Sun Transit September 2021 :ಸೆಪ್ಟೆಂಬರ್ 17 ರಂದು ಸೂರ್ಯನ ರಾಶಿ ಪರಿವರ್ತನೆ, ಇದಕ್ಕೂ ಮುನ್ನ ಈ ರಾಶಿಯವರಿಗೆ ಸಿಗಲಿದೆ ಶುಭ ಫಲ

ಸೂರ್ಯ ಪ್ರಸ್ತುತ, ಅವರು ಸಿಂಹ ರಾಶಿಯಲ್ಲಿದ್ದಾನೆ. ಈ ಸಂದರ್ಭದಲ್ಲಿ ಅನೇಕ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ತನ್ನ ವಿಶೇಷ ಕೃಪೆ ಹರಿಸುತ್ತಿದ್ದಾನೆ. ಆಗಸ್ಟ್ 17 ರಂದು ಸಿಂಹ ರಾಶಿಗೆ ಪ್ರವೇಶಿಸಿರುವ ಸೂರ್ಯ, ಸೆಪ್ಟೆಂಬರ್ 17 ರವರೆಗೆ ಇದೇ ರಾಶಿಯಲ್ಲಿ ಇರಲಿದ್ದಾನೆ. 

Written by - Ranjitha R K | Last Updated : Sep 11, 2021, 07:35 PM IST
  • ಪ್ರಸ್ತುತ, ಸಿಂಹ ರಾಶಿಯಲ್ಲಿರುವ ಸೂರ್ಯ
  • ಈ ರಾಶಿಯವರ ಉದ್ಯೋಗ ಹುಡುಕಾಟ ಪೂರ್ಣಗೊಳ್ಳುತ್ತದೆ
  • ಸೂರ್ಯನ ರಾಶಿ ಪರಿವರ್ತನೆ ಮುನ್ನ ಕೆಲ ರಾಶಿಯವರಿಗೆ ಭಾರೀ ಲಾಭ
Sun Transit September 2021 :ಸೆಪ್ಟೆಂಬರ್ 17 ರಂದು ಸೂರ್ಯನ ರಾಶಿ ಪರಿವರ್ತನೆ, ಇದಕ್ಕೂ ಮುನ್ನ ಈ ರಾಶಿಯವರಿಗೆ ಸಿಗಲಿದೆ ಶುಭ ಫಲ  title=
Sun Transit September 2021 (file photo)

ನವದೆಹಲಿ : ಗ್ರಹಗಳ ರಾಜನೆಂದು ಕರೆಯಲ್ಪಡುವ ಸೂರ್ಯ ಪ್ರತಿ ತಿಂಗಳು ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಲೇ ಇರುತ್ತಾನೆ. ಸೂರ್ಯ  ಪ್ರಸ್ತುತ ಸಿಂಹ ರಾಶಿಯಲ್ಲಿದ್ದು, ಸೆಪ್ಟೆಂಬರ್ 17 ರಂದು, ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಸೆಪ್ಟೆಂಬರ್ 17 ರಂದು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ.  (Sun Transit 2021). ಇದಕ್ಕೂ ಮೊದಲು, 6 ರಾಶಿಚಕ್ರದ ಜನರಿಗೆ ಅಪಾರ ಸಂಪತ್ತು ಲಭಿಸಲಿದೆ.  

ಪ್ರಸ್ತುತ,  ಸಿಂಹ ರಾಶಿಯಲ್ಲಿರುವ ಸೂರ್ಯ : 
ಮೊದಲೇ  ಹೇಳಿದ ಹಾಗೆ , ಸೂರ್ಯ ಪ್ರಸ್ತುತ, ಅವರು ಸಿಂಹ ರಾಶಿಯಲ್ಲಿದ್ದಾನೆ (Sun Transit). ಈ ಸಂದರ್ಭದಲ್ಲಿ ಅನೇಕ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ತನ್ನ ವಿಶೇಷ ಕೃಪೆ ಹರಿಸುತ್ತಿದ್ದಾನೆ. ಆಗಸ್ಟ್ 17 ರಂದು ಸಿಂಹ ರಾಶಿಗೆ (Leo) ಪ್ರವೇಶಿಸಿರುವ ಸೂರ್ಯ, ಸೆಪ್ಟೆಂಬರ್ 17 ರವರೆಗೆ ಇದೇ ರಾಶಿಯಲ್ಲಿ ಇರಲಿದ್ದಾನೆ. 

ಇದನ್ನೂ ಓದಿ:ಈ ನಾಲ್ಕು ರಾಶಿಯವರ ಮೇಲಿದೆ ಗಣೇಶನ ಅಪಾರ ಕೃಪೆ, ಉದ್ಯೋಗ ಆರ್ಥಿಕ ಸ್ಥಿತಿಯಲ್ಲಿ ಆಗಲಿದೆ ಭಾರೀ ಪ್ರಗತಿ

ಸೂರ್ಯನ ರಾಶಿ ಪರಿವರ್ತನೆಗೆ ಮುನ್ನ ಬೆಳಕಾಗಲಿದೆ ಈ ರಾಶಿಯವರ (Zodiac sign) ಬದುಕು  :
ವೃಶ್ಚಿಕ ರಾಶಿ: ಯಾವುದೇ ಹೊಸ ಕೆಲಸ ಆರಂಭಿಸಲು ಇದು ಸರಿಯಾದ ಸಮಯ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಮತ್ತು ವಹಿವಾಟುಗಳಿಗೆ ಸಮಯವು ಶುಭವಾಗಿರುತ್ತದೆ. ಉದ್ಯೋಗ ಹುಡುಕಾಟ ಅಂತ್ಯವಾಗುತ್ತದೆ. ಆರ್ಥಿಕ ಲಾಭಗಳಾಗುವ ಸಾಧ್ಯತೆಗಳಿವೆ. 

ಧನು (Sagittarius) : ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ಅನುಕೂಲಕರ ಫಲಿತಾಂಶಗಳನ್ನು ಪಡೆಯಲಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹೂಡಿಕೆಗೆ (Investment) ಸರಿಯಾದ ಸಮಯ.

ತುಲಾ (Libra) : ಈ ಸಮಯವು ನಿಮಗೆ ವರದಾನವೇ ಸರಿ. ವ್ಯಾಪಾರ ವಹಿವಾಟಿಗೆ ಸೂಕ್ತ ಸಮಯ. ಹೂಡಿಕೆಗಳನ್ನು ಮಾಡಬಹುದು. ಹೊಸ ವಾಹನ ಅಥವಾ ಮನೆಯನ್ನು ಖರೀದಿಸಬಹುದು. ಕೆಲಸದ ಸ್ಥಳದಲ್ಲಿ ಯಶಸ್ಸು ಸಿಗಲಿದೆ. ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡುವ ಜನರು ಪ್ರಯೋಜನಗಳನ್ನು ಪಡೆಯುತ್ತಾರೆ. 

ಇದನ್ನೂ ಓದಿ: Vastu Tips: ಯಾವುದೇ ರೀತಿಯ ರಿಪೇರಿ ಇಲ್ಲದೆ ಮನೆಯ ವಾಸ್ತುದೋಷವನ್ನು ಈ ರೀತಿ ನಿವಾರಿಸಿ

ಮೇಷ (Aries) : ಮೇಷ ರಾಶಿಯ ಜನರ ಮೇಲೆ ಸೂರ್ಯನ ಅನುಗ್ರಹ ವಿಶೇಷವಾಗಿರುತ್ತದೆ. ಇವರು ಹಣಕಾಸಿನ ಪ್ರಯೋಜನಗಳನ್ನು ಪಡೆಯಲಿದ್ದಾರೆ. ವೈವಾಹಿಕ ಜೀವನವೂ (Married life) ಸಂತೋಷವಾಗಿರುತ್ತದೆ ಮತ್ತು ಕುಟುಂಬ ಸದಸ್ಯರ ಬೆಂಬಲ ಲಭ್ಯವಾಗುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಬಹುದು. 

ಮಿಥುನ: ಈ ರಾಶಿಯ ಜನರು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವ ಅವಕಾಶವನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ಸಹೋದರರಿಂದ ಸಹಾಯ ಪಡೆಯಬಹುದು. ಪ್ರತಿಷ್ಠೆ ಮತ್ತು ಸ್ಥಾನದಲ್ಲಿ ಹೆಚ್ಚಳ ಕಂಡುಬರುತ್ತದೆ. 

ಸಿಂಹ (Leo): ಹೂಡಿಕೆಗೆ ಉತ್ತಮ ಸಮಯ. ವಹಿವಾಟಿನಿಂದ ಲಾಭವಾಗಬಹುದು. ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ, ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಕುಟುಂಬದ ಬೆಂಬಲ ಸಿಗಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News