ರಾತ್ರಿ ಲೈಟ್ ಆನ್ ಮಾಡಿ ಮಲಗುವುದರಿಂದ ಕಾಡುವುದು ಈ ಸಮಸ್ಯೆಗಳ ಅಪಾಯ

Sleeping While Light On:  ರಾತ್ರಿ ಮಲಗುವಾಗ ಕೋಣೆಯ ಲೈಟ್‌ಗಳನ್ನು ಆಫ್ ಮಾಡುವುದು ಉತ್ತಮ ಅಭ್ಯಾಸ. ಆದರೆ ನಿಯಮಿತವಾಗಿ ದೀಪಗಳನ್ನು ಆನ್ ಮಾಡಿಕೊಂಡು ಮಲಗಿದರೆ, ಅದು ಆರೋಗ್ಯದ ಮೇಲೆ  ಪರಿಣಾಮ ಬೀರುತ್ತದೆ. 

Last Updated : Sep 1, 2022, 03:05 PM IST
  • ವ್ಯಕ್ತಿ ಆರೋಗ್ಯವಂತನಾಗಿರಬೇಕಾದರೆ ಕನಿಷ್ಠ 8 ಗಂಟೆಗಳ ನಿದ್ದೆ ಮಾಡಲೇಬೇಕು.
  • ನಿದ್ರೆಯು ಆಯಾಸಕ್ಕೆ ಪರಿಹಾರ ನೀಡುವ ಔಷಧಿ ಇದ್ದಂತೆ.
  • ಉತ್ತಮ ನಿದ್ರೆ ಮೆದುಳು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
ರಾತ್ರಿ ಲೈಟ್ ಆನ್ ಮಾಡಿ ಮಲಗುವುದರಿಂದ ಕಾಡುವುದು ಈ ಸಮಸ್ಯೆಗಳ ಅಪಾಯ title=
Sleeping tips (file photo)

Sleeping While Light On : ಒಬ್ಬ ವ್ಯಕ್ತಿ ಆರೋಗ್ಯವಂತನಾಗಿರಬೇಕಾದರೆ  ಕನಿಷ್ಠ 8 ಗಂಟೆಗಳ ನಿದ್ದೆ ಮಾಡಲೇಬೇಕು.  ನಿದ್ರೆಯು ಆಯಾಸಕ್ಕೆ ಪರಿಹಾರ ನೀಡುವ  ಔಷಧಿ ಇದ್ದಂತೆ.  ಉತ್ತಮ ನಿದ್ರೆ ಮೆದುಳು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ  ಸ್ನಾಯುಗಳು ಚೇತರಿಸಿಕೊಳ್ಳಲು ಪ್ರಾರಂಭಿಸುತ್ತವೆ. ಮನಸ್ಥಿತಿಯು ಉತ್ತಮವಾಗಿರುತ್ತದೆ ಮತ್ತು ಅನೇಕ ರೋಗಗಳ ಅಪಾಯ ಕೂಡಾ ಕಡಿಮೆಯಾಗುತ್ತದೆ. ಆದರೆ ನಿದ್ರೆ ಮಾಡುವ ಸಂದರ್ಭದಲ್ಲಿ ಮಾಡುವ ಕೆಲವು ತಪ್ಪುಗಳು ದೇಹಕ್ಕೆ ಹಾನಿ ಉಂಟು ಮಾಡುತ್ತದೆ. 

ಮಲಗುವಾಗ ಈ ತಪ್ಪನ್ನು ಎಂದಿಗೂ ಮಾಡಬೇಡಿ : 
ಸಾಮಾನ್ಯವಾಗಿ ನಾವು ರಾತ್ರಿ ಮಲಗುವಾಗ ಕೋಣೆಯ ಲೈಟ್‌ಗಳನ್ನು ಆಫ್ ಮಾಡುತ್ತೇವೆ. ಆದರೆ ಇನ್ನು ಕೆಲವರು ಲೈಟ್ ಹಾಕಿಕೊಂಡೇ ನಿದ್ದೆ ಮಾಡುತ್ತಾರೆ.  ಲೈಟ್ ಹಾಕಿಕೊಂಡು ಮಲಗುವುದು ಆರೋಗ್ಯಕ್ಕೆ ಹಾನಿಕರ. ಇದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. 

ಇದನ್ನೂ ಓದಿ : ಮೂಳೆ ಕ್ಯಾನ್ಸರ್ ಲಕ್ಷಣಗಳು: ಗಮನಹರಿಸಬೇಕಾದ 10 ಅಪಾಯಕಾರಿ ಸಂಕೇತಗಳಿವು

ದೀಪಗಳನ್ನು ಬೆಳಗಿಸಿ ಮಲಗಿದರೆ ಎದುರಾಗುವ ಸಮಸ್ಯೆಗಳು : 
1. ಖಿನ್ನತೆ :
ಆರೋಗ್ಯಕರ ಜೀವನ ನಡೆಸಲು ಬೆಳಕು ಎಷ್ಟು ಬೇಕೋ, ಕತ್ತಲೆಯೂ ಅಷ್ಟೇ ಮುಖ್ಯ. ಸ್ವೀಡನ್ ಮತ್ತು ನಾರ್ವೆಯಂತಹ ಧ್ರುವೀಯ ದೇಶಗಳಲ್ಲಿ ಬೇಸಿಗೆಯಲ್ಲಿ ಸುಮಾರು 6 ತಿಂಗಳವರೆಗೆ ಸೂರ್ಯ ಮುಳುಗುವುದಿಲ್ಲ. ಇದರಿಂದಾಗಿ ಅನೇಕ ಜನರು ಖಿನ್ನತೆಗೆ ಒಳಗಾಗುತ್ತಾರೆ. ಭಾರತದಂತಹ ದೇಶಗಳಲ್ಲಿ, ಬೆಳಕಿನಲ್ಲಿ ಮಲಗಬೇಕಾದರೆ, ಇದಕ್ಕಾಗಿ  ಎಲೆಕ್ಟ್ರಿಕ್ ಲೈಟ್ ಅನ್ನು ಬಳಸಬೇಕಾಗುತ್ತದೆ. ಇವುಗಳಿಂದ ಹೊರಹೊಮ್ಮುವ ನೀಲಿ ಬೆಳಕು ಕಿರಿಕಿರಿಯನ್ನು ಉಂಟು ಮಾಡಬಹುದು.  ಆದ್ದರಿಂದ ಸಾಧ್ಯವಾದಷ್ಟು ಕಡಿಮೆ ಬೆಳಕಿನಲ್ಲಿ ಮಲಗಿಕೊಳ್ಳಿ. 

2. ಅನೇಕ ರೋಗಗಳ ಅಪಾಯ :
ನಿರಂತರವಾಗಿ ಲೈಟ್‌ಗಳನ್ನು ಹಾಕಿಕೊಂಡು ಮಲಗುತ್ತಿದ್ದರೆ,  ಶಾಂತ ನಿದ್ರೆಗೆ  ತೊಂದರೆಯಾಗುತ್ತದೆ. ಇದು ಅಧಿಕ ರಕ್ತದೊತ್ತಡ, ಹೃದ್ರೋಗ ಇತ್ಯಾದಿ ಅನೇಕ ರೋಗಗಳ ಅಪಾಯಕ್ಕೆ ಕಾರಣವಾಗಬಹುದು. ಆದ್ದರಿಂದ, ದೀಪಗಳನ್ನು ಆನ್ ಮಾಡಿ ಮಲಗುವ ತಪ್ಪನ್ನು ಎಂದಿಗೂ ಮಾಡಬೇಡಿ.

ಇದನ್ನೂ ಓದಿ :  ಅಧಿಕ ಕೊಲೆಸ್ಟ್ರಾಲ್‌ನ ಶತ್ರು ಈ ಹಸಿರುಕಾಳು: ಇದನ್ನು ನೆನೆಸಿ ತಿನ್ನುವುದರಿಂದ ಸಿಗುತ್ತೆ ಅಪಾರ ಪ್ರಯೋಜನ

3. ದಣಿವು :
ಸಾಮಾನ್ಯವಾಗಿ, ದೀಪಗಳನ್ನು ಬೆಳಗಿ ಮಲಗುವುದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಅದರ ಪರಿಣಾಮವು ಮರುದಿನ ಕಂಡುಬರುತ್ತದೆ. ಅಂದರೆ ನಿದ್ದೆ ಸರಿಯಾಗಿ ಆಗದೇ  ಹೋದರೆ ಕೆಲಸ ಮಾಡಲು ಕಷ್ಟವಾಗುತ್ತದೆ.  ಏಕೆಂದರೆ ನೀವು ಆಯಾಸ ಮತ್ತು ಆಲಸ್ಯಕ್ಕೆ ಬಲಿಯಾಗುತ್ತೀರಿ.

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News