ನವದೆಹಲಿ: ಕೆಲವೇ ಗಂಟೆಗಳಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಪ್ರಾರಂಭವಾಗುತ್ತದೆ. ಗುರುವಾರ(ಏಪ್ರಿಲ್ 20) ಬೆಳಗ್ಗೆ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣವು ಬೆಳಗ್ಗೆ 7:05ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:29ಕ್ಕೆ ಕೊನೆಗೊಳ್ಳುತ್ತದೆ. ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಸೂರ್ಯಗ್ರಹಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಸೂರ್ಯಗ್ರಹಣ ಮತ್ತು ಸೂತಕದ ಸಮಯದಲ್ಲಿ ಕೆಲವು ಕೆಲಸಗಳನ್ನು ನಿಷೇಧಿಸಲಾಗಿದೆ. ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ಅದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.
ಗ್ರಹಣದ ವೇಳೆ ಗರ್ಭಿಣಿಯರು ಏನು ಮಾಡಬಾರದು?
ಸೂರ್ಯಗ್ರಹಣದ ವೇಳೆ ಗರ್ಭಿಣಿಯರು ಕೆಲವು ನಿಯಮಗಳನ್ನು ಪಾಲಿಸುವಂತೆ ಸಲಹೆ ನಿಡಲಾಗಿದೆ. ಗ್ರಹಣದ ವೇಳೆ ಸೂರ್ಯನಿಂದ ಹಾನಿಕಾರಕ ಕಿರಣಗಳು ಹೊರಹೊಮ್ಮುತ್ತವೆ, ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ನಿಯಯದ ಬಗ್ಗೆ ತಿಳಿಸಲಾಗಿದೆ. ಇದರಿಂದ ಗರ್ಭಿಣಿ ಹಾಗೂ ಗರ್ಭದಲ್ಲಿರುವ ಮಗುವಿಗೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಸೂರ್ಯಗ್ರಹಣದ ಸಮಯದಲ್ಲಿ ಗರ್ಭಿಣಿಯರು ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಯಿರಿ.
ಇದನ್ನೂ ಓದಿ: Marriage Tips: ಮದುವೆಗೂ ಮುನ್ನ ಭಾವಿ ದಂಪತಿಗಳು ಮಾಡಿಸಿಕೊಳ್ಳಬೇಕಾದ ಈ ಪರೀಕ್ಷೆಗಳು ನಿಮಗೂ ಗೊತ್ತಿರಲಿ!
- ಗರ್ಭಿಣಿಯರು ಗ್ರಹಣವನ್ನು ನೋಡಬಾರದು. ಒಂದು ವೇಳೆ ನೋಡಿದರೆ ಅವರ ಮತ್ತು ಅವರ ಮಗುವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
- ಸೂರ್ಯಗ್ರಹಣದ ವೇಳೆ ಗರ್ಭಿಣಿಯರು ಹೊರಗೆ ಹೋಗುವುದನ್ನು ಆದಷ್ಟು ತಪ್ಪಿಸಬೇಕು.
- ಸೂರ್ಯಗ್ರಹಣದ ವೇಳೆ ಗರ್ಭಿಣಿಯರು ಅಪ್ಪಿತಪ್ಪಿಯೂ ಚಾಕು-ಕತ್ತರಿ ಅಥವಾ ಯಾವುದೇ ಹರಿತವಾದ ವಸ್ತುಗಳನ್ನು ಬಳಸಬಾರದು.
- ಗರ್ಭಿಣಿಯರು ಸೂರ್ಯಗ್ರಹಣ ಮುಗಿದ ನಂತರ ಸ್ನಾನ ಮಾಡಬೇಕು. ಇದು ಸಾಧ್ಯವಾಗದಿದ್ದರೆ ಕನಿಷ್ಠ ನಿಮ್ಮ ಕೈ ಮತ್ತು ಮುಖವನ್ನು ತೊಳೆಯಿಬೇಕು ಮತ್ತು ಬಟ್ಟೆಗಳನ್ನು ಬದಲಿಸಬೇಕು.
- ಗ್ರಹಣ ಕಾಲದಲ್ಲಿ ಮಂತ್ರಗಳನ್ನು ಪಠಿಸುವುದು ಅಥವಾ ದೇವರ ಪೂಜೆಯನ್ನು ಮಾಡಬೇಕು.
- ಗರ್ಭಿಣಿಯರ ಮೇಲೆ ಗ್ರಹಣದ ಋಣಾತ್ಮಕ ಪರಿಣಾಮ ತಡೆಗಟ್ಟಲು, ತಮ್ಮ ನಾಲಿಗೆ ಮೇಲೆ ತುಳಸಿ ಎಲೆ ಇಟ್ಟುಕೊಂಡು ಹನುಮಾನ್ ಚಾಲೀಸಾ ಮತ್ತು ದುರ್ಗಾ ಸ್ತುತಿಯನ್ನು ಪಠಿಸಬೇಕು.
ಇದನ್ನೂ ಓದಿ: Surya Grahan 2023: ಸೂರ್ಯಗ್ರಹಣದ ನಂತರ ತಲೆ ಸ್ನಾನ ಮಾಡಿದ್ರೆ ಏನಾಗುತ್ತೆ ಗೊತ್ತಾ?
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.