ಶನಿ ರಾಶಿ ಪರಿವರ್ತನೆ: ಇನ್ನು 3 ದಿನಗಳಲ್ಲಿ ಬದಲಾಗಲಿದೆ ಈ ರಾಶಿಯವರ ಭವಿಷ್ಯ

ಶನಿ ಗೋಚಾರ: ಇನ್ನು ಕೇವಲ ಮೂರು ದಿನಗಳಲ್ಲಿ ನ್ಯಾಯದ ದೇವರು ಶನಿಯು ರಾಶಿಯನ್ನು ಬದಲಾವಣೆ ಮಾಡಲಿದ್ದಾನೆ. ಈ ಸಮಯವು ನಿಮ್ಮ ಮೇಲೆ ಏನು ಪರಿಣಾಮ ಬೀರಲಿದೆ ತಿಳಿಯಿರಿ...

Written by - Yashaswini V | Last Updated : Apr 26, 2022, 01:01 PM IST
  • ಕುಂಭ ರಾಶಿಯಲ್ಲಿ ಶನಿಯ ಪ್ರವೇಶ
  • ತಿಂಗಳಾಂತ್ಯಕ್ಕೆ ಕರ್ಮಫಲದಾತ ಶನಿ ದೇವನು ರಾಶಿಯನ್ನು ಬದಲಾಯಿಸುತ್ತಿದ್ದಾನೆ
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯವು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲನ್ನು ತೆರೆಯಲಿದೆ
ಶನಿ ರಾಶಿ ಪರಿವರ್ತನೆ: ಇನ್ನು 3 ದಿನಗಳಲ್ಲಿ ಬದಲಾಗಲಿದೆ ಈ ರಾಶಿಯವರ ಭವಿಷ್ಯ  title=
Saturn Transit Effect

ಶನಿ ಸಂಚಾರ 2022 ಪರಿಣಾಮ: ಜ್ಯೋತಿಷ್ಯದ ಪ್ರಕಾರ, ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿಯು ಎರಡೂವರೆ ವರ್ಷಗಳಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತಾನೆ. 2021 ರಲ್ಲಿ ಶನಿಯ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಈಗ ಶನಿಯು ಏಪ್ರಿಲ್ 29 ರಂದು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ನಾಯದ ದೇವರು ಎಂದೇ ಪರಿಗಣಿಸಲಾಗಿರುವ ಶನಿಯ ಈ ಸಂಚಾರವು 3 ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ ಎನ್ನಲಾಗಿದೆ. ಮತ್ತೊಂದೆಡೆ, ಕೆಲವು ರಾಶಿಯವರಿಗೆ ಶನಿಯ ಸಾಡೇ ಸಾತಿ ಪ್ರಭಾವ ಆರಂಭವಾಗಲಿದೆ, ಇನ್ನೂ ಕೆಲವು ರಾಶಿಯವರಿಗೆ ಶನಿ ಧೈಯಾ ಪ್ರಭಾವ ಬೀರಲಿದೆ.  

ಕುಂಭ ರಾಶಿಗೆ ಶನಿ ಪ್ರವೇಶ: ಈ ರಾಶಿಯವರಿಗೆ ಅದೃಷ್ಟ:
ಮೇಷ ರಾಶಿ: 

ಏಪ್ರಿಲ್ 29 ರಂದು ಕುಂಭ ರಾಶಿಗೆ ಶನಿಯ ಪ್ರವೇಶವು  ಮೇಷ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಅವರ ಇಷ್ಟಾರ್ಥಗಳು ಈಡೇರುತ್ತವೆ. ಶನಿದೇವನು ಬಹಳಷ್ಟು ಸಂಪತ್ತನ್ನು ಕರುಣಿಸಲಿದ್ದಾನೆ. ವೃತ್ತಿ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಬಡ್ತಿ ಪಡೆಯುವ ಸಂಪೂರ್ಣ ಅವಕಾಶಗಳಿವೆ. ವ್ಯಾಪಾರಸ್ಥರ ಲಾಭ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ, ಸಮಯವು ಎಲ್ಲಾ ವಿಷಯಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. 

ಇದನ್ನೂ ಓದಿ- Shani Gochar: ಎರಡೂವರೆ ವರ್ಷಗಳ ಕಷ್ಟದ ನಂತರ ಶನಿ ಕಾಟದಿಂದ ಮುಕ್ತಿ ಪಡೆಯಲಿದ್ದಾರೆ ಈ ರಾಶಿಯ ಜನ

ವೃಷಭ ರಾಶಿ:
ಶನಿಯು ರಾಶಿಯನ್ನು ಬದಲಾಯಿಸಿದ ತಕ್ಷಣ, ವೃಷಭ ರಾಶಿಯವರಿಗೆ ಅದೃಷ್ಟವು ಎಚ್ಚರಗೊಳ್ಳುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಕೆಲಸ ಬದಲಾಯಿಸಲು ಬಯಸುವವರಿಗೆ ಅವರ ಆಯ್ಕೆಯ ಕೆಲಸ ಸಿಗುತ್ತದೆ. ಆದಾಯದಲ್ಲಿ ದೊಡ್ಡ ಏರಿಕೆಯಾಗಲಿದೆ. ವ್ಯಾಪಾರ ಮಾಡುವ ವೃಷಭ ರಾಶಿಯವರಿಗೆ ಈ ಸಮಯವು ಸಾಕಷ್ಟು ಲಾಭವನ್ನು ನೀಡುತ್ತದೆ. ಅವರು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಅದಕ್ಕಾಗಿ ಶುಭ ಸಮಯ ಇದಾಗಿದೆ.

ಇದನ್ನೂ ಓದಿ- Shani Gochar: 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ಪ್ರವೇಶ, ಬೆಳಗಲಿದೆ ಈ ರಾಶಿಯವರ ಭಾಗ್ಯ

ಧನು ರಾಶಿ: 
ಶನಿ ಸಂಕ್ರಮಣವು ಧನು ರಾಶಿಯ ಜನರಿಗೆ  ಸಾಡೇ ಸಾತಿ ಶನಿ ಪ್ರಭಾವದಿಂದ ಮುಕ್ತಿ ನೀಡುತ್ತದೆ ಮತ್ತು ಇದು ಅವರಿಗೆ ದೊಡ್ಡ ಪರಿಹಾರ ಎಂದು  ಸಾಬೀತುಪಡಿಸುತ್ತದೆ. ಸಾಡೇ ಸಾತಿ ಪ್ರಭಾವದಿಂದ ಹೊರ ಬಂದ ತಕ್ಷಣ ಅವರ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಶುಭ ಫಲಗಳು ಬರಲು ಪ್ರಾರಂಭಿಸುತ್ತವೆ. ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ. ಆರೋಗ್ಯ ಉತ್ತಮವಾಗಿರುತ್ತದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದವರಿಗೂ ಪರಿಹಾರ ದೊರೆಯುತ್ತದೆ. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News