ತೂಕ ಇಳಿಕೆ ಪಾನೀಯ: ಕರೋನಾವೈರಸ್ ಸಾಂಕ್ರಾಮಿಕದ ನಂತರ ಲಾಕ್ಡೌನ್ ಮತ್ತು ವರ್ಕ್ ಫ್ರಮ್ ಹೋಂ ಸಂಸ್ಕೃತಿಯಿಂದಾಗಿ ದೈಹಿಕ ಚಟುವಟಿಕೆಗಳು ಕಡಿಮೆ ಆಗಿದೆ. ಇದರಿಂದ ತೂಕ ಕೂಡ ವೇಗವಾಗಿ ಹೆಚ್ಚಾಗಿದೆ. ಸೊಂಟ ಮತ್ತು ಹೊಟ್ಟೆಯ ಸುತ್ತಲೂ ಶೇಖರವಾಗಿರುವ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭದ ವಿಷಯವಲ್ಲ. ಸ್ಥೂಲಕಾಯತೆಯು ಸ್ವತಃ ಒಂದು ರೋಗವಲ್ಲ, ಆದರೆ ಇದು ಹೆಚ್ಚಿನ ಕೊಲೆಸ್ಟ್ರಾಲ್, ಮಧುಮೇಹ, ಅಧಿಕ ಬಿಪಿ ಸೇರಿದಂತೆ ಅನೇಕ ಇತರ ಕಾಯಿಲೆಗಳ ಮೂಲ ಎಂದರೂ ತಪ್ಪಾಗುವುದಿಲ್ಲ.
ತೂಕ ಇಳಿಕೆಗಾಗಿ ಜನರು ಎಷ್ಟೆಲ್ಲಾ ಪ್ರಯತ್ನ ಪಡುತ್ತಾರೆ. ಆದರೆ, ಒಂದು ಡ್ರಿಂಕ್ಸ್ ಅನ್ನು ನಿತ್ಯ ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಆ ಡ್ರಿಂಕ್ಸ್ ಯಾವುದು ಎಂದು ತಿಳಿಯೋಣ...
ತೂಕವನ್ನು ಕಳೆದುಕೊಳ್ಳಲು ವಿಶೇಷ ದೇಸಿ ಪಾನೀಯ:
ನಮ್ಮ ದೈನಂದಿನ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಕೂಡ ಬೊಜ್ಜು ಹೆಚ್ಚಾಗಲು ಕಾರಣವಾಗಿದೆ. ಅದರ ಪರಿಣಾಮ ನಮ್ಮ ದೇಹದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಭಾರತದ ಪ್ರಸಿದ್ಧ ಪೌಷ್ಠಿಕ ತಜ್ಞರ ಪ್ರಕಾರ, ಒಂದು ವಿಶೇಷ ದೇಸಿ ಪಾನೀಯವನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಬಹುದು.
ಇದನ್ನೂ ಓದಿ- Ayurveda: ಮಧುಮೇಹಿಗಳಿಗೆ ಈ ಆಹಾರಗಳು ರಾಮಬಾಣವಿದ್ದಂತೆ
ತೂಕವನ್ನು ಕಡಿಮೆ ಮಾಡಲು, ಇಂದು ನಾವು ನಿಮಗೆ ತುಂಬಾ ಉಪಯುಕ್ತವಾದ ನೈಸರ್ಗಿಕ ವಿಧಾನವನ್ನು ಹೇಳಲಿದ್ದೇವೆ. ಇದಕ್ಕಾಗಿ ನಿಮಗೆ ಆಪಲ್ ಸೈಡರ್ ವಿನೆಗರ್ ಮತ್ತು ಬೇಕಿಂಗ್ ಸೋಡಾ ಬೇಕಾಗುತ್ತದೆ. ಈ ಎರಡರ ಸಂಯೋಜನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ತೂಕ ನಷ್ಟಕ್ಕೆ ಆಪಲ್ ಸೈಡರ್ ವಿನೆಗರ್ ಮತ್ತು ಅಡಿಗೆ ಸೋಡಾ:
ಆಪಲ್ ಸೈಡರ್ ವಿನೆಗರ್ ಮತ್ತು ಅಡಿಗೆ ಸೋಡಾದಿಂದ ತಯಾರಿಸಿದ ಪಾನೀಯವು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಕ್ಯಾಲೊರಿಗಳನ್ನು ಸುಡುವುದರಿಂದ ಹೊಟ್ಟೆಯ ಕೊಬ್ಬಿನ ವಿರುದ್ಧ ಮಾಂತ್ರಿಕವಾಗಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ- ಎಳನೀರನ್ನು ಸವಿದು ಅದರ ಗಂಜಿಯನ್ನು ಹಾಗೆಯೇ ಎಸೆಯುತ್ತೀರಾ? ಇದನ್ನೊಮ್ಮೆ ಓದಿ
ತೂಕ ಇಳಿಸುವ ಈ ಪಾನೀಯವನ್ನು ಹೇಗೆ ತಯಾರಿಸುವುದು?
ಇದಕ್ಕಾಗಿ ಬೇಕಾಗಿರುವ ಪದಾರ್ಥಗಳು-
* ಒಂದು ಗ್ಲಾಸ್ ನೀರು
* ಒಂದು ಚಮಚ ಅಡಿಗೆ ಸೋಡಾ
* ಎರಡು ಚಮಚ ಆಪಲ್ ಸೈಡರ್ ವಿನೆಗರ್
ಈ ಡ್ರಿಂಕ್ಸ್ ತಯಾರಿಸುವ ವಿಧಾನ:
ಒಂದು ಗ್ಲಾಸ್ ನೀರಿನಲ್ಲಿ ಒಂದು ಚಮಚ ಅಡಿಗೆ ಸೋಡಾ ಮತ್ತು ಎರಡು ಚಮಚ ಆಪಲ್ ಸೈಡರ್ ವಿನೆಗರ್ ಎರಡೂ ಪದಾರ್ಥಗಳು ಚೆನ್ನಾಗಿ ಮಿಶ್ರಣ ಮಾಡಿ ನಂತರ ಅದನ್ನು ಕುಡಿಯಿರಿ. ನೀವು ಇದನ್ನು 30 ದಿನಗಳವರೆಗೆ ನಿಯಮಿತವಾಗಿ ಸೇವಿಸಿದರೆ, ನಿರೀಕ್ಷಿತ ಫಲಿತಾಂಶವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ