Navratri 2022 Plant : ನವರಾತ್ರಿಯ ಈ 9 ದಿನಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ನವರಾತ್ರಿಯ 9 ದಿನಗಳಲ್ಲಿ, ಶ್ರೀ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಸೆಪ್ಟೆಂಬರ್ 26 ರಿಂದ ಅಂದರೆ ಅಕ್ಟೋಬರ್ 5 ರವರೆಗೆ ನವರಾತ್ರಿಯನ್ನು ಆಚರಿಸಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆಶೀರ್ವಾದ ಪಡೆಯಲು, ಈ ದಿನಗಳಲ್ಲಿ ಮನೆಯಲ್ಲಿ ಕೆಲವು ಗಿಡಗಳನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ದೇವಿಯ ಕೃಪೆಗೆ ಪಾತ್ರರಾಗಬಹುದು, ಅಲ್ಲದೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವುದು ನಂಬಿಕೆ. ಹಾಗಿದ್ದರೆ ದೇವಿಯ ಕೃಪೆಗೆ ಪಾತ್ರರಾಗಲು ನವರಾತ್ರಿಯಲ್ಲಿ ಯಾವ ಯಾವ ಗಿಡಗಳನ್ನು ನೆಡಬಹುದು ನೋಡೋಣ.
ಶಂಖ ಪುಷ್ಪಿ ಸಸ್ಯ : ಶಂಖ ಪುಷ್ಪಿಯ ಸಸ್ಯವನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ಬಹಳ ಮಂಗಳಕರವೆದು ಪರಿಗಣಿಸಲಾಗುತ್ತದೆ. ನವರಾತ್ರಿಯಲ್ಲಿ ಈ ಗಿಡವನ್ನು ನೆಟ್ಟರೆ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಗಿಡದ ಬೇರನ್ನು ಬೆಳ್ಳಿಯ ಪೆಟ್ಟಿಗೆಯಲ್ಲಿ ಇಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ನವರಾತ್ರಿಯ 9 ದಿನಗಳಲ್ಲಿ ಯಾವುದಾದರೂ ಒಂದು ದಿನ ಹೀಗೆ ಮಾಡಿದರೆ, ದುರ್ಗಾ ಮಾತೆಯ ಕೃಪೆಯಿಂದ ಮನೆಯಲ್ಲಿ ಸಂತೋಷ ನೆಲೆಯಾಗುತ್ತದೆ.
ಇದನ್ನೂ ಓದಿ : ದೀಪಾವಳಿ ಮುನ್ನಾ ದಿನ ಈ ರಾಶಿಯವರಿಗೆ ಲಭಿಸುವುದು ಕುಬೇರನ ಖಜಾನೆ.!
ಬಾಳೆ ಗಿಡ : ಬಾಳೆ ಗಿಡಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ. ಬಾಳೆಗಿಡದಲ್ಲಿ ವಿಷ್ಣು ನೆಲೆಸಿದ್ದಾನೆ ಎನ್ನುವುದು ನಂಬಿಕೆ. ಭಗವಾನ್ ವಿಷ್ಣುವನ್ನು ಮೆಚ್ಚಿಸುವುದರಿಂದ, ತಾಯಿ ಲಕ್ಷ್ಮೀಯ ಕೃಪೆಯೂ ದೊರೆಯುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವರಾತ್ರಿಯಲ್ಲಿ ಬಾಳೆ ಗಿಡವನ್ನು ಮನೆಯಲ್ಲಿ ನೆಟ್ಟರೆ, ಶ್ರೀ ಹರಿಯು ಮನೆಯಲ್ಲಿ ನೆಲೆಸುತ್ತಾನೆ. ಅಲ್ಲದೆ, ಪ್ರತಿ ಗುರುವಾರದಂದು ಬಾಳೆ ಗಿಡಕ್ಕೆ ನೀರಿನೊಂದಿಗೆ ಹಾಲನ್ನು ನೈವೇದ್ಯ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.ಲಕ್ಷ್ಮೀಯ ಆಶೀರ್ವಾದವೂ ದೊರೆಯುತ್ತದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ.
ಪಾರಿಜಾತ : ವಾಸ್ತುದಲ್ಲಿ ಮರಗಳು ಮತ್ತು ಸಸ್ಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. ನವರಾತ್ರಿಯಲ್ಲಿಪಾರಿಜಾತ ಗಿಡವನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಾರಿಜಾತ ಸಸ್ಯವನ್ನು ಸ್ನಾನದ ನಂತರ ಮಡಿಯುಟ್ಟು ಪಾರಿಜಾತ ಸಸ್ಯವನ್ನು ನೆಡಬೇಕು. ಹೀಗೆ ಮಾಡಿದರೆ, ವ್ಯಕ್ತಿಯ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ.
ಇದನ್ನೂ ಓದಿ : Cheek Astrology: ಕೆನ್ನೆಯ ಆಕಾರದಲ್ಲಿ ತಿಳಿಯಬಹುದು ನಿಮ್ಮ ಶ್ರೀಮಂತಿಕೆಯ ರಹಸ್ಯ!
ತುಳಸಿ ಗಿಡ : ತುಳಸಿ ಗಿಡದಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ. ಮಂಗಳಕರ ದಿನಗಳಲ್ಲಿ ಈ ಗಿಡವನ್ನು ನೆಡುವುದು ಇನ್ನೂ ಮಂಗಳಕರವಾಗಿರುತ್ತದೆ. ನವರಾತ್ರಿಯ ದಿನಗಳನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನಗಳಲ್ಲಿ ತುಳಸಿ ಗಿಡವನ್ನು ನೆಟ್ಟರೆ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಧರ್ಮಗ್ರಂಥಗಳಲ್ಲಿ ತುಳಸಿ ಪೂಜೆಯ ಬಗ್ಗೆ ಕೆಲವು ಪ್ರಮುಖ ನಿಯಮಗಳನ್ನು ಹೇಳಲಾಗಿದೆ. ಕಾಳಜಿ ವಹಿಸಿ ಅವುಗಳನ್ನು ಅನುಸರಿಸುವುದರಿಂದ ದೇವಿಯ ಅನುಗ್ರಹ ದೊರೆಯುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.