Sun Transit 2022: ಶೀಘ್ರದಲ್ಲಿಯೇ ಈ 4 ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಫಳಫಳ ಹೊಳೆಯಲಿದೆ, ಕಾರಣ ಇಲ್ಲಿದೆ

Surya Rashi Parivartan 2022 - ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ಶೀಘ್ರದಲ್ಲಿಯೇ ತನ್ನ ಪುತ್ರನ ರಾಶಿಯಾಗಿರುವ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಜೋತಿಷ್ಯ ಶಾಸ್ತ್ರದ (Astrology) ಪ್ರಕಾರ ಫೆಬ್ರುವರಿ 13ರಂದು ಸೂರ್ಯದೇವ (Surya Dev) ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಮಕರ ರಾಶಿಯಲ್ಲಿ ಸೂರ್ಯದೇವ ಮಾರ್ಚ್ 15ರವರೆಗೆ ವಿರಾಜಮಾನನಾಗಲಿದ್ದಾನೆ. ಹೇಗಾಗಿ ಸೂರ್ಯದೇವನ ಈ ರಾಶಿ ಪರಿವರ್ತನೆಯ (Planatory Transit 2022) ಪರಿಣಾಮ ಎಲ್ಲಾ ರಾಶಿಗಳ ಮೇಲೆ ಉಂಟಾಗಲಿದೆ.

Written by - Nitin Tabib | Last Updated : Feb 5, 2022, 08:13 PM IST
  • ಶೀಘ್ರದಲ್ಲಿಯೇ ಕುಂಭ ರಾಶಿಗೆ ಸೂರ್ಯನ ಪ್ರವೇಶ
  • ವೃತ್ತಿಜೀವನದಲ್ಲಿ ಬಡ್ತಿಯ ಅವಕಾಶಗಳು
  • ಆರ್ಥಿಕ ಸ್ಥಿತಿ ಕೂಡ ಸುಧಾರಣೆಯಾಗಲಿದೆ
Sun Transit 2022: ಶೀಘ್ರದಲ್ಲಿಯೇ ಈ 4 ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಫಳಫಳ ಹೊಳೆಯಲಿದೆ, ಕಾರಣ ಇಲ್ಲಿದೆ title=
Sun Transit 2022 (File Photo)

Sun Transit 2022 - ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ಶೀಘ್ರದಲ್ಲಿಯೇ ತನ್ನ ಪುತ್ರನ ರಾಶಿಯಾಗಿರುವ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರುವರಿ 13ರಂದು ಸೂರ್ಯದೇವ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಮಕರ ರಾಶಿಯಲ್ಲಿ ಸೂರ್ಯ ದೇವ ಮಾರ್ಚ್ 15ರವರೆಗೆ ವಿರಾಜಮಾನನಾಗಲಿದ್ದಾನೆ (Surya Gochar 2022). ಹೀಗಾಗಿ ಸೂರ್ಯದೇವನ ಈ ರಾಶಿ ಪರಿವರ್ತನೆಯ ಪರಿಣಾಮ ಎಲ್ಲಾ ರಾಶಿಗಳ (Zodiac Signs) ಮೇಲೆ ಉಂಟಾಗಲಿದೆ. ಅದರಲ್ಲೂ ವಿಶೇಷವಾಗಿ ಈ ಕೆಳಗೆ ನೀಡಲಾಗಿರುವ 4 ರಾಶಿಗಳಿಗೆ ಜಬರ್ದಸ್ತ್ ಆರ್ಥಿಕ ಲಾಭದ ಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಹಾಗಾದರೆ ಆ ನಾಲ್ಕು ರಾಶಿಗಳು ಯಾವುವು ತಿಳಿದುಕೊಳ್ಳೋಣ.

ತುಲಾ: ಸೂರ್ಯನ ಈ ಕುಂಭ ಗೋಚರ ತುಲಾ ರಾಶಿಯ ಜನರ ಮೇಲೆ ಭಾರಿ ಸಕಾರಾತ್ಮಕ ಪ್ರಭಾವ ಬೀರಲಿದೆ. ಗೊಚಾರದ ಅವಧಿಯಲ್ಲಿ ತುಲಾ ರಾಶಿಯ ಜನರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಜೊತೆಗೆ ವೃತ್ತಿಯಲ್ಲಿಯೂ ಕೂಡ ಬಡ್ತಿಯ ಅವಕಾಶ ಇರಲಿದೆ. ಕುಟುಂಬದಿಂದ ಆರ್ಥಿಕ ಸಹಕಾರ ದೊರೆಯಲಿದೆ. ನೌಕರಿಯಲ್ಲಿ ಹೊಸ ಅವಕಾಶಗಳು ಒದಗಿ ಬರಲಿವೆ.

ವೃಶ್ಚಿಕ: ಸೂರ್ಯನ ಈ ಗೊಚಾರದ ಅವಧಿಯಲ್ಲಿ ನಿಮಗೆ ನಾಲ್ಕು ದಿಕ್ಕುಗಳಿಂದ ಲಾಭ ಹರಿದು ಬರಲಿದೆ. ನೌಕರಿಯಲ್ಲಿ ಆದಾಯ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿಯಾಗಲಿದೆ. ಬಿಸ್ನೇನ್ ನಲ್ಲಿ ಆರ್ಥಿಕ ಪಕ್ಷ ಬಲಿಷ್ಠವಾಗಿರಲಿದೆ. ಆಕಸ್ಮಿಕ ಧನಲಾಭದ ಯೋಗ ನಿರ್ಮಾಣಗೊಳ್ಳುತ್ತಿದೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭ ಸಿಗಲಿದೆ.

ಧನು: ವೃತ್ತಿಜೀವನ ಧನಾತ್ಮಕವಾಗಿರಲಿದೆ. ವ್ಯಾಪಾರಕ್ಕಾಗಿ ನಡೆಸಲಾದ ಯಾತ್ರೆ ಆರ್ಥಿಕ ಲಾಭ ತರಲಿದೆ. ಇದಲ್ಲದೆ ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ಕಾನೂನಾತ್ಮಕ ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಆಸ್ತಿಯ ವಿಚಾರದಲ್ಲಿ ಧನಲಾಭದ ಸಂಕೇತಗಳಿವೆ. ನೌಕರಿಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿವೆ. ಸೂರ್ಯನ ಈ ರಾಶಿ ಪರಿವರ್ಥನೆಯಿಂದ ವ್ಯಾಪಾರದಿಂದ ಲಾಭ ಸಿಗಲಿದೆ.

ಇದನ್ನೂ ಓದಿ-LIC ಪಾಲಸಿ ಧಾರಾಕಾರ ಗಮನಕ್ಕೆ! ಈ ಎರಡು ಪಾಲಸಿಗಳಲ್ಲಿ ಭಾರಿ ಬದಲಾವಣೆ, ತಪ್ಪದೆ ತಿಳಿದುಕೊಳ್ಳಿ

ಕುಂಭ: ಕುಂಭ ರಾಶಿಯ ಜನರಿಗೆ ಸೂರ್ಯನ ಈ ಕುಂಭ ಗೋಚರ ವಿಶೇಷ ಫಲಗಳನ್ನು ಹೊತ್ತು ತರಲಿದೆ. ಈ ಅವಧಿಯಲ್ಲಿ ನಿಮಗೆ ಭಾಗ್ಯದ ಭರಪೂರ್ ಸಾಥ್ ಸಿಗಲಿದೆ. ಇದಲ್ಲದೆ ಗೊಚಾರದ ಅವಧಿಯಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲಗಳು ಕೂಡ ಸಿಗಲಿವೆ. ಬಿಸ್ನೆಸ್ ನಲ್ಲಿ ವೃದ್ಧಿಯ ಸಂಕೇತಗಳಿವೆ ಜೊತೆಗೆ ಆರ್ಥಿಕ ಲಾಭ ಕೂಡ ಪ್ರಾಪ್ತಿಯಾಗಲಿದೆ.

ಇದನ್ನೂ ಓದಿ-Share Market ಹೂಡಿಕೆದಾರರಿಗೊಂದು ಸಂತಸದ ಸುದ್ದಿ!

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-ಅಪಘಾತದಲ್ಲಿ ಗಾಯಗೊಂಡ ಅಪರಿಚಿತನಿಗೆ ಸಂಚಾರಿ ಪೊಲೀಸರ ಆರೈಕೆ! ಮಾನವೀಯತೆ ಅಂದ್ರೆ ಇದೆ ಅಲ್ವೇ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News