ಈ ನಾಲ್ಕು ರಾಶಿಗಳ ಜನರ ಮೇಲೆ ಶನಿಯ ಸಾಡೆಸಾತಿ ಪ್ರಭಾವ ಶೂನ್ಯಕ್ಕೆ ಸಮಾನ

Favourite Zodiac Signs Of Shani Dev: ಹಲವು ರಾಶಿಗಳ ಮೇಲೆ ಶನಿ ಮಹಾರಾಜ ತನ್ನ ನಿರಂತರ ಕೃಪೆಯನ್ನು ತೋರುತ್ತಾನೆ. ಈ ಹಿನ್ನಲೆ ಈ ರಾಶಿಗಳ ಜನರ ಮೇಲೆ ಶನಿಯ ಸಾಡೆಸಾತಿ ಅಥವಾ ಎರಡೂವರೆ ವರ್ಷಗಳು ಯಾವುದೇ ಪ್ರಭಾವವನ್ನು ಬೀರುವುದಿಲ್ಲ.  

Written by - Nitin Tabib | Last Updated : Jan 24, 2023, 06:27 PM IST
  • ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಮ್ಮೆಯಾದರು ಶನಿಯ ಸಾಡೆಸಾತಿ ಹಾಗೂ ಎರಡೂವರೆ ವರ್ಷಗಳ ಕಾಟ ಎದುರಿಸಲೇ ಬೇಕಾಗುತ್ತದೆ.
  • ಶನಿಯ ಸಾಡೆಸಾತಿ ಅಥವಾ ಎರಡೂವರೆ ವರ್ಷಗಳ ಕಾಟದ ಅವಧಿಯಲ್ಲಿ ವ್ಯಕ್ತಿಗೆ ಶಾರೀರಿಕ, ಮಾನಸಿಕ ಹಾಗೂ ಆರ್ಥಿಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಈ ನಾಲ್ಕು ರಾಶಿಗಳ ಜನರ ಮೇಲೆ ಶನಿಯ ಸಾಡೆಸಾತಿ ಪ್ರಭಾವ ಶೂನ್ಯಕ್ಕೆ ಸಮಾನ title=
ಶನಿ ನೆಚ್ಚಿನ ರಾಶಿಗಳು

Shani Favourite Signs: ನ್ಯಾಯ ದಯಪಾಲಿಸುವ ಶನಿದೇವ ಪ್ರತಿಯೊಂದು ಜಾತಕದವರಿಗೆ ಅವರವರ ಕರ್ಮಗಳಿಗೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ. ಒಳ್ಳೆಯ ಕರ್ಮಗಳನ್ನು ಮಾಡುವ ಜನರಿಗೆ ಶುಭ ಫಲ ಹಾಗೂ ಕೆಟ್ಟ ಕೆಲಸಗಳನ್ನು ಮಾಡುವ ಜನರಿಗೆ ಅಶುಭ ಫಲ ನೀಡುತ್ತಾನೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಮ್ಮೆಯಾದರು ಶನಿಯ ಸಾಡೆಸಾತಿ ಹಾಗೂ ಎರಡೂವರೆ ವರ್ಷಗಳ ಕಾಟ ಎದುರಿಸಲೇ ಬೇಕಾಗುತ್ತದೆ. ಶನಿಯ ಸಾಡೆಸಾತಿ ಅಥವಾ ಎರಡೂವರೆ ವರ್ಷಗಳ ಕಾಟದ ಅವಧಿಯಲ್ಲಿ ವ್ಯಕ್ತಿಗೆ ಶಾರೀರಿಕ, ಮಾನಸಿಕ ಹಾಗೂ ಆರ್ಥಿಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನಿಗೆ ಕೆಲ ರಾಶಿಗಳು ತುಂಬಾ ಇಷ್ಟವಾಗುತ್ತವೆ ಎಂದು ಹೇಳಲಾಗುತ್ತದೆ. ಈ ರಾಶಿಗಳ ಮೇಲೆ ಶನಿಯ ವಕ್ರ ದೃಷ್ಟಿಯ ಪ್ರಭಾವ ಉಂಟಾಗುವುದಿಲ್ಲ ಎನ್ನಲಾಗುತ್ತದೆ. ಶನಿಗೆ ಇಷ್ಟವಾಗುವ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

1. ವೃಷಭ ರಾಶಿ: ಶುಕ್ರಾಧಿಪತ್ಯದ ವೃಷಭ ರಾಶಿಯ ಮೇಲೆ ಶನಿ ದೇವನ ಅಪಾರ ಕೃಪೆ ಇರುತ್ತದೆ. ಶನಿ ಹಾಗೂ ಶುಕ್ರನ ನಡುವೆ ಸ್ನೇಹ ಸಂಬಂಧವಿದೆ. ಇದೇ ಕಾರಣದಿಂದ ವೃಷಭ ರಾಶಿಯ ಜಾತಕದವರ ಮೇಲೆ ಶನಿಯ ಅಶುಭ ಪ್ರಭಾವ ಇರುವುದಿಲ್ಲ. 

2. ತುಲಾ ರಾಶಿ: ಶುಕ್ರ ತುಲಾ ರಾಶಿಗೂ ಕೂಡ ಅಧಿಪತಿ. ಈ ರಾಶಿಯಲ್ಲಿ ಶನಿದೇವ ಉಚ್ಛ ಸ್ಥಾನದಲ್ಲಿರುತ್ತಾನೆ ಎನ್ನಲಾಗುತ್ತಿದೆ. ಹೀಗಾಗಿ ಈ ರಾಶಿಯ ಜಾತಕದವರ ಮೇಲೆ ಶನಿಯ ಸಾಡೆಸಾತಿ ಹಾಗೂ ಎರಡೂವರೆ ವಷಗಳ ಕಾಟದ ಪ್ರಭಾವ ಉಂಟಾಗುವುದಿಲ್ಲ. ಈ ರಾಶಿಯ ಜಾತಕದವರಿಗೆ ಶನಿದೇವನ ನಿರಂತರ ಕೃಪೆ ಇರುತ್ತದೆ ಮತ್ತು ಇವರು ಜೀವನದುದ್ದಕ್ಕೂ ಅಭಿವೃದ್ಧಿ ಹೊಂದುತ್ತಲೇ ಇರುತ್ತಾರೆ.

3. ಮಕರ ರಾಶಿ: ಶನಿ ಮಕರ ರಾಶಿಯ ಅಧಿಪತಿ. ಶನಿಯ ಅಚ್ಚುಮೆಚ್ಚಿನ ರಾಶಿಗಳಲ್ಲಿ ಮಕರ ರಾಶಿ ಕೂಡ ಒಂದು. ಈ ರಾಶಿಯ ಜಾತಕದವರ ಮೇಲೂ ಕೂಡ ಶನಿದೆವನ ಸಾಡೆಸಾತಿ ಹಾಗೂ ಎರಡೂವರೆ ವರ್ಷಗಳ ಕಾಟದ ಪ್ರಭಾವ ಉಂಟಾಗುವುದಿಲ್ಲ. 

ಇದನ್ನೂ ಓದಿ-ನಾಲ್ಕು ಶುಭ ಯೋಗಗಳಲ್ಲಿ ವಸಂತ ಪಂಚಮಿ ಆಚರಣೆ, ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಯೋಜನಕಾರಿ ಈ ಪರ್ವ

4. ಕುಂಭ ರಾಶಿ: ಮಕರ ರಾಶಿಯಂತೆ ಶನಿ ಕುಂಭ ರಾಶಿಗೂ ಕೂಡ ಅಧಿಪತಿ. ಹೀಗಿರುವಾಗ ಈ ರಾಶಿಯ ಜಾತಕದವರ ಮೇಲೂ ಕೂಡ ಶನಿ ದೇವನ ಶುಭ ಪ್ರಭಾವ ಇರುತ್ತದೆ. ಈ ರಾಶಿಯ ಜಾತಕದವರಿಗೆ ಜೀವನದಲ್ಲಿ ಆರ್ಥಿಕ ಸಂಕಷ್ಟಗಳು ತುಂಬಾ ಕಡಿಮೆ ಎದುರಾಗುತ್ತವೆ. ಇದಲ್ಲದೆ ಶನಿಯ ಕೃಪೆಯಿಂದ ಶಾರೀರಿಕ ಹಾಗೂ ಮಾನಸಿಕ ಕಷ್ಟಗಳು ಕೂಡ ಕಡಿಮೆ ಇರುತ್ತವೆ.

ಇದನ್ನೂ ಓದಿ-ನೀವು ಮಲಗುವ ಶೈಲಿ ನಿಮ್ಮ ವ್ಯಕ್ತಿತ್ವದ ಗುಟ್ಟು ಬಹಿರಂಗಪಡಿಸುತ್ತದೆ... ಎಚ್ಚರ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News