30 ವರ್ಷಗಳ ನಂತರ ಶನಿ ಬದಲಾವಣೆ: ಈ ರಾಶಿಯವರಿಗೆ ಅದೃಷ್ಟ, ಈ 2 ರಾಶಿಯವರಿಗೆ ಅಪಾಯ

ಶನಿಯ ರಾಶಿ ಬದಲಾವಣೆಯು ಪ್ರತಿಯೊಬ್ಬರ ಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಶನಿಯು ತನ್ನ ರಾಶಿಯನ್ನು ಬದಲಾಯಿಸುತ್ತಾನೆ.

Written by - Puttaraj K Alur | Last Updated : Dec 25, 2021, 11:47 AM IST
  • ಶನಿಯ ರಾಶಿ ಬದಲಾವಣೆಯು ಪ್ರತಿಯೊಬ್ಬರ ಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ
  • ಶನಿದೇವನು 2022ರಲ್ಲಿ ಏಪ್ರಿಲ್ 29ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ
  • 2022ರಲ್ಲಿ ಶನಿ ಕುಂಭ ರಾಶಿ ಪ್ರವೇಶಿಸಿದ ಕೂಡಲೇ ಧನು ರಾಶಿಯವರಿಗೆ ಸಾಡೇ ಸತಿ ದೂರವಾಗುತ್ತದೆ
30 ವರ್ಷಗಳ ನಂತರ ಶನಿ ಬದಲಾವಣೆ: ಈ ರಾಶಿಯವರಿಗೆ ಅದೃಷ್ಟ, ಈ 2 ರಾಶಿಯವರಿಗೆ ಅಪಾಯ title=
30 ವರ್ಷಗಳ ನಂತರ ಶನಿ ಬದಲಾವಣೆ

ನವದೆಹಲಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನು ಯಾರಿಗಾದರೂ ದಯೆ ತೋರಿದರೆ ಅದೃಷ್ಟ ಬೆಳಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆ ವ್ಯಕ್ತಿಯ ಜೀವನವು ಸಂತೋಷದಿಂದ ತುಂಬಿರುತ್ತದೆ. ಅದೇ ರೀತಿ ಶನಿದೇವನ ವಕ್ರ ಕಣ್ಣುಗಳು ಯಾರ ಮೇಲಾದರೂ ಬಿದ್ದಾಗ ಆ ವ್ಯಕ್ತಿಯ ಜೀವನದಲ್ಲಿ ಬೀರುಗಾಳಿಯೇ ಎಳುತ್ತದೆ. ಇಂತಹ ವ್ಯಕ್ತಿಗಳು ಜೀವನದಲ್ಲಿ ಪೆಟ್ಟು ತಿನ್ನುತ್ತಿರುತ್ತಾರೆ. ಇಂತವರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಡಲಿದ್ದು, ಬಡತನದ ಸ್ಥಿತಿಯನ್ನು ತಲುಪುತ್ತಾರೆ.

ಶನಿಯ ರಾಶಿ ಬದಲಾವಣೆ(Shani Rashi Parivartan 2022)ಯು ಪ್ರತಿಯೊಬ್ಬರ ಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಶನಿಯು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಶನಿಯು ಪ್ರಸ್ತುತ ಮಕರ ರಾಶಿಯಲ್ಲಿದೆ. 2022ರಲ್ಲಿ ಶನಿ (ಶನಿ ಗೋಚರ 2022) ತನ್ನದೇ ಆದ ರಾಶಿಚಕ್ರದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿದೇವನು ತನ್ನ ಸ್ವಂತ ರಾಶಿಗೆ ಬರುವುದರಿಂದ ಶನಿ ಸಾಡೇ ಸಾತಿ(Shani Sade Sati) ಮತ್ತು ಶನಿದೆಸೆ (Shani Dhaiya) ಯಾವ ರಾಶಿಯ ಜನರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ.

ಇದನ್ನೂ ಓದಿ: Grah Dosh: ಪ್ರತಿ ಗ್ರಹದ ಅಶುಭ ಪರಿಣಾಮವನ್ನು ನಿವಾರಿಸುತ್ತೆ ಈ ಶಕ್ತಿಯುತ ಪರಿಹಾರ

30 ವರ್ಷಗಳ ನಂತರ ರಾಶಿ ಬದಲಾವಣೆ  

ಶನಿದೇವನು 2022ರಲ್ಲಿ ಏಪ್ರಿಲ್ 29ರಂದು ಕುಂಭ ರಾಶಿ(Shani In Kumbh Rashi Effect)ಯನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಎರಡೂವರೆ ವರ್ಷಕ್ಕೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ, 3 ವರ್ಷಗಳ ನಂತರ ಶನಿಯು ತನ್ನದೇ ಆದ ರಾಶಿಚಕ್ರ ಚಿಹ್ನೆ ಕುಂಭಕ್ಕೆ ಮರಳುತ್ತದೆ.

ಸಾಡೇ ಸತಿ ಯಾವ ರಾಶಿಯ ಮೇಲೆ ಬೀರುವ ಪರಿಣಾಮ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2022ರಲ್ಲಿ ಶನಿಯು ಕುಂಭ ರಾಶಿ(Shani Gochar 2022)ಯನ್ನು ಪ್ರವೇಶಿಸಿದ ಕೂಡಲೇ ಧನು ರಾಶಿಯವರಿಗೆ ಸಾಡೇ ಸತಿ ದೂರವಾಗುತ್ತದೆ. ಆದರೆ ಸಾಡೇ ಸಾತಿಯ ಮೊದಲ ಹಂತವು ರಾಶಿಚಕ್ರದ ಕೊನೆಯ ಚಿಹ್ನೆಯಾದ ಮೀನದಲ್ಲಿ ಪ್ರಾರಂಭವಾಗುತ್ತದೆ. ಇನ್ನೊಂದೆಡೆ ಕುಂಭ ರಾಶಿಯಂದು 2ನೇ ಹಂತದ ಸಾಡೇ ಸತಿ ಆರಂಭವಾಗಲಿದೆ. ಇದಲ್ಲದೇ ಮಕರ ರಾಶಿಯಲ್ಲಿ ಸಾಡೇ ಸತಿಯ ಕೊನೆಯ ಘಟ್ಟ ಆರಂಭವಾಗಲಿದೆ.

ಇದನ್ನೂ ಓದಿ: ಹೊಸ ವರ್ಷದಲ್ಲಿ ಈ ರಾಶಿಯವರ ಅದೃಷ್ಟ ತೆರೆಯಲಿದೆ, ಸಿಗಲಿದೆ ಪದೋನ್ನತಿ

2022ರಲ್ಲಿ ಶನಿದೆಸೆ ಮತ್ತು ಶನಿ ಸಾಡೇ ಸಾತಿ

2022ರಲ್ಲಿ ಶನಿಯ ಸಂಕ್ರಮಣದ ನಂತರ ಶನಿದೆಸೆ 2 ರಾಶಿಚಕ್ರ ಚಿಹ್ನೆ(Shani Transit 2022)ಗಳಲ್ಲಿ ಪ್ರಾರಂಭವಾಗುತ್ತದೆ. 2022ರಲ್ಲಿ ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಚಿಹ್ನೆಗಳು ಶನಿದೆಸೆ ಅಡಿಯಲ್ಲಿ ಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕರ್ಕ ಮತ್ತು ವೃಶ್ಚಿಕ ರಾಶಿಯವರು ಬಹಳ ಜಾಗರೂಕರಾಗಿರಬೇಕು. ಮತ್ತೊಂದೆಡೆ ಮಿಥುನ ಮತ್ತು ತುಲಾ ರಾಶಿಯ ಜನರು ಶನಿದೆಸೆಯಿಂದ ಮುಕ್ತರಾಗುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News