ಕರಿಯಲು ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವುದರಿಂದ ಎದುರಾಗಲಿದೆ ಈ ರೋಗಗಳ ಅಪಾಯ

Risk of Reusing Cooking Oil: ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಮರು ಬಳಕೆ ಮಾಡುತ್ತಿದ್ದರೆ,   ಪದೇ ಪದೇ ಎಣ್ಣೆ ಬಿಸಿಯಾಗುತ್ತದೆ.  ಹೀಗೆ ಮಾಡಿದಾಗ ಅದರಲ್ಲಿ ಟಾಕ್ಸಿನ್ ಉಂಟಾಗುತ್ತದೆ.

Written by - Ranjitha R K | Last Updated : Jul 4, 2022, 01:11 PM IST
  • ಭಾರತದಲ್ಲಿ ಎಣ್ಣೆಯುಕ್ತ ಆಹಾರಗಳ ಪ್ರವೃತ್ತಿ ಬಹಳ ಹೆಚ್ಚಾಗಿದೆ.
  • ಎಣ್ಣೆಯನ್ನು ಮತ್ತೆ ಮತ್ತೆ ಕಾಯಿಸಿದರೆ ಏನಾಗುತ್ತದೆ ?
  • ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಕರಿಯಲು ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವುದರಿಂದ ಎದುರಾಗಲಿದೆ ಈ ರೋಗಗಳ ಅಪಾಯ title=
Risk of Reusing Cooking Oil (file photo)

ಬೆಂಗಳೂರು : Risk of Reusing Cooking Oil :  ಭಾರತದಲ್ಲಿ ಎಣ್ಣೆಯುಕ್ತ ಆಹಾರಗಳ ಪ್ರವೃತ್ತಿ ಬಹಳ ಹೆಚ್ಚಾಗಿದೆ. ಮನೆಯೇ ಆಗಲಿ ಹೊರಗೆ ಆಗಲಿ ಕರಿದ ವಸ್ತುಗಳನ್ನೇ ತಿನ್ನಲು ಇಷ್ಟಪಡುತ್ತೇವೆ. ಮನೆಯಲ್ಲಿ ಕರಿದ ಆಹಾರಗಳನ್ನು ತಯಾರಿಸಿದ ಬಳಿಕವೂ ಪ್ಯಾನ್‌ನಲ್ಲಿ ಬಹಳಷ್ಟು ಎಣ್ಣೆ ಉಳಿದಿರುತ್ತದೆ. ಅದನ್ನು ಸುಮ್ಮನೆ ಎಸೆಯಬೇಕಲ್ಲ ಎನ್ನುವ ಕಾರಣದಿಂದ ಮತ್ತೆ ಮತ್ತ ಅದನ್ನು ಬಳಸುತ್ತೇವೆ. ಇಲ್ಲಿ ಸ್ವಲ್ಪ ಎಣ್ಣೆ ಎಸೆಯುವುದನ್ನು ತಡೆಯಲು ಹೋಗಿ ಆರೋಗ್ಯಕ್ಕೆ ಎಷ್ಟು ದೊಡ್ಡ ಹಾನಿ ಮಾಡಿಕೊಳ್ಳುತ್ತೇವೆ ಎಂದು ನಮಗೆ ತಿಳಿದಿರುವುದಿಲ್ಲ. 

ಎಣ್ಣೆಯನ್ನು ಮತ್ತೆ ಮತ್ತೆ ಕಾಯಿಸಿದರೆ ಏನಾಗುತ್ತದೆ ? :
ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಮರು ಬಳಕೆ ಮಾಡುತ್ತಿದ್ದರೆ,  ಪದೇ ಪದೇ ಎಣ್ಣೆ ಬಿಸಿಯಾಗುತ್ತದೆ.  ಹೀಗೆ ಮಾಡಿದಾಗ ಅದರಲ್ಲಿ ಟಾಕ್ಸಿನ್ ಉಂಟಾಗುತ್ತದೆ.  ಆದುದರಿಂದ ಕರಿದ ಎಣ್ಣೆಯನ್ನು ಮತ್ತೆ ಮರು ಬಳಕೆ ಮಾಡಿದರೆ  ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ಖಾದ್ಯ ತೈಲವನ್ನು ಮರುಬಳಕೆ ಮಾಡುವುದರಿಂದ ದೇಹದಲ್ಲಿ  ಫ್ರೀ ರಾಡಿಕಲ್ ಗಳ ಸಮಸ್ಯೆ ಹೆಚ್ಚುತ್ತದೆ. 

ಇದನ್ನೂ ಓದಿ : Hing Water Benefits: ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಬೇಕೇ? ಈ ಪೇಯವನ್ನು ಟ್ರೈ ಮಾಡಿ ನೋಡಿ

1. ಕ್ಯಾನ್ಸರ್ ಅಪಾಯ :
ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡುವುದರಿಂದ  ಕ್ಯಾನ್ಸರ್‌ನಂತಹ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಏಕೆಂದರೆ ಹೀಗೆ ಮಾಡುವುದರಿಂದ ಶರೀರದ  ಬಹುತೇಕ ಕಡೆಗಳಲ್ಲಿ  ಉರಿಯೂತ ಹೆಚ್ಚಳು ಪ್ರಾರಂಭವಾಗುತ್ತದೆ. ಇದು ಕ್ರಮೇಣ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

2.  ಹೈ ಬಿಪಿ ಸಮಸ್ಯೆ :  
ಅಡುಗೆ ಎಣ್ಣೆಯನ್ನು  ಹೆಚ್ಚು ಬಿಸಿ ಮಾಡಿದರೆ, ಅದರ ರಾಸಾಯನಿಕ ಸಂಯೋಜನೆಯು ಬದಲಾಗಲು ಪ್ರಾರಂಭಿಸುತ್ತದೆ . ಇದು ಕೊಬ್ಬಿನಾಮ್ಲಗಳು ಮತ್ತು ರಾಡಿಕಲ್ ಗಳನ್ನು ಬಿಡುಗಡೆ ಮಾಡುತ್ತದೆ. ನಂತರ ಇದೇ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ : Blood Sugar ಏಕಾಏಕಿ ಏರಿಕೆಯಾದರೆ ಏನ್ಮಾಡ್ಬೇಕು? ಈ ಸಂಗತಿಗಳನ್ನು ನೆನಪಿನಲ್ಲಿಡಿ

3. ಹೃದ್ರೋಗಗಳ ಭಯ :
ಅಧಿಕ ತಾಪಮಾನದಲ್ಲಿ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡುವುದರಿಂದ ವಿಚಿತ್ರ ರೀತಿಯ ಹೊಗೆ ಹೊರಬರುತ್ತದೆ.  ಅದು ಕೆಟ್ಟ ಕೊಲೆಸ್ಟ್ರಾಲ್‌ಗೆ ಕಾರಣವಾಗುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಎದೆನೋವಿಗೆ ಕಾರಣವಾಗಬಹುದು.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News