Nail Cutting: ರಾತ್ರಿ ಹೊತ್ತು ಉಗುರು ಕತ್ತರಿಸಬಾರದು ಎಂದು ಏಕೆ ಹೇಳುತ್ತಾರೆ ಹಿರಿಯರು?

Nails Cutting At Night - ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ ಉಗುರುಗಳನ್ನು ಕತ್ತರಿಸಬಾರದು ಎಂದು ಮನೆಯಲ್ಲಿನ ಹಿರಿಯರು ಹೇಳಿದ್ದನ್ನು ನೀವು ಕೇಳಿರಬಹುದು. ಅಷ್ಟೇ ಯಾಕೆ ಬಹುತೇಕ ಜನರು ಹಿರಿಯರ ಈ ಸಲಹೆಯನ್ನು ಅನುಸರಿಸುತ್ತಾರೆ. ಆದರೆ, ಇದರ ಹಿಂದಿನ ಅಸಲಿ ಕಾರಣ ಏನು? ಇಂದು ನಾವು ನಿಮಗೆ ಈ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ.

Written by - Nitin Tabib | Last Updated : Mar 3, 2022, 06:00 PM IST
  • ಉಗುರು ಕತ್ತರಿಸುವ ಸರಿಯಾದ ಸಮಯ ಯಾವುದು?
  • ರಾತ್ರಿ ಹೊತ್ತು ಉಗುರು ಕತ್ತರಿಸದಿರಲು ಮುಖ್ಯ ಕಾರಣ ಏನು?
  • ನೀರಿನಲ್ಲಿ ನೆನೆಸಿದ ಬಳಿಕ ಮಾತ್ರ ಉಗುರನ್ನು ಕತ್ತರಿಸಬೇಕು
Nail Cutting: ರಾತ್ರಿ ಹೊತ್ತು ಉಗುರು ಕತ್ತರಿಸಬಾರದು ಎಂದು ಏಕೆ ಹೇಳುತ್ತಾರೆ ಹಿರಿಯರು? title=
Reason Behind Nails Cutting At Night (File Photo)

ನವದೆಹಲಿ: Reason Behind Nails Cutting At Night - ರಾತ್ರಿ ಉಗುರುಗಳನ್ನು ಏಕೆ ಕತ್ತರಿಸಬಾರದು? ಇದು ಪ್ರತಿ ಮಕ್ಕಳ, ಹಾಗೂ ಯುವಕರ ಮನದಲ್ಲಿ ಮೂಡುವ ಸಾಮಾನ್ಯ ಪ್ರಶ್ನೆ, ರಾತ್ರಿ ವೇಳೆ ಉಗುರು ಕತ್ತರಿಸುವುದ್ನ್ನು ಮನೆಯ ಹಿರಿಯರು ತಡೆದರೂ ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಗುವುದು ತೀರಾ ಅಪರೂಪ. ಆದ್ದರಿಂದ ಇಂದು ನಾವು ಈ ಪ್ರಶ್ನೆಯ ಕೇವಲ ನಿಖರವಾದ ಅರ್ಥವನ್ನು ಮಾತ್ರ ಹೇಳುವುದಲ್ಲದೆ, ಉಗುರುಗಳನ್ನು ಕತ್ತರಿಸುವ ಸರಿಯಾದ ಮಾರ್ಗ ಮತ್ತು ಸಮಯದ ಬಗ್ಗೆಯೂ ಮಾಹಿತಿ ನೀಡುತ್ತಿದ್ದೇವೆ.

ಉಗುರು ಕತ್ತರಿಸುವ ಸರಿಯಾದ ಸಮಯ ಯಾವುದು? (Lifestyle News In Kannada)
ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಅಸೋಸಿಯೇಷನ್ ​​ಪ್ರಕಾರ, ನಮ್ಮ ಉಗುರುಗಳು ಕೆರಾಟಿನ್ (Karatin) ಎಂಬ ಪ್ರೋಟೀನ್ ಹೊಂದಿರುತ್ತವೆ. ಅದಕ್ಕಾಗಿಯೇ ಸ್ನಾನದ ನಂತರ ನಿಮ್ಮ ಉಗುರುಗಳನ್ನು ಕತ್ತರಿಸುವುದು ಎಂದಿಗೂ ಕೂಡ ಉತ್ತಮ ಎಂದು ಪರಿಗಣಿಸಲಾಗಿದೆ. ಏಕೆಂದರೆ ಆಗ ನಮ್ಮ ಉಗುರುಗಳು ನೀರಿನಲ್ಲಿ ಅಥವಾ ಸಾಬೂನಿನ ನೀರಿನಲ್ಲಿ ಸಂಪೂರ್ಣವಾಗಿ ನೆನೆದಿರುವ ಕಾರಣ ಸುಲಭವಾಗಿ ಕತ್ತರಿಸಲ್ಪಡುತ್ತವೆ. ಆದರೆ ನಾವು ರಾತ್ರಿಯಲ್ಲಿ ಅವುಗಳನ್ನು ಕತ್ತರಿಸಿದಾಗ, ಅವು ದೀರ್ಘಕಾಲದವರೆಗೆ ನೀರಿನ ಸಂಪರ್ಕಕ್ಕೆ ಬರಲು ಸಾಧ್ಯವಾಗದೆ ಗಟ್ಟಿಯಾಗುತ್ತವೆ. ಹೀಗಾಗಿ ಕೆಲವೊಮ್ಮೆ ಉಗುರುಗಳನ್ನು ಕತ್ತರಿಸುವಾಗ ತೊಂದರೆಗಳು ಉಂಟಾಗುತ್ತವೆ ಮತ್ತು ಅವುಗಳು ಹಾನಿಗೊಳಗಾಗುವ ಅಪಾಯವೂ ಹೆಚ್ಚಾಗಿರುತ್ತದೆ.

ರಾತ್ರಿ ಹೊತ್ತು ಉಗುರನ್ನು ಕತ್ತರಿಸದಿರಲು ಎರಡನೇ ಕಾರಣ
ರಾತ್ರಿಯಲ್ಲಿ ಉಗುರುಗಳನ್ನು ಕತ್ತರಿಸಬಾರದು ಎಂಬ ಸಲಹೆಯ ಹಿಂದಿನ ಇನ್ನೊಂದು ಕಾರಣ ಎಂದರೆ. ಪುರಾತನ ಕಾಲದಲ್ಲಿ ಜನರ ಬಳಿ ಉಗುರು ಕತ್ತರಿಸುವ ಸಾಧನ ಇರಲಿಲ್ಲ.  ಆಗಿನ ಕಾಲದಲ್ಲಿ ಚಾಕುವಿನಿಂದ ಅಥವಾ ಹರಿತವಾದ ಆಯುಧದಿಂದ ಜನರು ಉಗುರುಗಳನ್ನು ಕತ್ತರಿಸುತ್ತಿದ್ದರು. ಆ ಸಮಯದಲ್ಲಿ ವಿದ್ಯುತ್ ಕೂಡ ಇರಲಿಲ್ಲ. ಆದ್ದರಿಂದ ಹಿಂದಿನ ಕಾಲದಲ್ಲಿ ಜನರು ರಾತ್ರಿಯ ಕತ್ತಲಲ್ಲಿ ಉಗುರು (Nails) ಕತ್ತರಿಸುವುದನ್ನು ನಿಷೇಧಿಸುತ್ತಿದ್ದರು, ಆದರೆ ಕಾಲಾನಂತರದಲ್ಲಿ ಜನರು ಅದನ್ನು ಮೂಢನಂಬಿಕೆಯೊಂದಿಗೆ ಜೋಡಿಸಿ ಪುರಾಣದ ರೂಪವನ್ನು ನೀಡಿದ್ದಾರೆ. ಇಂದಿಗೂ ಕೂಡ ಕೆಲವರು ಇದನ್ನು ನಂಬುತ್ತಾರೆ ಮತ್ತು ತಮ್ಮ ಮಕ್ಕಳನ್ನೂ ಕೂಡ ಅನುಸರಿಸಲು ಕೇಳುತ್ತಾರೆ. ಯಾವುದೇ ರೀತಿಯ ದೈಹಿಕ ಹಾನಿತಪ್ಪಿಸುವುದು  ಇದರ ಹಿಂದಿನ ಉದ್ದೇಶ ಅಷ್ಟೇ.

ನೆನೆದ ಬಳಿಕವೇ ನಿಮ್ಮ ಉಗುರುಗಳನ್ನು ಕತ್ತರಿಸಿ
ಉಗುರುಗಳನ್ನು ಕತ್ತರಿಸಲು ಸರಿಯಾದ ಮಾರ್ಗವೆಂದರೆ ನಿಮ್ಮ ಉಗುರುಗಳನ್ನು ಮೊದಲು ಲಘು ಎಣ್ಣೆಯಲ್ಲಾಗಲಿ  ಅಥವಾ ನೀರಿನಲ್ಲಾಗಲಿ ನೆನೆಸಿಡಿ. ಇದು ನಿಮ್ಮ ಉಗುರುಗಳನ್ನು ಮೃದುಗೊಳಿಸುತ್ತದೆ ಮತ್ತು ನೀವು ಅವುಗಳನ್ನು ಚೆನ್ನಾಗಿ ಕತ್ತರಿಸಲು ಸಾಧ್ಯವಾಗುತ್ತದೆ. ಉಗುರುಗಳನ್ನು ಕತ್ತರಿಸಿದ ನಂತರ ಅವುಗಳನ್ನು moisturize ಮಾಡಲು ಮರೆಯಬೇಡಿ. ಅಲ್ಲದೆ, ನಿಮ್ಮ ಉಗುರುಗಳನ್ನು ಕತ್ತರಿಸಿದ ನಂತರ ನಿಮ್ಮ ಕೈಗಳನ್ನು ತೊಳೆದುಕೊಳ್ಳಲು ಪ್ರಯತ್ನಿಸಿ, ನಂತರ ಕೈಗಳನ್ನು ಒರೆಸದೆ ಒಣಗಲು ಬಿಡಿ ಮತ್ತು ನಂತರ ಪುನಃ ಮಾಯಿಶ್ಚರೈಸರ್ ಅಥವಾ ಎಣ್ಣೆಯನ್ನು ಹಚ್ಚಿ. ಇದರಿಂದ ನಿಮ್ಮ ಉಗುರುಗಳು ಯಾವಾಗಲೂ ಸುಂದರವಾಗಿರುತ್ತದೆ.

ಇದನ್ನೂ ಓದಿ-ಕಲಬೆರಕೆ ತುಪ್ಪ ಹೃದಯಕ್ಕೆ ಅಪಾಯಕಾರಿ..! ತುಪ್ಪ ಅಸಲಿಯೋ ಕಲಬೆರಕೆಯೋ ಕಂಡು ಹಿಡಿಯುವುದು ಹೇಗೆ?

ಸಿಕ್ಕ ಸಿಕ್ಕ ಜಾಗದಲ್ಲಿ ಉಗುರುಗಳನ್ನು ಕತ್ತರಿಸಬೇಡಿ
ಸಾಮಾನ್ಯವಾಗಿ ಜನರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಎಲ್ಲಿಯಾದರೂ ಕುಳಿತು ಉಗುರುಗಳನ್ನು ಕತ್ತರಿಸಲು ಪ್ರಾರಂಭಿಸುತ್ತಾರೆ. ಇದು ತುಂಬಾ ಕೆಟ್ಟ ಅಭ್ಯಾಸ. ಬೋರ್ಡ್ ಅನ್ನು ಬಳಸಲು ಪ್ರಯತ್ನಿಸಿ ಅಥವಾ ನಿಮ್ಮ ಕೈಗಳನ್ನು ಗಟ್ಟಿಮುಟ್ಟಾದ ಮೇಲ್ಮೈಯಲ್ಲಿ ಇರಿಸಿ ಮತ್ತು ಉಗುರುಗಳನ್ನು ಆರಾಮವಾಗಿ ಕತ್ತರಿಸಿ. ಉಗುರು ಕತ್ತರಿಸಿದ ನಂತರ ಆ ಹಲಗೆಯನ್ನು ಎತ್ತಿ ಡಸ್ಟ್‌ಬಿನ್‌ಗೆ ಉಗುರು ಹಾಕಿ. ಬಟ್ಟೆ ಅಥವಾ ಪೀಠೋಪಕರಣಗಳಂತಹ ವಸ್ತುಗಳ ಮೇಲೆ ಎಂದಿಗೂ ಉಗುರುಗಳನ್ನು ಕಚ್ಚಬೇಡಿ.

ಇದನ್ನೂ ಓದಿ-Russia-Ukraine ಯುದ್ಧದ ಪ್ರಭಾವ ಭಾರತದ ಮೇಲೆ ಯಾವಾಗ? ಇಲ್ಲಿದೆ ಬೆಚ್ಚಿಬೀಳಿಸುವ ಭವಿಷ್ಯವಾಣಿ!

ಕ್ಯೂಟಿಕಲ್ಸ್ ಕತ್ತರಿಸಬೇಡಿ
ಹೊರಪೊರೆಗಳು (Cuticles) ಉಗುರಿನ ಮೂಲವನ್ನು ರಕ್ಷಿಸುತ್ತವೆ. ಆದರೆ ನೀವು ನಿಮ್ಮ ಹೊರಪೊರೆಗಳನ್ನು ಕತ್ತರಿಸಿದಾಗ, ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳು ನಿಮ್ಮ ದೇಹವನ್ನು ಪ್ರವೇಶಿಸಲು ಪ್ರಾರಂಭಿಸುತ್ತವೆ. ಈ ಕಾರಣದಿಂದಾಗಿ, ಉಗುರಿನಲ್ಲಿ ಸೋಂಕಿನ ಅಪಾಯವು ಸಾಕಷ್ಟು  ಹೆಚ್ಚಾಗುತ್ತದೆ, ಇದು ಕೆಲವೊಮ್ಮೆ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ನಿಮ್ಮ ಹೊರಪೊರೆಗಳನ್ನು ಕತ್ತರಿಸುವುದನ್ನು ಅಥವಾ ಹಿಂದಕ್ಕೆ ಬಾಗಿಸುವುದನ್ನು ತಪ್ಪಿಸಿ.

ಇದನ್ನೂ ಓದಿ-ಬೆಳಗ್ಗೆ ಈ ಆಹಾರಗಳನ್ನು ತಿಂದರೆ ಬೊಜ್ಜು ಸುಲಭವಾಗಿ ಕರಗುತ್ತದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News