ಮೇಷ ರಾಶಿ: ಮಂಗಳನು ನಿಮ್ಮ ರಾಶಿ ಚಿಹ್ನೆಯ ಒಡೆಯ. ನಿಮ್ಮ ಅದೃಷ್ಟದ ಬಣ್ಣ ಗುಲಾಬಿ ಮತ್ತು ಬಿಳಿ. ಮಂಗಳವಾರ, ನೀವು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಭಾನುವಾರ ನಿಮ್ಮ ಅದೃಷ್ಟದ ಬಣ್ಣವು ಬಿಳಿ ಆಗಿರುತ್ತದೆ. ಈ ಎರಡು ಅದೃಷ್ಟ ಬಣ್ಣಗಳನ್ನು ಧರಿಸುವುದರಿಂದ ನಿಮ್ಮ ಅನೇಕ ಕಷ್ಟಕರ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸಬಹುದು.
ವೃಷಭ ರಾಶಿ: ರಾಶಿಯ ಒಡೆಯ ಶುಕ್ರ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಅದೃಷ್ಟದ ಬಣ್ಣ(Lucky Colour)ವನ್ನು ಕೆಂಪು ಮತ್ತು ಕೇಸರಿ ಎಂದು ಪರಿಗಣಿಸಲಾಗುತ್ತದೆ. ಶುಕ್ರನನ್ನು ಗಾಡ್ ಆಫ್ ಲವ್ ಎಂದು ಕರೆಯುತ್ತಾರೆ. ಶುಕ್ರನು ನಿಮ್ಮ ರಾಶಿಯ ಅಧಿಪತಿಯಾಗಿರುವ ಕಾರಣ ವೃಷಭ ರಾಶಿಯ ಜನರು ಸಂಗಾತಿಯ ಜೊತೆ ಉತ್ತಮ ವಿಷಯವನ್ನು ಪ್ರಸ್ತಾಪಿಸುವಾಗ ಕೆಂಪು ಅಥವಾ ಕೇಸರಿ ಬಣ್ಣದ ಬಟ್ಟೆ ಧರಿಸಬೇಕು.
Daily Horoscope: ದಿನಭವಿಷ್ಯ 22-03-2021 Today astrology
ಮಿಥುನ ರಾಶಿ: ಬುಧನನ್ನು ಮಿಥುನ ರಾಶಿಯ ಒಡೆಯ ಎಂದು ಪರಿಗಣಿಸಲಾಗುತ್ತದೆ. ಮಿಥುನ ರಾಶಿಯವರಿಗೆ ಹಸಿರು ಬಣ್ಣ ಉತ್ತಮ. ನೀವು ಹಸಿರು ಬಣ್ಣದ ಬಟ್ಟೆ(Dress)ಗಳನ್ನು ಧರಿಸಿ ಕೆಲವು ಶುಭ ಕೆಲಸಗಳನ್ನು ಮಾಡಬೇಕು. ಆಹಾರದಲ್ಲಿ ಹಸಿರು ತರಕಾರಿಗಳ ಪ್ರಮಾಣವನ್ನು ಹೆಚ್ಚಿಸಬೇಕು. ಇದಲ್ಲದೆ, ಪ್ರತಿ ಬುಧವಾರ ಹಸುವಿಗೆ ಪಾಲಕ್ ಸೊಪ್ಪನ್ನು ನೀಡಬೇಕು. ಇದು ನಿಮ್ಮ ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುತ್ತದೆ ಮತ್ತು ವೃತ್ತಿಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ.
Monday Fasting: ಸೋಮವಾರ 'ಉಪವಾಸ ವ್ರತ' ಮಾಡುವುದರಿಂದ ಸಂಪತ್ತು ಪ್ರಾಪ್ತಿ!
ಕಟಕ ರಾಶಿ: ರಾಶಿಯನ್ನು ಚಂದ್ರನ ರಾಶಿ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯ ಜನರ ಅದೃಷ್ಟದ ಬಣ್ಣವು ಚಂದ್ರನಂತೆ ಪ್ರಕಾಶಮಾನವಾದ ಬಿಳಿ(White Colour) ಎಂದು ಹೇಳಲಾಗುತ್ತದೆ. ಚಂದ್ರನನ್ನು ಲಕ್ಷ್ಮಿ ದೇವಿಯ ಸಹೋದರ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಕಟಕ ರಾಶಿಯ ಜನರು ಬಿಳಿ ಬಟ್ಟೆಗಳನ್ನು ಧರಿಸಿ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಅವರಿಗೆ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ.
Jatoli Shiva Temple: ಈ ಸ್ಫಟಿಕ ಮಣಿ ಶಿವಲಿಂಗದ ದೇವಸ್ಥಾನಕ್ಕಿದೆ 11 ಅಡಿ ಎತ್ತರದ ವಿಶಾಲ ಚಿನ್ನದ ಕಳಸ
ಸಿಂಹ ರಾಶಿ: ಸೂರ್ಯನ ಒಡೆತನದಲ್ಲಿರುವ ಸಿಂಹ ರಾಶಿಗೆ ಕಿತ್ತಳೆ ಬಣ್ಣವು ಉತ್ತಮ ಫಲಗಳನ್ನು ನೀಡುತ್ತದೆ. ಸೂರ್ಯನ ತೇಜಸ್ಸನ್ನು ಪ್ರತಿಬಿಂಬಿಸುವ ಈ ಬಣ್ಣವು ನಿಮ್ಮ ವೃತ್ತಿಜೀವನವನ್ನು ಕೂಡ ಉತ್ತಮಗೊಳಿಸುತ್ತದೆ. ಈ ತಿಂಗಳು ಹೊಸ ಕೆಲಸಕ್ಕಾಗಿ ನೀವು ಸಂದರ್ಶನವನ್ನು ನೀಡಲು ಹೋದರೆ, ಈ ಬಣ್ಣದ ಕರವಸ್ತ್ರವನ್ನು ನಿಮ್ಮ ಜೇಬಿನಲ್ಲಿ ಇರಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮಗೆ ಅದೃಷ್ಟ ಪ್ರಾಪ್ತಿಯಾಗುತ್ತದೆ. ಮತ್ತು ನೀವು ಉದ್ಯೋಗ(Job)ದಲ್ಲಿ ಯಶಸ್ಸನ್ನು ಪಡೆಯಬಹುದು.
ಕನ್ಯಾ ರಾಶಿ: ಬುಧ ಗ್ರಹವನ್ನು ಕನ್ಯಾರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಗೆ ಅದೃಷ್ಟದ ಬಣ್ಣ ಹಸಿರು(Green) ಎಂದು ಪರಿಗಣಿಸಲಾಗುತ್ತದೆ. ಹಸಿರು ಬಣ್ಣವು ನಿಮಗೆ ಸಂಪತ್ತನ್ನು ತರುತ್ತದೆ. ನಿಮ್ಮ ಬಟ್ಟೆ ಮತ್ತು ಆಹಾರದಲ್ಲಿ ಹಸಿರು ಬಣ್ಣವನ್ನು ಬಳಸುವುದರಿಂದ ಈ ತಿಂಗಳು ನಿಮ್ಮ ಭವಿಷ್ಯ ಚೆನ್ನಾಗಿರುತ್ತದೆ.
Salt Vaastu Tips: ಮನೆಯಲ್ಲಿ 'ನೆಗಟಿವ್ ಎನರ್ಜಿ' ತೆಗೆದು ಹಾಕಲು ಉಪ್ಪಿನ ವಾಸ್ತು ಪರಿಹಾರ!
ತುಲಾ ರಾಶಿ: ಶುಕ್ರನು ತುಲಾ ರಾಶಿಯ ಮಾಲೀಕ ಎಂದು ಪರಿಗಣಿಸಲಾಗುತ್ತದೆ. ಶುಕ್ರನನ್ನು ಲೌಕಿಕ ಸುಖದ ಅಂಶವೆಂದು ಪರಿಗಣಿಸಲಾಗುತ್ತದೆ. ನಿಮ್ಮ ರಾಶಿಗೆ ಬೆಳ್ಳಿ(Siliver) ಅದೃಷ್ಟ ಎಂದು ಪರಿಗಣಿಸಲಾಗಿದೆ. ಈ ತಿಂಗಳು ನೀವು ಬೆಳ್ಳಿ ಉಂಗುರ ಅಥವಾ ಇತರ ಬೆಳ್ಳಿ ಆಭರಣಗಳನ್ನು ಧರಿಸಬೇಕು. ಇದು ನಿಮ್ಮ ಗುರಿಯನ್ನು ಬೇಗ ತಲುಪಲು ನೆರವಾಗುತ್ತದೆ.
ವೃಶ್ಚಿಕ ರಾಶಿ: ನಿಮ್ಮ ರಾಶಿ ಚಿಹ್ನೆಗೆ ಮಂಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಮಂಗಳನನ್ನು ಧೈರ್ಯ ಮತ್ತು ಶೌರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಅದೃಷ್ಟದ ಬಣ್ಣವನ್ನು ಕುಂಕುಮ ಬಣ್ಣ ಮತ್ತು ಬೂದು ಬಣ್ಣ ಎಂದು ಗುರುತಿಸಲಾಗಿದೆ. ಈ ಬಣ್ಣಗಳ ಪ್ರಾಮುಖ್ಯತೆಯೊಂದಿಗೆ, ನಿಮ್ಮ ಅದೃಷ್ಟವೂ ಖುಲಾಯಿಸುತ್ತದೆ. ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಇರಬೇಕೆಂದು ನೀವು ಬಯಸಿದರೆ ಮೇಲೆ ಹೇಳಿರುವ ಎರಡು ಬಣ್ಣಗಳ ಬಟ್ಟೆಯನ್ನು ಧರಿಸಬೇಕು.
Daily Horoscope: ದಿನಭವಿಷ್ಯ 21-03-2021 Today astrology
ಧನು ರಾಶಿ: ಧನು ರಾಶಿಗೆ ಗುರು ಅಧಿಪತಿಯಾಗಿದ್ದಾನೆ. ಗುರುವನ್ನು ಬೃಹಸ್ಪತಿ, ವಿದ್ಯೆ(Study)ಗೆ ಒಡೆಯ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಅದೃಷ್ಟದ ಬಣ್ಣ ಹಳದಿ ಮತ್ತು ಕೇಸರಿ. ಗುರುವಾರ ಹಳದಿ ಬಣ್ಣವನ್ನು ಧರಿಸುವುದರಿಂದ ಉತ್ತಮ ನಿದ್ರೆ, ಅದೃಷ್ಟ ಪ್ರಾಪ್ತಿಯಾಗುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಸಂತೋಷವನ್ನು ಪಡೆಯಬಹುದು ಮತ್ತು ವೈವಾಹಿಕ ಜೀವನದಲ್ಲಿ ಸಂತೋಷವನ್ನು ಪಡೆಯಬಹುದು.
ಮಕರ ರಾಶಿ: ಮಕರ ರಾಶಿಗೆ ಶನಿದೇವನೇ ಒಡೆಯ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯ ಜನರ ಅದೃಷ್ಟದ ಬಣ್ಣವನ್ನು ನೀಲಿ(Blue) ಎಂದು ಪರಿಗಣಿಸಲಾಗುತ್ತದೆ. ಶನಿವಾರ ನೀವು ನೀಲಿ ಬಟ್ಟೆಗಳನ್ನು ಧರಿಸಿ ಶನಿ ದೇವಾಲಯದಲ್ಲಿ ಪೂಜೆ ಸಲ್ಲಿಸಬೇಕು. ಇದು ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸುವಂತೆ ಮಾಡುತ್ತದೆ.
Vastu Tips: ಮನೆಯಲ್ಲಿ ಒಂದು ನವಿಲುಗರಿ ಇಡುವುದರಿಂದಾಗುವ ಲಾಭಗಳು
ಕುಂಭ ರಾಶಿ: ಕುಂಭ ರಾಶಿಯ ಮಾಲೀಕ ಶನಿದೇವ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯ ಜನರ ಅದೃಷ್ಟದ ಬಣ್ಣವನ್ನು ನೇರಳೆ ಎಂದು ಪರಿಗಣಿಸಲಾಗುತ್ತದೆ. ನೀವು ಈ ಬಣ್ಣದ ಬಟ್ಟೆಗಳನ್ನು ಧರಿಸಿ ಕೆಲಸ ಮತ್ತು ನಿಮ್ಮ ಇತರ ಕಾರ್ಯಕ್ಷೇತ್ರಕ್ಕೆ ಹೋಗಬೇಕು. ಆಗ ಉದ್ಯೋಗದಲ್ಲಿ ಪ್ರಚಾರದ ಜೊತೆಗೆ, ನೀವು ವ್ಯವಹಾರದಲ್ಲಿಯೂ ಯಶಸ್ಸನ್ನು ಪಡೆಯುತ್ತೀರಿ.
ಮೀನ ರಾಶಿ: ಸ್ನೇಹಪರ ವರ್ತನೆಯಿಂದ ಮೀನ ರಾಶಿಯ ಜನರು ತಮ್ಮ ಕಚೇರಿ ಮತ್ತು ಕುಟುಂಬದಲ್ಲಿ ಗೌರವವನ್ನು ಪಡೆಯುತ್ತಾರೆ. ಈ ರಾಶಿಯ ಜನರು ಗುರು ಬಲವನ್ನು ಹೊಂದಿರುತ್ತಾರೆ. ಇವರ ಅದೃಷ್ಟದ ಬಣ್ಣ ಹಳದಿ ಮತ್ತು ಕೆಂಪು ಎಂದು ಹೇಳಲಾಗುತ್ತದೆ. ಪ್ರತಿ ಭಾನುವಾರ ತಾಮ್ರದ ತಟ್ಟೆಯಲ್ಲಿ ಹಳದಿ ಅಥವಾ ಕೆಂಪು ಶ್ರೀಗಂಧವನ್ನು ಹಾಕಿ ಸೂರ್ಯದೇವನಿಗೆ ಅರ್ಗ್ಯವನ್ನು ಅರ್ಪಿಸಬೇಕು. ಇದು ನಿಮ್ಮ ಕೆಲಸವನ್ನು ಪೂರ್ಣಗೊಳಿಸುತ್ತದೆ ಮತ್ತು ಯಶಸ್ಸು ಸಾಧಿಸುವಂತೆ ಮಾಡುತ್ತದೆ.
Rahu Planet Bad Effects: ರಾಹು ಗ್ರಹದ ನಕ್ಷತ್ರ ಪರಿವರ್ತನೆ: ಐದು ರಾಶಿಯವರಿಗೆ ಸಂಕಷ್ಟ ಮತ್ತೆ ಕೆಲವರಿಗೆ ಅದೃಷ್ಟ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.