Vaishakh Purnima 2022: ತುಂಬಾ ವಿಶಿಷ್ಠವಾಗಿದೆ ಈ ಬಾರಿಯ ಹುಣ್ಣಿಮೆ, ಈ ಒಂದು ಕೆಲಸ ಹಣದ ಸುರಿಮಳೆಗೆ ಕಾರಣವಾಗಲಿದೆ

Vaishakh Purnima Remedies: ನಾಳೆ ಅಂದರೆ ಮೇ 16 ರಂದು ವೈಶಾಖ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಇದನ್ನು 'ಬುದ್ಧ ಪೌರ್ಣಿಮೆ' ಎಂದೂ ಕರೆಯುತ್ತಾರೆ. ಈ ವರ್ಷ ವೈಶಾಖ ಹುಣ್ಣಿಮೆಯ ದಿನದಂದು ಖಗ್ರಾಸ ಚಂದ್ರಗ್ರಹಣವೂ ಸಂಭವಿಸಲಿದೆ. ಈ ದಿನದಂದು ಕೈಗೊಳ್ಳಲಾಗುವ ಉಪಾಯಗಳು ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂಬುದು ಧಾರ್ಮಿಕ ನಂಬಿಕೆ.

Written by - Nitin Tabib | Last Updated : May 15, 2022, 09:40 PM IST
  • ನಾಳೆ ಮೇ 16, 2022, ವೈಶಾಖ ಹುಣ್ಣಿಮೆಯ ದಿನ
  • ಈ ದಿನ ಚಂದ್ರ ಗ್ರಹಣವೂ ಸಂಭವಿಸಲಿದೆ
  • ಬುದ್ಧ ಪೂರ್ಣಿಮೆಯ ದಿನ ಈ ಉಪಾಯಗಳನ್ನು ಮಾಡಲು ಮರೆಯಬೇಡಿ.
Vaishakh Purnima 2022: ತುಂಬಾ ವಿಶಿಷ್ಠವಾಗಿದೆ ಈ ಬಾರಿಯ ಹುಣ್ಣಿಮೆ, ಈ ಒಂದು ಕೆಲಸ ಹಣದ ಸುರಿಮಳೆಗೆ ಕಾರಣವಾಗಲಿದೆ title=
Vaishakh Purnima 2022

Vaishakh Purnima 2022 Remedies : ಹಿಂದೂ ಧರ್ಮ ಶಾಸ್ತ್ರಗಳಲ್ಲಿ ವೈಶಾಖ ಮಾಸದ ಹುಣ್ಣಿಮೆಗೆ ಭಾರಿ ಮಹತ್ವವಿದೆ. ಹಾಗೆ ನೋಡಿದರೆ ಎಲ್ಲಾ ಹುಣ್ಣಿಮೆಗಳು ವಿಶೇಷವೇ ಆಗಿರುತ್ತವೆ. ಆದರೆ, ವೈಶಾಖ ಹುಣ್ಣಿಮೆಯ ದಿನ ಶ್ರೀವಿಷ್ಣು ಬುದ್ಧನಾಗಿ ಭೂಮಿಗೆ ಅವತರಿಸಿ, ಬೌದ್ಧ ಧರ್ಮವನ್ನು ಪ್ರತಿಷ್ಠಾಪಿಸಿ, ಇಡೀ ವಿಶ್ವಕ್ಕೇ ಶಾಂತಿ, ಪ್ರೇಮ, ಪ್ರಾಮಾಣಿಕತೆ, ಮಾನವತೆಯ ಸಂದೇಶ ನೀಡಿದ ಎಂಬುದು ಧಾರ್ಮಿಕ ನಂಬಿಕೆ. ಇದೇ ದಿನ ಗೌತಮ ಬುದ್ಧನಿಗೆ ಬೋಧಗಯಾದಲ್ಲಿ ಬೋಧಿ ವೃಕ್ಷದ ಕೆಳಗೆ ಬುದ್ಧತ್ವ ಪ್ರಾಪ್ತಿಯಾಯಿತು ಎನ್ನಲಾಗುತ್ತದೆ. ಕೆಲ ಪ್ರದೇಶಗಳಲ್ಲಿ ಇದನ್ನು 'ಅಶ್ವತ್ಥ ಹುಣ್ಣಿಮೆ' ಎಂದೂ ಕೂಡ ಕರೆಯಲಾಗುತ್ತದೆ. 

ವೈಶಾಖ ಹುಣ್ಣಿಮೆಯಂದು ಈ ರೀತಿ ಪೂಜೆ ಸಲ್ಲಿಸಿ
ವೈಶಾಖ ಹುಣ್ಣಿಮೆಯಂದು ಸೂರ್ಯೋದಯಕ್ಕೂ ಮುನ್ನ ಸ್ನಾನ ಮಾಡಿ. ಹಾಗೆ ನೋಡಿದರೆ ಈ ದಿನ ಪವಿತ್ರ ನದಿಗಳಲ್ಲಿ ಮಾಡಲಾಗುವ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಆದರೆ, ಅದು ಸಾಧ್ಯವಾಗದೆ ಹೋದಲ್ಲಿ ಮನೆಯಲ್ಲಿಯೇ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಿ. ನಂತರ ಮನೆಯ ಈಶಾನ್ಯ ದಿಕ್ಕಿನಲ್ಲಿ ಚೌರಂಗದ ಮೇಲೆ ಕೆಂಪು, ಬಿಳಿ ಅಥವಾ ಹಳದಿ ವಸ್ತ್ರವನ್ನು ಹಾಸಿ, ಅದರ ಮೇಲೆ ಶ್ರೀವಿಷ್ಣು ಹಾಗೂ ದೇವಿ ಲಕುಮಿಯ ವಿಗ್ರಹ ಅಥವಾ ಭಾವಚಿತ್ರವನ್ನು ಪ್ರತಿಷ್ಠಾಪಿಸಿ. ನಂತರ ಶುದ್ಧ ಅಂತಃ ಕರಣದಿಂದ ಶ್ರೀವಿಷ್ಣು ಹಾಗೂ ಧನದ ಅಧಿದೇವತೆ ಲಕ್ಷ್ಮಿಗೆ ಪೂಜೆಯನ್ನು ನೆರವೇರಿಸಿ. ಪೂಜೆಯ ವೇಳೆ ಚಂದನ, ಅಕ್ಷತೆ, ಪಂಚಾಮೃತ, ಹಣ್ಣು, ಹೂವು, ಪಂಚಖಾದ್ಯ, ಕುಂಕುಮ, ಕೇಸರಿ, ಶ್ರೀಫಲ, ಪೀತಾಂಬರ ಅರ್ಪಿಸಿ. ತುಳಸಿ ದಳ ಅರ್ಪಿಸಿ ನೈವೇದ್ಯ ತೋರಿಸಿ ಆರತಿ ಬೆಳಗಿ. ಪೂಜೆಯ ಬಳಿಕ ದಾನ ಮಾಡಲು ಮರೆಯಬೇಡಿ. ವೈಶಾಖ ಹುಣ್ಣಿಮೆಯ ದಿನ ಜಲದಿಂದ ತುಂಬಿದ ಕೊಡ, ಕೊಡೆ, ಪಾದರಕ್ಷೆ, ಸತ್ತು, ಭೂರಿ ಭೋಜನ, ಹಣ್ಣು, ಬೀಸಣಿಕೆಗಳನ್ನು ದಾನದ ರೋಪದಲ್ಲಿ ನೀಡುವುದು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. 

ಇದನ್ನೂ ಓದಿ-Chandra Grahan 2022: ಚಂದ್ರ ಗ್ರಹಣದ ದಿನ ರಕ್ತ ರಂಗಿನಲ್ಲಿ ಚಂದ್ರನ ಗೋಚರ, ಇಲ್ಲಿದೆ ಬ್ಲಡ್ ಮೂನ್ ಗೋಚರದ ಸಮಯ

ಧನ  ಪ್ರಾಪ್ತಿಗಾಗಿ ಈ ಉಪಾಯ ಅನುಸರಿಸಿ
ಪಿತೃದೋಷ, ಶನಿದೋಷದಿಂದ ಪೀಡಿತ ಜಾತಕದ ಜನರ ಪಾಲಿಗೆ ವೈಶಾಖ ಹುಣ್ಣಿಮೆ ತುಂಬಾ ವಿಶೇಷವಾಗಿದೆ. ಈ ದಿನದಂದು ಅವರು ಅಶ್ವತ್ಥ ಮರಕ್ಕೆ ಕರಿ ಎಳ್ಳು ಬೆರೆಸಿದ ನೀರನ್ನು ಅರ್ಪಿಸಬೇಕು. ಇದರಿಂದ ಪಿತೃದೋಷದಿಂದ ಪರಿಹಾರ ಸಿಗುತ್ತದೆ. ಇನ್ನೊಂದೆಡೆ ಅಶ್ವತ್ಥ ಮರಕ್ಕೆ ಪೂಜೆ ಸಲ್ಲಿಸುವುದರಿಂದ ಶನಿ ಪ್ರಕೋಪದಿಂದಲೂ ಕೂಡ ಮುಕ್ತಿ ಸಿಗುತ್ತದೆ. ಈ ಉಪಾಯಗಳನ್ನು ಅನುಸರಿಸಿದರೆ, ಜೀವನದಲ್ಲಿ ಬರುವ ಸಂಕಷ್ಟ, ಅಡೆತಡೆಗಳು ದೂರಾಗುತ್ತವೆ ಮತ್ತು ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಏಳಿಗೆ ಮತ್ತು ಧನಲಾಭವಾಗುತ್ತದೆ. ಬೆಳಗ್ಗೆ ಸ್ನಾನ ಮಾಡಿ ಅಶ್ವತ್ಥ ಮರಕ್ಕೆ ಹಾಲು ಮತ್ತು ಜಲ ಅರ್ಪಿಸಿದರೆ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ. 

ಇದನ್ನೂ ಓದಿ-Budhaditya Yog 2022 : ವೃಷಭ ರಾಶಿಯಲ್ಲಿ ಬುಧಾದಿತ್ಯ ಯೋಗ, ಈ 4 ರಾಶಿಯವರಿಗೆ ಜೂನ್ 3 ರವರೆಗೆ ಅದೃಷ್ಟ

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News