Tulasi Astro Tips: ಮದುವೆ ಅಡೆತಡೆ ಅಥವಾ ವೈವಾಹಿಕ ಜೀವನದ ತೊಂದರೆಗಳಿಗೆ ಇಲ್ಲಿದೆ ಪರಿಹಾರ!

ಮನೆಯಲ್ಲಿ ತುಳಸಿ ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಪೂಜಿಸುವುದರಿಂದ ಮತ್ತು ನೀರನ್ನು ಅರ್ಪಿಸುವುದರಿಂದ ಮನೆಗೆ ದೇವರ ಆಶೀರ್ವಾದ ದೊರೆಯುತ್ತದೆ. ಹಣ ಮತ್ತು ಧಾನ್ಯಗಳಿಗೆ ಯಾವುದೇ ಕೊರತೆಯಿರುವುದಿಲ್ಲ. ಮಾನವನ ಜೀವನಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ತುಳಸಿಯಿಂದ ಪರಿಹಾರಗಳಿವೆ.

Written by - Puttaraj K Alur | Last Updated : Nov 11, 2022, 12:36 PM IST
  • ಸನಾತನ ಧರ್ಮದಲ್ಲಿ ತುಳಸಿ ಗಿಡವನ್ನು ಶುಭ & ಮಂಗಳಕರವೆಂದು ಪರಿಗಣಿಸಲಾಗಿದೆ
  • ತುಳಸಿ ಸಸ್ಯದಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸಿದ್ದಾಳೆಂದು ನಂಬಲಾಗಿದೆ
  • ಮದುವೆ ಅಥವಾ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ತುಳಸಿಯಿಂದ ಪರಿಹಾರ
Tulasi Astro Tips: ಮದುವೆ ಅಡೆತಡೆ ಅಥವಾ ವೈವಾಹಿಕ ಜೀವನದ ತೊಂದರೆಗಳಿಗೆ ಇಲ್ಲಿದೆ ಪರಿಹಾರ! title=
ತುಳಸಿ ಗಿಡದ ಪ್ರಯೋಜನಗಳು

ನವದೆಹಲಿ: ಸನಾತನ ಧರ್ಮದಲ್ಲಿ ತುಳಸಿ ಗಿಡವನ್ನು ಶುಭ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಸ್ಯವು ವಿಷ್ಣುವಿಗೆ ಬಹಳ ಪ್ರಿಯವಾಗಿದೆ. ಈ ಸಸ್ಯದಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆಂದು ನಂಬಲಾಗಿದೆ. ಆದ್ದರಿಂದ ಜನರು ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಪೂಜಿಸುತ್ತಾರೆ. ತುಳಸಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ, ಮಾನವನ ಜೀವನದ ತೊಂದರೆಗಳನ್ನು ಕಡಿಮೆ ಮಾಡಲು ಸಹ ಬಳಕೆಯಾಗುತ್ತದೆ. ತುಳಸಿಯಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಯಾರಿಗಾದರೂ ಮದುವೆಯಾಗದೇ ಇದ್ದಲ್ಲಿ ಅಥವಾ ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ತುಳಸಿಯಿಂದ ಪರಿಹಾರ ಸಿಗುತ್ತದೆ. ಇದರಿಂದ ಯಾವುದೇ ವ್ಯಕ್ತಿಯು ತೊಂದರೆಗಳಿಂದ ಮುಕ್ತಿ ಹೊಂದಬಹುದು.

ಮದುವೆಗೆ ಪರಿಹಾರಗಳು

ಪೋಷಕರಿಗೆ ಮಗ-ಮಗಳ ಮದುವೆಯ ಚಿಂತೆ. ದಿನದಿಂದ ದಿನಕ್ಕೆ ವಯಸ್ಸು ಹೆಚ್ಚುತ್ತಿದೆ, ಆದರೆ ಸಂಬಂಧಗಳು ಬರುತ್ತಿಲ್ಲ. ಸಂಬಂಧಗಳು ಬರುತ್ತಿವೆ ಆದರೆ ಕಾರಣಾಂತರಗಳಿಂದ ಅವು ಸ್ಥಿರವಾಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ತುಳಸಿಯಿಂದ ಪರಿಹಾರ ಪಡೆಯಬಹುದು. ಮದುವೆಯಾಗದೇ ಇರುವವರು ತುಳಸಿಗೆ ನೀರನ್ನು ಪ್ರತಿನಿತ್ಯ ಅರ್ಪಿಸಲು ಆರಂಭಿಸಿದರೆ ಶುಭ ಫಲಗಳು ದೊರೆಯುತ್ತವೆ.

ಇದನ್ನೂ ಓದಿ: ಒಂದೇ ತಿಂಗಳಲ್ಲಿ ಎರಡು ಬಾರಿ ಗೋಚರಿಸಲಿರುವ ಶುಕ್ರ ನಾಲ್ಕು ರಾಶಿಯವರಿಗೆ ಹರಿಸಲಿದ್ದಾನೆ ಹಣದ ಹೊಳೆ

ವೈವಾಹಿಕ ಜೀವನ

ಅನೇಕ ಜನರು ತಮ್ಮ ವೈವಾಹಿಕ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದಿನನಿತ್ಯದ ಮನಸ್ತಾಪದಿಂದ ಮಾನಸಿಕ ಉದ್ವೇಗವಿದ್ದರೆ, ವಿವಾಹಿತರು ತುಳಸಿಗೆ ಹಿತ್ತಾಳೆ ಪಾತ್ರೆಯೊಂದಿಗೆ ನೀರನ್ನು ಅರ್ಪಿಸಬೇಕು. ಇದರೊಂದಿಗೆ ದಾಂಪತ್ಯ ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ.

ಸುಖ ಜೀವನ

ವೈವಾಹಿಕ ಜೀವನದಲ್ಲಿ ನಿಮಗೆ ಸಂತೋಷ ಬೇಕಾದರೆ ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ತುಳಸಿ ಎಲೆಗಳನ್ನು ಬೆರೆಸಿ. ಈ ನೀರಿನಿಂದ 24 ಗಂಟೆಗಳ ನಂತರ ಸ್ನಾನ ಮಾಡಿದ ಬಳಿಕ ಮನೆಯ ಮುಖ್ಯ ಬಾಗಿಲು ಸೇರಿದಂತೆ ಮನೆಯಾದ್ಯಂತ ಸಿಂಪಡಿಸಬೇಕು. ಇದು ವೈವಾಹಿಕ ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ: Shani Dev: ಮುಂದಿನ ವರ್ಷದ ಆರಂಭದಿಂದ ಶನಿದೇವ ಈ ರಾಶಿಯವರಿಗೆ ದಯೆ ತೋರಲಿದ್ದಾನೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News