ದೀಪಾವಳಿಯಂದು ಸೂರ್ಯ ಗ್ರಹಣ, ತುಳಸಿ ಪೂಜೆಯಂದು ಚಂದ್ರಗ್ರಹಣ ಗೋಚರ ! ಈ ರಾಶಿಯವರ ಮೇಲೆ ಬೀರಲಿದೆ ಪರಿಣಾಮ

ಈ ಬಾರಿ ದೀಪಾವಳಿ ಮತ್ತು ತುಳಸಿ ಪೂಜೆ ಎರಡೂ ದಿನ ಗ್ರಹಣಗಳು ಗೋಚರಿಸಲಿದೆ. ದೀಪಾವಳಿಯಂದು ಸೂರ್ಯಗ್ರಹಣ, ತುಳಸಿ ಪೂಜೆಯಂದು ಚಂದ್ರಗ್ರಹಣ  ಗೋಚರಿಸಲಿದೆ.   

Written by - Ranjitha R K | Last Updated : Sep 30, 2022, 09:39 AM IST
  • 15 ದಿನಗಳ ಅನ್ತರದಲೊಇ ಗೋಚರಿಸಲಿದೆ ಸೂರ್ಯ ಚಂದ್ರ ಗ್ರಹಣ
  • ಕೆಲ ರಾಶಿಯವರ ಮೇಲೆ ಬೀರಲಿದೆ ಕೆಟ್ಟ ಪರಿಣಾಮ
  • ತುಳಸಿ ಪೂಜೆಯಂದು ಕಾಣಿಸಿಕೊಳ್ಳಲಿದೆ ಚಂದ್ರ ಗ್ರಹಣ
ದೀಪಾವಳಿಯಂದು ಸೂರ್ಯ ಗ್ರಹಣ, ತುಳಸಿ ಪೂಜೆಯಂದು ಚಂದ್ರಗ್ರಹಣ ಗೋಚರ ! ಈ ರಾಶಿಯವರ ಮೇಲೆ ಬೀರಲಿದೆ ಪರಿಣಾಮ  title=
Solar Eclipse and Lunar Eclipse 2022 Effect on Zodiac Signsವ (file photo)

ಬೆಂಗಳೂರು : ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಕಾರ್ತಿಕ ಮಾಸವು ತುಂಬಾ ವಿಶೇಷವಾಗಿರುತ್ತದೆ. ಹಿಂದೂ ಧರ್ಮದ ಅತಿದೊಡ್ಡ ಹಬ್ಬವಾದ ದೀಪಾವಳಿಯನ್ನು ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ಹುಣ್ಣಿಮೆಯಂದು  ತುಳಸಿ ಪೂಜೆಯನ್ನು ಆಚರಿಸಲಾಗುತ್ತದೆ. ಈ ಬಾರಿ ದೀಪಾವಳಿ ಮತ್ತು ತುಳಸಿ ಪೂಜೆ ಎರಡೂ ದಿನ ಗ್ರಹಣಗಳು ಗೋಚರಿಸಲಿದೆ. ದೀಪಾವಳಿಯಂದು ಸೂರ್ಯಗ್ರಹಣ, ತುಳಸಿ ಪೂಜೆಯಂದು ಚಂದ್ರಗ್ರಹಣ  ಗೋಚರಿಸಲಿದೆ. ಕೇವಲ 15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳು ಗೋಚರಿಸಲಿವೆ. 

ಕಾರ್ತಿಕ ಮಾಸದ ಅಮಾವಾಸ್ಯೆಯಂದು ದೀಪಾವಳಿ ಲಕ್ಷ್ಮೀ ಪೂಜೆ ಆಚರಿಸಲಾಗುತ್ತದೆ. ಈ ಬಾರಿ ಇದೇ  ದಿನ ಸೂರ್ಯಗ್ರಹಣ ಸಂಭವಿಸಲಿದೆ. ಈ ವರ್ಷ, ಕಾರ್ತಿಕ ಮಾಸದ ಅಮಾವಾಸ್ಯೆ ಅಕ್ಟೋಬರ್ 24 ರ ಸಂಜೆಯಿಂದ ಪ್ರಾರಂಭವಾಗುತ್ತದೆ. ಮಾರನೇ ದಿನ ಅಂದರೆ ಅಕ್ಟೋಬರ್ 25 ರ ಸಂಜೆ 04.23 ರಿಂದ ಸೂರ್ಯ ಗ್ರಹಣ ಪ್ರಾರಂಭವಾಗುತ್ತದೆ. ಇದು 06.25 ರವರೆಗೆ ಇರುತ್ತದೆ.  ಈ ದಿನ ಸೂತಕದ ಅವಧಿಯು ಅಕ್ಟೋಬರ್ 24 ರ ಮಧ್ಯರಾತ್ರಿಯಿಂದ ಪ್ರಾರಂಭವಾಗುತ್ತದೆ.  ಆದರೆ ಭಾರತದಲ್ಲಿ ಸೂರ್ಯಗ್ರಹಣ  ಗೋಚರಿಸುವುದಿಲ್ಲವಾದ್ದರಿಂದ ಇದು ಮಾನ್ಯವಾಗಿರುವುದಿಲ್ಲ. 

ಇದನ್ನೂ ಓದಿ : ಅಂಗೈಯಲ್ಲಿ ಈ ಗುರುತಿದ್ದವರು 35ನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಶ್ರೀಮಂತರಾಗುತ್ತಾರೆ.!

ಮತ್ತೊಂದೆಡೆ, ಈ ವರ್ಷ ನವೆಂಬರ್ 8 ರಂದು ಕಾರ್ತಿಕ ಪೂರ್ಣಿಮೆಯಂದು ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ. ಈ ದಿನ ತುಳಸಿ ಪೂಜೆ ಮಾಡಲಾಗುತ್ತದೆ. ಆದರೆ, ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ ಮತ್ತು ಅದರ ಸೂತಕ ಅವಧಿಯು ಸಹ ಮಾನ್ಯವಾಗಿರುತ್ತದೆ. ಆದ್ದರಿಂದ  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ದಿನ ಮುಂಚಿತವಾಗಿ ತುಳಸಿ ಪೂಜೆ ಮಾಡುವಂತೆ ಸೂಚಿಸಲಾಗುತ್ತದೆ.  

ರಾಶಿಚಕ್ರದ ಚಿಹ್ನೆಗಳ ಮೇಲೆ ಸೂರ್ಯಗ್ರಹಣದ ಪರಿಣಾಮ :
4 ರಾಶಿಯವರಿಗೆ ಸೂರ್ಯಗ್ರಹಣ ಒಳ್ಳೆಯದಲ್ಲ. ವೃಷಭ, ಮಿಥುನ, ಕನ್ಯಾ ಮತ್ತು ತುಲಾ ರಾಶಿಯ ಜನರು ದೀಪಾವಳಿಯ ಈ ಸೂರ್ಯಗ್ರಹಣದ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕು. 

ವೃಷಭ ರಾಶಿ - ಈ ಸೂರ್ಯಗ್ರಹಣವು ವೃಷಭ ರಾಶಿಯವರ ಮಾನಸಿಕ  ಒತ್ತಡ ಹೆಚ್ಚಾಗಬಹುದು. 
ಮಿಥುನ ರಾಶಿ - ಮಿಥುನ ರಾಶಿಯವರು ಉದ್ಯೋಗ-ವ್ಯವಹಾರದಲ್ಲಿ ಸಮಸ್ಯೆಗಳನ್ನು  ಎದುರಿಸಬಹುದು.
ಕನ್ಯಾ ರಾಶಿ- ಕನ್ಯಾ ರಾಶಿಯ ಜನರು ಸೂರ್ಯಗ್ರಹಣದಿಂದ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗಬಹುದು. 
ತುಲಾ ರಾಶಿ -  ತುಲಾ ರಾಶಿಯ ಜನರು ಈ ಸೂರ್ಯಗ್ರಹಣದಿಂದ ತಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.  

ಇದನ್ನೂ ಓದಿ :  Swapna Shastra: ಮದುವೆಯ ಕನಸು ಇಂತಹ ಘಟನೆಯ ಮುನ್ನೆಚ್ಚರಿಕೆ ನೀಡುತ್ತೆ.!

( ಸೂಚನೆ :  ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News