Astro Tips: ಆಸ್ತಿ ವಿವಾದಗಳಿಂದ ಮುಕ್ತಿ ಸಿಗಲು ಈ ವಸ್ತುಗಳನ್ನು ದಾನ ಮಾಡಿ

ಆಸ್ತಿಗಾಗಿ ಜ್ಯೋತಿಷ್ಯ ಸಲಹೆಗಳು: ಜ್ಯೋತಿಷ್ಯದಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಕುಟುಂಬದಲ್ಲಿನ ಆಸ್ತಿ ವಿವಾದದಿಂದ ಕೆಲವರು ವರ್ಷಗಟ್ಟಲೆ ತೊಂದರೆ ಅನುಭವಿಸುತ್ತಾರೆ. ಹೀಗಾಗಿ ನೀವು ಈ ಸಲಹೆ ಪಾಲಿಸಿದರೆ ಖಂಡಿತ ಮುಕ್ತಿ ದೊರೆಯುತ್ತದೆ.

Written by - Puttaraj K Alur | Last Updated : Jan 16, 2023, 03:39 PM IST
  • ಹಿಂದೂ ಧರ್ಮದಲ್ಲಿ ಗೋವಿನ ಸೇವೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ
  • ಆಸ್ತಿಗೆ ಸಂಬಂಧಿಸಿದ ವಿವಾದ ಇತ್ಯರ್ಥಪಡಿಸಲು ಪ್ರತಿ ಭಾನುವಾರ ಹಸುವಿಗೆ ಬೆಲ್ಲ ತಿನ್ನಿಸಬೇಕು
  • ಭೂ ವಿವಾದದಿಂದ ಮುಕ್ತಿ ಹೊಂದಬಯಸಿದರೆ ನೀವು ಬಡವರಿಗೆ ದಾನ ಮಾಡಬೇಕು
Astro Tips: ಆಸ್ತಿ ವಿವಾದಗಳಿಂದ ಮುಕ್ತಿ ಸಿಗಲು ಈ ವಸ್ತುಗಳನ್ನು ದಾನ ಮಾಡಿ title=
ಆಸ್ತಿಗಾಗಿ ಜ್ಯೋತಿಷ್ಯ ಸಲಹೆ

ನವದೆಹಲಿ: ನೀವು ಹಲವಾರು ವರ್ಷಗಳಿಂದ ಆಸ್ತಿ ವಿವಾದದಿಂದ ತೊಂದರೆಗೊಳಗಾಗಿದ್ದರೆ ಇಲ್ಲಿದೆ ಸುಲಭ ಪರಿಹಾರ. ಇದರಿಂದ ಮುಕ್ತಿ ಪಡೆಯಲು ನಿಮಗೆ ಜ್ಯೋತಿಷ್ಯದಲ್ಲಿ ಪರಿಹಾರವಿದೆ. ಆಸ್ತಿ ವಿವಾದದಿಂದ ತೊಂದರೆ ಇರುವವರು ಎಳ್ಳು ಮತ್ತು ಡ್ರೈಫ್ರೂಟ್ಸ್ ಜೊತೆಗೆ ಬೆಲ್ಲದ ಲಡ್ಡುಗಳನ್ನು ದಾನ ಮಾಡಬೇಕು. ಈ ಪರಿಹಾರ ಮಾಡುವುದರಿಂದ ನಿಮ್ಮ ಆಸ್ತಿ ವಿವಾದದಿಂದ ಮುಕ್ತಿ ದೊರೆಯಲಿದೆ. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯೂ ಹೆಚ್ಚಾಗುತ್ತದೆ. ಆಸ್ತಿ ವಿವಾದಗಳಿಂದ ಮುಕ್ತಿ ಪಡೆಯಲು ಈ ಪರಿಹಾರ ಕ್ರಮಗಳನ್ನು ಕೈಗೊಳ್ಳಿರಿ.

 ಹಸುವಿಗೆ ಬೆಲ್ಲ ತಿನ್ನಿಸಿ

ಹಿಂದೂ ಧರ್ಮದಲ್ಲಿ ಗೋವಿನ ಸೇವೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಲು ಪ್ರತಿ ಭಾನುವಾರ ಹಸುವಿಗೆ ಬೆಲ್ಲವನ್ನು ತಿನ್ನಿಸಬೇಕು. ಇದಕ್ಕಾಗಿ ನೀವು ಗೋಶಾಲೆಗೆ ಹೋಗಿ ಅಲ್ಲಿರುವ ಹಸುವಿಗೆ ಬೆಲ್ಲವನ್ನು ತಿನ್ನಿಸಬೇಕು. ಹಸುವಿಗೆ ಬೆಲ್ಲವನ್ನು ತಿನ್ನಿಸುವಾಗ ಒಂದು ವಿಷಯವನ್ನು ನೆನಪಿನಲ್ಲಿಡಿ, ಬೆಲ್ಲವನ್ನು ಯಾವುದೇ ಕಾರಣಕ್ಕೂ ಎಸೆಯಬೇಡಿ. ಹಸುವಿನ ಹತ್ತಿರ ಹೋಗಲು ನಿಮಗೆ ಭಯವಾದರೆ ಯಾವುದಾದರೂ ಸ್ಥಳದಲ್ಲಿ ಬೆಲ್ಲವನ್ನು ಇಟ್ಟು ತಿನ್ನಿಸಿ. 

ಇದನ್ನೂ ಓದಿ: Vastu Tips : ತುಳಸಿಯ ಬಳಿ ಈ ವಸ್ತುಗಳನ್ನು ಇಟ್ಟರೆ ದುರಾದೃಷ್ಟ ಮನೆ ಮಾಡುವುದು.!

ಆಹಾರ ದಾನ ಮಾಡಿ

ದಾನ ಮಾಡುವವನಿಗೆ ಪುಣ್ಯ ಸಿಗುತ್ತದೆಂಬುದು ಸನಾತನ ಧರ್ಮದಲ್ಲಿನ ನಂಬಿಕೆ. ಇದಲ್ಲದೆ ಆ ವ್ಯಕ್ತಿ ಪಾಪಗಳಿಂದ ಮುಕ್ತಿ ಪಡೆಯುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ನೀವು ಭೂ ವಿವಾದದಿಂದ ಚಿಂತಿತರಾಗಿದ್ದರೆ ಮತ್ತು ಅದರಿಂದ ಮುಕ್ತಿ ಹೊಂದಲು ಬಯಸಿದರೆ  ಅನ್ನದಾನ ಮಾಡಬೇಕು. ಶುಕ್ರವಾರದಂದು ಬಡವರು ಅಥವಾ ನಿರ್ಗತಿಕರಿಗೆ ಅನ್ನದಾನ ಮಾಡಿದರೆ ಅವರ ಆಶೀರ್ವಾದ ಸಿಗುತ್ತದೆ ಎಂದು ಶಾಸ್ತ್ರಗಳಲ್ಲಿ ನಂಬಲಾಗಿದೆ. ಇದರಿಂದ ನಿಮ್ಮ ಸಮಸ್ಯೆಯನ್ನು ಬಹಳಷ್ಟು ಕಡಿಮೆ ಮಾಡಬಹುದು.

ದುರ್ಗಾ ಮಾತೆಯನ್ನು ಪೂಜಿಸಿ

ನಿಮ್ಮ ಕುಟುಂಬದಲ್ಲಿ ಯಾರಾದರೂ ಭೂಮಿ ಖರೀದಿ ಅಥವಾ ಮಾರಾಟದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ತಾಯಿ ದುರ್ಗಾಮಾತೆಯನ್ನು ಪೂಜಿಸಬೇಕು. ದುರ್ಗಾ ಮಾತೆ ಪ್ರಸನ್ನಳಾದರೆ ಆಕೆಯ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಆಸ್ತಿ ವಿವಾದಗಳನ್ನು ಎದುರಿಸುತ್ತಿರುವವರು ತಾಯಿ ದುರ್ಗೆಯ ಮಂತ್ರಗಳನ್ನು ಪಠಿಸಬೇಕು. ನಿಮ್ಮ ಸಮಸ್ಯೆಗಳನ್ನು ತಾಯಿಯ ಮುಂದೆ ಹೇಳಿಕೊಳ್ಳಬೇಕು. ಈ ರೀತಿ ನೀವು ಭೂ ವಿವಾದದಿಂದ ಪರಿಹಾರ ಪಡೆಯಬಹುದು.

ಇದನ್ನೂ ಓದಿ: Surya Gochar 2023 : ಸೂರ್ಯ ಸಂಚಾರದಿಂದ ಈ ರಾಶಿಯವರಿಗೆ ಭರ್ಜರಿ ಸಿಹಿ ಸುದ್ದಿ!

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News