Mauni Amavasya: ಪಿತೃ ದೋಷದಿಂದ ಮುಕ್ತಿ ಹೊಂದಲು ನಿರ್ಮಾಣಗೊಳ್ಳತ್ತಿದೆ ಈ ಶುಭಯೋಗ, ಈ ಉಪಾಯ ತಪ್ಪದೆ ಅನುಸರಿಸಿ

Mauni Amavasya Date 2022 - ಎಲ್ಲಾ ಅಮಾವಾಸ್ಯೆಗಳಲ್ಲಿ ದರ್ಶ ಮೌನಿ ಅಮವಾಸ್ಯೆಯನ್ನು ವಿಶೇಷವೆಂದು ಪರಿಗಣಿಸಲಾಗಿದೆ. 2022 ರಲ್ಲಿ, ಮೌನಿ ಅಮವಾಸ್ಯೆ ಫೆಬ್ರವರಿ 1, ಮಂಗಳವಾರ ಬರುತ್ತಿದೆ. ಈ ದಿನದಂದು ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನದಂದು ಮೌನ ವ್ರತವನ್ನು ಆಚರಿಸಿ, ಪಿತೃದೋಷವನ್ನು ಪರಿಹಾರಕ್ಕಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

Written by - Nitin Tabib | Last Updated : Jan 29, 2022, 06:45 PM IST
  • ದರ್ಶ ಮೌನಿ ಅಮಾವಾಸ್ಯೆಯಂದು ಸಿಗಲಿದೆ ಪಿತೃದೋಷ ಮುಕ್ತಿ
  • ಪಿತೃದೋಷ ನಿವಾರಣೆಗಾಗಿ ದರ್ಶ ಮೌನಿ ಅಮಾವಾಸ್ಯೆ ತುಂಬಾ ವಿಶೇಷವಾಗಿದೆ.
  • ಈ ದಿನದಂದು ಪಿತೃದೋಷ ನಿವಾರಣೆಗಾಗಿ ಈ ಉಪಾಯ ಅನುಸರಿಸಿ
Mauni Amavasya: ಪಿತೃ ದೋಷದಿಂದ ಮುಕ್ತಿ ಹೊಂದಲು ನಿರ್ಮಾಣಗೊಳ್ಳತ್ತಿದೆ ಈ ಶುಭಯೋಗ, ಈ ಉಪಾಯ ತಪ್ಪದೆ ಅನುಸರಿಸಿ title=
Mauni Amavasya Date 2022 (File Photo)

ನವದೆಹಲಿ:  Pitra Dosh Remedies - ಎಲ್ಲಾ ಅಮಾವಾಸ್ಯೆಗಳಲ್ಲಿ ದರ್ಶ ಮೌನಿ ಅಮವಾಸ್ಯೆಯನ್ನು ವಿಶೇಷವೆಂದು ಪರಿಗಣಿಸಲಾಗಿದೆ. 2022 ರಲ್ಲಿ, ಮೌನಿ ಅಮವಾಸ್ಯೆ ಫೆಬ್ರವರಿ 1, ಮಂಗಳವಾರ ಬರುತ್ತಿದೆ. ಈ ದಿನದಂದು ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನದಂದು ಮೌನ ವ್ರತವನ್ನು ಆಚರಿಸಿ, ಪಿತೃದೋಷವನ್ನು ಪರಿಹಾರಕ್ಕಾಗಿ ವಿಶೇಷ ಕ್ರಮಗಳನ್ನು (Remedies For Pitra Dosh) ಕೈಗೊಳ್ಳಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಪಿತೃದೋಷಕ್ಕೆ (Pitra Dosh Ke Upay) ಒಳಗಾದ ಜನರು ಅಥವಾ ಶುಭ ಕಾರ್ಯಗಳಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರು ಅಥವಾ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ಕೊರತೆ ಇರುವವರು, ಮೌನಿ ಅಮವಾಸ್ಯೆಯಂದು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಆ ಕ್ರಮಗಳು ಅಥವಾ ಉಪಾಯಗಳು (Vastu Remedies) ಯಾವುವು ತಿಳಿದುಕೊಳ್ಳೋಣ ಬನ್ನಿ.

ದರ್ಶ ಮೌನಿ ಅಮಾವಾಸ್ಯೆಯಂದು ಈ ರೀತಿ ಪಿತೃ ಪೂಜೆ ನೆರವೇರಿಸಿ (Mauni Amavasya Shubh Muhurat)
>> ಈ ದಿನ, ಪೂರ್ವಜರನ್ನು ಸ್ಮರಿಸಿ, ಉದಯಿಸುವ ಸೂರ್ಯನಿಗೆ ಅರ್ಘ್ಯ ಅರ್ಪಿಸಿ.
>> ಪಿತೃ ದೋಷವನ್ನು ಹೋಗಲಾಡಿಸಲು, ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಕಪ್ಪು ಎಳ್ಳು ಮತ್ತು ಕೆಂಪು ಹೂವುಗಳನ್ನು ಸೇರಿಸಿ. ಇದರ ನಂತರ, ಪಿತೃ ದೇವನಿಗೆ ಪ್ರಾರ್ಥನೆ ಮಾಡುವಾಗ ಸೂರ್ಯ ದೇವರಿಗೆ ಆ ನೀರನ್ನು ಅರ್ಪಿಸಿ.
>> ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿದ ನಂತರ, ಬಿಳಿ ಸಿಹಿತಿಂಡಿಗಳನ್ನು ಅರ್ಪಿಸಿ ಮತ್ತು ಅದನ್ನು ಪ್ರದಕ್ಷಿಣೆ ಹಾಕಿ. ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿಗಾಗಿ ಪಿತೃ ದೇವನನ್ನು ಪ್ರಾರ್ಥಿಸಿ.
>> ಮೌನಿ ಅಮಾವಾಸ್ಯೆಯ ದಿನದಂದು ಎಳ್ಳು ಲಡ್ಡುಗಳು, ಎಳ್ಳೆಣ್ಣೆ, ಬಟ್ಟೆ, ಹೊದಿಕೆ ಮತ್ತು ನೆಲ್ಲಿಕಾಯಿ ಇತ್ಯಾದಿಗಳನ್ನು ಅಗತ್ಯವಿರುವವರಿಗೆ ದಾನಮಾಡಿ.

ಇದನ್ನೂ ಓದಿ-Success Tips: ಸೂರ್ಯೋದಯದ ವೇಳೆ ಈ ಕೆಲಸ ಮಾಡಿ, ಜೀವನದಲ್ಲಿ ಯಾವುದೇ ಕೊರತೆ ಎದುರಾಗುವುದಿಲ್ಲ

ಪಿತೃದೋಷವನ್ನು ಹೇಗೆ ನಿವಾರಿಸಬೇಕು?
ಮೌನಿ ಅಮಾವಾಸ್ಯೆಯ ದಿನದಂದು ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಜಾತಕದಲ್ಲಿ ಸೂರ್ಯಬಲ ಹೆಚ್ಚಾಗುತ್ತದೆ. ಇದರಿಂದ ಪಿತೃದೋಷದ ಪ್ರಭಾವ ಕಡಿಮೆಯಾಗುತ್ತದೆ. ಇದಲ್ಲದೇ ಪೂಜೆಯ ಕೊನೆಯಲ್ಲಿ ಹೇಗೆ ದೇವರಲ್ಲಿ ಕ್ಷಮೆ ಯಾಚಿಸುತ್ತೀರೋ, ಅದೇ ರೀತಿ ತಿಳಿಯದೆ ಮಾಡಿದ ತಪ್ಪುಗಳಿಗೆ ಪೂರ್ವಜರ ಬಳಿ ಕ್ಷಮೆ ಯಾಚಿಸಿ. ಹೀಗೆ ಮಾಡುವುದರಿಂದ ಪಿತೃದೋಷ ನಿವಾರಣೆಯಾಗುತ್ತದೆ. ಹಾಗೆಯೇ ಅಮಾವಾಸ್ಯೆಯಂದು ಪೂರ್ವಜರನ್ನು ನೆನೆದು ಬಡವರಿಗೆ  ಪಾಯಸ ಉಣಬಡಿಸಿ. ಸಾಧ್ಯವಾದರೆ ಭಾಗ್ವದ್ದೀತೆಯನ್ನು ಓದಿ.

ಇದನ್ನೂ ಓದಿ-Kitchen Tips : ಮನೆಯಲ್ಲಿ ಬಾಣಲೆ ಬಳಸುವಾಗ ಮಾಡದಿರಿ ಈ ತಪ್ಪುಗಳನ್ನ! ಇಲ್ಲದಿದ್ದರೆ ತಪ್ಪಿದಲ್ಲ ಆರ್ಥಿಕ ಸಮಸ್ಯೆ 

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಧಾರ್ಮಿಕ ನಂಬಿಕೆ ಹಾಗೂ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-ಇವತ್ತಿನ ದಿನ ಮಾಡುವ ಈ ತಪ್ಪುಗಳಿಂದ ವಿಷ್ಣುವಿನ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News