ರಾತ್ರಿ ಸುಖ ನಿದ್ದೆಗೆ ಜಾರ ಬೇಕಾದರೆ ಈ ವಿಧಾನಗಳನ್ನು ಅನುಸರಿಸಿ .!

40 ವರ್ಷ ವಯಸ್ಸು ತಲುಪಿದ ನಂತರವಂತೂ 8 ಗಂಟೆಗಿಂತ ಕಡಿಮೆ ಅವಧಿ ನಿದ್ದೆ ಮಾಡಲೇಬಾರದು.  ನಮ್ಮ ದೇಹದಂತೆಯೇ ಮನಸ್ಸಿಗೂ ವಿಶ್ರಾಂತಿ ಬೇಕಾಗಿರುತ್ತದೆ. ಹಾಗಾಗಿ ದಿನಕ್ಕೆ ಎಂಟು ಗಂಟೆಗಳ ನಿದ್ದೆ ಸಿಗದೇ ಹೋದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

Written by - Ranjitha R K | Last Updated : Dec 26, 2022, 03:58 PM IST
  • ವಯಸ್ಸು ಹೆಚ್ಚಾದಂತೆ, ದೇಹವು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತದೆ
  • ದಿನಕ್ಕೆ ಎಂಟು ಗಂಟೆಗಳ ನಿದ್ದೆ ಬೇಕೇ ಬೇಕು
  • ಉತ್ತಮ ನಿದ್ರೆ ಪಡೆಯಲು ಏನು ಮಾಡಬೇಕು
ರಾತ್ರಿ ಸುಖ ನಿದ್ದೆಗೆ ಜಾರ ಬೇಕಾದರೆ ಈ ವಿಧಾನಗಳನ್ನು ಅನುಸರಿಸಿ .!  title=

ಬೆಂಗಳೂರು : ವಯಸ್ಸು ಹೆಚ್ಚಾದಂತೆ, ದೇಹವು ಅನೇಕ ಕಾಯಿಲೆಗಳಿಗೆ ಒಳಗಾಗಲು ಪ್ರಾರಂಭಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ದಿನದಲ್ಲಿ ಸುಮಾರು 8 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ. 40 ವರ್ಷ ವಯಸ್ಸು ತಲುಪಿದ ನಂತರವಂತೂ 8 ಗಂಟೆಗಿಂತ ಕಡಿಮೆ ಅವಧಿ ನಿದ್ದೆ ಮಾಡಲೇಬಾರದು.  ನಮ್ಮ ದೇಹದಂತೆಯೇ ಮನಸ್ಸಿಗೂ ವಿಶ್ರಾಂತಿ ಬೇಕಾಗಿರುತ್ತದೆ. ಹಾಗಾಗಿ ದಿನಕ್ಕೆ ಎಂಟು ಗಂಟೆಗಳ ನಿದ್ದೆ ಸಿಗದೇ ಹೋದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಉತ್ತಮ ನಿದ್ರೆ ಪಡೆಯಲು ಏನು ಮಾಡಬೇಕು ?
1. ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ :
ನೆಮ್ಮದಿಯ ನಿದ್ದೆ ಬರಬೇಕಾದರೆ, ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಆಯಾಸ  ನಿವಾರಣೆಯಾಗುತ್ತದೆ. ಇದು ಹಿತ ನಿದ್ದೆ ತರಿಸುತ್ತದೆ. 

ಇದನ್ನೂ ಓದಿ : Turmeric Side Effects : ಈ ಕಾಯಿಲೆ ಇದ್ದವರು ತಪ್ಪಿಯೂ ಅರಿಶಿನ ಸೇವಿಸಬೇಡಿ

2. 40 ನೇ ವಯಸ್ಸಿಗೆ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ :
ಪುರುಷ ಮತ್ತು ಮಹಿಳೆ ಇಬ್ಬರ ಮೇಲೆ ಕುಟುಂಬದ ಜವಾಬ್ದಾರಿಗಳ ಹೊರೆ ತುಂಬಾ ಹೆಚ್ಚಾಗಿರುತ್ತದೆ. ಇದರಿಂದಾಗಿ ಒತ್ತಡ ಕೂಡಾ ಸಾಮಾನ್ಯ. ಈ ಒತ್ತಡವು ರಾತ್ರಿಯ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಮಾಡುವುದು ಸಾಧ್ಯವಾಗುವುದಿಲ್ಲ. ರಾತ್ರಿ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಆಗ ಮಾತ್ರ 8 ಗಂಟೆಗಳ ಕಾಲ ಆರಾಮವಾಗಿ  ನಿದ್ದೆಗೆ ಜಾರುವುದು ಸಾಧ್ಯವಾಗುತ್ತದೆ. 

3. ಧ್ಯಾನ ಮಾಡಿ : 
ಧ್ಯಾನ ಜೀವನದ ಪ್ರಮುಖ ಭಾಗವಾಗಿದೆ. ಈ ಮೂಲಕ ಉದ್ವೇಗ ಮತ್ತು ಆತಂಕವನ್ನು ಒದ್ದೋಡಿಸಬಹುದು. ಇದಕ್ಕಾಗಿ, ತಜ್ಞರ ಸಹಾಯವನ್ನು ತೆಗೆದುಕೊಳ್ಳಿ. ನಿರಂತರ ಧ್ಯಾನ ಮಾಡುತ್ತಿದ್ದಂತೆಯೇ ಕೆಲವು ದಿನಗಳ  ನಂತರ, ಶಾಂತವಾಗಿ ಮಲಗುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : Bay Leaves: ನಿಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಈ ಎಲೆಯ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸಿ

4. ರಾತ್ರಿಯಲ್ಲಿ ಟೀ ಕುಡಿಯಬೇಡಿ :
ಟೀ ಕುಡಿಯುವುದರಿಂದ ಆಯಾಸ ದೂರವಾಗುತ್ತದೆ. ತಾಜಾತನದ ಅನುಭವವಾಗುತ್ತದೆ. ಆದರೆ, ರಾತ್ರಿ ಚಹಾ ಕುಡಿದರೆ ಸರಿಯಾಗಿ ನಿದ್ದೆ ಬರುವುದಿಲ್ಲ. ಚಹಾ ಕುಡಿಯಲೇ ಬೇಕು ಎಂದಿದ್ದರೆ ರಾತ್ರಿಯ ಬದಲು ಸಂಜೆ ಚಹಾ ಕುಡಿಯಿರಿ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News