Shani Gochar Effect: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ಗ್ರಹದ ಪರಿವರ್ತನೆ ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಗಾಢ ಪರಿಣಾಮವನ್ನು ಬೀರುತ್ತದೆ. ಶನಿಯು ಏಪ್ರಿಲ್ 29 ರಂದು ತನ್ನದೇ ಆದ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ ಮತ್ತು ಅವನು 2024 ರವರೆಗೆ ಕುಂಭ ರಾಶಿಯಲ್ಲಿಯೇ ವಿರಾಜಮಾನನಾಗಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಅತ್ಯಂತ ನಿಧಾನ ಗತಿಯಲ್ಲಿ ಚಲಿಸುವ ಗ್ರಹವಾಗಿದೆ. ಶನಿ ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಹೀಗಾಗಿ ಸುದೀರ್ಘ 30 ವರ್ಷಗಳ ಬಳಿಕ ಶನಿ ತನ್ನದೇ ಆದ ರಾಶಿಯಲ್ಲಿ ಗೋಚರಿಸಿದ್ದಾನೆ. ಶನಿಯ ಈ ಗೋಚರದ ಲಾಭ ಹಲವು ರಾಶಿಗಳಿಗೆ ಸಿಗಲಿದೆ.
ಈ ರಾಶಿಗಳಿಗೆ ಶನಿ ಗೋಚರದ ಲಾಭ ಸಿಗಲಿದೆ
ಮೇಷ ರಾಶಿ - ಶನಿಯ ಈ ಕುಂಭ ಗೋಚರ ಮೇಷ ರಾಶಿಯ ಜನರ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ಮೇಷ ರಾಶಿಯ 11ನೇ ಶನಿಯ ಈ ಗೋಚರ ಸಂಭವಿಸಿದೆ. ಇದನ್ನು ಲಾಭ ಹಾಗೂ ಆದಾಯದ ಸ್ಥಾನ ಎಂದು ಭಾವಿಸಲಾಗುತ್ತದೆ. ಹೀಗಾಗಿ ಮೇಷ ಜಾತಕದವರಿಗೆ ವ್ಯಾಪಾರದಲ್ಲಿ ಧನಲಾಭದ ಸಾಧ್ಯತೆ ಹೆಚ್ಚಾಗುತ್ತದೆ. ಇದಲ್ಲದೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಮೇಷ ರಾಶಿಯ ದಶಮ ಭಾವದ ಅಧಿಪತಿ ಶನಿಯಾಗಿರುವ ಕಾರಣ. ವೃತ್ತಿಜೀವನದಲ್ಲಿ ಸಾಕಷ್ಟು ಪ್ರಗತಿ ಸಿಗಲಿದೆ. ಹೊಸ ನೌಕರಿಯ ಆಯ್ಕೆ ಕೂಡಿಬರಲಿದೆ. ವ್ಯವಸಾಯಕ್ಕೆ ಸಂಬಂಧಿಸಿದ ಹೊಸ ಸಾಧ್ಯತೆಗಳು ಹಾಗೂ ಅದರಿಂದ ಧನಲಾಭವಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಈ ಸಮಯ ಉತ್ತಮವಾಗಿದೆ. ಹಳೆ ರೋಗದಿಂದ ಮುಕ್ತಿ ಸಿಗಲಿದೆ.
ಇದನ್ನೂ ಓದಿ-Zodiac signs: ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯ ಕಳೆಯುವವರು ಈ ರಾಶಿಯವರೇ..!
ವೃಷಭ ರಾಶಿ - ಈ ರಾಶಿಯ ದಶಮ ಭಾವದಲ್ಲಿ ಶನಿಯ ಈ ಗೋಚರ ಸಂಭವಿಸಿದೆ. 2024ರವರೆಗೆ ಶನಿ ಅಲ್ಲಿಯೇ ಇರಲಿದ್ದಾನೆ. ಜೋತಿಷ್ಯ ಶಾಸ್ತ್ರದಲ್ಲಿ ಈ ಸ್ಥಳವನ್ನು ಕರ್ಮಕ್ಷೇತ್ರ ಹಾಗೂ ನೌಕರಿಯ ಭಾವ ಎಂದು ಭಾವಿಸಲಾಗುತ್ತದೆ. ಹೀಗಾಗಿ ವ್ಯಾಪಾರದಲ್ಲಿ ನಿಮಗೆ ಅಪಾರ ಧನಲಾಭದ ಸಂಕೇತಗಳು ಗೋಚರಿಸುತ್ತಿವೆ. ಸಾಕಷ್ಟು ಯಶಸ್ಸು ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಘನತೆ-ಗೌರವ ಪ್ರಾಪ್ತಿಯಾಗಲಿದೆ. ಹೊಸ ಐಡಿಯಾ ಮೂಲಕ ಆರಂಭಿಸಲಾಗಿರುವ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಈ ರಾಶಿಯ ನವಮ ಸ್ಥಾನಕ್ಕೆ ಶನಿ ಅಧಿಪತಿ. ಇದರಿಂದ ನಿಮಗೆ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ.
ಇದನ್ನೂ ಓದಿ-Guru Gochar 2022: ಮುಂದಿನ ಒಂದು ವರ್ಷದವರೆಗೆ ಈ ರಾಶಿಗಳ ಮೇಲೆ ದೇವಗುರು ಬೃಹಸ್ಪತಿಯ ಕೃಪೆ ಇರಲಿದೆ
(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.