ಈ ರಾಶಿಯಲ್ಲಿ ಏಕಕಾಲಕ್ಕೆ 2 ರಾಜಯೋಗಗಳ ನಿರ್ಮಾಣ, ಶನಿ ಕೃಪೆಯಿಂದ ಈ ಜನರ ಮೇಲೆ ಅಪಾರ ಧನವೃಷ್ಟಿ!

Two Auspicious Rajyog By Shani: ಕರ್ಮಫಲಗಳನ್ನು ಕೊಡುವ ಶನಿದೇವ ಪ್ರಸ್ತುತ ತನ್ನ ಸ್ವರಾಶಿಯಾಗಿರುವ ಕುಂಭರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇದಲ್ಲದೆ, ಅವರು ಇನ್ನೂ ಹಿಮ್ಮುಖ ನಡೆಯನ್ನೇ ಅನುಸರಿಸುತ್ತಿದ್ದಾನೆ. ಇದಲ್ಲದೆ ಶನಿದೇವನು ಶೀಘ್ರದಲ್ಲೇ ರಾಜಯೋಗವನ್ನು ರೂಪಿಸಲಿದ್ದಾನೆ, ಇದು ಕೆಲ ರಾಶಿಗಳ ಜನರಿಗೆ ಭಾರಿ ಪ್ರಯೋಜನಕಾರಿ ಸಾಬೀತಾಗಲಿದೆ.  

Written by - Nitin Tabib | Last Updated : Sep 15, 2023, 08:15 PM IST
  • ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ ಸಂಚರಿಸುತ್ತಿದ್ದು, ಈ ಕಾರಣದಿಂದಾಗಿ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಂಡಿದೆ.
  • ಇದೇ ವೇಳೆ ನವೆಂಬರ್ ನಲ್ಲಿ ನೆರನಡೆ ಅನುಸರಿಸಿದ ಬಳಿಕ ಶಶ ರಾಜಯೋಗ ರೂಪುಗೊಳ್ಳಲಿದೆ.
  • ಜ್ಯೋತಿಷ್ಯದಲ್ಲಿ, ಈ ಎರಡೂ ರಾಜಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಈ ರಾಶಿಯಲ್ಲಿ ಏಕಕಾಲಕ್ಕೆ 2 ರಾಜಯೋಗಗಳ ನಿರ್ಮಾಣ, ಶನಿ ಕೃಪೆಯಿಂದ ಈ ಜನರ ಮೇಲೆ ಅಪಾರ ಧನವೃಷ್ಟಿ! title=

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು ಎಂದೇ ಖ್ಯಾತ ಶನಿ ದೇವನ ನಡೆಗೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ. ರಾಶಿ ಪರಿವರ್ತನೆಯಿಂದ ಹಿಡಿದು ಉದಯ-ಅಸ್ತದವರೆಗೆ, ಆತನ ನೆರನಡೆಯೆ ಆಗಿರಲಿ ಅಥವಾ ಹಿಮ್ಮುಖ ನಡೆಯೆ ಆಗಿರಲು, ಅವು ಮಾನವ ಜೀವನದ ಮೇಲೆ ವ್ಯಾಪಕವಾದ ಪ್ರಭಾವವನ್ನು ಬೀರುತ್ತವೆ. ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ ಸಂಚರಿಸುತ್ತಿದ್ದು, ಈ ಕಾರಣದಿಂದಾಗಿ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಂಡಿದೆ. ಇದೇ ವೇಳೆ ನವೆಂಬರ್ ನಲ್ಲಿ ನೆರನಡೆ ಅನುಸರಿಸಿದ ಬಳಿಕ  ಶಶ ರಾಜಯೋಗ ರೂಪುಗೊಳ್ಳಲಿದೆ. ಜ್ಯೋತಿಷ್ಯದಲ್ಲಿ, ಈ ಎರಡೂ ರಾಜಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಎರಡೂ ಯೋಗಗಳ ಪ್ರಭಾವವು 2023 ರ ಅಂತ್ಯದವರೆಗೆ ಇರಲಿದೆ, ಇದರಿಂದಾಗಿ 4 ರಾಶಿಗಳಿಗೆ ಅನಿರೀಕ್ಷಿತ ಲಾಭಗಳು ಪ್ರಾಪ್ತಿಯಾಗಲಿವೆ.ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನೂ ತಿಳಿದುಕೊಳ್ಳೋಣ, 

ತುಲಾ ರಾಶಿ
ಶನಿದೇವನ ಎರಡೂ ರಾಜಯೋಗಗಳು ತುಲಾ ರಾಶಿಯ ಜನರ ಮೇಲೆ ಸಾಕಷ್ಟು ಶುಭ ಪ್ರಭಾವವನ್ನು ಬೀರಲಿವೆ. ಈ ಅವಧಿಯಲ್ಲಿ, ನಿಮಗೆ ಹಣಕಾಸಿನ ಪ್ರಗತಿಯ ಸಾಕಷ್ಟು ಅವಕಾಶಗಳು ಒದಗಿ ಬರಲಿವೆ, ಇದು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿಮ್ಮ ಸ್ಥಾನವನ್ನು ಬಲಪಡಿಸಲಿದೆ. ಉದ್ಯೋಗದಲ್ಲಿ ವರ್ಗಾವಣೆ ಮತ್ತು ಬಡ್ತಿಯ ಅವಕಾಶವಿರುತ್ತದೆ. ಆಕಸ್ಮಿಕ ಆರ್ಥಿಕ ಲಾಭವು ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಕೇಂದ್ರ ತ್ರಿಕೋನ ಹಾಗೂ ಶಶ ರಾಜಯೋಗಗಳು ವರದಾನ ಸಾಬೀತಾಗಳಿವೆ. ಈ ಅವಧಿಯಲ್ಲಿ, ಈ ರಾಶಿಗಳ ಜನರಿಗೆ ಶನಿ ದೇವರ ಆಶೀರ್ವಾದ ಪ್ರಾಪ್ತಿಯಾಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಇರುತ್ತದೆ. ನಿಮಗೆ ಬರವೇಕಾದ ಹಣ ನಿಮ್ಮ ಬಳಿ ಮರಳಲಿದೆ, ಇದು ನಿಮಗೆ ಆರ್ಥಿಕ ಲಾಭವನ್ನು ತಂದುಕೊಡಲಿದೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಕೇಂದ್ರ ತ್ರಿಕೋನ ಮತ್ತು ಶಶ ರಾಜಯೋಗಗಳು ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲಿವೆ. ಈ ಅವಧಿಯಲ್ಲಿ, ಲಾಭ ಗಳಿಸುವ ಉತ್ತಮ ಅವಕಾಶಗಳು ಒದಗಿಬರಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಇರಲಿದೆ. ಬಹಳ ದಿನಗಳಿಂದ ಉದ್ಯೋಗದ ನಿರೀಕ್ಷೆ ಇರುವ ಜನರಿಗೆ. ಶನಿದೇವನು ಅವರ ಆಸೆ ಪೂರೈಸಲಿದ್ದಾನೆ.

ಇದನ್ನೂ ಓದಿ-ಶೀಘ್ರದಲ್ಲಿಯೇ ಬುಧನ ರಾಶಿಗೆ ಕೇತು ಪ್ರವೇಶ, ಈ ರಾಶಿಗಳ ಜನರಿಗೆ ರಾಜ ಜೀವನ ಕರುಣಿಸಲು ಬರಲಿದ್ದಾಳೆ ಧನದ ಅಧಿದೇವತೆ!

ಸಿಂಹ ರಾಶಿ
ಶನಿದೇವನ ಶಶ ಮತ್ತು ಕೇಂದ್ರ ತ್ರಿಕೋನ ರಾಜಯೋಗ ಕೃಪೆಯಿಂದ ಸಿಂಹ ರಾಶಿಯ ಜನರ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ. ಈ ಅವಧಿಯಲ್ಲಿ, ಸಿಂಹ ರಾಶಿಯ ಜಾತಕದವರ  ಭೌತಿಕ ಸೌಕರ್ಯಗಳು ಹೆಚ್ಚಾಗಳಿವೆ. ಮನೆ ಮತ್ತು ವಾಹನವನ್ನು ಖರೀದಿಸುವ ವಿಪುಲ ಅವಕಾಶಗಳಿವೆ. ಕಾನೂನು ಪ್ರಕ್ರಿಯೆಗಳಲ್ಲಿ ಜಯ ನಿಮ್ಮದಾಗಲಿದೆ. ಉದ್ಯೋಗದಲ್ಲಿ ಬಡ್ತಿ ನಿಮಗೆ ಸಂತೋಷವನ್ನು ನೀಡುತ್ತದೆ. ದೀರ್ಘಾವಧಿಯಿಂದ ನಿಮಗೆ ಬರಬೇಕಾದ ಹಣ ನಿಮ್ಮತ್ತ ಮರಳಲಿದೆ. ದಾಂಪತ್ಯ ಜೀವನದಲ್ಲಿ ಸಂಬಂಧಗಳು ಮಧುರವಾಗಿ ಉಳಿಯಲಿವೆ.

ಇದನ್ನೂ ಓದಿ-ಶೀಘ್ರದಲ್ಲೇ ಸೂರ್ಯ-ಶನಿ ಅಶುಭ ಯೋಗ ಅಂತ್ಯ, 3 ರಾಶಿಗಳ ಜನರ ಮನೆಗೆ ಧನಲಕ್ಷ್ಮಿಯ ಆಗಮನ, ಸ್ವಾಗತಕ್ಕೆ ಸಿದ್ಧರಾಗಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News