ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಕುಡಿದರೆ ಶಾಶ್ವತವಾಗಿ ಕಪ್ಪಾಗುವುದು ಬಿಳಿ ಕೂದಲು !

ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಮುಜುಗರಕ್ಕೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಬಣ್ಣಕ್ಕೆ ತಿರುಗಬಾರದು ಎಂದಾದರೆ, ನೈಸರ್ಗಿಕ ಪರಿಹಾರಗಳ ಮೊರೆ ಹೋಗಬಹುದು.

Written by - Ranjitha R K | Last Updated : Dec 13, 2023, 02:07 PM IST
  • ವಯಸ್ಸು ಹೆಚ್ಚಾದಂತೆ ಕೂದಲು ಬೆಳ್ಳಗಾಗುವುದು ಸರ್ವೇಸಾಮಾನ್ಯ.
  • ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಮುಜುಗರಕ್ಕೆ ಕಾರಣವಾಗಬಹುದು.
  • ಈ ಪಾನೀಯದ ಮೂಲಕ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಕುಡಿದರೆ ಶಾಶ್ವತವಾಗಿ ಕಪ್ಪಾಗುವುದು ಬಿಳಿ ಕೂದಲು !  title=

ಬೆಂಗಳೂರು : ವಯಸ್ಸು ಹೆಚ್ಚಾದಂತೆ ಕೂದಲು ಬೆಳ್ಳಗಾಗುವುದು ಸರ್ವೇಸಾಮಾನ್ಯ. ಆದರೆ, ಇಂದಿನ ಕಾಲದಲ್ಲಿ 20-30 ವರ್ಷ ದಾಟಿದ ಕೂಡಲೇ ಕೂದಲು ಬೆಳ್ಳಗಾಗಲು ಆರಂಭವಾಗುತ್ತದೆ. ಇದು ಖಂಡಿತವಾಗಿಯೂ ಕಳವಳಕಾರಿ ವಿಷಯ. ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಮುಜುಗರಕ್ಕೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಬಣ್ಣಕ್ಕೆ ತಿರುಗಬಾರದು ಎಂದಾದರೆ, ನೈಸರ್ಗಿಕ ಪರಿಹಾರಗಳ ಮೊರೆ ಹೋಗಬಹುದು. 

ನಿಮ್ಮ ದೇಹದಲ್ಲಿನ ಹಾರ್ಮೋನುಗಳನ್ನು ಸಮತೋಲನಗೊಳಿಸುವ ಮೂಲಕ ನೈಸರ್ಗಿಕವಾಗಿ ನಿಮ್ಮ ಕೂದಲನ್ನು ಕಪ್ಪಾಗಿಸಲು ಈ ವಸ್ತುಗಳು ಸಹಾಯ ಮಾಡುತ್ತವೆ. ಇಂದು ನಾವು ನಿಮಗೆ ವಿಶೇಷ ಪಾನೀಯದ ಪಾಕವಿಧಾನವನ್ನು  ತಿಳಿಸಿಕೊಡುತ್ತೇವೆ. ಈ ಪಾನೀಯದ ಮೂಲಕ ಬಿಳಿ ಕೂದಲನ್ನು ಕಪ್ಪಾಗಿಸಬಹುದು.  

ಇದನ್ನೂ ಓದಿ : ವಿಷಕ್ಕಿಂತ ಕಡಿಮೆಯಿಲ್ಲ ಕೋಲ್ಡ್ ಡ್ರಿಂಕ್ಸ್: ಇದರಿಂದಾಗುವ 5 ಪ್ರಮುಖ ಅಪಾಯಗಳಿವು

ಕೂದಲು ಕಪ್ಪಾಗಿಸುವ ಪಾನೀಯ : 
ನಿಮ್ಮ ಕೂದಲನ್ನು ಕಪ್ಪಾಗಿಸಲು ದಾಸವಾಳ, ಎಳ್ಳು ಮತ್ತು ಕರಿಬೇವಿನ ಸೊಪ್ಪಿನಿಂದ ತಯಾರಿಸಿದ ಪಾನೀಯವನ್ನು ತಯಾರಿಸಿ ಕುಡಿಯಬಹುದು. ಈ ಪಾನೀಯವು ನಿಮ್ಮ ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲ ಮತ್ತೆ  ಬಿಳಿ ಕೂದಲು ಬೆಳೆಯದಂತೆ ತಡೆಯುತ್ತದೆ. ಈ ಪಾನೀಯವು ಕರಿಬೇವಿನ ಎಲೆಗಳನ್ನು ಹೊಂದಿರುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂದಲನ್ನು ಕಪ್ಪಾಗಿಸುತ್ತದೆ. ಇದಲ್ಲದೆ, ಇದು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಹೊಂದಿರುತ್ತದೆ. ಇದು ನೈಸರ್ಗಿಕವಾಗಿ ಕೂದಲಿನ ಪಿಗ್ಮೆಂಟೇಶನ್ ಅನ್ನು ತೆಗೆದುಹಾಕುತ್ತದೆ. ಇದರಿಂದ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ತಡೆಯಬಹುದು.

ದಾಸವಾಳದ ಹೂವು : ಇದು ಅಮೈನೋ ಆಮ್ಲಗಳನ್ನು ಹೊಂದಿದ್ದು, ನಿಮ್ಮ ಕೂದಲಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ, ಕೂದಲನ್ನು ಫ್ರೀ ರಾಡಿಕಲ್ ಗಳಿಂದ ರಕ್ಷಿಸಬಹುದು. ಇದು ಕೂದಲು ಹಾಳಾಗುವುದನ್ನು ತಡೆಯುತ್ತದೆ. 

ಕಪ್ಪು ಎಳ್ಳು : ಕಪ್ಪು ಎಳ್ಳನ್ನು ನಿಮ್ಮ ಕೂದಲಿಗೆ ಅತ್ಯುತ್ತಮ ಪರಿಹಾರ ಎಂಬದು ಪರಿಗಣಿಸಲಾಗಿದೆ. ಇದು ಸತು, ತಾಮ್ರ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ನಿಮ್ಮ ಕೂದಲಿನಲ್ಲಿ ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮೆಲನಿನ್ ನಿಮ್ಮ ಕೂದಲಿನ ಬಣ್ಣವನ್ನು ಸುಧಾರಿಸುತ್ತದೆ. 

ಇದನ್ನೂ ಓದಿ : ಪ್ರತಿದಿನ ಒಂದು ತುಂಡು ಒಣ ಕೊಬ್ಬರಿ ತಿನ್ನಿ.. ದೇಹದಲ್ಲಾಗುವ ಮ್ಯಾಜಿಕ್‌ ನೋಡಿ!

ಈ ವಿಶೇಷ ಪಾನೀಯವನ್ನು  ತಯಾರಿಸಲು ಬೇಕಾಗುವ ಪದಾರ್ಥಗಳು :
ದಾಸವಾಳದ ಹೂವು - 10 ರಿಂದ 15 
ಕಪ್ಪು ಎಳ್ಳು - 1 ಟೀಸ್ಪೂನ್
ಕರಿಬೇವಿನ ಎಲೆಗಳು - 10 ರಿಂದ 15
ನೀರು - 1 ಗ್ಲಾಸ್

ವಿಧಾನ :
ಮೊದಲು ದಾಸವಾಳದ ಹೂ ಮತ್ತು ಕರಿಬೇವಿನ ಸೊಪ್ಪನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಇದರ ನಂತರ, ಅದನ್ನು ಫಿಲ್ಟರ್ ಮಾಡಿ ಮತ್ತು ಅದಕ್ಕೆ ಹುರಿದ ಕಪ್ಪು ಎಳ್ಳನ್ನು ಸೇರಿಸಿ ಮಿಶ್ರಣ ಮಾಡಿ. ಈಗ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸಿ. ಇದು ನಿಮ್ಮ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.

(  ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಝೀ ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News