ಜೀವನದಲ್ಲಿ ನಿಮಗೆಷ್ಟು ಪ್ರೀತಿ ಸಿಗುತ್ತದೆ ಎನ್ನುವುದನ್ನು ಹೇಳುತ್ತದೆ ಹಸ್ತದ ಈ ರೇಖೆ .!

ಮಧ್ಯದ ಬೆರಳಿನ ಕೆಳಗೆ ಶನಿ ಪರ್ವತವು ಇರುತ್ತದೆ. ಈ ಸ್ಥಾನವನ್ನು ಭಾಗ್ಯ ಸ್ಥಾನ ಎಂದು ಕರೆಯಲಾಗುತ್ತದೆ. ಈ ಶನಿ ಪರ್ವತದಿಂದ ಹೊರಬಂದು ಅಂಗೈಯಲ್ಲಿ ಮಣಿಕಟ್ಟಿನ ಕಡೆಗೆ ಹೋಗುವ ರೇಖೆಯನ್ನು ಭಾಗ್ಯ ರೇಖೆ ಎಂದು ಕರೆಯುತ್ತಾರೆ. 

Written by - Ranjitha R K | Last Updated : Jul 26, 2022, 01:01 PM IST
  • ಅದೃಷ್ಟ ರೇಖೆ ಹೀಗಿದ್ದರೆ ಮಂಗಳಕರ
  • ಪ್ರೀತಿಯಲ್ಲಿ ಯಾರಿಗೆ ಯಶಸ್ಸು ಸಿಗುತ್ತದೆ
  • ಹಸ್ತದಲ್ಲಿರುತ್ತದೆ ಅದೃಷ್ಟ ರೇಖೆ
ಜೀವನದಲ್ಲಿ ನಿಮಗೆಷ್ಟು ಪ್ರೀತಿ ಸಿಗುತ್ತದೆ ಎನ್ನುವುದನ್ನು ಹೇಳುತ್ತದೆ ಹಸ್ತದ ಈ ರೇಖೆ .! title=
palmistry (file photo)

ಬೆಂಗಳೂರು :  ಕೈಯಲ್ಲಿ ಅದೃಷ್ಟ ರೇಖೆ ಇದ್ದು, ಅದು ಮಂಗಳಕರ ಸ್ಥಾನದಲ್ಲಿರಿಸುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಎಷ್ಟು ಯಶಸ್ವಿಯಾಗುತ್ತಾನೆ ಎಂಬುದನ್ನು ಇದು ತೋರಿಸುತ್ತದೆ. ವ್ಯಕ್ತಿ  ಶ್ರೀಮಂತನಾಗುತ್ತಾನೋ ಇಲ್ಲವೋ? ಜೀವನದಲ್ಲಿ ಆತನಿಗೆ ಯಶಸ್ಸು ಸಿಗುತ್ತದೆಯೇ ? ಖ್ಯಾತಿ ಸಿಗುತ್ತದೆಯೇ ಎನ್ನುವುದನ್ನು ಅದೃಷ್ಟ ರೇಖೆಯ ಮೂಲಕ ತಿಳಿದುಕೊಳ್ಳಬಹುದು. 

ಅದೃಷ್ಟ ರೇಖೆ ಹೀಗಿದ್ದರೆ ಮಂಗಳಕರ : 
ಮಧ್ಯದ ಬೆರಳಿನ ಕೆಳಗೆ ಶನಿ ಪರ್ವತವು ಇರುತ್ತದೆ. ಈ ಸ್ಥಾನವನ್ನು ಭಾಗ್ಯ ಸ್ಥಾನ ಎಂದು ಕರೆಯಲಾಗುತ್ತದೆ. ಈ ಶನಿ ಪರ್ವತದಿಂದ ಹೊರಬಂದು ಅಂಗೈಯಲ್ಲಿ ಮಣಿಕಟ್ಟಿನ ಕಡೆಗೆ ಹೋಗುವ ರೇಖೆಯನ್ನು ಭಾಗ್ಯ ರೇಖೆ ಎಂದು ಕರೆಯುತ್ತಾರೆ. ಇದನ್ನು ಶನಿ ರೇಖೆ ಎಂಡು ಕರೆಯುವುದೂ ಇದೆ. 

ಇದನ್ನೂ ಓದಿ : Guru Pushya Yog 2022: July 28ರ ಗುರುಪುಷ್ಯಾಮೃತ ಯೋಗದ ದಿನ, ಈ ಕೆಲಸ ಮಾಡಲು ಮತ್ತು ಇವುಗಳನ್ನು ಖರೀದಿಸಲು ಮರೆಯಬೇಡಿ

ಅದೃಷ್ಟದ ರೇಖೆಯು ಉದ್ದವಾಗಿ ಆಳವಾಗಿ ಮತ್ತು ಸ್ಪಷ್ಟವಾಗಿದ್ದರೆ, ಅದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ರೇಖೆ ಮಧ್ಯದಲ್ಲಿಯೇ ಕತ್ತರಿಸಿದ್ದರೆ ಒಳ್ಳೆಯದಲ್ಲ. 

ಅದೃಷ್ಟದ ರೇಖೆಯು ತುಂಬಾ ಆಳವಾಗಿ ಮತ್ತು ಉದ್ದವಾಗಿದ್ದರೆ ವ್ಯಕ್ತಿಯು ತುಂಬಾ ಅದೃಷ್ಟಶಾಲಿ ಮತ್ತು ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾನೆ ಎನ್ನುವುದನ್ನು ಸೂಚಿಸುತ್ತದೆ. ಜೀವನದಲ್ಲಿ ಸಾಕಷ್ಟು ಹಣ ಮತ್ತು ಜನಪ್ರಿಯತೆಯನ್ನು ಪಡೆಯುತ್ತಾರೆ. ಮಾತ್ರವಲ್ಲ ಇವರು ಪ್ರೀತಿಯ ವಿಷಯದಲ್ಲೂ ಅದೃಷ್ಟವಂತರು ಎಂದು ಹೇಳಲಾಗುತ್ತದೆ.  

ಇದನ್ನೂ ಓದಿ : ಶಿವಲಿಂಗಕ್ಕೆ ಹಸಿ ಹಾಲನ್ನು ಏಕೆ ಅರ್ಪಿಸಬೇಕು? ಯಾವ ದಿಕ್ಕಿನಲ್ಲಿ ನಿಂತು ಅಭಿಷೇಕ ಮಾಡಬೇಕು?

ಅದೃಷ್ಟದ ರೇಖೆ 2 ಭಾಗಗಳಾಗಿ ವಿಭಜಿತವಾಗಿದ್ದರೆ, ವ್ಯಕ್ತಿಯು ಯೋಗ್ಯನಾಗಿದ್ದರೂ ಜೀವನದ ಗುರಿಯನ್ನು ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತದೆ. 

ಅದೃಷ್ಟ ರೇಖೆಯು ಅಲೆಅಲೆಯಂತೆ ಇದ್ದರೆ  ವ್ಯಕ್ತಿಯ ಜೀವನದಲ್ಲಿ ಏರಿಳಿತಗಳು ಎದುರಾಗುತ್ತವೆ. ಮತ್ತೊಂದೆಡೆ, ಕೈಯಲ್ಲಿ 2 ಅದೃಷ್ಟ ರೇಖೆಗಳಿದ್ದರೆ, ಅವರ ಪ್ರಗತಿಗೆ ತಡೆ ಇರುವುದೇ ಇಲ್ಲ. ಈ ಜನರು ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ. 

ಅದೃಷ್ಟ ರೇಖೆಯು ಶನಿಯ ಪರ್ವತದಿಂದ ಪ್ರಾರಂಭವಾಗಿ ಮಣಿಗಂಟಿನವರೆಗೆ ಹೋದರೆ, ಅಂತಹ ಜನರು ಅದೃಷ್ಟದ ಸಹಾಯದಿಂದ ಯಶಸ್ವಿಯಾಗುತ್ತಾರೆ. ಆದರೆ ಅದೃಷ್ಟ ರೇಖೆಯು ಜೀವನದ ರೇಖೆಯಿಂದ ಪ್ರಾರಂಭವಾದರೆ, ವ್ಯಕ್ತಿಯು ಕಠಿಣ ಪರಿಶ್ರಮದಿಂದ ಯಶಸ್ಸನ್ನು ಪಡೆಯುತ್ತಾನೆ. 

ಮತ್ತೊಂದೆಡೆ, ಅದೃಷ್ಟ ರೇಖೆಯು ಹೃದಯ ರೇಖೆಯೊಂದಿಗೆ ಚಲಿಸಿ ಗುರುವಿನ ಪರ್ವತಕ ತಲುಪಿದರೆ, ವ್ಯಕ್ತಿಯು ಪ್ರೀತಿಯಲ್ಲಿ ಯಶಸ್ಸನ್ನು ಪಡೆಯುತ್ತಾನೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News