Sun Transit In Ashlesha - ಜ್ಯೋತಿಷ್ಯ ಶಾಸ್ತ್ರದ (Astrology)ಪ್ರಕಾರ ಸೂರ್ಯನ ನಕ್ಷತ್ರ ಪರಿವರ್ತನೆಗೂ ಕೂಡ ಭಾರಿ ಮಹತ್ವವಿದೆ. ಹಿಂದೂ ಪಂಚಾಂಗದ ಪ್ರಕಾರ ಕಳೆದ ಜುಲೈ 6, 2021 ರಂದು ಸೂರ್ಯ ಪುನರ್ವಸು ನಕ್ಷತ್ರದಲ್ಲಿ ಗೋಚರಿಸಿದ್ದಾನೆ. ಇದಾದ ಬಳಿಕೆ ಜುಲೈ 20ರಂದು ಪುಷ್ಯ ನಕ್ಷತ್ರಕ್ಕೆ ಸೂರ್ಯ ಪ್ರವೇಶಿಸಿದ್ದಾನೆ. ಸೂರ್ಯನ ಈ ನಕ್ಷತ್ರ ಪರಿವರ್ತನೆಯ ಪ್ರಭಾವ ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯ ಮೇಲೆ ಬೀಳುತ್ತದೆ. ಪುಷ್ಯ ನಕ್ಷತ್ರದಲ್ಲಿ ಸೂರ್ಯ (Sun Transit 2021) ಆಗಸ್ಟ್ 3, 2021ರವರೆಗೆ ಮಾತ್ರ ಇರಲಿದ್ದಾನೆ. ನಂತರ ಆಗಸ್ಟ್ 3, 2021ರ ಬೆಳಗ್ಗೆ 3 ಗಂಟೆ 42 ನಿಮಿಷಕ್ಕೆ ಸೂರ್ಯ ಅಶ್ಲೇಷಾ ನಕ್ಷತ್ರದಲ್ಲಿ ಪ್ರವೇಶಿಸಲಿದ್ದಾನೆ. ಇಲ್ಲಿ ವಿಶೇಷತೆ ಎಂದರೆ ಈ ನಕ್ಷತ್ರ ಪ್ರವೇಶಕ್ಕೂ ಮುನ್ನ ಸೂರ್ಯನ ಬುಧ ಗೋಚರ ಸಂಭವಿಸಲಿದೆ. ಹೀಗಾಗಿ ಸೂರ್ಯನ ಈ ಬುಧ ಹಾಗೂ ಅಶ್ಲೇಷಾ ಗೋಚರ ಯಾವ ರಾಶಿಗಳಿಗೆ (Zodiac Signs) ಧನಾಗಮನದ ಸಂಕೇತ ನೀಡುತ್ತಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Astrology Today
1. ಮೇಷ ರಾಶಿ - ಅಶ್ಲೇಷಾ ನಕ್ಷತ್ರದ ಪ್ರಭಾವದಿಂದ ಮೇಷ ರಾಶಿಯ ಜಾತಕದವರಿಗೆ ಧನಲಾಭದ ಸಂಕೇತವಿದೆ. ಜ್ಯೋತಿಶ್ಯಾಚಾರ್ಯರ ಅನುಸಾರ, ಮೇಷ ರಾಶಿಯ ಜನರ ಪಾಲಿಗೆ ಆಗಸ್ಟ್ ತಿಂಗಳು ಶುಭಕರವಾಗಿರಲಿದೆ. ಈ ಅವಧಿಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಜನರಿಗೆ ಶುಭ ಪರಿಣಾಮಗಳು ಸಿಗಲಿವೆ. ನೌಕರಿಯಲ್ಲಿ ಪ್ರಗತಿಯ ಯೋಗವಿದೆ.
2. ಮಿಥುನ ರಾಶಿ - ಗ್ರಹಗಳ ನಡೆಯಲ್ಲಾಗುತ್ತಿರುವ ಪರಿವರ್ತನೆ ಮಿಥುನ ರಾಶಿಯ ಜನರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಬುಧನ ಅಶ್ಲೇಷಾ ನಕ್ಷತ್ರ ಗೋಚರ ಮಿಥುನ ರಾಶಿಯ ಜಾತಕದವರ ಆದಾಯ ಹೆಚ್ಚಿಸಲಿದೆ. ಈ ಅವಧಿಯಲ್ಲಿ ನಿಮಗೆ ಹೂಡಿಕೆಯ ಲಾಭ ಕೂಡ ಸಿಗಲಿದೆ ಮತ್ತು ವ್ಯಾಪಾರದಲ್ಲಿ ಪ್ರಗತಿ ಸಂಭವಿಸಲಿದೆ.
ಇದನ್ನೂ ಓದಿ-Palmistry: ಸರ್ಕಾರಿ ನೌಕರಿ ಕೊಡಿಸುವ ಹಸ್ತರೇಖೆ ಈ ರೀತಿಯಾಗಿರುತ್ತದೆ, ನಿಮ್ಮ ಕೈಯಲ್ಲಿದೆಯಾ?
3. ಸಿಂಹ ರಾಶಿ - ಈ ಅವಧಿಯಲ್ಲಿ ಸಿಂಹ ರಾಶಿಯ ಜಾತಕದವರಿಗೆ ಭಾಗ್ಯ ಸಾಥ್ ನೀಡಲಿದೆ. ಯಾವುದೇ ಒಂದು ಕೆಲಸವನ್ನು ಸಂಪೂರ್ಣ ಶ್ರದ್ಧೆಯಿಂದ ಮಾಡುವುದರಿಂದ ಸಫಲತೆ ನಿಮ್ಮದಾಗಲಿದೆ. ನಿಮ್ಮ ಕರಿಯರ್ ನಲ್ಲಿಯೂ ಕೂಡ ಉತ್ತಮ ಪರಿಣಾಮಗಳು ಗೋಚರಿಸಲಿವೆ.
ಇದನ್ನೂ ಓದಿ-Friendship Day 2021: ಗೆಳೆತನದ ಕುರಿತು Chanakya Niti ಏನ್ ಹೇಳುತ್ತೆ?
4. ತುಲಾ ರಾಶಿ - ತುಲಾ ರಾಶಿಯ ಜಾತಕದವರಿಗೆ ಬುಧ ಹಾಗೂ ಸೂರ್ಯನ ಈ ಗೋಚರ ಒಳ್ಳೆಯ ದಿನಗಳನ್ನು ತರಲಿದೆ. ಜೋತಿಶ್ಯಾಚಾರ್ಯರ ಪ್ರಕಾರ, ಈ ಅವಧಿಯಲ್ಲಿ ನೀವು ಯಾವುದೇ ಒಂದು ಹೊಸ ಕಾರ್ಯವನ್ನು ಆರಂಭಿಸಬಹುದು ಮತ್ತು ನಿಮಗೆ ಇದು ಶುಭಕರವಾಗಿರಲಿದೆ. ಆಸ್ತಿ ವಿಚಾರದಲ್ಲಿ ಲಾಭದ ಯೋಗವಿದೆ. ವಾಹನ ಸುಖ ಪ್ರಾಪ್ತಿಯಾಗಲಿದೆ.
ಇದನ್ನೂ ಓದಿ-ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಮಕ್ಕಳು ಪ್ರತಿಭಾನ್ವಿತರು, ಆದರೆ ಈ ಗುಣ ಕೂಡಾ ಅವರಲ್ಲಿರುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ