಯ

ಸರಸ್ವತಿ ಮಾತೆಯನ್ನು ಒಲಿಸಿಕೊಳ್ಳುವುದು ಹೇಗೆ..?

ವಸಂತ ಪಂಚಮಿಯು ಕಲಿಕೆ ಮತ್ತು ಜ್ಞಾನದ ದೇವತೆ(Saraswati Devi)ಯನ್ನು ಮೆಚ್ಚಿಸಲು ಒಂದು ವಿಶೇಷ ಸಂದರ್ಭವಾಗಿದೆ. ತಾಯಿ ಶಾರದೆಯನ್ನು ಮೆಚ್ಚಿಸಲು ಸ್ನಾನದ ನಂತರ ಬಿಳಿ ಅಥವಾ ಹಳದಿ ಬಟ್ಟೆಗಳನ್ನು ಧರಿಸಬೇಕು. ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಪೂಜೆಯನ್ನು ಪ್ರಾರಂಭಿಸಬೇಕು. ಹಳದಿ ಬಟ್ಟೆಯ ಮೇಲೆ ತಾಯಿ ಸರಸ್ವತಿಯನ್ನು ಸ್ಥಾಪಿಸಬೇಕು. ಇದಾದ ನಂತರ ಅವರ ಮುಂದೆ ಪ್ರಸಾದವಾಗಿ ರೋಲಿ ಶ್ರೀಗಂಧದ ಕುಂಕುಮ, ಅರಿಶಿನ, ಅಕ್ಷತೆ, ಹಳದಿ ಹೂವುಗಳು, ಹಳದಿ ಸಿಹಿತಿಂಡಿಗಳು, ಸಕ್ಕರೆ ಮಿಠಾಯಿ, ಮೊಸರು, ಕಡುಬು ಇತ್ಯಾದಿಗಳನ್ನು ಇರಿಸಬೇಕು. ಪೂಜೆಯ ಸಮಯದಲ್ಲಿ ಬಲಗೈಯಿಂದ ತಾಯಿ ಶಾರದೆಗೆ ಬಿಳಿ ಚಂದನ, ಬಿಳಿ ಅಥವಾ ಹಳದಿ ಹೂವುಗಳನ್ನು ಅರ್ಪಿಸಿ. ತಾಯಿಗೆ ಕೇಸರಿ ಮಿಶ್ರಿತ ಖೀರ್ ನೈವೇದ್ಯ ಮಾಡುವುದು ಉತ್ತಮ. ನಂತರ ಅರಿಶಿನ ಅಥವಾ ಹರಳಿನ ಮಾಲೆಯೊಂದಿಗೆ ‘ಓಂ ಸರಸ್ವತ್ಯೈ ನಮಃ’ ಎಂಬ ಈ ಮಂತ್ರವನ್ನು ಜಪಿಸಬೇಕು.

ವಸಂತ ಪಂಚಮಿಯ ಮಹತ್ವ

ಧಾರ್ಮಿಕ ನಂಬಿಕೆಗಳ ಪ್ರಕಾರ ಸರಸ್ವತಿ ದೇವಿ(Saraswati Devi)ಯು ಶುಕ್ಲ ಪಕ್ಷದ 5ನೇ ದಿನದಂದು ಬ್ರಹ್ಮನ ಬಾಯಿಯಿಂದ ಕಾಣಿಸಿಕೊಂಡಳು. ವಸಂತ ಪಂಚಮಿ(Vasant Panchami Importance)ಯ ದಿನದಂದು ಸರಸ್ವತಿ ದೇವಿಯನ್ನು ಪೂಜಿಸುವುದು ಇದೇ ಕಾರಣಕ್ಕೆ. ಈ ದಿನದಂದು ಶಾರದಾ ದೇವಿಯನ್ನು ಕ್ರಮಬದ್ಧವಾಗಿ ಪೂಜಿಸುವುದರಿಂದ ಜ್ಞಾನ ಮತ್ತು ಕಲಿಕೆಗೆ ಆಶೀರ್ವಾದವ ಸಿಗುತ್ತದೆ ಎಂದು ನಂಬಲಾಗಿದೆ. ಮತ್ತೊಂದೆಡೆ ವಸಂತ ಪಂಚಮಿಯನ್ನು ಶ್ರೀ ಪಂಚಮಿ ಎಂದೂ ಕರೆಯಲಾಗುತ್ತದೆ. ವಸಂತ ಪಂಚಮಿಯ ದಿನವು ಶಿಕ್ಷಣ ಅಥವಾ ಯಾವುದೇ ಹೊಸ ಕೆಲಸಗಳಿಗೆ ಮಂಗಳಕರವಾಗಿದೆ. ಇದಲ್ಲದೆ ಈ ದಿನವು ಗೃಹ ಪ್ರವೇಶಕ್ಕೆ ಮಂಗಳಕರವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಹಸ್ತದಲ್ಲಿ ಈ ರೇಖೆಯಿದ್ದರೆ ಆಗಲಿದೆ ಹಠಾತ್ ಧನಲಾಭ, ಪ್ರಯಾಣದ ಸಮಯದಲ್ಲಿ ಮೂಡುತ್ತದೆ ಪ್ರೀತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News