Relationship: ಪುರುಷರಲ್ಲಿ ಮಹಿಳೆಯರು ನೋಡುವುದೇನು? ಇಂಪ್ರೆಷನ್ ಹೊಡೆಯೋ ಮುನ್ನ ಈ ಸುದ್ದಿ ಓದ್ರಿ

Relationship: ಮಹಿಳೆ ಹಾಗೂ ಪುರುಷರಲ್ಲಿ ಪರಸ್ಪರರ ಪ್ರತಿ ವಿಭಿನ್ನ ಭಾವನೆಗಳಿರುತ್ತವೆ. ಅಧ್ಯಯನವೊಂಕಾರ ಪ್ರಕಾರ ಮಹಿಳೆಯರು ಪುರುಷರ ಶಿಕ್ಷಣ ಹಾಗೂ ಬುದ್ಧಿಮತ್ತೆಯನ್ನು ಉನ್ನತ ಎಂದು ಭಾವಿಸುತ್ತಾರೆ. ಪುರುಷರ ಜೊತೆಗೆ ರಿಲೇಶನ್ ಶಿಪ್ ಗೆ ಒಳಗಾಗುವ ಮುನ್ನ ಮಹಿಳೆಯರು ಇದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ ಎನ್ನಲಾಗಿದೆ.

Written by - Nitin Tabib | Last Updated : May 21, 2021, 01:43 PM IST
  • ಮಹಿಳೆಯರು ಹಾಗೂ ಪುರುಷರ ಆದ್ಯತೆಗಳು ಭಿನ್ನವಾಗಿರುತ್ತವೆ.
  • ತಮ್ಮ ಸಂಗಾತಿಯ ಭೌತಿಕ ಆಕರ್ಷಣೆಗೆ ಒಳಗಾಗುವುದಿಲ್ಲ ಮಹಿಳೆಯರು
  • ಶಿಕ್ಷಣ ಹಾಗೂ ಬುದ್ಧಿಮತೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ ಮಹಿಳೆಯರು
Relationship: ಪುರುಷರಲ್ಲಿ ಮಹಿಳೆಯರು ನೋಡುವುದೇನು? ಇಂಪ್ರೆಷನ್ ಹೊಡೆಯೋ ಮುನ್ನ ಈ ಸುದ್ದಿ ಓದ್ರಿ title=
Relationship (File Photo)

ನವದೆಹಲಿ: Relationship - ಬಹುತೇಕ ಪುರುಷರಾಗಲಿ ಅಥವಾ ಮಹಿಳೆಯರೇ ಅಗಲಿ ತಮ್ಮ ಜೀವನದಲ್ಲಿ ಒಂದಿಲ್ಲ ಒಂದು ಸಲ ತಮ್ಮ ಪಾರ್ಟ್ನರ್  (Partner)  ಗೆ ಅನುಗುಣವಾಗಿ ಬದಲಾಗಲು ಪ್ರಯತ್ನಿಸುವ ಸನ್ನಿವೇಶವನ್ನು ಎದುರಿಸುತ್ತಾರೆ. ತಮ್ಮ ವ್ಯಕ್ತಿತ್ವದಲ್ಲಿನ (Personality)  ಯಾವ ಸಂಗತಿ ತಮ್ಮ ಎದುರಿರುವ ವ್ಯಕ್ತಿಯನ್ನು ಆಕರ್ಷಿಸುತ್ತದೆ ಎಂಬುದನ್ನು ಅವರು ತಿಳಿದುಕೊಳ್ಳಲು ಬಯಸುತ್ತಾರೆ. ಪುರುಷ ಹಾಗೂ ಮಹಿಳೆಯರ ಲೈಂಗಿಕ ವರ್ತನೆಯ (Sexual Behavior) ಕುರಿತು ಇತ್ತೀಚಿಗೆ ಅಧ್ಯಯನವೊಂದನ್ನು ನಡೆಸಲಾಗಿದೆ.

ಆಸ್ಟ್ರೇಲಿಯಾದ (Australia)  ಕ್ವಿನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ (Queensland University) ಅಧ್ಯಯನಕಾರರು ಈ ಅಧ್ಯಯನವನ್ನು ನಡೆಸಿದ್ದಾರೆ. ತಮ್ಮ ಸಂಗಾತಿಯ ಕುರಿತು ಪುರುಷ ಹಾಗೂ ಮಹಿಳೆಯರ ಆದ್ಯತೆಗಳು ಭಿನ್ನ-ಭಿನ್ನವಾಗಿವೆ ಎಂಬುದು ಅವರ ಅಭಿಪ್ರಾಯ.

ಪುರುಷರಿಂದ ಭಾವನಾತ್ಮಕ ಅಟ್ಯಾಚ್ಮೆಂಟ್ ಬಯಸುತ್ತಾರೆ ಮಹಿಳೆಯರು
ಅಧ್ಯಯನದ ಪ್ರಕಾರ ಯುವ ಪುರುಷರು ಮಹಿಳೆಯರ ಶಾರೀರಿಕ ರೂಪದ (Physical Attraction) ಕಾರಣ ಆಕರ್ಷಿತರಾಗುತ್ತಾರೆ. ಮಹಿಳೆಯರು ಪುರುಷರಲ್ಲಿ ಭಾವನಾತ್ಮಕ ಅಟ್ಯಾಚ್ಮೆಂಟ್ ಕಾಣಲು ಬಯಸುತ್ತಾರೆ ಎನ್ನಲಾಗಿದೆ. ಈ ಕುರಿತು NCA NewsWire ಜೊತೆಗೆ ಮಾತನಾಡಿರುವ ಡಾ. ಸ್ಟೀಫನ್ ವೈಟ್ (Dr.Steven White), ಈ ಅಧ್ಯಯನದಲ್ಲಿ ಹಲವು ಹಳೆ ಅಧ್ಯಯನಗಳನ್ನು ಸಮರ್ಥಿಸಲಾಗಿದೆ. ಮಹಿಳೆಯರು ಹಾಗೂ ಪುರುಷರ ಆದ್ಯತೆಗಳು ಜೀವನದ ವಿವಿಧ ಹಂತಗಳಲ್ಲಿ ಬದಲಾಗುತ್ತಲೇ ಇರುತ್ತವೆ (What Women Want In Men).

ಇದನ್ನೂ ಓದಿ -Relationship: ತಾಯಿ ಹಾಗೂ ಪತ್ನಿಯ ನಡುವೆ ಪುರುಷನ ಮೇಲೆ ಯಾರ ಹಕ್ಕು ಜಾಸ್ತಿ?

ಈ 9 ಸಂಗತಿಗಳಿಂದ ನಿರ್ಧಾರಿತವಾಗುತ್ತದೆ ಮೆಚ್ಚುಗೆ
ಈ ಅಧ್ಯಯನದ ಪ್ರಕಾರ ಪುರುಷರು ಮಹಿಳೆಯರ ಶಾರೀರಿಕ ಸಂರಚನೆಯತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಎನ್ನಲಾಗಿದೆ. ಆದಾಯಕ್ಕೆ ಕಡಿಮೆ ಮಹತ್ವ ನೀಡುವ ವಿಷಯದಲ್ಲಿ ಇಬ್ಬರ ಆಯ್ಕೆಯೂ ಒಂದೇ ಆಗಿದೆ. ಪುರುಷರ ಹೊಲಿಕೆಯಲ್ಲಿ ಮಹಿಳೆಯರು ಶಿಕ್ಷಣ ಹಾಗೂ ಬುದ್ಧಿಮತ್ತೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇನ್ನೊಂದೆಡೆ ಪುರುಷರು ಮಹಿಳೆಯರ ಬಹಿರಂಗ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ ಎಂಬ ಸಂಗತಿ ತಿಳಿದುಬಂದಿದೆ.

ಇದನ್ನೂ ಓದಿ- Sleeping Pattern: ಮಲಗುವ ವಿಧಾನ ಕೂಡ ಸಂಗಾತಿಗಳ Love Life ಮೇಲೆ ಪ್ರಭಾವ ಬೀರುತ್ತೆ

ಒಂದು ನಿರ್ಧಿಷ್ಟ ವಯಸ್ಸಿನ ಬಳಿಕ ಬ್ಯಾಲೆನ್ಸ್
ವಯಸ್ಸು ಹೆಚ್ಚಾಗುವುದರ ಜೊತೆಗೆ ಪುರುಷ ಹಾಗೂ ಮಹಿಳೆ ಇಬ್ಬರಲ್ಲಿಯ ಆದ್ಯತೆಗಳು ಒಂದಾಗುತ್ತವೆ ಎಂದು ಸಮೀಕ್ಷೆ (Survey) ಹೇಳಿದೆ. ಒಂದು ನಿರ್ಧಿಷ್ಟ ವಯಸ್ಸಿನ ಬಳಿಕ ಬಹಿರಂಗ ವರ್ತನೆ ಹಾಗೂ ಭರವಸೆಗೆ ಇಬ್ಬರೂ ಕೂಡ ಹೆಚ್ಚಿನ ಮಹತ್ವ ನೀಡುತ್ತಾರೆ. ಈ ರೀತಿಯ ಸಮೀಕ್ಷೆಗಳು ಈ ಮೊದಲು ಕೂಡ ಪ್ರಕಟಗೊಂಡಿವೆ ಆದರೆ, ಪ್ರತಿ ಬಾರಿ ಸಮೀಕ್ಷೆಯಲ್ಲಿ ಭಾಗವಹಿಸುವ ಜನರ ಈ ಸಂಗತಿಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ.

ಇದನ್ನೂ ಓದಿ-ಲವ್ ಲೈಫ್ ಮೇಲೂ ಚುನಾವಣೆಗಳು ಪ್ರಭಾವ ಬೀರುತ್ತವಂತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News