Marriage Tips: ಈ ರೀತಿಯ ಯುವಕರು ಯುವತಿಯರಿಗೆ ತುಂಬಾ ಇಷ್ಟ, ನಿಮ್ಮಲ್ಲಿ ಈ ಗುಣಗಳಿವೆಯೇ?

Relationship: ತಮ್ಮ ಮದುವೆಗೆ ಸಂಗಾತಿಯನ್ನು ಆಯ್ಕೆ ಮಾಡುವಾಗ ಹುಡುಗಿಯರು ತುಂಬಾ ಚೂಸಿಯಾಗಿರುತ್ತಾರೆ. ಸರಿಯಾದ ವರನನ್ನು (Couple) ಆಯ್ಕೆ ಮಾಡಲು ಅವಳು ಅವನಲ್ಲಿ ಅನೇಕ ಗುಣಗಳನ್ನು ಹುಡುಕುತ್ತಾಳೆ. ಹಾಗಾದರೆ ಬನ್ನಿ ಯುವತಿಯರು ತಮ್ಮ ಸಂಗಾತಿಯಲ್ಲಿ ಯಾವ ಗುಣಗಳನ್ನು ಹುಡುಕುತ್ತಾರೆ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Mar 6, 2022, 07:49 PM IST
  • ಎತ್ತರದ ಹುಡುಗರ ಮೊದಲ ಆಯ್ಕೆ
  • ಪರಿಶುದ್ಧ ಮನಸ್ಸಿನ ಹುಡುಗರು ಹುಡುಗಿಯರ ಮೊದಲ ಆದ್ಯತೆ
  • ಹುಡುಗರ ವ್ಯಕ್ತಿತ್ವದ ಬಗ್ಗೆಯೂ ಅವರು ಗಮನ ಹರಿಸುತ್ತಾರೆ
Marriage Tips: ಈ ರೀತಿಯ ಯುವಕರು ಯುವತಿಯರಿಗೆ ತುಂಬಾ ಇಷ್ಟ, ನಿಮ್ಮಲ್ಲಿ ಈ ಗುಣಗಳಿವೆಯೇ? title=
Relationship (File Photo)

Marriage: ಇಂದಿನ ಯುವತಿಯರು ಮೊದಲಿನ ಯುವತಿಯರಿಗಿಂತ ಹೆಚ್ಚು ಬುದ್ಧಿವಂತರು ಎಂದು ಪರಿಗಣಿಸಲಾಗಿದೆ. ಅವರು ಸ್ನೇಹದ ವಿಷಯದಲ್ಲಿ ಮುಕ್ತವಾಗಿರಬಹುದು ಆದರೆ ಮದುವೆಗೆ (Marriage) ಸಂಗಾತಿಯನ್ನು (Girls Secret) ಆಯ್ಕೆಮಾಡುವಾಗ ಅವರು ತುಂಬಾ ಚೂಸಿಯಾಗಿರುತ್ತಾರೆ.

ಹುಡುಗರಂತೆ ಹುಡುಗಿಯರು ಕೂಡ ತಮಗಾಗಿ ವರನನ್ನು (Marriage Tips) ಆಯ್ಕೆ ಮಾಡುವಾಗ ಅವರಲ್ಲಿ ಹಲವು ಗುಣಗಳನ್ನು ಹುಡುಕುತ್ತಾರೆ. ಈ ವಿಷಯದಲ್ಲಿ ಅವರು ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಯಾವುದೇ ಹುಡುಗಿ ತನ್ನ ವರನಲ್ಲಿ (Groom) ನೋಡಲು ಬಯಸುವ ಆ ಗುಣಗಳು (Girls Secret) ಯಾವುವು ತಿಳಿಯೋಣ.

ಹುಡುಗಿಯರ ಆಸೆ ಬಹಿರಂಗ
ಜರ್ಮನಿಯ ಯೂನಿವರ್ಸಿಟಿ ಆಫ್ ಜೊಟ್ಟಿಂಗನ್ ಮತ್ತು ಫೀಮೇಲ್ ಹೆಲ್ತ್ ಆಪ್ ಕ್ಲೂ (Female Health App Clue) ಅಧ್ಯಯನದಲ್ಲಿ ಅನೇಕ ಆಸಕ್ತಿದಾಯಕ ಬಹಿರಂಗಗೊಂಡಿವೆ. ಸಂಶೋಧನೆಯ ಪ್ರಕಾರ, ಮದುವೆಗೆ ತಮ್ಮ ಸಂಗಾತಿಯನ್ನು ಆಯ್ಕೆಮಾಡುವಾಗ, ಹುಡುಗಿಯರು ಎತ್ತರವಿರುವ ಹುಡುಗರತ್ತ ಹೆಚ್ಚು  ಆಕರ್ಷಿತರಾಗುತ್ತಾರೆ. ಇದಕ್ಕೆ ಕಾರಣವೆಂದರೆ ಎತ್ತರದ ಹುಡುಗರೊಂದಿಗೆ, ಹುಡುಗಿಯರು ತಮ್ಮ ಜೋಡಿಯನ್ನು ಪರಿಪೂರ್ಣವೆಂದು ಭಾವಿಸುತ್ತಾರೆ ಮತ್ತು ಅವರೊಂದಿಗೆ ನಡೆಯುವಾಗ ಸುರಕ್ಷಿತತೆಯನ್ನು ಅನುಭವಿಸುತ್ತಾರೆ. 

ಎತ್ತರವಿರುವ ಹುಡುಗರ ಮೊದಲ ಆಯ್ಕೆ (Women Desire)
ಎತ್ತರವಿರುವ ಹುಡುಗರನ್ನು ನೋಡಿ ಹುಡುಗಿಯರು ತುಂಬಾ ಪ್ರಭಾವಿತರಾಗುತ್ತಾರೆ. ಅವನ ಕಣ್ಣುಗಳು ಮತ್ತು ಹೃದಯ ಎತ್ತರ ಹೊಂದಿರುವ ಯುವಕರತ್ತ ಬಂದು ಒಂದು ಕ್ಷಣ ನಿಲ್ಲುತ್ತದೆ. ತಮಗಿಂತ ಹೈಟ್ ನಲ್ಲಿ ಕಡಿಮೆ ಇರುವ ಹುಡುಗರನ್ನು ಮದುವೆಯಾಗಲು ಸಿದ್ಧರಿರುವ ಹುಡುಗಿಯರು ಜಗತ್ತಿನಲ್ಲಿ ಬಹಳ ವಿರಳವಾಗಿರುವುದರ ಹಿಂದೆಯೂ ಕೂಡ ಇದೆ ಕಾರಣ ಇದೆ.

ಇದನ್ನೂ ಓದಿ-Remedies: ಕೇವಲ 24 ಗಂಟೆಗಳಲ್ಲಿ ಪ್ರಭಾವ ತೋರಿಸುವ ಅತ್ಯಂತ ಅದ್ಭುತ ಉಪಾಯಗಳು ಇಲ್ಲಿವೆ

ಶುದ್ಧ ಮನಸ್ಸಿನ ಹುಡುಗರತ್ತ ಹುಡುಗಿಯರ ಆಕರ್ಷಣೆ ಹೆಚ್ಚು
ಅಧ್ಯಯನದ ಪ್ರಕಾರ, ಶೇ.72 ರಷ್ಟು  ಮಹಿಳೆಯರು ಪ್ರ್ಯಾಕ್ಟಿಕಲ್  ಮತ್ತು ಹೊಂದಿಕೊಳ್ಳುವ ಸ್ವಭಾವದ ಸಂಗತಿಯನ್ನು  ಹುಡುಕುತ್ತಾರೆ. ಹೃದಯದಲ್ಲಿ ಶುದ್ಧ ಮತ್ತು ಇತರರನ್ನು ಹೇಗೆ ಗೌರವಿಸಬೇಕೆಂದು ತಿಳಿದಿರುವವರು ಅವರಾಗಿರಬೇಕು. ಶೇ.60ರಷ್ಟು ಮಹಿಳೆಯರು ಹಣದ ಕೊರತೆ ಇಲ್ಲದ ಹುಡುಗರನ್ನು ಇಷ್ಟಪಡುತ್ತಾರೆ. ಇದೇ ವೇಳೆ, ಶೇಕಡಾ 25 ರಷ್ಟು ಹುಡುಗಿಯರು ಧಾರ್ಮಿಕ ಮತ್ತು ಆರಾಧನೆಯನ್ನು ನಂಬುವ ಹುಡುಗರನ್ನು ಇಷ್ಟಪಡುತ್ತಾರೆ.

ಇದನ್ನೂ ಓದಿ-Emerald Gem: ನಿಮ್ಮ ಭಾಗ್ಯ ಕೂಡ ನಿಮಗೆ ಸಾಥ್ ನೀಡುತ್ತಿಲ್ಲವೇ? ಈ ರತ್ನ ಧರಿಸಿ!

ಹುಡುಗರ ವ್ಯಕ್ತಿತ್ವದ ಬಗ್ಗೆಯೂ ಹುಡುಗಿಯರು ಗಮನ ಹರಿಸುತ್ತಾರೆ
ಹುಡುಗಿಯರು ತಮ್ಮ ಕುಟುಂಬ ಮತ್ತು ಇತರ ಕುಟುಂಬಗಳನ್ನು ಗೌರವಿಸುವ ಹುಡುಗರನ್ನು ಮದುವೆಗೆ ಆಯ್ಕೆ ಮಾಡಲು ಬಯಸುತ್ತಾರೆ ಎಂದು ಸಂಶೋಧನೆ ಕಂಡುಹಿಡಿದಿದೆ. ಇಗೋ ಇಲ್ಲದ ಮತ್ತು ಸಣ್ಣ-ಪುಟ್ಟ ವಿಷಯಕ್ಕೆ ಜಗಳ ಮಾಡದ ಹುಡುಗರು, ಹುಡುಗಿಯರಿಗೆ ಇಷ್ಟ. ಹುಡುಗರು ಧರಿಸುವ ಬಟ್ಟೆ ಮತ್ತು ವ್ಯಕ್ತಿತ್ವದ ಬಗ್ಗೆಯೂ ಕೂಡ ಹುಡುಗಿಯರು ಹೆಚ್ಚು ಗಮನ ಹರಿಸುತ್ತಾರೆ. ಅವರು ಮೂರ್ಖ ರೀತಿಯ ಅಥವಾ ಗೊಂದಲಮಯ ಹುಡುಗರಿಂದ  ಪ್ರಭಾವಿತರಾಗುವುದಿಲ್ಲ. ಕಾಳಜಿಯುಳ್ಳ ಮತ್ತು ಜವಾಬ್ದಾರಿಯುತ ಹುಡುಗರನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡುವ ಕನಸು ಹುಡುಗಿಯರದ್ದಾಗಿರುತ್ತದೆ.

ಇದನ್ನೂ ಓದಿ-Holi Festival 2022 : ಹೋಳಿ ಮುನ್ನಾ ದಿನ ಈ ಕೆಲಸ ಮಾಡಿ : ವರ್ಷವಿಡೀ ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News