ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಕೇವಲ ಈ ಪದಾರ್ಥಗಳಿದ್ದರೆ ಸಾಕು

White Hair To Black Hair: ನೀವು ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಬಯಸಿದರೆ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ನಿಮ್ಮ ನಿಮ್ಮ ಕೂದಲನ್ನು ಬುಡದಿಂದಲೂ ಕಪ್ಪಾಗಿಸಬಹುದು. 

Written by - Yashaswini V | Last Updated : Sep 7, 2023, 11:05 AM IST
  • ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ, ಶಾಶ್ವತವಾಗಿ ಕಪ್ಪಾಗಿಸಬಹುದು.
  • ಹಾಗಿದ್ದರೆ, ಬುಡದಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಅಗತ್ಯವಿರುವ ಸಾಮಾಗ್ರಿಗಳು ಯಾವುವು?
  • ಮನೆಯಲ್ಲಿಯೇ ಕಪ್ಪು ಕೂದಲಿನ ಮನೆಮದ್ದನ್ನು ತಯಾರಿಸುವುದು ಹೇಗೆ? ಎಂದು ತಿಳಿಯೋಣ...
ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಕೇವಲ ಈ ಪದಾರ್ಥಗಳಿದ್ದರೆ ಸಾಕು  title=

White Hair To Black Hair: ನಿಮಗೂ ಕೂಡ ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆಯೇ? ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳ ಮೊರೆ ಹೋಗುವ ಅಗತ್ಯವಿಲ್ಲ. ಬದಲಿಗೆ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ, ಶಾಶ್ವತವಾಗಿ ಕಪ್ಪಾಗಿಸಬಹುದು. ಹಾಗಿದ್ದರೆ, ಬುಡದಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಅಗತ್ಯವಿರುವ ಸಾಮಾಗ್ರಿಗಳು ಯಾವುವು? ಮನೆಯಲ್ಲಿಯೇ ಕಪ್ಪು ಕೂದಲಿನ ಮನೆಮದ್ದನ್ನು ತಯಾರಿಸುವುದು ಹೇಗೆ? ಅದನ್ನು ಯಾವ ರೀತಿ ಬಳಸಬೇಕು ಎಂಬಿತ್ಯಾದಿ ಮಾಹಿತಿಯನ್ನು ತಿಳಿಯಲು ಮುಂದೆ ಓದಿ... 

ಬಿಳಿ ಕೂದಲನ್ನು ಕಪ್ಪಾಗಿಸಲು ಬೇಕಾದ ಸಾಮಾಗ್ರಿಗಳು ಯಾವುವು? 
* 100 ಗ್ರಾಂ ಗುಲಗಂಜಿ ಬೀಜ 
* 100 ಗ್ರಾಂ ದೇವದಾರು ಬೇರಿನ ಚೂರ್ಣ 
* 100 ಗ್ರಾಂ ಏಲಕ್ಕಿ 
* 500 ಗ್ರಾಂ ಕೊಬ್ಬರಿ ಎಣ್ಣೆ (ಒಂದೊಮ್ಮೆ ನೀವು ಕೊಬ್ಬರಿ ಎಣ್ಣೆಯನ್ನು ಬಳಸದಿದ್ದರೆ ಎಳ್ಳೆಣ್ಣೆಯನ್ನು ಕೂಡ ತೆಗೆದುಕೊಳ್ಳಬಹುದು. 

ಇದನ್ನೂ ಓದಿ- ಚಹಾವನ್ನು ಈ ಹೊತ್ತಿನಲ್ಲಿ ಹೀಗೆ ಮತ್ತು ಇಷ್ಟೇ ಕುಡಿಯಬೇಕು ! ಬಹುತೇಕರಿಗೆ ತಿಳಿದಿರದ ಮಾಹಿತಿ

ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಮದ್ದನ್ನು ತಯಾರಿಸುವ ವಿಧಾನ:- 
>> ಮೊದಲಿಗೆ ಗುಲಗಂಜಿ ಬೀಜವನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ, ಬಳಿಕ ದೇವಾರು ಬೇರಿನ ಚೂರ್ಣ ಹಾಗೂ ಏಲಕ್ಕಿಯನ್ನೂ ಕೂಡ ನುಣ್ಣಗೆ ಪುಡಿ ಮಾಡಿಕೊಳ್ಳಿ. 
>> ನಂತರ ಈ ಮೂರು ಪುಡಿಗಳನ್ನು ಕೊಬ್ಬರಿ ಎಣ್ಣೆ/ ಎಳ್ಳೆಣ್ಣೆಯೊಂದಿಗೆ ಬೆರೆಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಕುದಿಸಿ. ಈ ರೀತಿ ಮಾಡುವುದರಿಂದ ಇದರಲ್ಲಿರುವ ಸಾರವೆಲ್ಲಾ ಚೆನ್ನಾಗಿ ಎಣ್ಣೆಯೊಂದಿಗೆ ಬೆರೆಯುತ್ತದೆ. 
>> ಬಳಿಕ ಒಲೆ ಆರಿಸಿ ಆ ಎಣ್ಣೆಯನ್ನು ಶೋಧಿಸದೆ ಹಾಗೆಯೇ ಶೇಖರಿಸಿಡಿ. 

ಇದನ್ನೂ ಓದಿ- ತುಪ್ಪದ ಫೇಸ್ ಪ್ಯಾಕ್ ನಿಂದ ಚರ್ಮಕ್ಕಿದೆ ಇಷ್ಟೆಲ್ಲಾ ಪ್ರಯೋಜನ

ಈ ಮನೆಮದ್ದನ್ನು ಬಳಸುವ ವಿಧಾನ: 
ನೀವು ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಮನೆಯಲ್ಲಿ ತಯಾರಿಸಿದ ಈ ಎಣ್ಣೆಯನ್ನು ಕೂದಲಿನ ಬುಡದಿಂದ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಈ ರೀತಿ ಮಾಡುವಾಗ ಮಧ್ಯೆ ಮದ್ಯೆ ಕೂದಲನ್ನು ಬಾಚಿಕೊಳ್ಳಿ. 
ನೆನಪಿಡಿ: ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುವ ಮೊದಲು ಕೈಗೆ ಗ್ಲೌಸ್ ಹಾಕಿಕೊಳ್ಳಿ. ಈ ಮನೆಮದ್ದಿನಲ್ಲಿ ಬಳಸಲಾಗಿರುವ ಗುಳಗಂಜಿ ಬೀಜದಲ್ಲಿ ವಿಷಕಾರಿ ಅಂಶವಿರುವುದರಿಂದ ಕೈಗೆ ಗ್ಲೌಸ್ ಹಾಕದೆ ಯಾವುದೇ ಕಾರಣಕ್ಕೂ ಇದನ್ನು ಮುಟ್ಟಬೇಡಿ. 

ಇನ್ನೂ ಈ ತೈಲವನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿದ ಒಂದು ಗಂಟೆಗಳ ಬಳಿಕ ಕೂದಲಿಗೆ ಬರಿ ಕೊಬ್ಬರಿ ಎಣ್ಣೆಯನ್ನು ಹಚ್ಚಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತಲೆಗೆ ಸ್ನಾನ ಮಾಡಿ. ಕೂದಲಿಗೆ ಹಚ್ಚಿರುವ ತೈಲದ ಅಂಟು ಸಂಪೂರ್ಣವಾಗಿ ಹೋಗಬೇಕು ಎಂದಾದರೆ ತಲೆ ಸ್ನಾನ ಮಾಡುವಾಗ ಕಡಲೆ ಹಿಟ್ಟು, ಇಲ್ಲವೇ ಅಂಟವಾಳದ ಕಾಯಿಯನ್ನು ಬಳಸುವುದು ಕೂಡ ಪ್ರಯೋಜನಕಾರಿ ಆಗಲಿದೆ. 

ನೀವು ನಿಯಮಿತವಾಗಿ ಈ ಮನೆಮದ್ದನ್ನು ಬಳಸುವುದರಿಂದ ಶಾಶ್ವತವಾಗಿ ನಿಮ್ಮ ನಿಮ್ಮ ತಲೆ ಕೂದಲನ್ನು ಕಪ್ಪಾಗಿಸಿಕೊಳ್ಳಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News