ಈ ರಾಶಿಯವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ ಶನಿ-ಶುಕ್ರನ ಷಡಷ್ಟಕ ಯೋಗ

ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 24, 2022 ರವರೆಗೆ, ಶನಿ-ಶುಕ್ರರು ಷಡಾಷ್ಟಕ ಯೋಗವನ್ನು ರೂಪಿಸುತ್ತಾರೆ. ಈ ಸಮಯದಲ್ಲಿ, 4 ರಾಶಿಯ ಜನರು ತುಂಬಾ ಜಾಗರೂಕರಾಗಿರಬೇಕು. 

Written by - Ranjitha R K | Last Updated : Jul 21, 2022, 02:17 PM IST
  • ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಶನಿ
  • ಆಗಸ್ಟ್ 31 ರಂದು, ಶುಕ್ರ ಸಿಂಹ ರಾಶಿ ಪ್ರವೇಶ
  • 24 ದಿನಗಳವರೆಗೆ ಜಾಗರೂಕರಾಗಿರಬೇಕು 4 ರಾಶಿಯವರು
ಈ ರಾಶಿಯವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ ಶನಿ-ಶುಕ್ರನ ಷಡಷ್ಟಕ ಯೋಗ title=
shadakshara yoga (file photo)

ಬೆಂಗಳೂರು : ಶನಿ ಮಹಾತ್ಮ ಪ್ರಸ್ತುತ ಮಕರ ರಾಶಿಯಲ್ಲಿದ್ದು ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಮತ್ತೊಂದೆಡೆ, ಶುಕ್ರ ಗ್ರಹವು ಕರ್ಕ ರಾಶಿಯಲ್ಲಿದೆ. ಆಗಸ್ಟ್ 31 ರಂದು, ಶುಕ್ರ ಗ್ರಹವು ಕರ್ಕವನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಹೀಗಾದಾಗ ಶನಿ ಮತ್ತು ಶುಕ್ರರು ಒಟ್ಟಾಗಿ ಷಡಾಷ್ಟಕ ಯೋಗವನ್ನು ಹೊಂದುತ್ತಾರೆ. ಷಡಾಷ್ಟಕ ಯೋಗ ಎಂದರೆ ಶುಕ್ರನು ಶನಿಯಿಂದ ಅಷ್ಟಕನಾಗಿರುತ್ತಾನೆ. ಶುಕ್ರನು ಶನಿಯಿಂದ 6 ಮನೆಗಳ ದೂರದಲ್ಲಿರುತ್ತಾನೆ. ಸೆಪ್ಟೆಂಬರ್ 24ರವರೆಗೆ ಶುಕ್ರ ಈ ಸ್ಥಾನದಲ್ಲಿರುತ್ತಾನೆ. ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹದ ಷಡಷ್ಟಕ ಯೋಗವನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಶನಿ ಮತ್ತು ಶುಕ್ರರ ಷಡಾಷ್ಟಕ ಯೋಗವೂ ಹಾಗೆಯೇ. 

24 ದಿನಗಳವರೆಗೆ  ಜಾಗರೂಕರಾಗಿರಬೇಕು  4 ರಾಶಿಯವರು  : 
ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 24, 2022 ರವರೆಗೆ, ಶನಿ-ಶುಕ್ರರು ಷಡಾಷ್ಟಕ ಯೋಗವನ್ನು ರೂಪಿಸುತ್ತಾರೆ. ಈ ಸಮಯದಲ್ಲಿ, 4 ರಾಶಿಯ ಜನರು ತುಂಬಾ ಜಾಗರೂಕರಾಗಿರಬೇಕು. 

ವೃಷಭ: ಷಡಷ್ಟಕ ಯೋಗವು ವೃಷಭ ರಾಶಿಯವರಿಗೆ ಅದೃಷ್ಟದ ಬಾಗಿಲು ಮುಚ್ಚಬಹುದು. ಈ ಅವಧಿಯಲ್ಲಿ ಈ ಜನರು ಆಲಸ್ಯವನ್ನು ಬಿಡಬೇಕು.  ಇಲ್ಲದಿದ್ದರೆ ವೃತ್ತಿಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಇದನ್ನೂ ಓದಿ : Vastu Tips: ಮರೆತು ಕೂಡ ಪೊರಕೆಯನ್ನು ಮನೆಯ ಈ ದಿಕ್ಕಿನಲ್ಲಿ ಇಡಬೇಡಿ

ಮಿಥುನ: ಷಡಷ್ಟಕ ಯೋಗವು ಮಿಥುನ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಅಪಘಾತಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಇದಲ್ಲದೆ, ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಧನು: ಶನಿ-ಶುಕ್ರರ ಷಡಾಷ್ಟಕ ಯೋಗವು ಧನು ರಾಶಿಯವರ ಬಡ್ತಿಗೆ ತಡೆ ಯಾಗಬಹುದು. ಕಹಿ ಮಾತುಗಳಿಂದ ಅವರಿಗೆ ಹಾನಿಯಾಗಬಹುದು. ಕೆಲಸದ ಸ್ಥಳದಲ್ಲಿ  ಸಾಧ್ಯವಾದಷ್ಟು ಸಭ್ಯರಾಗಿರುವುದು ಉತ್ತಮ.  ಕೌಟುಂಬಿಕ ಆಸ್ತಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಬಹುದು. 

ಇದನ್ನೂ ಓದಿ : ಆಹಾರ ಬಡಿಸುವಾಗ ಮರೆತೂ ಸಹ ಇಂತಹ ತಪ್ಪುಗಳನ್ನು ಮಾಡದಿರಿ

ಕುಂಭ : ಷಡಷ್ಟಕ ಯೋಗ ವೈವಾಹಿಕ ಜೀವನದಲ್ಲಿ ತೊಂದರೆ ತರಬಹುದು. ಅದರಲ್ಲೂ ಹೆಚ್ಚಿನ ಸಮಯ ಪ್ರವಾಸದಲ್ಲಿ ಇರುವವರು ತಮ್ಮ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲ ಮತ್ತು ಇದು ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News