Health Tips: ಸೊಳ್ಳೆಗಳ ಕಾಟ ನಿಮ್ಮ ನಿದ್ದೆಗೆಡಿಸಿದೆಯೇ, ಇಲ್ಲಿದೆ ಸುಲಭ ಪರಿಹಾರ!

ಸೊಳ್ಳೆಗಳ ಕಾಟಕ್ಕೆ ನೈಸರ್ಗಿಕ ಪರಿಹಾರ: ಬೇಸಿಗೆಯಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಂಡುಬರುತ್ತದೆ. ಸೊಳ್ಳೆಗಳ ಕಾಟದಿಂದ ನೀವು ರಾತ್ರಿ ನಿದ್ರಾಹೀನತೆ ಅನುಭವಿಸಬೇಕಾಗುತ್ತದೆ. ಯಾವುದೇ ರಾಸಾಯನಿಕಯುಕ್ತ ಉತ್ಪನ್ನ ಬಳಸದೆ ಸೊಳ್ಳೆಗಳ ಸಮಸ್ಯೆಗೆ ಮುಕ್ತಿ ಪಡೆಯಲು ಸುಲಭ ಪರಿಹಾರ ಇಲ್ಲಿದೆ ನೋಡಿ.

Written by - Puttaraj K Alur | Last Updated : May 11, 2023, 10:16 PM IST
  • ಮನೆಯಿಂದ ಸೊಳ್ಳೆಗಳನ್ನು ದೂರವಿಡಲು ಪುದೀನ ಸಸ್ಯವು ಸಹಾಯ ಮಾಡುತ್ತದೆ
  • ಸೊಳ್ಳೆಗಳ ಕಾಟದಿಂದ ಪಾರಾಗಲು ಅನೇಕ ಮನೆಗಳಲ್ಲಿ ತುಳಸಿ ಗಿಡಗಳನ್ನು ನೆಡಲಾಗುತ್ತದೆ
  • ಪುದೀನಾ ಸಸ್ಯಗಳು ಕೂಡ ಸೊಳ್ಳೆಗಳ ಕಾಟದಿಂದ ನಿಮಗೆ ಮುಕ್ತಿ ನೀಡುತ್ತದೆ
Health Tips: ಸೊಳ್ಳೆಗಳ ಕಾಟ ನಿಮ್ಮ ನಿದ್ದೆಗೆಡಿಸಿದೆಯೇ, ಇಲ್ಲಿದೆ ಸುಲಭ ಪರಿಹಾರ! title=
ಸೊಳ್ಳೆಗಳ ಕಾಟಕ್ಕೆ ಸುಲಭ ಪರಿಹಾರ

ಸೊಳ್ಳೆಗಳ ಕಾಟಕ್ಕೆ ಸುಲಭ ಪರಿಹಾರ: ಆರೋಗ್ಯಕರ ಆಹಾರ ಮತ್ತು ಉತ್ತಮ ಜೀವನಶೈಲಿಯೊಂದಿಗೆ ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆ ಆರೋಗ್ಯಕರ ದೇಹಕ್ಕೆ ಅವಶ್ಯಕ. ಆದರೆ ಬೇಸಿಗೆಯಲ್ಲಿ ಸೊಳ್ಳೆಗಳು ಮನೆಯನ್ನು ಆಕ್ರಮಿಸಿ ಜೀವ ಹಿಂಡುತ್ತವೆ. ರಾತ್ರಿಯಿಡೀ ಸೊಳ್ಳೆಗಳ ಕಾಟದಿಂದ ನಿದ್ದೆ ಸರಿಯಾಗಿ ಆಗದೆ ಬೆಳಗಿನ ಜಾವ ಸೋಮಾರಿತನದಲ್ಲಿ ಕಳೆಯಬೇಕಾಗುತ್ತದೆ. ಉತ್ತಮ ನಿದ್ರೆಗಾಗಿ ಸೊಳ್ಳೆಗಳಿಂದ ಮುಕ್ತಿ ಪಡೆಯುವುದು ಬಹಳ ಮುಖ್ಯ. ಅನೇಕ ಜನರು ಸೊಳ್ಳೆ ಕಾಟಕ್ಕೆ ಕಾಯಿಲ್ ಬಳಸುತ್ತಾರೆ, ಕೆಲವರು ಫ್ಲ್ಯಾಷ್ ಪೇಪರ್ ಬಳಸುತ್ತಾರೆ.

ಕಾಯಿಲ್ ಮತ್ತು ಫ್ಲ್ಯಾಷ್ ಪೇಪರ್‌ನ ಹೊಗೆ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಕಾಯಿಲ್‌ನ ಹೊಗೆ ತುಂಬಾ ಹಾನಿಕಾರಕ, ಇದರಿಂದ ದೊಡ್ಡ ಅನಾಹುತವೇ ಸಂಭವಿಸಬಹುದು. ಹೀಗಾಗಿ ಆರೋಗ್ಯ ತಜ್ಞರು ಇದರ ಬಳಕೆ ಬಗ್ಗೆ ಜನರಿಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ. ಕಾಯಿಲ್‍ನ ಹೊಗೆಯು ದೇಹಕ್ಕೆ ತುಂಬಾ ಹಾನಿಕಾರಕ, ಇದು ನಿಮ್ಮ ಜೀವವನ್ನೇ ತೆಗೆದುಬಿಡಬಹುದು.  

ಇದನ್ನೂ ಓದಿ: ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡಲು ಸಹಾಯ ಮಾಡುವ ಆಹಾರಗಳಿವು !

ನೀವು ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಬೇಕಾದ್ರೆ, ನಿಮ್ಮ ಮನೆಯಲ್ಲಿ ಲೆಮನ್ ಗ್ರಾಸ್ ಅಥವಾ ನಿಂಬೆ ಹುಲ್ಲನ್ನು ನೆಡಬಹುದು. ಇದರ ವಾಸನೆಯು ತುಂಬಾ ಕಟುವಾಗಿದ್ದು, ಸೊಳ್ಳೆಗಳು ಮನೆಯಿಂದ ದೂರ ಹೋಗುತ್ತವೆ. ನಿಂಬೆ ಹುಲ್ಲು ಹೊರತುಪಡಿಸಿ ನೀವು ಲ್ಯಾವೆಂಡರ್ ಸಸ್ಯವನ್ನು ಬಳಸಬಹುದು. ಮನೆಯಿಂದ ಸೊಳ್ಳೆಗಳನ್ನು ದೂರವಿಡಲು ಪುದೀನ ಸಸ್ಯವು ಸಹಾಯ ಮಾಡುತ್ತದೆ. ಸೊಳ್ಳೆ ಕಡಿತದಿಂದ ಡೆಂಗ್ಯೂ, ಮಲೇರಿಯಾದಂತಹ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಈ ಕಾರಣಕ್ಕೆ ಸೊಳ್ಳೆಗಳ ಕಾಟವನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು.

ಸೊಳ್ಳೆಗಳ ಕಾಟದಿಂದ ಪಾರಾಗಲು ಅನೇಕ ಮನೆಗಳಲ್ಲಿ ತುಳಸಿ ಗಿಡಗಳನ್ನು ನೆಡುತ್ತಾರೆ. ಇದರ ಎಲೆಗಳು ಆಹಾರದ ರುಚಿ ಹೆಚ್ಚಿಸುತ್ತವೆ, ಆದರೆ ಇದರ ವಾಸನೆಯು ಸೊಳ್ಳೆಗಳನ್ನು ಮನೆಯಿಂದ ದೂರವಿಡುತ್ತದೆ. ಈ ಸಸ್ಯದ ವಾಸನೆ ನಿಮಗೆ ಇಷ್ಟವಾಗದಿದ್ದರೆ ನೀವು ಮನೆಯಲ್ಲಿ ಪುದೀನಾ ಸಸ್ಯವನ್ನು ಸಹ ನೆಡಬಹುದು. ಪುದೀನಾ ಎಲೆಗಳು ಆಹಾರದ ರುಚಿ ಹೆಚ್ಚಿಸುತ್ತವೆ ಮತ್ತು ಹೊಟ್ಟೆಗೂ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ಎಣ್ಣೆ ಹೊಡೆಯೊವಾಗ ಈ ಆಹಾರಗಳನ್ನು ತಿನ್ನಲೇಬೇಡಿ..! ಇವುಗಳನ್ನ ಮಾತ್ರ ತಿನ್ನಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News