ಈ ರಾಶಿಯವರ ಈ ಒಂದು ಅದ್ಭುತ ಗುಣದಿಂದ ಎದುರಿಗಿದ್ದವರ ಹೃದಯವನ್ನು ಸುಲಭವಾಗಿ ಗೆದ್ದು ಬಿಡುತ್ತಾರೆ

 ಜ್ಯೋತಿಷ್ಯದ ಪ್ರಕಾರ, 3 ರಾಶಿಯ ಪುರುಷರು ಮತ್ತು ಮಹಿಳೆಯರು ಅಡುಗೆ ಮಾಡಲು ಇಷ್ಟಪಡುತ್ತಾರೆ.  ರುಚಿಕರವಾದ ಆಹಾರವನ್ನು ತಿನ್ನಿಸುವ ಮೂಲಕ, ಎದುರಿಗಿರುವವರ ಹೃದಯವನ್ನು ಸುಲಭವಾಗಿ ಗೆಲ್ಲುತ್ತಾರೆ. 

Written by - Zee Kannada News Desk | Last Updated : Mar 24, 2022, 12:15 PM IST
  • ಈ ರಾಶಿಯವರು ಅಡುಗೆಯಲ್ಲಿ ನಿಪುಣರು
  • ಅಡುಗೆಯ ಆಧಾರದ ಮೇಲೆ ಜನರ ಹೃದಯವನ್ನು ಗೆಲ್ಲುತ್ತಾರೆ
  • ಅಡುಗೆ ಮಾಡಿ ಬಡಿಸುವುದೆಂದರೆ ಇವರಿಗೆ ಇಷ್ಟ
ಈ ರಾಶಿಯವರ ಈ ಒಂದು ಅದ್ಭುತ ಗುಣದಿಂದ ಎದುರಿಗಿದ್ದವರ ಹೃದಯವನ್ನು ಸುಲಭವಾಗಿ ಗೆದ್ದು ಬಿಡುತ್ತಾರೆ  title=
ಈ ರಾಶಿಯವರು ಅಡುಗೆಯಲ್ಲಿ ನಿಪುಣರು (file photo)

ನವದೆಹಲಿ : ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಪ್ರತಿಯೊಂದು ರಾಶಿಯ ಜನರ ಒಳಿತು ಕೆಡುಕುಗಳನ್ನು ಹೇಳಲಾಗಿದೆ. ಈ ಗುಣಲಕ್ಷಣಗಳು ಅವರ ವ್ಯಕ್ತಿತ್ವದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಗುಣಗಳ  ಆಧಾರದ ಮೇಲೆಯೇ ಜನರು ಅವರನ್ನು ಇಷ್ಟಪಡಲೂಬಹುದು. ಇಷ್ಟಪಡದೆಯೂ ಇರಬಹುದು. ಕೆಲವರಲ್ಲಿ ರುಚಿಕರವಾದ ಅಡುಗೆ ಮಾಡುವ ಗುಣವಿರುತ್ತದೆ (Cooking Habits). ಜ್ಯೋತಿಷ್ಯದ ಪ್ರಕಾರ, 3 ರಾಶಿಯ ಪುರುಷರು ಮತ್ತು ಮಹಿಳೆಯರು ಅಡುಗೆ ಮಾಡಲು ಇಷ್ಟಪಡುತ್ತಾರೆ.  ರುಚಿಕರವಾದ ಆಹಾರವನ್ನು ತಿನ್ನಿಸುವ ಮೂಲಕ, ಎದುರಿಗಿರುವವರ ಹೃದಯವನ್ನು ಸುಲಭವಾಗಿ ಗೆಲ್ಲುತ್ತಾರೆ.  

ಈ ರಾಶಿಯವರು ಅಡುಗೆಯಲ್ಲಿ ನಿಪುಣರು  :
ಮಿಥುನ ರಾಶಿ :  ಮಿಥುನ ರಾಶಿಯವರಿಗೆ (Gemini) ಅಡುಗೆ ಮಾಡುವುದು ಮತ್ತು ತಿನ್ನಿಸುವುದು ಎಂದರೆ ಬಹಳ ಇಷ್ಟ. ಈ ರಾಶಿಯವರು ಅಡುಗೆ ಮಾಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಹೊಸ ಭಕ್ಷ್ಯಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ಈ ಜನರು ಧೈರ್ಯಶಾಲಿ ಮತ್ತು ನಿರ್ಭೀತರು (Nature of Gemini). ಯಾವುದೇ ಅಪಾಯಕಾರಿ ಕೆಲಸವಾದರೂ ಹಿಂದೆ ಸರಿಯುವುದಿಲ್ಲ.  

ಇದನ್ನೂ ಓದಿ : ಇಂದಿನಿಂದ 15 ದಿನಗಳವರೆಗೆ ಈ ರಾಶಿಯವರಿಗೆ ವರದಾನ..! ರೂಪುಗೊಳ್ಳಲಿದೆ ಧನ ಲಾಭದ ಪ್ರಬಲ ಯೋಗ

ಕನ್ಯಾ ರಾಶಿ :  ಕನ್ಯಾ ರಾಶಿಯ (Virgo) ಜನರು ತುಂಬಾ ಭಾವುಕರಾಗಿರುತ್ತಾರೆ. ಆದರೆ ಈ ರಾಶಿಯವರು ಬಹಳ ಬುದ್ದಿವಂತರು. ಈ ರಾಶಿಯವರು ಎಲ್ಲರನ್ನೂ ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ.  ಕನ್ಯಾ ರಾಶಿಯವರು ಅಡುಗೆ ಮಾಡುವುದರಲ್ಲಿ ಪರಿಣಿತರಾಗಿರುತ್ತಾರೆ. ಮನೆಗೆ ಯಾರೇ ಬಂದರೂ ಬಹಳ ಪ್ರೀತಿಯಿಂದ ಅಡುಗೆ ಮಾಡಿ ಬಡಿಸುತ್ತಾರೆ.  

ತುಲಾ  : ತುಲಾ ರಾಶಿಯ (Libra) ಜನರು ಅಡುಗೆಯಲ್ಲೂ ನಿಪುಣರು. ಈ ಜನರು ಶಾಂತ ಮತ್ತು ಸಮತೋಲಿತ ಜೀವನವನ್ನು ಬಯಸುತ್ತಾರೆ. ಅವರು ಸ್ವಲ್ಪ ಒತ್ತಡಕ್ಕೊಳಗಾದರೂ ಅಡುಗೆ ಮಾಡುವ ಮೂಲಕ ತಮ್ಮ ಒತ್ತಡವನ್ನು ಹೊರಹಾಕುತ್ತಾರೆ. ಈ ರಾಶಿಯವರು (Zodiac Sign) ತಮ್ಮ ದುಃಖವನ್ನೆಲ್ಲಾ ಮರೆತು ಬಹಳ ಖುಷಿಯಿಂದಲೇ ಅಡುಗೆ ಮಾಡುತ್ತಾರೆ. 

ಇದನ್ನೂ ಓದಿ : Budh Gochar: ಬುಧನ ರಾಶಿ ಪರಿವರ್ತನೆ; ಈ 6 ರಾಶಿಯವರಿಗೆ ಸಂಕಷ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News