ಈ ರಾಶಿಯವರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಸೂರ್ಯ ಗ್ರಹಣ .!

Surya Grahan Effects: ನಿಮ್ಮ ರಾಶಿಯ ಮೇಲೆ ಸೂರ್ಯಗ್ರಹಣದ ಪರಿಣಾಮ ಏನಾಗುತ್ತದೆ  ಎನ್ನುವ ಮಾಹಿತಿ ಇಲ್ಲಿದೆ. 

Written by - Ranjitha R K | Last Updated : Oct 25, 2022, 11:05 AM IST
  • ಇಂದು ಸಂಭವಿಸಲಿದೆ ಸೂರ್ಯ ಗ್ರಹಣ
  • ಈ ರಾಶಿಯವರ ಮೇಲೆ ಬೀರಲಿದೆ ಕೆಟ್ಟ ಪರಿಣಾಮ
  • ಕೆಲ ರಾಶಿಯವರ ಮೇಲೆ ಬೀರಲಿದೆ ದುಷ್ಪರಿಣಾಮ
ಈ ರಾಶಿಯವರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಸೂರ್ಯ ಗ್ರಹಣ .! title=
Surya Grahan Effects (file photo)

Surya Grahan Effects : ಸೂರ್ಯಗ್ರಹಣವು ಸಂಜೆ 4:22 ರಿಂದ ಪ್ರಾರಂಭವಾಗಿ, ಸಂಜೆ 5:41 ರವರೆಗೆ ಇರುತ್ತದೆ. ಸೂರ್ಯಗ್ರಹಣವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ರಾಶಿಯ ಮೇಲೆ ಸೂರ್ಯಗ್ರಹಣದ ಪರಿಣಾಮ ಏನಾಗುತ್ತದೆ  ಎನ್ನುವ ಮಾಹಿತಿ ಇಲ್ಲಿದೆ. 

ಮೇಷ ರಾಶಿ : ಮಾನಸಿಕ ಒತ್ತಡ ಉಂಟಾಗಬಹುದು. ಬೇಡವೆಂದರೂ ಬಾಯಿಯಿಂದ ತಪ್ಪು ಮಾತು ಬರಬಹುದು. ಆದ್ದರಿಂದ ನಿಮ್ಮ ಮಾತನ್ನು ನಿಯಂತ್ರಿಸಿ. ಸೂರ್ಯಗ್ರಹಣದ ಸಮಯದಲ್ಲಿ ಗರ್ಭಿಣಿಯರು ತಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಇದನ್ನೂ ಓದಿ : ಭಾರತದ ಈ ನಗರದಿಂದ ಪ್ರಾರಂಭವಾಗುತ್ತದೆ ಸೂರ್ಯಗ್ರಹಣ.! ವೀಕ್ಷಿಸುವಾಗ ನೆನಪಿನಲ್ಲಿರಲಿ ಈ ಅಂಶಗಳು

ವೃಷಭ ರಾಶಿ : ಸೂರ್ಯಗ್ರಹಣದ ಸಮಯದಲ್ಲಿ ಪ್ರಯಾಣ ಮಾಡಬೇಡಿ. ತೀರಾ ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಬನ್ನಿ. ಗಾಯವಾಗುವ ಸಂಭವವಿದೆ. ಹಣ ಉಳಿಸಿ, ದುಂದು ವೆಚ್ಚ ಮಾಡುವುದನ್ನು ತಪ್ಪಿಸಿ.

ಮಿಥುನ ರಾಶಿ : ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಸೂರ್ಯಗ್ರಹಣದ ಸಮಯದಲ್ಲಿ ಗರ್ಭಿಣಿಯರು ತಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಗುವಿನ ಕಡೆಯಿಂದ ತೊಂದರೆ ಉಂಟಾಗಬಹುದು.

ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರು ಸೂರ್ಯಗ್ರಹಣದ ಸಮಯದಲ್ಲಿ ಮಲಗಬಾರದು. ನಿಮ್ಮ ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಅವರನ್ನು ನೋಡಿಕೊಳ್ಳಿ.

ಇದನ್ನೂ ಓದಿ : ಸೂರ್ಯ ಗ್ರಹಣದಲ್ಲಿ ಆಹಾರದಲ್ಲಿ ಹಾಕಲು ತುಳಸಿ ಕೀಳುವುದು 'ಮಹಾ ಪಾಪ'

ಸಿಂಹ ರಾಶಿ : ಇಂದು ನಿಮ್ಮ ಮನಸ್ಥಿತಿ ಕೆಟ್ಟದಾಗಿರಬಹುದು. ಕ್ಷುಲ್ಲಕ ವಿಚಾರಗಳಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಮನೆಯಲ್ಲಿ ಸಹೋದರರೊಂದಿಗೆ ವಿವಾದ ಉಂಟಾಗಬಹುದು. ಅದನ್ನು ತಪ್ಪಿಸಲು ಪ್ರಯತ್ನಿಸಿ.

ಕನ್ಯಾ ರಾಶಿ : ಇಂದು ನೀವು ತುಂಬಾ ಚಿಂತನಶೀಲವಾಗಿ ಮಾತನಾಡುತ್ತೀರಿ. ನೀವು ಸಿಹಿ ಮಾತುಗಳನ್ನು ಮಾತನಾಡಿದರೆ, ವಿವಾದದ ಭಾಗವಾಗುವುದನ್ನು ತಪ್ಪಿಸಬಹುದು. 

ತುಲಾ ರಾಶಿ : ಇಂದಿನ ಸೂರ್ಯಗ್ರಹಣ ವಿಶೇಷವಾಗಿ ತುಲಾ ರಾಶಿಯ ಮೇಲೆ  ಪರಿಣಾಮ ಬೀರುತ್ತದೆ. ಆದ್ದರಿಂದ ತುಲಾ ರಾಶಿಯ ಜನರು ಗ್ರಹಣದ ಸಮಯದಲ್ಲಿ ಪಠಣ ಮತ್ತು ಪೂಜೆಯನ್ನು ಮಾಡಬೇಕು. ಮಾನಸಿಕವಾಗಿ ತೊಂದರೆಗೊಳಗಾಗಬಹುದು. ಇಂದು ನಿಮ್ಮ ತಾಳ್ಮೆಯನ್ನು ತೋರಿಸಿ.

ಇದನ್ನೂ ಓದಿ : Solar eclipse: ನಾಳೆ ಭಾಗಶಃ ಸೂರ್ಯಗ್ರಹಣ, ಎಲ್ಲೆಲ್ಲಿ ಗೋಚರಿಸುತ್ತೆ ಗೊತ್ತಾ..?

ವೃಶ್ಚಿಕ ರಾಶಿ : ಇಂದು ಕಚೇರಿ ಕೆಲಸಗಳಿಂದಾಗಿ ಉದ್ವೇಗ ಉಂಟಾಗಬಹುದು. ಮೇಲಾ ಧಿಕಾರಿಗಳೊಂದಿಗೆ ವಿವಾದ ಉಂಟಾಗುವ ಸಾಧ್ಯತೆಯಿದೆ. ತೋರಿಕೆಗಾಗಿ ಖರ್ಚು ಮಾಡಬೇಡಿ. ಇದರಿಂದ ಹೆಚ್ಚು ವೆಚ್ಚವಾಗಬಹುದು.

ಧನು ರಾಶಿ : ಹಿರಿಯ ಸಹೋದರರೊಂದಿಗೆ ವಿವಾದ ಉಂಟಾಗಬಹುದು. ಇದನ್ನು ತಪ್ಪಿಸಲು ಪ್ರಯತ್ನಿಸಿ. ನಿಮ್ಮ ಕೈಗಳ ಬಗ್ಗೆ ಜಾಗೃತೆ ವಹಿಸಿ. ಗಾಯವಾಗುವ ಸಾಧ್ಯತೆ ಇದೆ. 

ಮಕರ ರಾಶಿ : ಉದ್ಯೋಗಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಾಗಬಹುದು.  ವ್ಯಾಪಾರಸ್ಥರು ಯಾವುದೇ ಸರ್ಕಾರಿ ಅಧಿಕಾರಿಗಳೊಂದಿಗೆ ವಿವಾದ ಮಾಡಿಕೊಳ್ಳಾಬಾರದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕುಂಭ ರಾಶಿ : ನಿಮ್ಮ ಜೀವನ ಸಂಗಾತಿಯನ್ನು ನೋಡಿಕೊಳ್ಳಿ. ಸೂರ್ಯಗ್ರಹಣದಿಂದ ಹೆಚ್ಚು ಕೆಟ್ಟ ಪರಿಣಾಮಗಳು ಉಂಟಾಗುವುದಿಲ್ಲ. ಆದರೂ, ಈ ಸಮಯದಲ್ಲಿ ನೀವು ತಿನ್ನುವುದನ್ನು ತಪ್ಪಿಸಬೇಕು.

ಇದನ್ನೂ ಓದಿ : ದೀಪಾವಳಿ ಹೊತ್ತಲ್ಲಿ ಮಧುಮೇಹಿಗಳಿಗಾಗಿ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಶುಗರ್ ಫ್ರೀ ಸಿಹಿ ತಿಂಡಿ

ಮೀನ ರಾಶಿ : ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದರ ಸಂಬಂಧಿ ಕಾಯಿಲೆ ಬರಬಹುದು. ಈಗಾಗಲೇ ಯಾವುದಾದರೂ ಕಾಯಿಲೆಯಿದ್ದರೆ, ಆಗ ಎಚ್ಚರದಿಂದಿರಿ.

 

( ಸೂಚನೆ :  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ.  ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News