Surya-Chandra Grahan 2023: ವರ್ಷದ ಕೊನೆಯ ಸೂರ್ಯ-ಚಂದ್ರ ಗ್ರಹಣದ ವೇಳೆ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ!

ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ದಿನಾಂಕ: ಈ ವರ್ಷದ ಮೊದಲ ಮತ್ತು ಕೊನೆಯ ಚಂದ್ರಗ್ರಹಣಗಳು ಈಗಾಗಲೇ ಸಂಭವಿಸಿವೆ. ಈಗ ಈ ವರ್ಷದ ಕೊನೆಯ ಸೂರ್ಯ-ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣಗಳಿಂದ ಭಾರತದಲ್ಲಿ ಸೂತಕ ಕಾಲ ಬರುತ್ತದೆಯೇ?. ಇದರ ಬಗ್ಗೆ ಜನರು ಏನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅನ್ನೋದರ ಬಗ್ಗೆ ತಿಳಿಯಿರಿ

Written by - Puttaraj K Alur | Last Updated : May 21, 2023, 10:54 PM IST
  • ವರ್ಷದ 2ನೇ & ಕೊನೆಯ ಸೂರ್ಯ-ಚಂದ್ರಗ್ರಹಣ ಅಕ್ಟೋಬರ್‌ನಲ್ಲಿ ಸಂಭವಿಸಲಿವೆ
  • ಅಕ್ಟೋಬರ್ ತಿಂಗಳ ಸೂರ್ಯಗ್ರಹಣ ಅಶ್ವಿನ ಅಮವಾಸ್ಯೆಯಂದು ಸಂಭವಿಸುತ್ತದೆ
  • ಆದರೆ ಅಶ್ವಿನ ಪೂರ್ಣಿಮೆಯಂದು ಚಂದ್ರಗ್ರಹಣ ಗೋಚರಿಸಲಿದೆ
Surya-Chandra Grahan 2023: ವರ್ಷದ ಕೊನೆಯ ಸೂರ್ಯ-ಚಂದ್ರ ಗ್ರಹಣದ ವೇಳೆ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ! title=
ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ

ನವದೆಹಲಿ: ಈ ವರ್ಷದ ಮೊದಲ ಸೂರ್ಯ ಮತ್ತು ಚಂದ್ರ ಗ್ರಹಣ ಈಗಾಗಲೇ ಸಂಭವಿಸಿದೆ. ಈಗ ವರ್ಷದ 2ನೇ ಗ್ರಹಣ ಬರಲಿದೆ. ಜ್ಯೋತಿಷಿಗಳ ಪ್ರಕಾರ ವರ್ಷದ 2ನೇ ಮತ್ತು ಕೊನೆಯ ಸೂರ್ಯ-ಚಂದ್ರಗ್ರಹಣ ಅಕ್ಟೋಬರ್‌ನಲ್ಲಿ ಸಂಭವಿಸಲಿದೆ. ಎರಡೂ ಗ್ರಹಣಗಳ ನಡುವೆ 15 ದಿನಗಳ ಅಂತರವಿರುತ್ತದೆ. ಅಕ್ಟೋಬರ್ ತಿಂಗಳ ಸೂರ್ಯಗ್ರಹಣ ಅಶ್ವಿನ ಅಮವಾಸ್ಯೆಯಂದು ಸಂಭವಿಸುತ್ತದೆ. ಆದರೆ ಅಶ್ವಿನ ಪೂರ್ಣಿಮೆಯಂದು ಚಂದ್ರಗ್ರಹಣ ಗೋಚರಿಸಲಿದೆ. ಎರಡೂ ಗ್ರಹಣಗಳು ಯಾವಾಗ ಮತ್ತು ಯಾವ ಶುಭ ಮುಹೂರ್ತದಲ್ಲಿ ನಡೆಯುತ್ತವೆ. ಇದರೊಂದಿಗೆ ಸೂತಕ ಕಾಲ ಆ ಕಾಲದಲ್ಲಿ ನಡೆಯುತ್ತದೋ ಇಲ್ಲವೋ ಅನ್ನೋದರ ಬಗ್ಗೆ ತಿಳಿಯಿರಿ.

ವರ್ಷದ ಕೊನೆಯ ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ?

ಧಾರ್ಮಿಕ ವಿದ್ವಾಂಸರ ಪ್ರಕಾರ ಈ ವರ್ಷದ ಕೊನೆಯ ಸೂರ್ಯಗ್ರಹಣ ಅಕ್ಟೋಬರ್ 14ರಂದು ರಾತ್ರಿ 8.34ಕ್ಕೆ ಪ್ರಾರಂಭವಾಗುತ್ತದೆ. ಈ ಗ್ರಹಣವು ಸುಮಾರು 6 ಗಂಟೆಗಳ ನಂತರ ಅಕ್ಟೋಬರ್ 15ರಂದು ಮುಂಜಾನೆ 2.25ಕ್ಕೆ ಕೊನೆಗೊಳ್ಳಲಿದೆ. ವಿಶೇಷವೆಂದರೆ ಈ ಸೂರ್ಯಗ್ರಹಣವು ಕನ್ಯಾರಾಶಿ ಮತ್ತು ಚಿತ್ರಾ ನಕ್ಷತ್ರದಲ್ಲಿ ಸಂಭವಿಸಲಿದೆ. ವಿಶೇಷವೆಂದರೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಅಂದರೆ ಭಾರತದಲ್ಲಿ ಸೂತಕ ಕಾಲ ಇರುವುದಿಲ್ಲ. ಬ್ರೆಜಿಲ್, ಕೆನಡಾ, ಅಮೆರಿಕ, ಜಮೈಕಾ, ಕ್ಯೂಬಾ, ಮೆಕ್ಸಿಕೋ, ಈಕ್ವೆಡಾರ್, ಗ್ವಾಟೆಮಾಲಾ, ಪರಾಗ್ವೆ ಸೇರಿದಂತೆ ಹಲವು ದೇಶಗಳಲ್ಲಿ ಈ ಗ್ರಹಣ ಗೋಚರಿಸಲಿದೆ.

ಇದನ್ನೂ ಓದಿ: Honeymoon: ಮದುವೆಯ ನಂತರ ಟ್ರಿಪ್‌ ಹೋಗೋದನ್ನ 'ಹನಿಮೂನ್' ಅಂತ ಯಾಕೆ ಕರೆಯುತ್ತಾರೆ ಗೊತ್ತಾ?

ಈ ದಿನವು ವರ್ಷದ ಕೊನೆಯ ಚಂದ್ರಗ್ರಹಣ 

ಈಗ ಈ ವರ್ಷದ(2023) ಕೊನೆಯ ಚಂದ್ರಗ್ರಹಣದ ಬಗ್ಗೆ ಮಾತನಾಡೋಣ. ಈ ಚಂದ್ರಗ್ರಹಣವು ಅಕ್ಟೋಬರ್ 29ರಂದು ಬೆಳಗ್ಗೆ 1:06ರಿಂದ 2:22ರವರೆಗೆ ಇರುತ್ತದೆ. ಈ ಗ್ರಹಣವನ್ನು ಭಾರತದಲ್ಲಿ ಕಾಣಬಹುದು. ಇದರ ಅವಧಿ 1 ಗಂಟೆ 16 ನಿಮಿಷಗಳು. ಇದನ್ನು ಖಂಡಗ್ರಾಸ ಚಂದ್ರಗ್ರಹಣವೆಂದು ಕರೆಯಲಾಗುವುದು.

ಭಾರತದಲ್ಲಿಯೂ ಸೂತಕ ಕಾಲ?

ಜ್ಯೋತಿಷಿಗಳ ಪ್ರಕಾರ ಅಕ್ಟೋಬರ್ 29ರಂದು ಚಂದ್ರಗ್ರಹಣಕ್ಕೆ 9 ಗಂಟೆಗಳ ಮೊದಲು ಅಂದರೆ ಅಕ್ಟೋಬರ್ 28ರಂದು ಮಧ್ಯಾಹ್ನ 2.52ಕ್ಕೆ ಭಾರತದಲ್ಲಿ ಸೂತಕ ಅವಧಿಯು ಪ್ರಾರಂಭವಾಗಲಿದೆ. ಚಂದ್ರಗ್ರಹಣವು ತಡರಾತ್ರಿಯಲ್ಲಿ ಕೊನೆಗೊಂಡಾಗ ಮಾತ್ರ ಸೂತಕ ಅವಧಿಯು ಕೊನೆಗೊಳ್ಳುತ್ತದೆ. ಈ ರೀತಿಯ ಸೂತಕ ಕಾಲದಲ್ಲಿ ಅನೇಕ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಈ ಸಮಯದಲ್ಲಿ ಗರ್ಭಿಣಿಯರು ವಿಶೇಷ ಕಾಳಜಿ ವಹಿಸಬೇಕು.

ಇದನ್ನೂ ಓದಿ: Astro Tips: ತುಳಸಿ ಎಲೆಗಳ ಈ ಪರಿಹಾರವು ನಿಮ್ಮ ಅದೃಷ್ಟವನ್ನು ಬೆಳಗಿಸುತ್ತದೆ!

ಸೂತಕ ಕಾಲದಲ್ಲಿ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ಸೂತಕದ ಅವಧಿಯಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಕಾಲಿಡಬಾರದು. ಈ ಸಮಯದಲ್ಲಿ ಮಲಗುವುದನ್ನು ಸಹ ನಿಷೇಧಿಸಲಾಗಿದೆ. ಆದಾಗ್ಯೂ ಈ ನಿಯಮವು ಅನಾರೋಗ್ಯದ ಜನರಿಗೆ ಅನ್ವಯಿಸುವುದಿಲ್ಲ. ಈ ಸೂತಕದ ಅವಧಿಯಲ್ಲಿ ತಿನ್ನುವುದು ಅಥವಾ ಬೇಯಿಸುವುದು ಎರಡನ್ನೂ ನಿಷೇಧಿಸಲಾಗಿದೆ. ಸೂತಕ ಕಾಲದಲ್ಲಿ ದೇವಾಲಯಗಳ ಬಾಗಿಲು ಮುಚ್ಚಲಾಗುತ್ತದೆ. ಈ ಅವಧಿಯಲ್ಲಿ ಪೂಜೆಯನ್ನೂ ಮಾಡುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News