Turmeric Milk Side Effects ಅರಿಶಿಣ ಹಾಲು ಸೇವನೆಯಿಂದಲೂ ಕೂಡ ಅಡ್ಡ ಪರಿಣಾಮಗಳು ಸಂಭವಿಸುತ್ತವೆ, ಎಚ್ಚರ!

Turmeric Milk Side Effects: ಭಾರತೀಯ ಸಮಾಜದಲ್ಲಿ ಅರಿಶಿಣಯುಕ್ತ ಹಾಲು ಸೇವನೆ ಹೆಚ್ಚು ಪ್ರಚಲಿತದಲ್ಲಿದೆ. ಆದರೆ, ಇದರ ಸೇವನೆಯಿಂದ ಅಡ್ಡಪರಿಣಾಮಗಳು ಕೂಡ ಸಂಭವಿಸುತ್ತವೆ.  

Written by - Nitin Tabib | Last Updated : Jul 30, 2022, 12:18 PM IST
  • ಭಾರತದಲ್ಲಿ ಅರಿಶಿಣ ಹಾಲು ಸೇವನೆ ಮಾಡದೆ ಇರುವ ಮನೆ ಸಿಗುವುದು ತುಂಬಾ ವಿರಳ.
  • ಏಕೆಂದರೆ, ಸಾಮಾನ್ಯವಾಗಿ ಹಾಲನ್ನು ಒಂದು ಪರಿಪೂರ್ಣ ಆಹಾರ ಎಂದು ಭಾವಿಸಲಾಗುತ್ತದೆ
  • ಇನ್ನೊಂದೆಡೆ ಅರಿಶಿಣವನ್ನು ಭಾರತದ ಪ್ರತಿಯೊಂದು ಮನೆಯಲ್ಲಿ ಮಸಾಲೆ ಪದಾರ್ಥದ ರೂಪದಲ್ಲಿ ಮಾಡಲಾಗುತ್ತದೆ.
Turmeric Milk Side Effects ಅರಿಶಿಣ ಹಾಲು ಸೇವನೆಯಿಂದಲೂ ಕೂಡ ಅಡ್ಡ ಪರಿಣಾಮಗಳು ಸಂಭವಿಸುತ್ತವೆ, ಎಚ್ಚರ! title=
Turmeric Milk Side Effects

Side Effects Of Turmeric Milk: ಭಾರತದಲ್ಲಿ ಅರಿಶಿಣ ಹಾಲು ಸೇವನೆ ಮಾಡದೆ ಇರುವ ಮನೆ ಸಿಗುವುದು ತುಂಬಾ ವಿರಳ. ಎಕೆಂದರೆ, ಸಾಮಾನ್ಯವಾಗಿ ಹಾಲನ್ನು ಒಂದು ಪರಿಪೂರ್ಣ ಆಹಾರ ಎಂದು ಭಾವಿಸಲಾಗುತ್ತದೆ. ಇದಕ್ಕೆ ಕಾರಣ ಎಂದರೆ, ಹಾಲಿನಲ್ಲಿ ಬಹುತೇಕ ಎಲ್ಲಾ ಪೋಷಕಾಂಶಗಳಿರುತ್ತವೆ. ಇನ್ನೊಂದೆಡೆ ಅರಿಶಿಣವನ್ನು ಭಾರತದ ಪ್ರತಿಯೊಂದು ಮನೆಯಲ್ಲಿ ಮಸಾಲೆ ಪದಾರ್ಥದ ರೂಪದಲ್ಲಿ ಮಾಡಲಾಗುತ್ತದೆ. ಆದರೆ ಗಾಯ, ಉರಿಯೂತದ ಸಮಸ್ಯೆ ಉಂಟಾದಾಗಲೆಲ್ಲ ಅರಿಶಿಣವನ್ನು ಮನೆಮದ್ದಾಗಿ ಬಳಸಲಾಗುತ್ತದೆ, ಏಕೆಂದರೆ ಅರಿಶಿಣದಲ್ಲಿ ಗುಣಪಡಿಸುವ ಶಕ್ತಿ ಉತ್ತಮವಾಗಿದೆ. ಇತ್ತೀಚಿನ ದಿನಗಳಲ್ಲಿ ಅರಿಶಿಣ ಮತ್ತು ಹಾಲು ಬೆರೆಸಿ ಕುಡಿಯುವ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ, ಇದು ಔಷಧೀಯ ಗುಣಗಳಿಂದ ತುಂಬಿರುವ ಒಂದು ಪಾನೀಯವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ, ಇದರ ಸೇವನೆಯಿಂದಲೂ ಕೂಡ ಕೆಲ ಅಡ್ಡಪರಿಣಾಮಗಳು ಉಂಟಾಗುತ್ತವೆ.

ಅರಿಶಿಣ ಹಾಲು ಸೇವನೆಯಿಂದಾಗುವ ಅನಾನುಕೂಲತೆಗಳು
ಗರ್ಭಾವಸ್ಥೆಯಲ್ಲಿ ಅರಿಶಿಣ ಹಾಲು ಸೇವನೆ ಬೇಡ

ಅರಿಶಿಣ ಬಿಸಿ ಗುಣಧರ್ಮವನ್ನು ಹೊಂದಿದೆ, ಆದ್ದರಿಂದ ಇದು ಹೊಟ್ಟೆಯಲ್ಲಿ ಶಾಖವನ್ನು ಹೆಚ್ಚಿಸುತ್ತದೆ. ಹೀಗಾಗಿ ಗರ್ಭಿಣಿಯರು ಅರಿಶಿಣ ಹಾಲನ್ನು ಸೇವಿಸುವುದನ್ನು ತಪ್ಪಿಸಬೇಕು, ಏಕೆಂದರೆ ಇದು ಇದರಿಂದ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.

ಯಕೃತ್ತಿನ ದುರ್ಬಲತೆಗೆ ಕಾರಣ
ಅರಿಶಿಣ ಹಾಲನ್ನು ಕುಡಿಯುವುದರಿಂದ ಯಕೃತ್ತಿಗೆ ಬಹಳಷ್ಟು ಹಾನಿಯಾಗಬಹುದು. ಏಕೆಂದರೆ ಸಾಮಾನ್ಯವಾಗಿ ಬಿಸಿ ಗುಣಧರ್ಮ ಹೊಂದಿರುವ ಪದಾರ್ಥಗಳು ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಯಕೃತ್ತು ದುರ್ಬಲವಾದಾಗ ದೇಹ ಹಲವು ರೀತಿಯಲ್ಲಿ ಅಸಹಾಯಕವಾಗುತ್ತದೆ.

ಕಿಬ್ಬೊಟ್ಟೆಯ ಅಸ್ವಸ್ಥತೆಗೆ ಕಾರಣ
ನೀವು ದಿನಕ್ಕೆ ಒಂದಕ್ಕಿಂತ ಹೆಚ್ಚು ಚಮಚ ಅರಿಶಿಣವನ್ನು ಸೇವಿಸಿದರೆ, ಅದು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕಿಡ್ನಿ ಸಮಸ್ಯೆ ಇರುವವರು ಅರಿಶಿಣದ ಹಾಲನ್ನು ಕುಡಿಯಬಾರದು. ಈ ಮಸಾಲೆಯಲ್ಲಿರುವ ಆಕ್ಸಲೇಟ್, ಕ್ಯಾಲ್ಸಿಯಂ ಅನ್ನು ಕರಗಿಸಲು ಅನುಮತಿಸುವುದಿಲ್ಲ, ಇದು ಮೂತ್ರಪಿಂಡದ ಹರಳುಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಅರಿಶಿಣ ಸೇವನೆಯನ್ನು ತಪ್ಪಿಸಬೇಕು.

ಇದನ್ನೂ ಓದಿ-Hair Care Tips:ಮಳೆಗಾಲದ ಋತುವಿನಲ್ಲಿ ಕೂದಲಿಗೆ ಬಣ್ಣ ಅನ್ವಯಿಸಬೇಕೆ? ಈ ಸಂಗತಿಗಳು ನೆನಪಿನಲ್ಲಿಡಿ

ಮಧುಮೇಹದ ಸಮಸ್ಯೆಗೆ ಕಾರಣ
ಮಧುಮೇಹ ರೋಗಿಗಳು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು, ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ ಮತ್ತು ಎಲ್ಲಾ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಸಾಮಾನ್ಯವಾಗಿ ಅರಿಶಿಣವನ್ನು ಮಧುಮೇಹ ರೋಗಿಗಳಿಗೆ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದನ್ನು ಸೇವಿಸುವುದರಿಂದ ಮೂಗಿನಿಂದ ರಕ್ತಸ್ರಾವವಾಗುವ ಅಪಾಯ ಹೆಚ್ಚಾಗುತ್ತದೆ.

ಇದನ್ನೂ ಓದಿ-Cholesterol: ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹದಲ್ಲಿಈ ಲಕ್ಷಣಗಳು ಗೋಚರಿಸುತ್ತವೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News