ಶ್ರೀ ರಾಮನಿಗೆ ಬಲು ಪ್ರಿಯ ಈ ನೈವೇದ್ಯಗಳು : ಇಂದಿನ ವಿಶೇಷ ದಿನ ಪೂಜೆಯ ನಂತರ ಅರ್ಪಿಸಿ ಈ ಪ್ರಸಾದ

Ayodhya Rama : ಇಂದು ಮನೆಯಲ್ಲಿ ಕೂಡಾ ಶ್ರೀ ರಾಮನಿಗೆ ವಿಶೇಷ ಪೂಜೆ ನೆರವೇರಿಸಬಹುದು. ಭಗವಾನ್ ಶ್ರೀ ರಾಮನಿಗೆ ಪ್ರಿಯವಾದ ನೈವೇದ್ಯ ಅರ್ಪಿಸುವ ಮೂಲಕ ಅವರ ವಿಶೇಷ ಕೃಪೆಗೆ ಪಾತ್ರರಾಗಬಹುದು. 

Written by - Ranjitha R K | Last Updated : Jan 22, 2024, 10:58 AM IST
  • ರಾಮ ಭಕ್ತರ 500 ವರ್ಷಗಳ ನಿರೀಕ್ಷೆ ಕೊನೆಗೊಳ್ಳಲಿದೆ.
  • ಇಂದು ಅಂದರೆ ಜನವರಿ 22 ರಂದು ರಾಮಮಂದಿರ ಉದ್ಘಾಟನೆಯಾಗಲಿದೆ
  • ಮೋದಿಯವರು ರಾಮಲಲ್ಲಾ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಶ್ರೀ ರಾಮನಿಗೆ ಬಲು ಪ್ರಿಯ ಈ ನೈವೇದ್ಯಗಳು : ಇಂದಿನ ವಿಶೇಷ ದಿನ ಪೂಜೆಯ ನಂತರ ಅರ್ಪಿಸಿ ಈ ಪ್ರಸಾದ   title=

Ayodhya Rama : ರಾಮ ಭಕ್ತರ 500 ವರ್ಷಗಳ ನಿರೀಕ್ಷೆ ಕೊನೆಗೊಳ್ಳಲಿದೆ. ಇಂದು ಅಂದರೆ ಜನವರಿ 22 ರಂದು ರಾಮಮಂದಿರ ಉದ್ಘಾಟನೆಯಾಗಲಿದೆ. ಪ್ರಧಾನಿ ಮೋದಿಯವರು ರಾಮಲಲ್ಲಾ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಸುಸಂದರ್ಭಕ್ಕೆ ಸಾಕ್ಷಿಯಾಗುವಂತೆ ಟ್ರಸ್ಟ್ ಅನೇಕ ಜನರನ್ನು ಆಹ್ವಾನಿಸಿದೆ. ರಾಮಮಂದಿರದ ಜೊತೆಗೆ ಇಡೀ ಅಯೋಧ್ಯೆಯನ್ನು ಅಲಂಕರಿಸಲಾಗಿದೆ.  ಈ ದಿನ ಎಲ್ಲರಿಗೂ ವಿಶೇಷವಾಗಿದ್ದರೂ ಪ್ರತಿಯೊಬ್ಬರೂ ಆ ಪುಣ್ಯಭೂಮಿಗೆ ಭೇಟಿ ನೀಡುವುದು ಸಾಧ್ಯವಾಗುವುದಿಲ್ಲ. ಆದರೆ ಇಂದು ಮನೆಯಲ್ಲಿ ಕೂಡಾ ಶ್ರೀ ರಾಮನಿಗೆ ವಿಶೇಷ ಪೂಜೆ ನೆರವೇರಿಸಬಹುದು. ಭಗವಾನ್ ಶ್ರೀ ರಾಮನಿಗೆ ಪ್ರಿಯವಾದ ನೈವೇದ್ಯ ಅರ್ಪಿಸುವ ಮೂಲಕ ಅವರ ವಿಶೇಷ ಕೃಪೆಗೆ ಪಾತ್ರರಾಗಬಹುದು. 

 ಪಾಯಸ : 
 ಪಾಯಸ  ಭಗವಾನ್ ರಾಮನ ನೆಚ್ಚಿನ ನೈವೇದಯ ಎಂದು ಹೇಳಲಾಗುತ್ತದೆ. ಪುರಾಣದ ಪ್ರಕಾರ, ಭಗವಾನ್ ರಾಮ ಮತ್ತು ಎಲ್ಲಾ 4 ಸಹೋದರರು ಜನಿಸಿದಾಗ, ಪಾಯಸ  ತಯಾರಿಸಲಾಗಿತ್ತಂತೆ. ಹಾಗಾಗಿ ಭಗವಾನ್ ರಾಮನ ಆರಾಧನೆಯ ವೇಳೆ  ಪಾಯಸ ಅರ್ಪಿಸುವುದು ತುಂಬಾ ಮಂಗಳಕರವೆಂದು ಹೇಳಲಾಗುತ್ತದೆ. ಈ ದಿನ, ನೀವು ಕೂಡಾ ಪೂಜೆಯ ನೈವೇದ್ಯವಾಗಿ ಶ್ರೀರಾಮನಿಗೆ ಪಾಯಸ ಅರ್ಪಿಸಬಹುದು. 

ಇದನ್ನೂ ಓದಿ : Weekly Horoscope: ಈ ಆರು ರಾಶಿಯವರಿಗೆ ಸಿಗಲಿದೆ ಶ್ರೀರಾಮ ಆಶೀರ್ವಾದ

ಈ ವಸ್ತುಗಳ ನೈವೇದ್ಯವೂ ಫಲಪ್ರದವಾಗುತ್ತದೆ : 
ಮನೆಯಲ್ಲಿ ಶ್ರೀರಾಮನನ್ನು ಪೂಜಿಸಿದ ನಂತರ, ಸಿಹಿತಿಂಡಿಗಳು, ಗುಲಾಬ್ ಜಾಮೂನ್, ಕಲಕಂದ್ ಅನ್ನು ಅರ್ಪಿಸಬಹುದು. ಈ ರೀತಿ ಮಾಡುವುದರಿಂದ ಭಗವಾನ್ ರಾಮನು ಸುಖ ಸಂತೋಷ ಕರುಣಿಸುತ್ತಾನೆ ಎಂದು ಹೇಳಲಾಗುತ್ತದೆ. ಇದಲ್ಲದೇ ಪಂಚಾಮೃತವನ್ನು ಕೂಡಾ ಅರ್ಪಿಸಬಹುದು. 

ಈ ಹಣ್ಣನ್ನು ಅರ್ಪಿಸಿ:
ಪುರಾಣಗಳ ಪ್ರಕಾರ, ಶ್ರೀರಾಮನು ವನವಾಸಕ್ಕೆ ಹೋದಾಗ, ಅವನು ಕಾಡಿನಲ್ಲಿ ರಾಮಕಂದ ಅಥವಾ ಕಂದಮೂಲ  ಹಣ್ಣನ್ನು ಸೇವಿಸಿದ್ದನಂತೆ. ಇದು ಶ್ರೀರಾಮನಿಗೆ ಬಹಳ ಇಷ್ಟವಾದ ಹಣ್ಣು ಎಂದು ಹೇಳಲಾಗುತ್ತದೆ. ರಾಮನಿಗೆ ಕಂದಮೂಲದ ಹಣ್ಣನ್ನು ಅರ್ಪಿಸಬಹುದು.ಅಲ್ಲದೆ, ಶಬರಿ ಬುಗರಿಯನ್ನು ಹಿಡಿದು ರಾಮನಿಗಾಗಿ ಕಾಯುತ್ತಿದ್ದ ಕತೆಯನ್ನು ನಾವೆಲ್ಲರೂ ಕೇಳಿದ್ದೆವು. ಬುಗರಿ ಹಣ್ಣು ಹುಳಿಯಾಗಿದೆಯೇ ಎಂದು ನೋಡಲು ಶಬರಿ ಹಣ್ಣನ್ನು ಕಚ್ಚಿ ಪರೀಕ್ಷಿಸುತ್ತಿದ್ದಳಂತೆ. ಶಬರಿಯ ಭಕ್ತಿಗೆ ಮೆಚ್ಚಿದ್ದ ಶ್ರೀರಾಮ ಈ ಹಣ್ಣನ್ನು ತಿಂದು ಸಂತೃಪ್ತಿಯಾಗಿದ್ದ ಎನ್ನುತ್ತದೆ ಪುರಾಣ. ಹಾಗಾಗಿ ಶ್ರೀರಾಮನ ಪೂಜೆಗೆ  ಬುಗರಿ ಹಣ್ಣನ್ನು ಕೂಡಾ ಬಳಸಬಹುದು.  

ಇದನ್ನೂ ಓದಿ :Ayodhya Ram Mandir Free Prasad: ಅಯೋಧ್ಯೆ ರಾಮಮಂದಿರ ಪ್ರಸಾದವನ್ನು ಆನ್‌ಲೈನ್‌ನಲ್ಲಿ ಈ ರೀತಿ ಫ್ರೀ ಆಗಿ ಬುಕ್ ಮಾಡಿ

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/xFI-KJNrEP8?si=miBicRGRD6W5W6j8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News