Monthly Horoscope: ಡಿಸೆಂಬರ್ ತಿಂಗಳಲ್ಲಿ ಈ 5 ರಾಶಿಯವರಿಗೆ ಹಣದ ಸುರಿಮಳೆ

December Rashifal 2022: ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಗ್ರಹಗಳ ಪ್ರಮುಖ ಬದಲಾವಣೆಯು ಕೆಲವು ರಾಶಿಯವರಿಗೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ. ಗ್ರಹಗಳ ಶುಭ ಸ್ಥಾನದಿಂದಾಗಿ ವರ್ಷದ ಕೊನೆಯ ತಿಂಗಳಿನಲ್ಲಿ ಕೆಲವು ರಾಶಿಯವರಿಗೆ ಬಂಪರ್ ಹಣಕಾಸಿನ ಪ್ರಯೋಜನವಾಗಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

Written by - Yashaswini V | Last Updated : Nov 22, 2022, 07:55 AM IST
  • ಡಿಸೆಂಬರ್ ತಿಂಗಳ ಗ್ರಹಗಳ ಸಂಚಾರವು 5 ರಾಶಿಚಕ್ರದ ಜನರಿಗೆ ತುಂಬಾ ಮಂಗಳಕರವೆಂದು ಸಾಬೀತುಪಡಿಸಬಹುದು.
  • ಈ ಕಾರಣಕ್ಕಾಗಿ, ವರ್ಷದ ಕೊನೆಯ ತಿಂಗಳು ಈ ಜನರಿಗೆ ಬಹಳಷ್ಟು ಹಣವನ್ನೂ ನೀಡುತ್ತದೆ.
  • ಡಿಸೆಂಬರ್ ತಿಂಗಳು ಯಾವ ರಾಶಿಯವರಿಗೆ ಅದೃಷ್ಟ ಎಂದು ತಿಳಿಯೋಣ
Monthly Horoscope: ಡಿಸೆಂಬರ್ ತಿಂಗಳಲ್ಲಿ ಈ 5 ರಾಶಿಯವರಿಗೆ ಹಣದ ಸುರಿಮಳೆ  title=
December horoscope

December Rashifal 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಸುಮಾರು ಅರ್ಧಕ್ಕಿಂತ ಹೆಚ್ಚು ಪ್ರಮುಖ ಗ್ರಹಗಳು 2022ರ ಕೊನೆಯ ತಿಂಗಳು ಎಂದರೆ ಡಿಸೆಂಬರ್ ತಿಂಗಳಲ್ಲಿ ರಾಶಿ ಪರಿವರ್ತನೆ ಮಾಡಲಿವೆ. ಇದರಲ್ಲಿ ಗ್ರಹಗಳ ರಾಜ ಸೂರ್ಯ, ಗ್ರಹಗಳ ರಾಜಕುಮಾರ ಬುಧ, ಐಶಾರಾಮಿ ಜೀವನಕಾರಕನಾದ ಶುಕ್ರಗ್ರಹಗಳ ಸಂಚಾರವೂ ಸೇರಿದೆ. ಬುಧ ಮತ್ತು ಶುಕ್ರ ಒಂದು ತಿಂಗಳಲ್ಲಿ ಎರಡು ಬಾರಿ ರಾಶಿ ಚಕ್ರವನ್ನು ಬದಲಾಯಿಸಲಿದ್ದಾರೆ.  ಈ ಗ್ರಹಗಳ ಬದಲಾವಣೆಯು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಜನರ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತದೆ. ಆದರೆ, ದ್ವಾದಶ ರಾಶಿಗಳಲ್ಲಿ ಐದು ರಾಶಿಯ ಜನರಿಗೆ ಈ ಗ್ರಹಗಳ ಸಂಚಾರದಿಂದ ಬಂಪರ್ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಡಿಸೆಂಬರ್ ತಿಂಗಳು ಯಾವ ರಾಶಿಯ ಜನರಿಗೆ ಶುಭಾಕರವಾಗಿರುತ್ತದೆ. ಡಿಸೆಂಬರ್ ಮಾಸದಲ್ಲಿ ಯಾವ ರಾಶಿಯವರ ಅದೃಷ್ಟ ಹೊಳೆಯಲಿದೆ. ಇದರಲ್ಲಿ ನಿಮ್ಮ ರಾಶಿಯೂ ಇದೆಯೇ ಎಂದು ತಿಳಿಯೋಣ...

ವರ್ಷದ ಕೊನೆಯ ತಿಂಗಳು ಈ ರಾಶಿಯವರಿಗೆ ಭಾರೀ ಅದೃಷ್ಟ:
ಮೇಷ ರಾಶಿ: 

ಮೇಷ ರಾಶಿಯವರಿಗೆ ವರ್ಷದ ಕೊನೆಯ ತಿಂಗಳು ಡಿಸೆಂಬರ್ ಮಾಸವು ತುಂಬಾ ಅನುಕೂಲಕರವಾಗಿರುತ್ತದೆ. ನಿಮ್ಮ ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಆಪ್ತರಿಂದ ಸಹಾಯ ದೊರೆಯಲಿದೆ. ಜೊತೆಗೆ ಅವರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಪ್ರವಾಸಕ್ಕೆ ತೆರಳುವ ಸಾಧ್ಯತೆಗಳಿವೆ. ವಿದೇಶ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯಲಿದೆ.

ಇದನ್ನೂ ಓದಿ- Shukra Uday 2022: ಶುಕ್ರ ಉದಯ ಪರಿಣಾಮ, 3 ರಾಶಿಯವರಿಗೆ ಭಾಗ್ಯೋದಯ

ವೃಷಭ ರಾಶಿ: 
ಡಿಸೆಂಬರ್ 2022 ವೃಷಭ ರಾಶಿಯವರಿಗೆ ಹಲವು ವಿಧಗಳಲ್ಲಿ ಮಂಗಳಕರವಾಗಿರುತ್ತದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ನೀವು ದೀರ್ಘಕಾಲದಿಂದ ಕಾಯುತ್ತಿದ್ದ ಆದಾಯದ ಬೆಳವಣಿಗೆ ಈಗ ಸಾಧ್ಯವಾಗಲಿದ್ದು ನಿಮ್ಮ ಹಣಕಾಸಿನ ಸಂಕಷ್ಟಗಳು ಈಗ ಕೊನೆಗೊಳ್ಳುತ್ತದೆ. ಆದಾಗ್ಯೂ, ಈ ತಿಂಗಳು ಇತರರೊಂದಿಗೆ ತೊಡಗಿಸಿಕೊಳ್ಳುವುದನ್ನು ತಪ್ಪಿಸಿ. ಇಲ್ಲದಿದ್ದರೆ ಹಾನಿ ಸಂಭವಿಸಬಹುದು. 

ಸಿಂಹ ರಾಶಿ: 
ಸಿಂಹ ರಾಶಿಯವರಿಗೆ ಡಿಸೆಂಬರ್ ಮಾಸವು ಹಠಾತ್ ಹಣದ ಲಾಭವನ್ನು ನೀಡುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭ ಪಡೆಯುವ ಸಂಪೂರ್ಣ ಅವಕಾಶಗಳಿವೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ಶತ್ರುಗಳನ್ನು ಸೋಲಿಸುವಿರಿ. ಮಕ್ಕಳಿಂದ ಕೆಲವು ಶುಭ ಸಮಾಚಾರ ಸಿಗಬಹುದು. 

ವೃಶ್ಚಿಕ ರಾಶಿ: 
ಡಿಸೆಂಬರ್ ಮಾಸಿಕ ಜಾತಕದ ಪ್ರಕಾರ, ಡಿಸೆಂಬರ್‌ನಲ್ಲಿ ವೃಶ್ಚಿಕ ರಾಶಿಯ ಜನರು ತಮ್ಮ ಹೂಡಿಕೆಯಿಂದ ಸಾಕಷ್ಟು ಲಾಭವನ್ನು ಗಳಿಸುತ್ತಾರೆ. ವಿಶೇಷವಾಗಿ ರಿಯಲ್ ಎಸ್ಟೇಟ್ ಸಂಬಂಧಿತ ಜನರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಸ್ನೇಹಿತರಿಂದಲೂ ಲಾಭ ಪಡೆಯುವ ಸಾಧ್ಯತೆಗಳಿವೆ. .

ಇದನ್ನೂ ಓದಿ- Rahu Gochar: 2023ರಲ್ಲಿ ಈ ರಾಶಿಯವರಿಗೆ ದಯೆ ತೋರಲಿದ್ದಾನೆ ರಾಹು

ಮೀನ ರಾಶಿ:
ಡಿಸೆಂಬರ್ ತಿಂಗಳು ಮೀನ ರಾಶಿಯವರಿಗೆ ಫಲಪ್ರದವಾಗಿರುತ್ತದೆ. ಆದಾಯದಲ್ಲಿ ಹೆಚ್ಚಳವಾಗಲಿದೆ, ಹೂಡಿಕೆಯಿಂದ ಲಾಭವಿದೆ. ವೃತ್ತಿಯಲ್ಲಿ ಪ್ರಗತಿ ಕಾಣಬಹುದು. ಬಡ್ತಿ, ಹೊಸ ಉದ್ಯೋಗಾವಕಾಶ ಸಿಗುವ ಸಾಧ್ಯತೆಗಳಿವೆ. ಆದರೆ, ಆರೋಗ್ಯದ ಬಗ್ಗೆ ಗಮನಹರಿಸಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News