ದೀಪಾವಳಿಯ ದಿನ ಯಾರಿಗೂ ತಿಳಿಯದಂತೆ ಮಾಡಿದರೆ ಈ ಕೆಲಸ ಸಿಗಲಿದೆ ಸರ್ವ ಕಾರ್ಯಗಳಲ್ಲಿ ಯಶಸ್ಸು

ಅಮಾವಾಸ್ಯೆಯ ದಿನ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವಿಶೇಷ ಹಬ್ಬದಂದು, ಅಶ್ವತ ಮರಕ್ಕೆ  ನೀರನ್ನು ಅರ್ಪಿಸಬೇಕು. 

Written by - Ranjitha R K | Last Updated : Nov 4, 2021, 12:56 PM IST
  • ದೀಪಾವಳಿಯಂದು ಕೆಲವು ವಿಶೇಷ ಕೆಲಸಗಳನ್ನು ಮಾಡಬೇಕು
  • ಶನಿ ಅಥವಾ ಕಾಲ ಸರ್ಪ ದೋಷ ನಿವಾರಣೆಯಾಗುತ್ತದೆ
  • ಸಂಬಂಧಗಳಲ್ಲಿ ಮಾಧುರ್ಯ ಉಳಿಯುತ್ತದೆ
ದೀಪಾವಳಿಯ ದಿನ ಯಾರಿಗೂ ತಿಳಿಯದಂತೆ ಮಾಡಿದರೆ ಈ ಕೆಲಸ ಸಿಗಲಿದೆ ಸರ್ವ ಕಾರ್ಯಗಳಲ್ಲಿ ಯಶಸ್ಸು title=
ದೀಪಾವಳಿಯಂದು ಕೆಲವು ವಿಶೇಷ ಕೆಲಸಗಳನ್ನು ಮಾಡಬೇಕು (file photo)

ನವದೆಹಲಿ : ಇಂದು ಇಡೀ ದೇಶವು ದೀಪಾವಳಿ (Diwali 2021) ಹಬ್ಬವನ್ನು ಆಚರಿಸುತ್ತಿದೆ. ಈ ದಿನ, ಲಕ್ಷ್ಮಿ ದೇವಿಯ (Godess Lakshmi Pooja) ವಿಶೇಷ ಪೂಜೆ, ಗಣೇಶನ ಪೂಜೆ  ಮಾಡಲಾಗುತ್ತದೆ. ದೀಪಾವಳಿಯ ದಿನದಂದು (Diwali pooja) ಕೆಲವು ವಿಶೇಷ ಕೆಲಸಗಳನ್ನು ಮಾಡುವ ಮೂಲಕ, ಹಣಕಾಸಿನ ತೊಂದರೆಗಳಿಂದ ಮುಕ್ತಿ ಪಡೆಯಬಹುದು. ಅಲ್ಲದೆ ಹೀಗೆ ಮಾಡಿದರೆ, ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಯಾಗುತ್ತದೆ. 

ಶನಿ ಅಥವಾ ಕಾಲ ಸರ್ಪ ದೋಷ ನಿವಾರಣೆ :
ಅಮಾವಾಸ್ಯೆಯ ದಿನ ದೀಪಾವಳಿ ಹಬ್ಬವನ್ನು (Diwali pooja) ಆಚರಿಸಲಾಗುತ್ತದೆ. ಈ ವಿಶೇಷ ಹಬ್ಬದಂದು, ಅಶ್ವತ ಮರಕ್ಕೆ (Peepal tree) ನೀರನ್ನು ಅರ್ಪಿಸಬೇಕು. ಇದರೊಂದಿಗೆ ತಡರಾತ್ರಿ ಅಶ್ವತಮರದ ಕೆಳಗೆ ಎಣ್ಣೆಯ ದೀಪವನ್ನು ಹಚ್ಚಿ ತಿರುಗಿ ನೋಡದೆ ಹಿಂತಿರುಗಬೇಕು. ಹೀಗೆ ಮಾಡಿದರೆ ಜಾತಕದಲ್ಲಿ ಶನಿ ಮತ್ತು ಕಾಲಸರ್ಪ ದೋಷ (Kala Sarpa Dosha) ಇದ್ದರೆ ಅದರಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ. 

ಇದನ್ನೂ ಓದಿ :  Deepawali 2021: ಲಕ್ಷ್ಮೀಯ ಕೃಪೆಗೆ ಪಾತ್ರರಾಗಲು ಹೀಗಿರಲಿ ಇಂದಿನ ಪೂಜೆಯ ನಿಯಮ, ಈ ಮುಹೂರ್ತದಲ್ಲಿ ಪೂಜಿಸಿದರೆ ಸಿಗಲಿದೆ ಸಂಪೂರ್ಣ ಪೂಜಾ ಫಲ

ಸಂಬಂಧಗಳಲ್ಲಿ ಮಾಧುರ್ಯಕ್ಕಾಗಿ:
ದೀಪಾವಳಿಯ ದಿನ 11, 21, 31 ಮಣ್ಣಿನ ದೀಪಗಳನ್ನು ಹಚ್ಚಿ. ಇದರೊಂದಿಗೆ ತುಪ್ಪ (Ghee) ಮತ್ತು ಕೆಂಪು ಬಣ್ಣದ ಬತ್ತಿಯನ್ನು ದೀಪಕ್ಕೆ ಹಾಕಿ. ಇದು ಸಂಬಂಧದಲ್ಲಿ ನಡೆಯುತ್ತಿರುವ ಘರ್ಷಣೆಯನ್ನು ತೆಗೆದುಹಾಕುತ್ತದೆ.  ಮನೆಯ ಸದಸ್ಯರಲ್ಲಿ ಒಗ್ಗಟ್ಟು ಉಳಿಯುತ್ತದೆ. 

ಧನ ಪ್ರಾಪ್ತಿಗಾಗಿ :
ದೀಪಾವಳಿ ಪೂಜೆಯನ್ನು (Diwali pooja) ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಕುಳಿತು ಮಾಡಬೇಕು. ಪೂಜೆಯ ಸಮಯದಲ್ಲಿ ಕೆಂಪು ಅಥವಾ ಹಳದಿ ಬಟ್ಟೆಗಳನ್ನು ಧರಿಸಿ. ಹೀಗೆ ಮಾಡಿದರೆ, ಸ್ಥಗಿತಗೊಂಡ ಕೆಲಸಗಳು ಇದರಿಂದ ಪ್ರಾರಂಭವಾಗುತ್ತವೆ ಎನ್ನುತ್ತವೆ ಧಾರ್ಮಿಕ ನಂಬಿಕೆ. ಇದರೊಂದಿಗೆ ಲಕ್ಷ್ಮಿ ದೇವಿಯ (Godess Lakshmi) ಅಪಾರ ಕೃಪೆಯೂ ಸಿಗಲಿದೆ. 

ಇದನ್ನೂ ಓದಿ :  Diwali 2021 Vastu Tips: ದೀಪಾವಳಿಯ ದಿನದಂದು ಈ 7 ವಾಸ್ತು ಸಲಹೆಗಳನ್ನು ಅನುಸರಿಸಿ, ಲಕ್ಷ್ಮೀ ಕೃಪೆಗೆ ಪಾತ್ರರಾಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News