Relationship Tips: ಮದುವೆ ಬಳಿಕ ನಿಮ್ಮ ಸ್ನೇಹಿತರೊಂದಿಗೆ ಈ 4 ವಿಷಯಗಳ ಬಗ್ಗೆ ಹಂಚಿಕೊಳ್ಳಬೇಡಿ!

ಮದುವೆಯ ನಂತರ ಆಪ್ತ ಸ್ನೇಹಿತರ ಬಳಿ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳಬಾರದು. ಖಾಸಗಿ ಮತ್ತು ವೈಯಕ್ತಿಯ ವಿಷಯಗಳ ಬಗ್ಗೆ ಬೇರೆಯವರೊಂದಿಗೆ ಹಂಚಿಕೊಳ್ಳುವುದು ನಿಮ್ಮ ಜೀವನಕ್ಕೆ ಮಾರಕವಾಗಬಹುದು.

Written by - Puttaraj K Alur | Last Updated : Sep 4, 2022, 10:50 AM IST
  • ಮದುವೆಯ ನಂತರ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ರಹಸ್ಯವಾಗಿಡಬೇಕು
  • ಮದುವೆ ನಂತರ ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಕುಟುಂಬದ ಮಾಹಿತಿ ಹಂಚಿಕೊಳ್ಳಬಾರದು
  • ವೈಯಕ್ತಿಯ ವಿಷಯಗಳು ಮತ್ತು ಆರ್ಥಿಕ ಸ್ಥಿತಿಗತಿಯ ಬಗ್ಗೆ ಆಪ್ತ ಸ್ನೇಹಿತರಲ್ಲಿ ಹೇಳಿಕೊಳ್ಳಬಾರದು
Relationship Tips: ಮದುವೆ ಬಳಿಕ ನಿಮ್ಮ ಸ್ನೇಹಿತರೊಂದಿಗೆ ಈ 4 ವಿಷಯಗಳ ಬಗ್ಗೆ ಹಂಚಿಕೊಳ್ಳಬೇಡಿ! title=
ಈ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ

ನವದೆಹಲಿ: ಸ್ನೇಹ ಸಂಬಂಧಕ್ಕೆ ವಿಶೇಷ ಸ್ಥಾನವಿದೆ. ಕೆಲವೊಮ್ಮೆ ಅದು ಪ್ರೀತಿಯ ಸಂಬಂಧಕ್ಕಿಂತ ಬಲವಾಗಿರುತ್ತದೆ. ‘ಸ್ನೇಹವು ಪ್ರೀತಿಗಿಂತ ಹೆಚ್ಚು ದುರಂತವಾಗಿದೆ, ಅದು ಪ್ರೀತಿಗಿಂತ ಹೆಚ್ಚು ಕಾಲ ಇರುತ್ತದೆ’ ಎಂದು ಪ್ರಸಿದ್ಧ ಐರಿಶ್ ಕವಿ ಆಸ್ಕರ್ ವೈಲ್ಡ್ ಹೇಳಿದ್ದಾರೆ. ಗೆಳೆತನ ಎಷ್ಟೇ ಗಟ್ಟಿಯಾಗಿದ್ದರೂ ಮದುವೆಯ ನಂತರ ಅದರ ಬಗೆಗಿನ ಅಭಿಪ್ರಾಯ ಸ್ವಲ್ಪ ಬದಲಾಗುತ್ತದೆ.

ಮದುವೆ ಬಳಿಕ ನೀವು ವೈವಾಹಿಕ ಜೀವನದಲ್ಲಿ ಮುಳುಗುತ್ತೀರಿ, ಆಗ ಸ್ನೇಹಿತರಿಗೆ ಕಡಿಮೆ ಸಮಯ ನೀಡಬೇಕಾಗುತ್ತದೆ. ಆದರೂ, ಸ್ನೇಹದ ಪ್ರಾಮುಖ್ಯತೆ ಕಡಿಮೆಯಾಗುವುದಿಲ್ಲ. ಆಗಾಗ ನೀವು ನಿಮ್ಮ ವೈಯಕ್ತಿಕ ವಿಷಯಗಳನ್ನು ನಿಮ್ಮ ಉತ್ತಮ ಸ್ನೇಹಿತನೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸುತ್ತೀರಿ. ನೀವು ಇದನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಯಾವ ವೈಯಕ್ತಿಕ ವಿಷಯಗಳ ಬಗ್ಗೆ ನೀವು ಸ್ನೇಹಿತರ ಜೊತೆಗೆ ಹಂಚಿಕೊಳ್ಳಬಾರದು ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.  

ಇದನ್ನೂ ಓದಿ: Vastu Tips: ಮನೆಗೆ ಶ್ರೆಯೋಭಿವೃದ್ಧಿ ತರುತ್ತದೆ ಈ ವೃಕ್ಷ, ಆದರೆ ವಾಸ್ತು ನಿಯಮಗಳ ಬಗ್ಗೆ ಕಾಳಜಿವಹಿಸಿ

ಈ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ

1. ವೈಯಕ್ತಿಕ ಫೋಟೋಗಳು, ವಿಡಿಯೋಗಳು ಮತ್ತು ಚಾಟ್‌ಗಳು

ಮದುವೆಯ ನಂತರ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ರಹಸ್ಯವಾಗಿಡಬೇಕು. ಕುಟುಂಬದಲ್ಲಿ ತುಂಬಾ ಖಾಸಗಿಯಾಗಿರುವ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಾರದು. ಆ ಸ್ನೇಹಿತ ನಿಮಗೆ ಎಷ್ಟೇ ಕ್ಲೋಸ್ ಆಗಿದ್ದರೂ ಈ ತಪ್ಪು ಮಾಡಬಾರದು. ಏಕೆಂದರೆ ಪ್ರತಿಯೊಂದು ಸಂಬಂಧಕ್ಕೂ ಅದರದೇ ಆದ ಮಿತಿಗಳಿವೆ. ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಸಂಗಾತಿಯೊಂದಿಗೆ ವೈಯಕ್ತಿಕ ಫೋಟೋಗಳು, ವಿಡಿಯೋಗಳು, ಚಾಟ್‌ಗಳು ಅಥವಾ ಸಂದೇಶಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ವೈಯಕ್ತಿಕ ಜೀವನದಲ್ಲಿ ಯಾವುದೂ ಖಾಸಗಿಯಾಗಿ ಉಳಿಯದಿದ್ದರೆ, ಆ ಸಂಬಂಧದ ಮಹತ್ವವು ಕಳೆದುಹೋಗುತ್ತದೆ.

2. ಕುಟುಂಬ ಸದಸ್ಯರ ವಿವರ

ಮದುವೆಯ ನಂತರ ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಅವರಿಗೆ ತಮ್ಮ ಅತ್ತೆ-ಮಾವ ಸೇರಿದಂತೆ ಕುಟುಂಬದ ಇತರ ಸದಸ್ಯರ ಮಾತು, ನಡವಳಿಕೆ ಇಷ್ಟವಾಗದಿರಬಹುದು. ಕುಟುಂಬದಲ್ಲಿ ಒಡಕು ಸಹ ಮೂಡಬಹುದು. ಹೀಗಾಗಿ ಇಂತಹ ನಿಮ್ಮ ವೈಯಕ್ತಿಯ ವಿಚಾರಗಳನ್ನು ಸ್ನೇಹಿತರ ಜೊತೆಗೆ ಹಂಚಿಕೊಳ್ಳಬಾರದು. ಕೆಲವು ಜನರು ತಮ್ಮ ಮನಸ್ಸನ್ನು ಹಗುರಗೊಳಿಸಲು ಎಲ್ಲಾ ವಿಷಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ಆದರೆ ಇದು ತುಂಬಾ ತಪ್ಪು. ಹೀಗಾಗಿ ಸಂಗಾತಿ, ಕುಟುಂಬ, ಸಂಬಂಧ ಮತ್ತು ಇತರ ವೈಯಕ್ತಿಯ ವಿಷಯಗಳನ್ನು ಅಪ್ಪಿತಪ್ಪಿಯೂ ಯಾರೊಂದಿಗೂ ಹಂಚಿಕೊಳ್ಳಬಾರದು.

ಇದನ್ನೂ ಓದಿ: Touch Me not Benefits: ಆರೋಗ್ಯದ ಖನಿ ಈ 'ಮುಟ್ಟಿದರೆ ಮುನಿ', ಇಲ್ಲಿವೆ ಅದರ ಅದ್ಭುತ ಲಾಭಗಳು

 3. ಹಿಂದಿನ ಸಂಗತಿಗಳ ಬಗ್ಗೆ

ಮದುವೆಯ ನಂತರ ನಿಮ್ಮ ಜೀವನ ಸಂಗಾತಿ ತಮ್ಮ ಹಿಂದಿನ ರಹಸ್ಯಗಳನ್ನು ಹಂಚಿಕೊಳ್ಳುತ್ತಾರೆ. ಇದೇ ವೇಳೆ ನಿಮ್ಮ ಸಂಗಾತಿಯ ಈ ನಂಬಿಕೆಗೆ ಎಂದಿಗೂ ದ್ರೋಹ ಮಾಡಬೇಡಿ. ಆಗಾಗ್ಗೆ ಸ್ನೇಹಿತರ ಬಳಿ ಗಂಡ-ಹೆಂಡತಿಯ ವೈಯಕ್ತಿಯ ವಿಚಾರಗಳನ್ನು ಹಂಚಿಕೊಳ್ಳುವುದು ಸರಿಯಲ್ಲ. ಇದು ನಿಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿಸಿ ವೈವಾಹಿಕ ಜೀವನವನ್ನೇ ಹಾಳು ಮಾಡುತ್ತದೆ.

4 . ಆರ್ಥಿಕ ಪರಿಸ್ಥಿತಿ ಬಗ್ಗೆ

ನಿಮ್ಮ ಆರ್ಥಿಕ ಸ್ಥಿತಿಗತಿಯ ಬಗ್ಗೆ ಎಂದಿಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಬಾರದು. ಕಷ್ಟಗಳು ಪ್ರತಿಹಯೊಬ್ಬರಿಗೂ ಇರುತ್ತವೆ. ಅದೇ ರೀತಿ ಪ್ರತಿಯೊಬ್ಬ ಮನುಷ್ಯನೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ನಿಮ್ಮ ಬಡತನದ ಜೀವನ, ಸಮಸ್ಯೆಗಳ ಬಗ್ಗೆ ಆಪ್ತ ಸ್ನೇಹಿತರ ಬಳಿ ಹಂಚಿಕೊಳ್ಳುವುದು ನಿಮಗೆ ಮುಳುವಾಗಬಹುದು. ಹೀಗಾಗಿ ಈ ವಿಷಯದ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News