Shani Transit 2022: ಮುಂದಿನ 33 ದಿನಗಳು ಈ 8 ರಾಶಿಯವರಿಗೆ ತುಂಬಾ ಕಷ್ಟಕರ ಪರಿಸ್ಥಿತಿ ಎದುರಾಗಲಿದೆ..!

ಶನಿಯು ತನ್ನದೇ ಆದ ಮಕರ ರಾಶಿಯಲ್ಲಿ 33 ದಿನಗಳವರೆಗೆ ಅಸ್ತಮಿಸುತ್ತಾನೆ. ಇದರಿಂದ 8 ರಾಶಿಯ ಜನರಿಗೆ ತುಂಬಾ ಕಷ್ಟಕರ ಪರಿಸ್ಥಿತಿಗಳು ಎದುರಾಬಹುದು. ಹೀಗಾಗಿ ಅಗತ್ಯ ಎಚ್ಚರಿಕೆ ತೆಗೆದುಕೊಂಡರೆ ಶನಿಯ ಪ್ರಭಾವದಿಂದ ಪಾರಾಗಬಹುದು.

Written by - Zee Kannada News Desk | Last Updated : Jan 23, 2022, 07:10 AM IST
  • ಮೇಷ ರಾಶಿಯವರಿಗೆ 33 ದಿನ ತುಂಬಾ ಒತ್ತಡಮಯ ಪರಿಸ್ಥಿತಿ ಎದುರಾಗಲಿದೆ
  • ಅಡೆತಡೆಗಳಿಂದ ಮಿಥುನ ರಾಶಿಯವರ ಕೆಲಸ ಕಾರ್ಯಗಳು ಸರಿಯಾಗಿ ನಡೆಯುವುದಿಲ್ಲ
  • ಕರ್ಕ ರಾಶಿಯವರು ಸಂಬಂಧಗಳ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು
Shani Transit 2022: ಮುಂದಿನ 33 ದಿನಗಳು ಈ 8 ರಾಶಿಯವರಿಗೆ ತುಂಬಾ ಕಷ್ಟಕರ ಪರಿಸ್ಥಿತಿ ಎದುರಾಗಲಿದೆ..! title=
ಹಣದ ನಷ್ಟ ಉಂಟಾಗಬಹುದು ಎಚ್ಚರಿಕೆ

ನವದೆಹಲಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನದಲ್ಲಿನ ಪ್ರತಿಯೊಂದು ಬದಲಾವಣೆಯು ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಆದರೆ ಈ ಬದಲಾವಣೆಯು ಶನಿಯ ಸ್ಥಾನ(Shani Rashi Parivartan)ದಲ್ಲಿದ್ದರೆ ಆಗ ಪರಿಣಾಮವು ಅನೇಕ ಪಟ್ಟು ಹೆಚ್ಚಾಗುತ್ತದೆ. ಜನವರಿ 22ರಂದು ಕ್ರೂರ ದೇವತೆ ಶನಿ ಅಸ್ತಮಿಸಿದ್ದಾನೆ. 33 ದಿನಗಳವರೆಗೆ ಶನಿದೇವ ತಮ್ಮದೇ ಆದ ರಾಶಿಚಕ್ರದಲ್ಲಿ ಇರುತ್ತಾರೆ. ಈ ಸಮಯದಲ್ಲಿ 8 ರಾಶಿಯವರಿಗೆ ತುಂಬಾ ಕಷ್ಟಕರವಾಗಿರುತ್ತದೆ.

ಹಣದ ನಷ್ಟ ಉಂಟಾಗಬಹುದು ಎಚ್ಚರಿಕೆ

ಮೇಷ ರಾಶಿ: ಈ 33 ದಿನಗಳು ಮೇಷ ರಾಶಿಯವರಿಗೆ ತುಂಬಾ ಒತ್ತಡಮಯ ಪರಿಸ್ಥಿತಿ(Shani Transit 2022) ನಿರ್ಮಾಣವಾಗಲಿದೆ. ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕೆಲಸದಲ್ಲಿ ಆಸಕ್ತಿಯ ಕೊರತೆಯಿಂದ ನೀವು ಅಸಮಾಧಾನಗೊಳ್ಳುವಿರಿ. ಕೆಲಸದಲ್ಲಿ ಬರುವ ಅಡೆತಡೆಗಳು ನಿಮ್ಮನ್ನು ವಿಚಲಿತಗೊಳಿಸುತ್ತವೆ.

ಮಿಥುನ ರಾಶಿ: ಮಿಥುನ ರಾಶಿಯವರ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಅಡೆತಡೆಗಳು ಮತ್ತೆ ಮತ್ತೆ ಬರುತ್ತವೆ. ಈ ಸಮಯವು ವೃತ್ತಿಜೀವನದಲ್ಲಿ ಸವಾಲುಗಳನ್ನು ತರುತ್ತದೆ. ಕೆಲಸದ ಒತ್ತಡವಿರುತ್ತದೆ. ಈ ಸಮಯವನ್ನು ನೀವು ತುಂಬಾ ತಾಳ್ಮೆಯಿಂದ ತೆಗೆದುಕೊಳ್ಳಬೇಕು.

ಇದನ್ನೂ ಓದಿ: Lucky Daughters : ಈ 3 ರಾಶಿಯ ಹೆಣ್ಣುಮಕ್ಕಳು ತಮ್ಮ ತಂದೆಗೆ ತುಂಬಾ ಅದೃಷ್ಟವಂತರಂತೆ!

ಕರ್ಕಾಟಕ ರಾಶಿ: ಕರ್ಕ ರಾಶಿಯ ಜನರು ಸಂಬಂಧಗಳ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವೃತ್ತಿಯಲ್ಲಿ ಅಪೇಕ್ಷಿತ ಪ್ರಗತಿಯನ್ನು ಪಡೆಯದ ಕಾರಣ ನಿರಾಶೆ ಇರುತ್ತದೆ. ಮಾಲೀಕರು ಮತ್ತು ಸಹೋದ್ಯೋಗಿಗಳೊಂದಿಗಿನ ಸಂಬಂಧವು ಉತ್ತಮವಾಗಿರುವುದಿಲ್ಲ.

ತುಲಾ ರಾಶಿ: ಈ ಸಮಯ ತುಲಾ ರಾಶಿಯವರಿಗೆ ಕುಟುಂಬ, ಹಣ, ವೃತ್ತಿಯಲ್ಲಿ ತೊಂದರೆಗಳನ್ನು ನೀಡುತ್ತದೆ. ಉದ್ವಿಗ್ನತೆ ಮೇಲುಗೈ ಸಾಧಿಸುತ್ತದೆ. ಧ್ಯಾನ ಅಥವಾ ಮಂತ್ರಗಳ ಪಠಣದ ಸಹಾಯವನ್ನು ತೆಗೆದುಕೊಳ್ಳುವುದು ಉತ್ತಮ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ಪ್ರತಿ ಕೆಲಸದಲ್ಲಿಯೂ ಅಡಚಣೆ ಅಥವಾ ವಿಳಂಬವನ್ನು ಎದುರಿಸಬೇಕಾಗುತ್ತದೆ. ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಉದ್ಭವಿಸಬಹುದು, ಹೀಗಾಗಿ ಎಚ್ಚರಿಕೆ ವಹಿಸುವುದು ಅಗತ್ಯ.

ಧನು ರಾಶಿ: ಈ ಸಂದರ್ಭದಲ್ಲಿ ಧನು ರಾಶಿಯವರಿಗೆ ಕಠಿಣ ಪರಿಶ್ರಮದ ಫಲ ಸಿಗುವುದಿಲ್ಲ ಅಥವಾ ಗೌರವ ಲಭಿಸುವುದಿಲ್ಲ. ಇದರಿಂದ ನಿಮಗೆ ತುಂಬಾ ನಿರಾಶೆಯಾಗುತ್ತದೆ. ನಿಮ್ಮ ಕೆಲಸದಲ್ಲಿ ಬದಲಾವಣೆ ಮಾಡಲು ಸಹ ನೀವು ಯೋಜಿಸಬಹುದು.

ಇದನ್ನೂ ಓದಿ: ಮುಟ್ಟಿನ ಸಂದರ್ಭದಲ್ಲಿ ಗುರುವಾರದ ವೃತಾಚರಣೆ ಮಾಡಬೇಕೇ ಬೇಡವೇ ? ಈ ವಿಚಾರಗಳ ಬಗ್ಗೆ ಇರಲಿ ಗಮನ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News