ಮಿಥುನ-ತುಲಾ ರಾಶಿಯವರಿಗೊಂದು ಸಂತಸದ ಸುದ್ದಿ, ಒಂದೂವರೆ ತಿಂಗಳು ನಿಷ್ಕ್ರೀಯವಾಗಲಿದೆ ಈ ಗ್ರಹದ ಪ್ರಭಾವ

Shani Transit Latest Update: ಮಿಥುನ ಹಾಗೂ ತುಲಾ ರಾಶಿಯ ಜನರಿಗೆ ಶನಿವತಿಯಿಂದ ಒಂದು ಸಂತಸದ ಸುದ್ದಿ ಸಿಗಲಿದೆ. ಎರಡೂವರೆ ತಿಂಗಳವರೆಗೆ ಶನಿ ದೆಸೆಯಿಂದ ಮುಕ್ತಿ ಸಿಗಲಿದ್ದು, ಎರಡೂ ರಾಶಿಗಳ ಜನರಿಗೆ ಲಾಭ ಸಿಗಲಿದೆ.  

Written by - Nitin Tabib | Last Updated : Apr 24, 2022, 01:30 PM IST
  • ಈ ರಾಶಿಗಳಿಗೆ ಮುಂದಿನ ಎರಡೂವರೆ ತಿಂಗಳು ಉತ್ತಮವಾಗಿರಲಿದೆ
  • ಎರಡೂವರೆ ತಿಂಗಳುಗಳವರೆಗೆ ಶನಿ ದೆಸೆಯಿಂದ ಮುಕ್ತರಾಗಲಿದ್ದಾರೆ.
  • ಶನಿ ಈ ಅವಧಿಯಲ್ಲಿ ತುಂಬಾ ನಿಧಾನಗತಿಯಲ್ಲಿ ಚಲಿಸಲಿದ್ದಾನೆ.
ಮಿಥುನ-ತುಲಾ ರಾಶಿಯವರಿಗೊಂದು ಸಂತಸದ ಸುದ್ದಿ, ಒಂದೂವರೆ ತಿಂಗಳು ನಿಷ್ಕ್ರೀಯವಾಗಲಿದೆ ಈ ಗ್ರಹದ ಪ್ರಭಾವ title=
Shani Transit Latest Update

Good News For Gemini And Libra: ಮಿಥುನ ಮತ್ತು ತುಲಾ ರಾಶಿಯವರಿಗೆ ನಡೆಯುತ್ತಿರುವ ಶನಿಯ ಎರಡೂವರೆ ವರ್ಷಗಳ ಕಾಟ ಮುಂದಿನ ಎರಡೂವರೆ ತಿಂಗಳವರೆಗೆ ನಿಷ್ಕ್ರಿಯಗೊಳ್ಳಲಿದೆ ಅಥವಾ ಶನಿಯ ಪ್ರಭಾವದಿಂದ ನಿಮಗೆ ಸ್ವಲ್ಪ ಕಾಲ ಮುಕ್ತಿ ಸಿಗಲಿದೆ. 29 ಏಪ್ರಿಲ್ 2022 ರಂದು, ಕರ್ಮದ ಫಲ ನೀಡುವ ಶನಿಯು ತನ್ನ ಮೊದಲ ಮನೆಯಾಗಿರುವ ಮಕರ ರಾಶಿಯನ್ನು ತೊರೆದು ತನ್ನ ಎರಡನೇ ಮನೆಯಾಗಿರುವ ಕುಂಭ ರಾಶಿಯನ್ನು ಪ್ರವೆಶಿಸಲಿದ್ದಾನೆ. ಅವನ ಈ ಪ್ರವೇಶ ಮಿಥುನ ಮತ್ತು ತುಲಾ ರಾಶಿಯ ಜನರಿಗೆ ಲಾಭ ನೀಡಲಿದೆ. ಏಕೆಂದರೆ ಈ ಅವಧಿಯಲ್ಲಿ ಎರಡೂವರೆ ತಿಂಗಳುಗಳ ಕಾಲ ಶನಿ ಪ್ರಭಾವದಿಂದ ಅವರಿಗೆ ಮುಕ್ತಿ ಸಿಗಲಿದೆ.

ಶನಿಯ ಎರಡೂವರೆ ವರ್ಷಗಳ ದೆಸೆ ಹೇಗೆ ನಿರ್ಮಾಣಗೊಳ್ಳುತ್ತದೆ?
ಶನಿಯು ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಇರುತ್ತಾನೆ. ಶನಿಯು ಯಾವ ರಾಶಿಯ ಚತುರ್ಥ ಹಾಗೂ ಅಷ್ಟಮ ಭಾವದಲ್ಲಿ ವಿರಾಜಮಾನನಾಗಿರುತ್ತಾನೆಯೋ, ಆ ರಾಶಿಗಳಿಗೆ ಶನಿಯ ಎರಡೂವರೆ ವರ್ಷಗಳ ದೆಸೆ ನಡೆಯುತ್ತಿದೆ ಎಂದರ್ಥ. ಪ್ರಸ್ತುತ ಮಿಥುನ ಹಾಗೂ ಶನಿ ರಾಶಿಗಳ ಮೇಲೆ ಶನಿಯ ಎರಡೂವರೆ ವರ್ಷಗಳ ಕಾಟ ನಡೆಯುತ್ತಿದೆ. ಶನಿಯು ಮಕರ ರಾಶಿಯಲ್ಲಿರುವುದರಿಂದ ಮಿಥುನ ರಾಶಿಯವರಿಗೆ ಎಂಟನೇ ಭಾವದಲ್ಲಿ ಹಾಗೂ ತುಲಾ ರಾಶಿಯ ನಾಲ್ಕನೇ ಭಾವದಲ್ಲಿ ವಿರಾಜಮಾನನಾಗಿದ್ದಾನೆ.

ಮಿಥುನ-ತುಲಾ ರಾಶಿಯವರು ಏನು ಮಾಡಬೇಕು?
ಮಿಥುನ ಮತ್ತು ತುಲಾ ರಾಶಿಯವರು ಈ ಎರಡೂವರೆ ತಿಂಗಳುಗಳಲ್ಲಿ ಸಾಕಷ್ಟು ಶ್ರಮವಹಿಸಬೇಕು. ನಿಮ್ಮ ಹಳೆಯ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ. ಏಕೆಂದರೆ ಶನಿಯು ಈ ಎರಡೂವರೆ ತಿಂಗಳುಗಳ ಕಾಲ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಆತನ ಪ್ರಭಾವ ಕಮ್ಮಿ ಇರಲಿದೆ, ಆದ್ದರಿಂದ ಕಾರ್ಯಚಟುವಟಿಕೆಯಲ್ಲಿ ತೊಡಗುವುದರಿಂದ ಸಾಕಷ್ಟು ಲಾಭವಿದೆ. ಹಿಂದಿನ ದಿನಗಳ ನೀವು ಕಂಡ ವೈಫಲ್ಯದಿಂದ ಹತಾಶರಾಗಿ ಕುಳಿತುಕೊಳ್ಳಬೇಡಿ. ಹೊಸ ಶಕ್ತಿಯೊಂದಿಗೆ ನಿಮ್ಮ ಕೆಲಸವನ್ನು ಪ್ರಾರಂಭಿಸಿ. ಆತ್ಮಸ್ಥೈರ್ಯದಿಂದ ಮುಂದುವರೆಯಿರಿ. ಆದರೆ ಈ ಎರಡೂವರೆ ತಿಂಗಳುಗಳ ಅವಧಿಯಲ್ಲಿ ಅಹಂಕಾರದ ಭಾವನೆ  ಬರದೆ ಇರಲಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಇದನ್ನೂ ಓದಿ-Astro Prediction: ಈ ಬಾರಿ ಈ ರಾಶಿಯ ಜನರಿಗೆ ಸಿಗಲಿದೆ ಜಬರ್ದಸ್ತ್ ಅಪ್ರೆಸಲ್

ಮಿಥುನ ರಾಶಿಯವರಿಗೆ ಖುಷಿಯಾಗಬೇಕು
ಶನಿಯ ಸ್ವಭಾವದಲ್ಲಿ ಹಾಸ್ಯ, ಸಂತೋಷ ಮತ್ತು ಪ್ರಸನ್ನತೆ ತುಂಬಾ ಕಡಿಮೆ ಇರುತ್ತದೆ, ಅಂದರೆ, ನ್ಯಾಯದೆವತೆಯಂತೆ ತುಂಬಾ ಗಂಭೀರ ಮತ್ತು ಮನಸೋ ಇಚ್ಛೆಯಿಂದ ಹಾಗೂ  ಪರಿಶ್ರಮದಿಂದ ಮಾಡಿದ ಕರ್ಮಗಳನ್ನು ತುಂಬಾ ಹತ್ತಿರದಿಂದ ಗಮನಿಸುತ್ತಾನೆ. ಅಷ್ಟೇ ಅಲ್ಲ ಈ ಕರ್ಮಗಳ ಆಧಾರದ ಮೇಲೆಯೇ ಆತ ಎಲ್ಲರಿಗೂ ಶುಭ ಹಾಗೂ ಅಶುಭ ಫಲಗಳನ್ನು ನೀಡುತ್ತಾನೆ. ಮಿಥುನ ರಾಶಿಯವರ ಮೂಲ ಸ್ವಭಾವದಲ್ಲಿ ಸಂತೋಷವಿದೆ. ಒಳ್ಳೆಯ ಮಾತುಗಳನ್ನಾಡುತ್ತ ವಿನೋದ ಮತ್ತು ಹಾಸ್ಯಭರಿತವಾಗಿ ಇವರು ತಮ್ಮ ಜೀವನವನ್ನು ಕಳೆಯಲು ಬಯಸುತ್ತಾರೆ.  ಅತಿಯಾದ ಒತ್ತಡ ಅಥವಾ ಸಂಘರ್ಷದ ಪರಿಸ್ಥಿತಿ ಎದುರಾದರೆ, ಇವರ ಮೂಲ ಸ್ವಭಾವವು ಕಾರ್ಯನಿರತತೆಯಿಂದಾಗಿ ನಿಗ್ರಹಿಸಲ್ಪಡುತ್ತದೆ. ಹೀಗಾಗಿ ಇದೀಗ ಎರಡೂವರೆ ತಿಂಗಳು ಮಿಥುನ ರಾಶಿಯ ಜನರು ಆನಂದ ಪಡೆಯಬೇಕು, ಯಾವ ಕೆಲಸ ಮಾಡಿದರೂ ಅದನ್ನು ಸಂತೋಷದಿಂದ, ಉತ್ಸಾಹದಿಂದ ಮಾಡಬೇಕು. ಈ ಎರಡೂವರೆ ತಿಂಗಳುಗಳಲ್ಲಿ ನಿಮ್ಮ ಕೆಲಸವನ್ನು ಎಂದಿಗೂ ಹೊರೆ ಎಂದು ಪರಿಗಣಿಸಬೇಡಿ. ಕಚೇರಿಯಲ್ಲಿ ಏನೇ ಕೆಲಸ ಕೊಟ್ಟರೂ ಖುಷಿಯಿಂದ, ಉತ್ಸಾಹದಿಂದ ಮಾಡಿ.

ಇದನ್ನೂ ಓದಿ-Budh Rashi Parivartan: ಬುಧನ ರಾಶಿ ಬದಲಾವಣೆ ಈ 6 ರಾಶಿಗಳ ಭಾಗ್ಯ ಬದಲಾಯಿಸಲಿದೆ

ತುಲಾ ರಾಶಿಯವರು ತಮ್ಮ ವಾಹನವನ್ನು ಬದಲಾಯಿಸಬಹುದು
ತುಲಾ ರಾಶಿಯವರಿಗೆ, ಈ ಸಮಯವು ಸುಖದ ಸಂಪನ್ಮೂಲಗಳನ್ನು ಬದಲಾಯಿಸುವ ಅಥವಾ ಹೆಚ್ಚಿಸುವ ಸಮಯವಾಗಿದೆ. ಒಂದು ವೇಳೆ ದೀರ್ಘ ಕಾಲದಿಂದ ಮನೆಯಲ್ಲಿ ನೀವು ಯಾವುದೇ ಬದಲಾವಣೆ ಮಾಡಲು ಅಥವಾ ಮನೆ ಬದಲಾಯಿಸಲು ಯೋಜನೆ ರೂಪಿಸುತ್ತಿದ್ದರೆ, ಈ ಅವಧಿಯಲ್ಲಿ ಅದನ್ನು ನೀವು ಮಾಡಬಹುದು. ನೀವು ವಾಹನವನ್ನು ಬದಲಾಯಿಸಲು ಅಥವಾ ಖರೀದಿಸಲು  ಯೋಚಿಸುತ್ತಿದ್ದರೆ, ಈ ಸಮಯ ನಿಮಗೆ ಉತ್ತಮವಾಗಿರಲಿದೆ. ಕುಟುಂಬ ಸದಸ್ಯರ ಜೊತೆಗೆ ಸಂಬಂಧಗಳು ಹಳಸಿದ್ದರೆ, ಅಹಂಕಾರವನ್ನು ತೊರೆದು ಪ್ರೀತಿಯಿಂದ ಅವರನ್ನು ಹತ್ತಿರಕ್ಕೆ ಬರಮಾಡಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದ ತುಲಾ ರಾಶಿಯ ಜನರಿಗೆ ಅದೃಷ್ಟವಶಾತ್ ಈ ಅವಧಿಯಲ್ಲಿ ನಡೆಯುವ ಪರೀಕ್ಷೆಯಲ್ಲಿ ಸರಳ ಪ್ರಶ್ನೆಗಳನ್ನು ಬರಲಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News