Black Thread: ನೀವೂ ಕಪ್ಪು ದಾರ ಧರಿಸುತ್ತೀರಾ? ಹಾಗಾದ್ರೆ ಈ ಸುದ್ದಿ ಓದಿ

ಸಾಮಾನ್ಯವಾಗಿ ಅನೇಕ ಜನರು ಕಪ್ಪು ದಾರವನ್ನು ಧರಿಸುತ್ತಾರೆ. ಕೆಲವರು ಕುತ್ತಿಗೆಗೆ ಕಪ್ಪು ದಾರವನ್ನು ಧರಿಸುತ್ತಾರೆ ಮತ್ತೆ ಕೆಲವರು ತಮ್ಮ ಕೈ ಅಥವಾ ಕಾಲುಗಳಿಗೆ ಕಪ್ಪು ದಾರ ಧರಿಸುತ್ತಾರೆ. ಕಪ್ಪು ದಾರ ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. 

Written by - Puttaraj K Alur | Last Updated : Nov 21, 2022, 11:21 PM IST
  • ಕುತ್ತಿಗೆಗೆ ಕಪ್ಪು ದಾರವನ್ನು ಧರಿಸುವುದರಿಂದ ದುಷ್ಟ ಕಣ್ಣುಗಳಿಂದ ರಕ್ಷಣೆ ಸಿಗುತ್ತದೆ
  • ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿರುವವರು ಕಪ್ಪು ದಾರ ಧರಿಸುವುದು ಉತ್ತಮ
  • ಕಪ್ಪು ದಾರದಿಂದ ನಕಾರಾತ್ಮಕ ಶಕ್ತಿ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ
Black Thread: ನೀವೂ ಕಪ್ಪು ದಾರ ಧರಿಸುತ್ತೀರಾ? ಹಾಗಾದ್ರೆ ಈ ಸುದ್ದಿ ಓದಿ title=
ಕಪ್ಪು ದಾರದ ಪ್ರಯೋಜನಗಳು

ನವದೆಹಲಿ: ಜನರು ಸಾಮಾನ್ಯವಾಗಿ ತಮ್ಮ ಕುತ್ತಿಗೆಗೆ ಅಥವಾ ಕೈ ಮತ್ತು ಕಾಲುಗಳ ಮೇಲೆ ಕಪ್ಪು ದಾರವನ್ನು ಧರಿಸುತ್ತಾರೆ. ಈ ಕಪ್ಪು ದಾರವನ್ನು ಧರಿಸಲು ಹಲವು ಕಾರಣಗಳಿವೆ. ಜ್ಯೋತಿಷ್ಯದಲ್ಲಿ ಈ ಕಪ್ಪು ದಾರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ, ಇದು ದುಷ್ಟ ಕಣ್ಣುಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಜೊತೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದಂತೆ. ಇದು ನ್ಯಾಯದ ದೇವತೆಯಾದ ಶನಿಗೆ ಸಂಬಂಧಿಸಿದೆ. ಕುತ್ತಿಗೆಗೆ ಕಪ್ಪು ದಾರವನ್ನು ಧರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯಿರಿ. 

ಇದನ್ನೂ ಓದಿ: Swapna Shastra : ಕನಸಿನಲ್ಲಿ ಮೀನುಗಳನ್ನು ಕಂಡರೆ ಶುಭ ಅಥವಾ ಅಶುಭನ : ಇಲ್ಲಿದೆ ನೋಡಿ

ಕಪ್ಪು ದಾರವನ್ನು ಧರಿಸುವುದರ ಪ್ರಯೋಜನಗಳು

ಜ್ಯೋತಿಷಿಗಳ ಪ್ರಕಾರ ಕಪ್ಪು ಬಣ್ಣವನ್ನು ಶನಿಯ ಬಣ್ಣವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಕಪ್ಪು ದಾರವನ್ನು ಧರಿಸುವುದು ಶನಿಯ ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ ಎಂದು ಹೇಳಲಾಗಿದೆ. ಅನೇಕ ತೊಂದರೆಗಳು ಮತ್ತು ಬಿಕ್ಕಟ್ಟುಗಳು ದೂರವಾಗುತ್ತವಂತೆ. ಕಪ್ಪು ದಾರವನ್ನು ಧರಿಸುವುದರಿಂದ ಶನಿಯ ಕೋಪ ಕಡಿಮೆಯಾಗುತ್ತದೆ. ಕುತ್ತಿಗೆಗೆ ಕಪ್ಪು ದಾರವನ್ನು ಹಾಕಿಕೊಂಡವರ ಮೇಲೆ ಶನಿಯ ಕೆಟ್ಟ ಕಣ್ಣು ಬೀಳುವುದಿಲ್ಲವೆಂಬ ನಂಬಿಕೆ ಇದೆ. ಅದೇ ರೀತಿ ವ್ಯಕ್ತಿಯು ವೇಗವಾಗಿ ಪ್ರಗತಿ ಹೊಂದುತ್ತಾನೆಂದು ನಂಬಲಾಗಿದೆ.

- ಕುತ್ತಿಗೆಗೆ ಕಪ್ಪು ದಾರವನ್ನು ಧರಿಸುವುದರಿಂದ ದುಷ್ಟ ಕಣ್ಣುಗಳಿಂದ ರಕ್ಷಿಸುತ್ತದೆ. ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇದಕ್ಕಾಗಿಯೇ ಮಕ್ಕಳಿಗೆ ಕಪ್ಪು ದಾರವನ್ನು ಧರಿಸುವಂತೆ ಸಲಹೆ ನೀಡಲಾಗುತ್ತದೆ. ದುಷ್ಟ ಕಣ್ಣುಗಳಿಂದ ದೂರವಿರಲು ಕೆಲವರು ತಮ್ಮ ಕೈ ಅಥವಾ ಪಾದಗಳಿಗೆ ಕಪ್ಪು ದಾರವನ್ನು ಧರಿಸುತ್ತಾರೆ. ಮಕ್ಕಳ ಕುತ್ತಿಗೆಗೆ ಕಪ್ಪು ದಾರವನ್ನು ಹಾಕುವಾಗ ಅದರ ಉದ್ದವು ಮಕ್ಕಳು ಕುತ್ತಿಗೆಯಲ್ಲಿ ಸಿಲುಕಿಕೊಳ್ಳದಂತೆ ಇರಬೇಕು.   

- ಮತ್ತೆ ಮತ್ತೆ ಅನಾರೋಗ್ಯದಿಂದ ಬಳಲುತ್ತಿರುವವರು ಕಪ್ಪು ದಾರವನ್ನು ಧರಿಸಬಹುದು. ಕುತ್ತಿಗೆಗೆ ಕಪ್ಪು ದಾರ ಕಟ್ಟಿಕೊಂಡರೆ ಮತ್ತೆ ಮತ್ತೆ ಕಾಯಿಲೆ ಬರುವುದಿಲ್ಲವೆಂಬ ನಂಬಿಕೆ ಇದೆ. ಕಪ್ಪು ದಾರವನ್ನು ಧರಿಸುವುದರಿಂದ ನಿಮಗೆ ದುಷ್ಟ ಕಣ್ಣಿನಿಂದ ರಕ್ಷಣೆ ಸಿಗುತ್ತದೆ. ಕಪ್ಪು ದಾರವನ್ನು ಧರಿಸುವುದರಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವಂತೆ. ಈ ಕಾರಣದಿಂದ ಈ ನಕಾರಾತ್ಮಕ ಶಕ್ತಿಯು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಈ ಕಪ್ಪು ದಾರವು ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Guru Margi 2022 : ನ. 24 ರಿಂದ ಗುರುದೇವನ ಚಲನೆ, ಈ ರಾಶಿಯವರಿಗೆ ಹೊಳೆಯಲಿದೆ ಅದೃಷ್ಟ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News