Shani Dev: ಶನಿ ಮಹಾರಾಜನ ನೆಚ್ಚಿನ ರಾಶಿ ಯಾವುದು ಗೊತ್ತಾ? ಈ ರಾಶಿಗಳ ಜನರಿಗೆ ಶನಿ ಸತಾಯಿಸುವುದಿಲ್ಲ

Shani Dev: ಶನಿ ದೇವ ಯಾವಾಗಲು ಕೆಟ್ಟ ಫಲಗಳನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ. ಆದರೆ, ಅದು ಸರಿಯಾದ ವಿಧಾನವಲ್ಲ. ಏಕೆಂದರೆ, ಶನಿ ದೇವ ಮಕರ ಹಾಗೂ ಕುಂಭ ರಾಶಿಗಳಿಗೆ ಸ್ವಾಮಿ ಗ್ರಹ. ಈ ಎರಡೂ ರಾಶಿಗಳನ್ನು ಹೊರತುಪಡಿಸಿ ಮತ್ತೊಂದು ರಾಶಿಗೆ ಶನಿಗೆ ತುಂಬಾ ಇಷ್ಟವಾದ ರಾಶಿ ಎಂದು ಹೇಳಲಾಗುತ್ತದೆ.   

Written by - Nitin Tabib | Last Updated : Jul 3, 2022, 04:11 PM IST
  • ಶನಿ ದೇವ ಯಾವಾಗಲು ಕೆಟ್ಟ ಫಲಗಳನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ.
  • ಆದರೆ, ಅದು ಸರಿಯಾದ ವಿಧಾನವಲ್ಲ.
  • ಏಕೆಂದರೆ, ಶನಿ ದೇವ ಮಕರ ಹಾಗೂ ಕುಂಭ ರಾಶಿಗಳಿಗೆ ಸ್ವಾಮಿ ಗ್ರಹ.
Shani Dev: ಶನಿ ಮಹಾರಾಜನ ನೆಚ್ಚಿನ ರಾಶಿ ಯಾವುದು ಗೊತ್ತಾ? ಈ ರಾಶಿಗಳ ಜನರಿಗೆ ಶನಿ ಸತಾಯಿಸುವುದಿಲ್ಲ title=
Favorite Zodiac Sign Of Shani

Shani Dev: ನವಗ್ರಹಗಳಲ್ಲಿ ಶನಿ ದೇವನ ಸ್ಥಾನ ತುಂಬಾ ವಿಶೇಷವಾಗಿದೆ. ಶನಿಯ ನೆರಳು, ಶನಿಯ ದೃಷ್ಠಿ, ಶನಿಯ ದೆಸೆ, ಸಾಡೇಸಾತಿ ಹಾಗೂ ಶನಿಯ ಎರಡೂವರೆ ವರ್ಷಗಳ ಕಾಟಕ್ಕೆ ಮನುಷ್ಯರೇ ಅಲ್ಲ, ದೇವತೆಗಳು ಕೂಡ ಹೆದರುತ್ತಾರೆ. ಶನಿ ಚಾಲಿಸಾದಿಂದಲೂ ಕೂಡ ಇದು ಸಾಬೀತಾಗುತ್ತದೆ. 

ಪೌರಾಣಿಕ ಗ್ರಂಥಗಳ ಪ್ರಕಾರ ದೇವಾದಿದೇವ ಮಹಾದೇವನಿಗೂ ಕೂಡ ಶನಿಯ ಪ್ರಕೋಪ ಎದುರಿಸಬೇಕಾಯಿತು ಎನ್ನಲಾಗುತ್ತದೆ. ಶನಿಯ ನೆರಳಿನಿಂದ ತಪ್ಪಿಸಿಕೊಳ್ಳಲು ಶಿವ ಆನೆಯ ರೂಪ ಧರಿಸಿದ್ದರು. ಅಂದರೆ, ಶಿವನಿಗೆ ದೇವ ಯೋನಿಯನ್ನು ತೊರೆದು ಪ್ರಾಣಿಗಳ ಯೋನಿಯನ್ನೇ ಪ್ರವೇಶಿಸಬೇಕಾಯಿತು ಎನ್ನಲಾಗುತ್ತದೆ. ಶನಿಯ ಪ್ರಭಾವ ಈ ರೀತಿ ಇರುತ್ತದೆ. 

ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಎರಡು ರಾಶಿಗಳಿಗೆ ಅಧಿಪತಿ. ಮಕರ ಹಾಗೂ ಕುಂಭ ರಾಶಿಗಳಿಗೆ ಶನಿ ಸ್ವಾಮಿ. ಇದಲ್ಲದೆ ತುಲಾ ರಾಶಿಯನ್ನು ಶನಿಯ ಉಚ್ಛ ರಾಶಿ ಹಾಗೂ ಮೇಷ ರಾಶಿಯನ್ನು ಶನಿಯ ನೀಚ ರಾಶಿ ಎಂದು ಪರಿಗಣಿಸಲಾಗುತ್ತದೆ. 

ಇದನ್ನೂ ಓದಿ-Palmistry: ಬೆರಳುಗಳ ನಡುವಿನ ಇಂತಹ ಅಂತರವು ದುರದೃಷ್ಟವನ್ನು ಸೂಚಿಸುತ್ತದೆ!

ಶನಿಯ ನೆಚ್ಚಿನ ರಾಶಿ
ಜೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯನ್ನು ಶನಿಯ ನೆಚ್ಚಿನ ರಾಶಿ ಎಂದು ಕರೆಯಲಾಗುತ್ತದೆ. ತುಲಾ ರಾಶಿಯ ಜಾತಕದವರಿಗೆ ಶನಿ ಕೇವಲ ವಿಶೇಷ ಪರಿಸ್ಥಿತಿಗಳಲ್ಲಿ ಮಾತ್ರ ತೊಂದರೆ ನೀಡುತ್ತಾನೆ ಎನ್ನಲಾಗುತ್ತದೆ. ತಪ್ಪು ಅಥವಾ ಅನೈತಿಕ ಕೆಲಸಗಳನ್ನು ಮಾಡಿದರೆ ಮಾತ್ರ ಈ ರಾಶಿಯ ಜನರಿಗೆ ಶನಿ ಕಷ್ಟ ಕೊಡುತ್ತಾನೆ. ಇದಲ್ಲದೆ, ತುಲಾ ರಾಶಿಯ ಜನರಿಗೆ ಶನಿ ಸುಲಭವಾಗಿ ಸಫಲತೆಯನ್ನು ದಯಪಾಲಿಸುತ್ತಾನೆ. ಹೀಗಾಗಿ ಧೈರ್ಯದಿಂದಿರಿ ಹಾಗೂ ಪರಿಶ್ರಮಕ್ಕೆ ಹಿಂಜರಿಯಬೇಡಿ.

ಇದನ್ನೂ ಓದಿ-Guru Purnima 2022: ಗುರು ಪೂರ್ಣಿಮಾ ದಿನ ರಾಶಿಗಳಿಗೆ ಅನುಗುಣವಾಗಿ ದಾನ ಮಾಡುವುದು ಸಾಕಷ್ಟು ಲಾಭ ನೀಡುತ್ತದೆ

ಶನಿಯನ್ನು ಹೇಗೆ ಪ್ರಸನ್ನಗೊಳಿಸಬೇಕು?
ಶನಿಯನ್ನು ಪ್ರಸನ್ನಗೊಳಿಸಲು ನಿಯಮ, ಶಿಸ್ತನ್ನು ಪಾಲಿಸಬೇಕು. ಸೋಮಾರಿತನದಿಂದ ದೂರವಿರಿ ಹಾಗೂ ಅಗತ್ಯವಿರುವವರಿಗೆ ಹಾಗೂ ನಿರ್ಗತಿಕರಿಗೆ ಆಗ್ಗಾಗ ನೆರವು ನೀಡಿ. ಇತರರಿಗೆ ಸಹಾಯ ಮಾಡುವ ಹಾಗೂ ಕಷ್ಟದಲ್ಲಿರುವವರಿಗೆ ಸ್ಪಂದಿಸುವವರರಿಗೆ ಶನಿ ಎಂದಿಗೂ ಕೂಡ ಸತಾಯಿಸುವುದಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News