ನವದೆಹಲಿ : ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಮನಿ ಪ್ಲಾಂಟ್ (Money Plant) ಅಳವಡಿಸಲಾಗುತ್ತದೆ. ಹೆಚ್ಚಿನ ಜನರು ಇದನ್ನು ಅಲಂಕಾರಿಕ ಸಸ್ಯ ಎಂದು ಪರಿಗಣಿಸುತ್ತಾರೆ. ವಾಸ್ತುವಿನ ದೃಷ್ಟಿಯಿಂದ ಮನಿ ಪ್ಲಾಂಟ್ ಅನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಸಂಪತ್ತನ್ನು ನೀಡುವ ಸಸ್ಯ ಎನ್ನುತ್ತಾರೆ ವಾಸ್ತು ತಜ್ಞರು. ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಮನಿ ಪ್ಲಾಂಟ್ ಇರುವ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಎನ್ನಲಾಗುತ್ತದೆ. ಇದಲ್ಲದೆ, ಮನಿ ಪ್ಲಾಂಟ್ ಇರುವಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ವಾಸ್ತು ಪ್ರಕಾರ (Vastu Tips), ಮನಿ ಪ್ಲಾಂಟ್ಗೆ ಸಂಬಂಧಿಸಿದ ಐದು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಮನಿ ಪ್ಲಾಂಟ್ ಅನ್ನು ಯಾವ ದಿಕ್ಕಿನಲ್ಲಿ ಇಡಬೇಕು ?
ವಾಸ್ತು ಪ್ರಕಾರ, ಮನಿ ಪ್ಲಾಂಟ್ (Money plant Vastu) ನೆಡುವುದಕ್ಕೂ ಸರಿಯಾದ ನಿರ್ದೇಶನ ಇದೆ. ಮನಿ ಪ್ಲಾಂಟ್ ಅನ್ನು ಪೂರ್ವ ಮತ್ತು ದಕ್ಷಿಣ ಮೂಲೆಯಲ್ಲಿ ಇಡುವುದು ಒಳ್ಳೆಯದು. ಈ ದಿಕ್ಕಿನಲ್ಲಿ ಮಣಿ ಪ್ಲಾಂಟ್ ಹಾಕುವುದರಿಂದ ಮನೆಯ ಜನರ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಅಲ್ಲದೆ, ಮನೆಯಲ್ಲಿ ಯಾವಾಗಲೂ ಧನಾತ್ಮಕ ಶಕ್ತಿಯ (Positive energy) ಸಂವಹನ ಇರುತ್ತದೆ.
ಇದನ್ನೂ ಓದಿ : Horoscope : ಜಾತಕದ ಈ 5 ದೋಷಗಳು ನಿಮ್ಮ ಜೀವನವನ್ನೆ ಹಾಳು ಮಾಡುತ್ತವೆ!
ಸೂರ್ಯನಿಂದ ರಕ್ಷಿಸಿ :
ಮನಿ ಪ್ಲಾಂಟ್ ಅನ್ನು ಸೂರ್ಯನ ಬೆಳಕಿನಿಂದ ರಕ್ಷಿಸಬೇಕು. ಸೂರ್ಯನ ಬೆಳಕು ಇಲ್ಲದ ಸ್ಥಳದಲ್ಲಿ ಅದನ್ನು ನೆಡಬೇಕು. ವಾಸ್ತು ಪ್ರಕಾರ (Vastu Shastra) ಅದರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದರೆ ಅಥವಾ ಒಣಗಿದರೆ ಅದು ಶುಭವಲ್ಲ. ಅದರ ಹಣದ ನಷ್ಟದ ಸಂಕೀತವಾಗಿರುತ್ತದೆ.
ಮನಿ ಪ್ಲಾಂಟ್ ಸೊರಗಬಾರದು :
ಮನಿ ಪ್ಲಾಂಟ್ನ ಬಳ್ಳಿಯು ಮೇಲಕ್ಕೆ ಏರುತ್ತಾ ಹೋಗಬೇಕು. ಮನಿ ಪ್ಲಾಂಟ್ ಮೇಲಕ್ಕೆ ಏರುತ್ತಾ ಹೋಗುವುದು ಎಂದರೆ ಅದು ಸಮೃದ್ದಿಯನ್ನು ಸೂಚಿಸುತ್ತದೆ. ಈ ಗಿಡದ ಬಳ್ಳಿಯು ನೆಲಕ್ಕೆ ತಾಕದಂತೆ ಎಚ್ಚರ ವಹಿಸಬೇಕು. ಈ ಬಳ್ಳಿ ನೆಲಕ್ಕೆ ತಾಕಿದರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ.
ಇದನ್ನೂ ಓದಿ : Wednesday Remedy : ಬುಧವಾರ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ : ಬುಧ ಗ್ರಹದ ನೆರಳು ಜೀವಿತಾವಧಿಯಲ್ಲಿ ಉಳಿಯುತ್ತದೆ
ಈ ಬಣ್ಣದ ಬಾಟಲಿಯಲ್ಲಿ ಮನಿ ಪ್ಲಾಂಟ್ ಹಾಕಿ :
ಮನಿ ಪ್ಲಾಂಟ್ ಅನ್ನು ಯಾವಾಗಲೂ ದೊಡ್ಡ ಕುಂಡದಲ್ಲಿ ನೆಡಬೇಕು. ಇದರಿಂದ ಅದರ ಬಳ್ಳಿ ಮನೆಯಲ್ಲೆಲ್ಲ ಹರಡುತ್ತದೆ. ಇದರೊಂದಿಗೆ ಮನಿ ಪ್ಲಾಂಟ್ ಅನ್ನು ನೀಲಿ ಅಥವಾ ಹಸಿರು ಗಾಜಿನ ಬಾಟಲಿಯಲ್ಲಿ ಇಡುವುದು ಮಂಗಳಕರ.
ಆಗ್ನೇಯ ದಿಕ್ಕಿನ್ಳಲಿರಲಿ ಮನಿ ಪ್ಲಾಂಟ್ :
ವಾಸ್ತು ಪ್ರಕಾರ, ಮನಿ ಪ್ಲಾಂಟ್ ಅನ್ನು (Money plant direction) ಆಗ್ನೇಯ ದಿಕ್ಕಿನಲ್ಲಿ ಇಡುವುದು ಮಂಗಳಕರವಾಗಿರುತ್ತದೆ. ಆಗ್ನೇಯ ದಿಕ್ಕನ್ನು ಗಣೇಶನ (Lord Ganesha) ದಿಕ್ಕು ಎಂದು ಕರೆಯಲಾಗುತ್ತದೆ. ಮನೆಯ ಈ ದಿಕ್ಕಿನಲ್ಲಿ ಮಣಿ ಪ್ಲಾಂಟ್ ಹಾಕುವುದರಿಂದ ಮನೆಯ ಸದಸ್ಯರ ಭವಿಷ್ಯ ತೆರೆದುಕೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.