March 2021 Astrology: ಮಾರ್ಚ್‌ನಲ್ಲಿ 3 ಗ್ರಹಗಳ ಸ್ಥಾನ ಬದಲಾವಣೆ: ಈ ಐದು ರಾಶಿಯವರಿಗೆ ಅದೃಷ್ಟ!

ಈ ತಿಂಗಳಲ್ಲಿ, ಮೂರು ಗ್ರಹಗಳು ರಾಶಿ ಚಿಹ್ನೆಯನ್ನು ಬದಲಾಯಿಸಲಿವೆ.

Last Updated : Mar 1, 2021, 11:49 PM IST
  • ಮಾರ್ಚ್ ತಿಂಗಳಲ್ಲಿ ಅನೇಕ ಗ್ರಹಗಳ ಸ್ಥಾನವು ಬದಲಾಗಲಿದೆ.
  • ಈ ತಿಂಗಳಲ್ಲಿ, ಮೂರು ಗ್ರಹಗಳು ರಾಶಿ ಚಿಹ್ನೆಯನ್ನು ಬದಲಾಯಿಸಲಿವೆ.
  • ಪ್ರತಿಯೊಂದು ಕಾರ್ಯದಲ್ಲೂ ನೀವು ಯಶಸ್ಸನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಶಾಂತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ.
March 2021 Astrology: ಮಾರ್ಚ್‌ನಲ್ಲಿ 3 ಗ್ರಹಗಳ ಸ್ಥಾನ ಬದಲಾವಣೆ: ಈ ಐದು ರಾಶಿಯವರಿಗೆ ಅದೃಷ್ಟ! title=

ಮಾರ್ಚ್ ತಿಂಗಳಲ್ಲಿ ಅನೇಕ ಗ್ರಹಗಳ ಸ್ಥಾನವು ಬದಲಾಗಲಿದೆ. ಈ ತಿಂಗಳಲ್ಲಿ, ಮೂರು ಗ್ರಹಗಳು ರಾಶಿ ಚಿಹ್ನೆಯನ್ನು ಬದಲಾಯಿಸಲಿವೆ. ಸೂರ್ಯನು ಕುಂಭ ರಾಶಿಯಿಂದ ಹೊರಟು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಕಾರಣದಿಂದಾಗಿ ಮೀನ ರಾಶಿಯಿಂದಾಗಿ ಮಲಮಾಸ ಆರಂಭವಾಗುತ್ತದೆ. ಅಲ್ಲದೆ, ಸೂರ್ಯನೊಂದಿಗೆ ಶುಕ್ರ ಮತ್ತು ಬುಧ ಗ್ರಹಗಳು ಈ ತಿಂಗಳಲ್ಲಿ ತಮ್ಮ ಸ್ಥಾನ ಬದಲಿಸಲಿವೆ. ಜ್ಯೋತಿಷ್ಯದ ದೃಷ್ಟಿಕೋನದಿಂದ ನೋಡಿದರೆ ಈ ಮೂರು ಗ್ರಹಗಳ ರಾಶಿ ಬದಲಾವಣೆಗಳ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ. ಆ ಪೈಕಿ ಐದು ರಾಶಿಯವರಿಗೆ ಅದೃಷ್ಟ ಪ್ರಾಪ್ತಿಯಾಗುತ್ತದೆ. ಅಂತಹ ರಾಶಿಗಳನ್ನು ತಿಳಿದುಕೊಳ್ಳೋಣ.

ಮಿಥುನ ರಾಶಿ: ಹಣಕಾಸಿನ ವಿಷಯಗಳಲ್ಲಿ ಶುಭ ಫಲಿತಾಂಶ, ಗ್ರಹಗಳ ಪರಿವರ್ತನೆಯು ಮಿಥುನ ರಾಶಿ(Gemini​)ಯವರಿಗೆ ಪ್ರಯೋಜನಕಾರಿಯಾಗಿದೆ. ಇಲ್ಲಿಯವರೆಗೆ ಎದುರಿಸುತ್ತಿರುವ ಸಮಸ್ಯೆಗಳಿಂದ ಪರಿಹಾರ ಪಡೆಯುವ ಸಾಧ್ಯತೆಯಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಸುಧಾರಿಸುತ್ತವೆ ಮತ್ತು ಕುಟುಂಬದ ವಿಷಯಗಳಿಗೆ ಸಹ ಪರಿಹಾರ ಸಿಗುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇದರಿಂದಾಗಿ ಕೆಲಸದ ವೇಗವು ಹೆಚ್ಚುತ್ತದೆ. ಪ್ರತಿಯೊಂದು ಕಾರ್ಯದಲ್ಲೂ ನೀವು ಯಶಸ್ಸನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಶಾಂತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ. ಗ್ರಹಗಳ ಬದಲಾವಣೆಯಿಂದಾಗಿ ಆರ್ಥಿಕ ಪರಿಸ್ಥಿತಿಯೂ ಬಲಗೊಳ್ಳುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತದೆ. ವ್ಯವಹಾರದ ಸಮಸ್ಯೆಗಳನ್ನೂ ಪರಿಹರಿಸಲಾಗುವುದು. ಹಳೆಯ ಸಾಲಗಳನ್ನು ತೀರಿಸುತ್ತೀರಿ.

ಮಂಗಳ ದೋಷ ನಿವಾರಣೆಗೆ ವಿಷ್ಣು ಪೂಜೆಯ ಸಂದರ್ಭದಲ್ಲಿ ಈ ಗಿಡಕ್ಕೆ ವಿಶೇಷ ಮಹತ್ವ ನೀಡಿ

ಕಟಕ ರಾಶಿ(Cancer​): ಅದೃಷ್ಟದ ಬೆಂಬಲ, ಈ ಗ್ರಹಗತಿಗಳ ಬದಲಾವಣೆ ನಿಮ್ಮ ರಾಶಿ ಚಿಹ್ನೆಗೆ ಪ್ರಯೋಜನಕಾರಿ. ಪ್ರಯೋಜನಕಾರಿಯಾಗಿದೆ. ಆರೋಗ್ಯವು ಉತ್ತಮವಾಗಿರುತ್ತದೆ. ಶುಭ ಕಾರ್ಯಗಳನ್ನು ಪೂರ್ಣಗೊಳಿಸುವುದರಿಂದ ಮನಸ್ಸು ಕೂಡ ಸಂತೋಷವಾಗಿರುತ್ತದೆ. ಕುಟುಂಬಗಳ ಮೇಲೆ ಗ್ರಹಗಳ ಶುಭ ಫಲಿತಾಂಶಗಳು ಕಂಡುಬರುತ್ತವೆ. ಈ ಸಮಯದಲ್ಲಿ, ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಸಂಬಂಧಿಸಿದ ಚಿಂತೆಗಳು ದೂರುವಾಗಲಿದೆ. ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತದೆ. ಆರ್ಥಿಕ ದೃಷ್ಟಿಕೋನದಿಂದ, ಗ್ರಹಗಳ ಚಲನೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಹಠಾತ್‌ ಲಾಭಗಳು, ಧನ ಪ್ರಾಪ್ತಿಯಾಗುತ್ತದೆ. ಅದೃಷ್ಟದಿಂದ ಪ್ರತಿ ಕ್ಷೇತ್ರದಲ್ಲೂ ಪ್ರಯೋಜನ ಪಡೆಯುತ್ತೀರಿ. ಸ್ಥಿರಾಸ್ತಿಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಅವುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪರಿಹಾರ ಸಿಗುತ್ತದೆ. ನೀವು ಭೂಮಿ, ಮನೆ ಅಥವಾ ವಾಹನ ಇತ್ಯಾದಿಗಳನ್ನು ಖರೀದಿಸಲು ಬಯಸಿದರೆ ನಿಮಗೆ ಲಾಭವಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು. ಒಳ್ಳೆಯ ಸುದ್ದಿ ಸಹ ಸಿಗಬಹುದು.

Daily Horoscope: ದಿನಭವಿಷ್ಯ 01-03-2021 Today astrology

ಕನ್ಯಾ ರಾಶಿ: ಬಾಕಿ ಉಳಿದಿರುವ ಕೆಲಸಗಳು ಪೂರ್ಣ, ಗ್ರಹಗಳ ಬದಲಾವಣೆಯು ಕನ್ಯಾರಾಶಿ(Virgo) ರಾಶಿಯವರಲ್ಲಿ ಉತ್ಸಾಹ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ನಾಯಕತ್ವದ ಸಾಮರ್ಥ್ಯ ಹೆಚ್ಚುತ್ತದೆ. ಸಕಾರಾತ್ಮಕ ಗುಣಗಳು ಬೆಳೆಯುತ್ತವೆ. ಅದೃಷ್ಟದ ಬೆಂಬಲದಿಂದಾಗಿ ಬಾಕಿ ಉಳಿದಿರುವ ಕೆಲಸವು ವೇಗವಾಗಿ ಮುಗಿಯುತ್ತವೆ. ಸಕಾರಾತ್ಮಕ ಚಿಂತನೆಯಿಂದಾಗಿ ನೀವು ಕಷ್ಟಕರ ಕಾರ್ಯಗಳನ್ನು ಸಹ ಸುಲಭವಾಗಿ ನಿರ್ವಹಿಸುತ್ತೀರಿ. ಆರೋಗ್ಯವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ದೀರ್ಘಕಾಲದ ಕಾಯಿಲೆಗಳಿಂದ ನಿಮಗೆ ಮುಕ್ತಿ ಸಿಗುತ್ತದೆ. ಮೂರು ಗ್ರಹಗಳ ಸ್ಥಾನ ಬದಲಾವಣೆಯು ಕುಟುಂಬದ ಸಂತೋಷದ ದೃಷ್ಟಿಯಿಂದ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.

ವಿವಾಹ ಆಕಾಂಕ್ಷಿಗಳಿಗೆ ಉತ್ತಮ ಪ್ರಸ್ತಾಪಗಳು ಬರುತ್ತವೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆ ಇರುತ್ತದೆ. ಆರ್ಥಿಕ ದೃಷ್ಟಿಕೋನದಿಂದ, ಗ್ರಹಗಳ ಬದಲಾವಣೆಯು ನಿಮಗೆ ಶುಭ ಫಲಿತಾಂಶವನ್ನು ನೀಡುತ್ತದೆ. ಆರ್ಥಿಕ ಸುಧಾರಣೆ ಮಾಡಲು ನೀವು ಹಾಕಿರುವ ಯೋಜನೆಗಳು ಯಶಸ್ವಿಯಾಗಲಿದೆ. ಹಿಂದೆ ಮಾಡಿದ ಹಣದ ಹೂಡಿಕೆಯಿಂದ ಲಾಭವಾಗಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಅನೇಕ ಫಲಗಳನ್ನು ಒದಗಿಸುತ್ತದೆ. ಸಂಬಳ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಬೋನಸ್ ಇತ್ಯಾದಿಗಳು ಸಹ ಬರುವ ನಿರೀಕ್ಷೆ ಇದೆ. ಇದೇ ಸಮಯದಲ್ಲಿ ವ್ಯಾಪಾರಸ್ಥರು ಸರ್ಕಾರದ ನಿರ್ಧಾರದಿಂದಾಗಿ ಲಾಭ ಪಡೆಯುತ್ತದೆ.

ನಿಮ್ಮ ನಿತ್ಯಪೂಜೆಯಲ್ಲಿ ಈ ಐದು ತಪ್ಪುಗಳಾಗುತ್ತಿರಬಹುದು..?

ತುಲಾ ರಾಶಿ: ಸೌಕರ್ಯಗಳು ಹೆಚ್ಚಾಗುತ್ತವೆ, ಮೂರು ಗ್ರಹಗಳ ಸಾಗಣೆಯು ತುಲಾ ರಾಶಿ(Libra)ಯವರಿಗೆ ಉತ್ತಮ ಫಲಿತಾಂಶವನ್ನು ನೀಡಲಿದೆ. ನಿಮ್ಮ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಅವುಗಳು ನಿಯಂತ್ರಣಕ್ಕೆ ಬರುತ್ತವೆ. ಸರ್ಕಾರಿ ವ್ಯವಹಾರಗಳಲ್ಲಿಯೂ ಪರಿಹಾರ ಪಡೆಯುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ. ಶಾಂತಿಯ ವಾತಾವರಣದ ಫಲವಾಗಿ ಕುಟುಂಬದ ಸದಸ್ಯರ ನಡುವೆ ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಅನಗತ್ಯ ವೆಚ್ಚಗಳು ಕಡಿಮೆಯಾಗಲಿವೆ. ಗ್ರಹಗಳ ಸಾಗಣೆಯು ಭೌತಿಕ ಸೌಕರ್ಯಗಳನ್ನು ಹೆಚ್ಚಿಸುತ್ತದೆ.

ಉದ್ಯೋಗಿಗಳು ಅಧಿಕಾರಿಗಳು ಮತ್ತು ಸಹೋಯೋಗಿಗಳ ಜೊತೆ ಉತ್ತಮ ಸಂಬಂಧವನ್ನು ಹೊಂದುತ್ತಾರೆ. ಕಚೇರಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕೊನೆಯಾಗುತ್ತವೆ. ವ್ಯವಹಾರದ ದೃಷ್ಟಿಯಿಂದ ಗ್ರಹಗಳ ಬದಲಾವಣೆಯು ಬಹಳ ಫಲಪ್ರದವಾಗಲಿದೆ. ವ್ಯಾಪಾರದ ಯೋಜನೆಗಳನ್ನು ರೂಪಿಸುತ್ತೀರಿ. ಅವುಗಳು ಸಹ ಪ್ರಯೋಜನ ನೀಡುತ್ತವೆ. ಸಂಗಾತಿಗೆ ಸಂಬಂಧಿಸಿದ ವಿಷಯಗಳಲ್ಲಿ ಪರಿಹಾರ ಇರುತ್ತದೆ. ಅದೇ ಸಮಯದಲ್ಲಿ, ಸರ್ಕಾರದ ನಿರ್ಧಾರಗಳು ಸಹ ನಿಮಗೆ ಪ್ರಯೋಜನ ನೀಡುತ್ತವೆ.

Daily Horoscope: ದಿನಭವಿಷ್ಯ 28-02-2021 Today astrology

ಕುಂಭ ರಾಶಿ(Aquarius): ಸರ್ಕಾರಿ ವ್ಯವಹಾರಗಳಲ್ಲಿ ಲಾಭ, ಮೂರು ಗ್ರಹಗಳ ಬದಲಾವಣೆಯು ನಿಮ್ಮ ರಾಶಿ ಚಿಹ್ನೆಗೆ ಅನುಕೂಲಕರ ಫಲಿತಾಂಶ ನೀಡಲಿದೆ. ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಎಲ್ಲವೂ ನಿಯಂತ್ರಣದಲ್ಲಿರುತ್ತವೆ. ಸರ್ಕಾರಿ ವ್ಯವಹಾರಗಳಲ್ಲಿಯೂ ಪರಿಹಾರ ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ಮತ್ತು ಕುಟುಂಬದ ಸಂತೋಷದ ದೃಷ್ಟಿಯಿಂದ ಗ್ರಹಗಳ ಸಾಗಣೆ ಪ್ರಯೋಜನಕಾರಿಯಾಗಿದೆ. ವೆಚ್ಚಗಳನ್ನು ನಿಗ್ರಹಿಸಲಾಗುತ್ತದೆ ಮತ್ತು ಸೌಕರ್ಯಗಳಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುತ್ತೀರಿ. ಗ್ರಹಗಳ ಸಾಗಣೆಯು ದುಡಿಯುವ ಜನರಿಗೆ ಪ್ರಯೋಜನಕಾರಿಯಾಗಿದೆ. ಕಾರ್ಮಿಕರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಉತ್ತಮ ಸಂಬಂಧಗಳು ಬೆಳೆಯುತ್ತದೆ. ಕೆಲಸದ ಸಮಸ್ಯೆಗಳು ಕಡಿಮೆಯಾಗುತ್ತದೆ. ವ್ಯವಹಾರದ ದೃಷ್ಟಿಕೋನದಿಂದ, ಮೂರು ಗ್ರಹಗಳ ಸಾಗಣೆಯು ಶುಭ ಫಲಿತಾಂಶಗಳನ್ನು ನೀಡುತ್ತದೆ. ವ್ಯವಹಾರವನ್ನು ವಿಸ್ತರಿಸಲು ಮತ್ತು ಯಶಸ್ವಿಯಾಗಲು ಹಲವು ಯೋಜನೆಗಳನ್ನು ರೂಪಿಸುತ್ತೀರಿ.

PitraDosha : ಪಿತೃಗಳ ರಕ್ಷೆ ಯಾಕೆ ಬೇಕು..? ಪಿತೃದೋಷ ನಿವಾರಣೆ ಹೇಗೆ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

 

 

Trending News