Money Plant: ತಿಂಗಳು ಶುರುವಾದ ಕೂಡಲೇ ಜೇಬು ಖಾಲಿಯಾಗುತ್ತಾ? ಮನಿ ಪ್ಲಾಂಟ್ ಪರಿಹಾರ ಇಲ್ಲಿದೆ

ಮನಿ ಪ್ಲಾಂಟ್‌ ವಾಸ್ತು ಸಲಹೆಗಳು: ಕಷ್ಟಪಟ್ಟು ಕೆಲಸ ಮಾಡಿದರೂ ಹಣ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲವೇ? ಹಾಗಾದ್ರೆ ನಿಮ್ಮ ಮನೆಯ ನಿರ್ದಿಷ್ಟ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡಿ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Feb 18, 2023, 06:18 AM IST
  • ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಬುಧ & ಕುಬೇರ ದೇವನಿಗೆ ಸಂಬಂಧಿಸಿದೆ
  • ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ
  • ಮನಿ ಪ್ಲಾಂಟ್ ಅನ್ನು ಸರಿಯಾಗಿ ಆರೈಕೆ ಮಾಡುವುದರಿಂದ ನಿಮಗೆ ಹೆಚ್ಚು ಲಾಭವಾಗಲಿದೆ
Money Plant: ತಿಂಗಳು ಶುರುವಾದ ಕೂಡಲೇ ಜೇಬು ಖಾಲಿಯಾಗುತ್ತಾ? ಮನಿ ಪ್ಲಾಂಟ್ ಪರಿಹಾರ ಇಲ್ಲಿದೆ  title=
Vastu Tips for Money Plant

ನವದೆಹಲಿ: ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ಇರಬೇಕೆಂದು ಬಯಸುತ್ತಾರೆ. ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು ಮತ್ತು ಹಣದ ಹರಿವು ನಿರಂತರವಾಗಿರಬೇಕು ಎಂದುಕೊಂಡಿರುತ್ತಾರೆ. ಇದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಸೇರಿದಂತೆ ಹಲವು ಪರಿಹಾರಗಳನ್ನು ಹೇಳಲಾಗಿದೆ. ಮನೆಯಲ್ಲಿ ಮನಿ ಪ್ಲಾಂಟ್ ಇಡುವುದರಿಂದ ನೆಗೆಟಿವ್ ಎನರ್ಜಿ ಮಾಯವಾಗಿ ಜೀವನದಲ್ಲಿ ಹಣ ಬರುವ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ. ಮನಿ ಪ್ಲಾಂಟ್‌ನ ಎಲೆಗಳು ಮೇಲಕ್ಕೆ ಏರಿದಂತೆ, ಕುಟುಂಬದ ಆರ್ಥಿಕ ಮಟ್ಟವೂ ಏರುತ್ತದೆ. ಆದರೆ ಈ ಅದ್ಭುತ ಸಸ್ಯವನ್ನು ಮನೆಯ ಯಾವ ದಿಕ್ಕಿನಲ್ಲಿ ನೆಡಬೇಕು ಎಂದು ನಿಮಗೆ ತಿಳಿದಿದೆಯೇ? ಈ ಬಗ್ಗೆ ನಾವು ನಿಮಗೆ ವಿವರವಾದ ಮಾಹಿತಿ ನೀಡಲಿದ್ದೇವೆ.

ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡಬೇಕು

ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಬುಧ ಮತ್ತು ಕುಬೇರ ದೇವನಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ. ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಹೆಚ್ಚುತ್ತದೆ ಮತ್ತು ಕುಟುಂಬದಲ್ಲಿ ಸಂತೋಷ-ಸಮೃದ್ಧಿ ತರುತ್ತದೆಂದು ಹೇಳಲಾಗುತ್ತದೆ. ಈ ರೀತಿ ಮಾಡುವುದರಿಂದ ಕುಟುಂಬದ ಸದಸ್ಯರ ಪ್ರಗತಿಯ ದಾರಿ ತೆರೆದುಕೊಳ್ಳುತ್ತದೆ ಮತ್ತು ಅವರು ಜೀವನದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ.

ಇದನ್ನೂ ಓದಿ: ಆಚಾರ್ಯ ಚಾಣಕ್ಯರ ಈ 3 ನಿಯಮಗಳನ್ನು ಅನುಸರಿಸಿದರೆ ಪತಿ-ಪತ್ನಿ ನಡುವೆ ಎಂದಿಗೂ ಬಿರುಕು ಮೂಡಲ್ಲ

ಮನಿ ಪ್ಲಾಂಟ್ ಆರೈಕೆ ವಿಧಾನಗಳು

ಮನಿ ಪ್ಲಾಂಟ್‌ನ ಮಂಗಳಕರ ಪ್ರಯೋಜನ ಪಡೆಯಲು ಅದನ್ನು ನೆಟ್ಟರೆ ಸಾಕಾಗುವುದಿಲ್ಲ. ಆದರೆ ಅದನ್ನು ಸರಿಯಾಗಿ ನೋಡಿಕೊಳ್ಳಬೇಕು. ಇದಕ್ಕಾಗಿ ನೀವು ಮನಿ ಪ್ಲಾಂಟ್‌ನ ಬೇರುಗಳಲ್ಲಿ ಹಾಲು ಮಿಶ್ರಿತ ನೀರನ್ನು ಸುರಿಯಬೇಕು. ಈ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಹಾಲಿನ ಕಾರಣ, ಸಸ್ಯವು ಉತ್ತಮ ಪೋಷಣೆ ಪಡೆಯುತ್ತದೆ ಮತ್ತು ಅದು ವೇಗವಾಗಿ ಮೇಲಕ್ಕೆ ಏರುತ್ತದೆ. ಇದರಿಂದಾಗಿ ಕುಟುಂಬದ ಸಮೃದ್ಧಿಯ ಗ್ರಾಫ್ ಕೂಡ ಸ್ವಯಂಚಾಲಿತವಾಗಿ ಏರಲು ಪ್ರಾರಂಭಿಸುತ್ತದೆ.

ಸ್ವಚ್ಛ ಸ್ಥಳದಲ್ಲಿ ಮನಿ ಪ್ಲಾಂಟ್ ನೆಡಿ

ಮನಿ ಪ್ಲಾಂಟ್ ಗಿಡವನ್ನು ಯಾವಾಗಲೂ ಸ್ವಚ್ಛವಾದ ಸ್ಥಳದಲ್ಲಿ ನೆಡಬೇಕು. ಈ ಗಿಡವನ್ನು ಕೊಳಕು ಸ್ಥಳದಲ್ಲಿ ನೆಡುವುದರಿಂದ ಕುಟುಂಬವು ನಷ್ಟವನ್ನು ಅನುಭವಿಸಬೇಕಾಗುತ್ತದೆ ಮತ್ತು ಆದಾಯದ ಮೂಲಗಳು ಕ್ಲೋಸ್ ಆಗುತ್ತವೆ. ಆದ್ದರಿಂದ ಮನಿ ಪ್ಲಾಂಟ್ ಸುತ್ತಲೂ ಯಾವುದೇ ರೀತಿಯ ಕೊಳಕು ಇರಬಾರದು ಮತ್ತು ಕುಟುಂಬ ಸದಸ್ಯರು ಅಲ್ಲಿ ಶೂ ಮತ್ತು ಚಪ್ಪಲಿಗಳನ್ನು ಇಡಬಾರದು.

ಇದನ್ನೂ ಓದಿ: Mahashivratri 2023 : ಮಹಾಶಿವರಾತ್ರಿ ಉಪವಾಸದಂದು ಈ 3 ಕೆಲಸ ಮಾಡಿದ್ರೆ ಮಾತ್ರ ಸಿಗುತ್ತೆ ಸಂಪೂರ್ಣ ಫಲ! 

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News