Solar Eclipse 2021: ಶನಿ ಜಯಂತಿ ದಿನದಂದೇ ಸೂರ್ಯಗ್ರಹಣ, ಈ ರಾಶಿಯವರ ಮೇಲೆ ಹೆಚ್ಚು ಪರಿಣಾಮ

ವರ್ಷದ ಮೊದಲ ಸೂರ್ಯಗ್ರಹಣ ಶನಿ ಜಯಂತಿಯಂದು ನಡೆಯುತ್ತಿದೆ. ಈ ಗ್ರಹಣದ ಪರಿಣಾಮವು ಎಲ್ಲಾ ಗ್ರಹಗಳ ಮೇಲೆ ಇದ್ದರೂ, ಈ ಒಂದು ರಾಶಿಯ ಜನರು ಹೆಚ್ಚು  ಜಾಗರೂಕರಾಗಿರಬೇಕು ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸಿದ್ದಾರೆ.

Written by - Yashaswini V | Last Updated : Jun 5, 2021, 10:40 AM IST
  • ವರ್ಷದ ಮೊದಲ ಸೂರ್ಯಗ್ರಹಣದ ದಿನವೇ ಶನಿ ಜಯಂತಿ
  • ಭಾರತದಲ್ಲಿ ಭಾಗಶಃ ಸೂರ್ಯಗ್ರಹಣ
  • ಈ ರಾಶಿಯವರ ಮೇಲೆ ಅತಿದೊಡ್ಡ ಪರಿಣಾಮ
Solar Eclipse 2021: ಶನಿ ಜಯಂತಿ ದಿನದಂದೇ ಸೂರ್ಯಗ್ರಹಣ, ಈ ರಾಶಿಯವರ ಮೇಲೆ ಹೆಚ್ಚು ಪರಿಣಾಮ title=
ಶನಿ ಜಯಂತಿಯಂದೇ ವರ್ಷದ ಮೊದಲ ಸೂರ್ಯಗ್ರಹಣ, ಈ ರಾಶಿಯ ಮೇಲೆ ಗರಿಷ್ಠ ಪರಿಣಾಮ

ನವದೆಹಲಿ: ವರ್ಷದ ಮೊದಲ ಸೂರ್ಯಗ್ರಹಣ (Solar Eclipse 2021) 10 ಜೂನ್ 2021 ರಂದು ಗುರುವಾರ ನಡೆಯಲಿದೆ. ಈ ಗ್ರಹಣವು ಜ್ಯೇಷ್ಠ ತಿಂಗಳ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನದಂದು ನಡೆಯುತ್ತಿದೆ ಮತ್ತು ಇದೇ ದಿನ ಶನಿ ಜಯಂತಿಯೂ (Shani jayanti) ಇದೆ. ಆದ್ದರಿಂದ, ಈ ಸೂರ್ಯಗ್ರಹಣವು ಹಲವು ವಿಧಗಳಲ್ಲಿ ವಿಶೇಷವಾಗಲಿದೆ. ಸುಮಾರು 5 ಗಂಟೆಗಳ ಕಾಲ ನಡೆಯುವ ಈ ಸೂರ್ಯಗ್ರಹಣ ಮಧ್ಯಾಹ್ನ 1:42 ಕ್ಕೆ ಪ್ರಾರಂಭವಾಗಿ ಸಂಜೆ 6.41 ಕ್ಕೆ ಕೊನೆಗೊಳ್ಳುತ್ತದೆ ಎನ್ನಲಾಗಿದೆ.

ಭಾರತದಲ್ಲಿ ಭಾಗಶಃ ಸೂರ್ಯಗ್ರಹಣ :
ಜೂನ್ 10, 2021 ರಂದು ನಡೆಯುವ ಸೂರ್ಯಗ್ರಹಣವು (Solar Eclipse 2021) ಅರುಣಾಚಲ ಪ್ರದೇಶ ಮತ್ತು ಭಾರತದ ಲಡಾಖ್ ಭಾಗಗಳಲ್ಲಿ ಭಾಗಶಃ ಗೋಚರಿಸುತ್ತದೆ. ಅದೇ ಸಮಯದಲ್ಲಿ, ಈ ಸೂರ್ಯಗ್ರಹಣವು ಈಶಾನ್ಯ ಅಮೆರಿಕ, ಯುರೋಪ್, ಏಷ್ಯಾ, ಅಟ್ಲಾಂಟಿಕ್ ಸಾಗರದ ಉತ್ತರ ಭಾಗ, ಗ್ರೀನ್‌ಲ್ಯಾಂಡ್, ಉತ್ತರ ಕೆನಡಾ ಮತ್ತು ರಷ್ಯಾಗಳಲ್ಲಿ ಗೋಚರಿಸುತ್ತದೆ. ಈ ಸೂರ್ಯಗ್ರಹಣ ಭಾರತದಲ್ಲಿ ಭಾಗಶಃ ಗೋಚರಿಸುವುದರಿಂದ, ಈ ಸಮಯದಲ್ಲಿ ಸೂತಕದ ಅವಧಿ ಮಾನ್ಯವಾಗಿರುವುದಿಲ್ಲ ಅಥವಾ ಯಾವುದೇ ರೀತಿಯ ಕೆಲಸಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ.

ಇದನ್ನೂ ಓದಿ - Vakri Shani : ಶನಿ ಚಲನೆ ಬದಲಾವಣೆ, ನಿಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ

ವೃಷಭ ರಾಶಿಯ ಮೇಲೆ ಅತಿದೊಡ್ಡ ಪರಿಣಾಮ:
ಸೂರ್ಯಗ್ರಹಣವು (Surya Grahan 2021) ಖಗೋಳ ಘಟನೆಯಾಗಿದೆ. ಆದರೆ ಧಾರ್ಮಿಕವಾಗಿ ಇದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಈ ಗ್ರಹಣವು ಭಾಗಶಃ ಗ್ರಹಣವಾಗಿದ್ದರೂ, ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ವೃಷಭ ರಾಶಿಯ ಮೇಲೆ ಇದು ಗರಿಷ್ಠ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಜ್ಯೋತಿಷ್ಯ ಪ್ರಕಾರ, ಈ ದಿನ ಚಂದ್ರನು ವೃಷಭ ರಾಶಿಯ ಮೇಲೆ ಸಾಗುತ್ತಾನೆ. ಈ ಕಾರಣದಿಂದಾಗಿ, ವೃಷಭ ರಾಶಿಯ ಜನರು ಜಾಗರೂಕರಾಗಿರಬೇಕು. ಈ ರಾಶಿಚಕ್ರದ ಜನರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅವರು ಹಣವನ್ನು ಸಹ ಕಳೆದುಕೊಳ್ಳಬಹುದು. ಆದ್ದರಿಂದ ಈ ಸಮಯದಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರೆ ಒಳಿತು ಎಂದು ಸಲಹೆ ನೀಡಲಾಗಿದೆ.

ಇದನ್ನೂ ಓದಿ - Planets Transit: ಜೂನ್ ತಿಂಗಳಲ್ಲಿ 5 ಗ್ರಹಗಳ ಸ್ಥಾನ ಪಲ್ಲಟ, ಅದರ ಪರಿಣಾಮ ಏನೆಂದು ತಿಳಿಯಿರಿ

ಈ ರೀತಿಯ ಗ್ರಹಣದ ಕೆಟ್ಟ ಪರಿಣಾಮಗಳನ್ನು ತಪ್ಪಿಸಬಹುದು:
ಧರ್ಮಗ್ರಂಥಗಳಲ್ಲಿ, ಗ್ರಹಣದ ಋಣಾತ್ಮಕ ಪರಿಣಾಮವನ್ನು ತಪ್ಪಿಸಲು ಕೆಲವು ಪರಿಹಾರಗಳನ್ನೂ ಸೂಚಿಸಲಾಗಿದೆ. ಇದಕ್ಕಾಗಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ ಮತ್ತು ಗ್ರಹಣ ಮುಗಿದ ನಂತರ ಗಂಗಾಜಲವನ್ನು ಸಿಂಪಡಿಸಿ ಮನೆಯನ್ನು ಶುದ್ಧೀಕರಿಸಿ. ಅಲ್ಲದೆ, ಗ್ರಹಣ ಸಮಯದಲ್ಲಿ ಬಡವರಿಗೆ ನಿಮ್ಮ ಕೈಲಾದದ್ದನ್ನು ದಾನ ಮಾಡಿ ಎಂದು ಸಲಹೆ ನೀಡಲಾಗುತ್ತದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News